Subscribe to Gizbot

ಮೋಟೋರೋಲಾ ಹೊಸ ಮೋಟೋ ಮ್ಯಾಕ್ಸ್ ಬಿಡುಗಡೆ

Posted By:

ಅಂತೂ ಹಲವಾರು ವದಂತಿಗಳ ನಂತರ, ಮೋಟೋರೋಲಾ ಟರ್ಬೋ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಇದನ್ನು ಮೋಟೋ ಮ್ಯಾಕ್ಸ್ ಎಂದು ಕರೆದಿದ್ದು, ಹಿಂದೆ ಲಾಂಚ್ ಮಾಡಿರುವ ಸ್ಮಾರ್ಟ್‌ಫೋನ್‌ನ ಅಂತರಾಷ್ಟ್ರಿಯ ಆವೃತ್ತಿ ಅದೇ ರೀತಿಯ ವಿಶೇಷತೆಗಳನ್ನು ಒಳಗೊಂಡು ಬಂದಿದೆ.

ಕಪ್ಪು ಬ್ಯಾಲ್ಸ್ಟಿಕ್ ನಿಲಾನ್ ಆವೃತ್ತಿಯಲ್ಲಿ ಮೋಟೋರೋಲಾ ಮೋಟೋ ಮ್ಯಾಕ್ಸ್ ಬಂದಿದ್ದು 2199 ಬ್ರೆಜಿಲಿಯನ್ ರಿಯಲ್ ಇದರ ಬೆಲೆಯಾಗಿದೆ, ಅಂದರೆ ಇದನ್ನು ಭಾರತೀಯ ರೂಪಾಯಿಯಲ್ಲಿ ನಿಖರಪಡಿಸುವುದಾದರೆ ರೂ 53,675 ರಲ್ಲಿ ಇದು ದೊರೆಯುತ್ತಿದೆ. ಶನಿವಾರದಿಂದ ಬ್ರೆಜಿಲ್‌ನಲ್ಲಿ ಗ್ರಾಹಕರ ಕೈತಲುಪಲಿರುವ ಈ ಸ್ಮಾರ್ಟ್‌ಫೋನ್, ಮೆಕ್ಸಿಕೋದಲ್ಲಿ ಮಧ್ಯ ನವೆಂಬರ್‌ನಲ್ಲಿ ದೊರೆಯಲಿದೆ. ಇನ್ನು ಲ್ಯಾಟೀನ್ ಅಮೇರಿಕನ್ ದೇಶಗಳಲ್ಲೂ ಮೋಟೋರೋಲಾ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡುವ ಉದ್ದೇಶವನ್ನಿಟ್ಟುಕೊಂಡಿದ್ದು, ಏಷ್ಯಾ ದೇಶಗಳಲ್ಲೂ ಈ ಡಿವೈಸ್ ಬೇಗನೇ ಮಾರುಕಟ್ಟೆಗೆ ದಾಳಿ ಇಡಲಿದೆ.

ಮೋಟೋ ಮ್ಯಾಕ್ಸ್ ಅಸದಳ ಫೋನ್ ಹೇಗೆ?

ಇದನ್ನೂ ಓದಿ: ವೈರಸ್ ದಾಳಿಗೆ ಸುಲಭ ಪರಿಹಾರಗಳು

ಮೋಟೋರೋಲಾ ಮೋಟೋ ಮ್ಯಾಕ್ಸ್ ಪ್ರಮುಖ ವಿಶೇಷತೆಗಳು
ಇದು 5.2 ಇಂಚಿನ ಅಮೋಲೆಡ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಕ್ವಾಡ್ ಎಚ್‌ಡಿ ರೆಸಲ್ಯೂಶನ್ ಆದ 1440x2560 ಪಿಕ್ಸೆಲ್‌ಗಳನ್ನು ಒದಗಿಸುತ್ತಿದೆ. ಇನ್ನು ಫೋನ್‌ನ ಡಿಸ್‌ಪ್ಲೇಯನ್ನು ಸುರಕ್ಷಿತವಾಗಿರಿಸುತ್ತಿರುವುದು ಗೋರಿಲ್ಲಾ ಗ್ಲಾಸ್ 3 ಆಗಿದೆ.

2.7GHZ ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್‌ನಲ್ಲಿ 805 ನಲ್ಲಿ ಬಂದಿರುವ ಈ ಡಿವೈಸ್ 3 ಜಿಬಿ RAM ಅನ್ನು ಹೊಂದಿದೆ. ಫೋನ್‌ನಲ್ಲಿ ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4.4 ಚಾಲನೆಯಾಗುತ್ತಿದೆ.

ಇನ್ನು ಫೋನ್‌ನ ಕ್ಯಾಮೆರಾದತ್ತ ಮುಖ ಮಾಡಿದಾಗ, ಇದು 21 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಪಡೆದುಕೊಂಡಿದ್ದು ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್ ಅನ್ನು ಹೊಂದಿದೆ. 4 ಕೆ ವೀಡಿಯೊವನ್ನು ಸುಲಭವಾಗಿ ಈ ಫೋನ್‌ನಲ್ಲಿ ಸೆರೆಹಿಡಿಯಬಹುದಾಗಿದ್ದು ಫೋನ್‌ನ ಮುಂಭಾಗ ಕ್ಯಾಮೆರಾ ಸಾಮರ್ಥ್ಯ 2 ಎಮ್‌ಪಿ ಆಗಿದೆ. ಇನ್ನು ಫೋನ್‌ನಲ್ಲಿ ಮೈಕ್ರೋ ಎಸ್‌ಡಿ ಕಾರ್ಡ್‌ ಇಲ್ಲದಿರುವುದು ಕೊರತೆಯಾಗಿದ್ದು, ಅದಾಗ್ಯೂ ನಿಮಗೆ 64 ಜಿಬಿಗಳ ಆಂತರಿಕ ಸಂಗ್ರಹ ದೊರೆಯಲಿದೆ. ಇನ್ನು ಜಲಪ್ರತಿರೋಧಕ ಗುಣವನ್ನು ಹೊಂದಿರುವ ಮೋಟೋ ಮ್ಯಾಕ್ಸ್ ಅತ್ಯಂತ ಪ್ರಖರ ಸಂಪರ್ಕ ವಿಶೇಷತೆಗಳನ್ನು ಒಳಗೊಂಡಿದೆ.

ಇದನ್ನೂ ಓದಿ: ಕಂಪ್ಯೂಟರ್ ಶಾರ್ಟ್ ಕಟ್ ಕೀಗಳ ಉಪಯೋಗ ತಿಳಿಯಿರಿ

ಇನ್ನು ಡಿವೈಸ್ 8.3 - 11.2 ಎಮ್‌ಎಮ್ ದಪ್ಪವನ್ನು ಹೊಂದಿದ್ದು ಇದರ ತೂಕ 176 ಗ್ರಾಮ್‌ಗಳಾಗಿದೆ. ಇನ್ನು ಫೋನ್‌ನ ಬ್ಯಾಟರಿ ಸಾಮರ್ಥ್ಯ 3900mAh ಆಗಿದ್ದು, ಈಗಿನ ಜನರೇಶನ್ ಇಷ್ಟಪಡುವ ಫೋನ್ ಇದಾಗಿದೆ. ಇನ್ನು ಕಂಪೆನಿ ಹೇಳುವಂತೆ ಫೋನ್‌ ಬ್ಯಾಟರಿಯು 48 ಗಂಟೆಗಳ ಮಿಶ್ರ ಬಳಕೆಯನ್ನು ಒದಗಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದ್ದು ಮೋಟೋರೋಲಾ ಟರ್ಬೊ ಚಾರ್ಜರ್ ಬರೇ 15 ನಿಮಿಷದಲ್ಲಿ ಎಂಟು ಗಂಟೆಗಳ ಪವರ್ ಅನ್ನು ಒದಗಿಸಲಿದೆ.

ಇನ್ನು ಈ ಫೋನ್ ಕೊಂಚ ದುಬಾರಿಯಾಗಿದ್ದರೂ ಇದರ ಆಕರ್ಷಕ ವಿಶೇಷತೆಗಳು ಮಾತ್ರ ಮನಮುಟ್ಟವಂತಿದ್ದು ನಮ್ಮಲ್ಲಿ ಖರೀದಿಯ ಉತ್ಸಾಹವನ್ನು ಇಮ್ಮಡಿಸಲಿದೆ. ಇದರ ಆಕರ್ಷಕ ವಿನ್ಯಾಸ ಮತ್ತು ಹಾರ್ಡ್‌ವೇರ್ ತಂತ್ರಾಂಶವು ನಿಜಕ್ಕೂ ಮನಮೋಹಕವಾಗಿದ್ದು ಮಾರುಕಟ್ಟೆಯಲ್ಲಿ ಲಭ್ಯವಿರುವ ಇದೇ ಬೆಲೆಯ ಇತರ ಫೋನ್‌ಗಳಿಗೆ ಭರ್ಜರಿ ಪೈಪೋಟಿಯನ್ನು ನೀಡಲಿದೆ.

English summary
This article tells about Motorola Announces Moto Maxx With 5.2-inch QHD Display and More.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot