ಬರಲಿದೆ 200MP ಕ್ಯಾಮೆರಾ, 210W ಫಾಸ್ಟ್ ಚಾರ್ಜಿಂಗ್ ಸ್ಮಾರ್ಟ್‌ಫೋನ್!
ಮೊಟೊರೊಲಾ (Motorola) ಮೊಬೈಲ್ ಕಂಪನಿಯು ತನ್ನ ಮುಂದಿನ Motorola G Stylus ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ತಯಾರಿ ನಡೆಸಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಬರಲಿರುವ ಈ ನೂತನ ಸ್ಮಾರ್ಟ್‌ಫೋನ್ ಈಗಾಗಲೇ ಕೆಲವು ಲೀಕ್ ಮಾಹಿತಿಗಳ ಮೂಲಕ ಭಾರೀ ಸದ್ದು ಮಾಡಿದೆ. ಈ ಫೋನ್ ಬರೋಬ್ಬರಿ 210W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒಳಗೊಂಡಿರುವ ಸಾಧ್ಯತೆಗಳು ಇದ್ದು, ಈ ಸಂತಿಯಂತೂ ಫೋನ್ ಪ್ರಿಯರಲ್ಲಿ ಅಚ್ಚರಿ ಮೂಡಿಸಿದೆ.
ಹೌದು, ಮೊಟೊರೊಲಾ (Motorola) ಸಂಸ್ಥೆಯ ಬರಲಿರುವ ಮೊಟೊರೊಲಾ G ಸ್ಟೈಲಸ್ (Motorola G Stylus) ಸ್ಮಾರ್ಟ್‌ಫೋನ್ 210 W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹಾಗೂ 200 MP ಕ್ಯಾಮೆರಾ ಸೆನ್ಸಾರ್ ಪಡೆದಿರಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ವೇಗದ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಚಿಪ್‌ಸೆಟ್ ಪ್ರೊಸೆಸರ್ ಒಳಗೊಂಡಿರುವ ಸಾಧ್ಯತೆಗಳು ಇವೆ. ಹೀಗಾಗಿ ಇದು ದೈತ್ಯ ಫೋನ್ ಎನಿಸಿಕೊಳ್ಳಲಿದೆ ಎನ್ನಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಹೀಗಿರಲಿದೆ
ಮೊಟೊರೊಲಾ G ಸ್ಟೈಲಸ್ ಫೋನ್ 6.78 ಇಂಚಿನ ಡಿಸ್‌ಪ್ಲೇ ಪಡೆದಿರಲಿದ್ದು, 1080×2720 ಪಿಕ್ಸೆಲ್ ರೆಸಲ್ಯೂಶನ್ ಸೌಲಭ್ಯ ಒಳಗೊಂಡಿರಲಿದೆ. ಅಲ್ಲದೇ ಇದು ಪಂಚ್-ಹೋಲ್ ಮಾದರಿಯ ಪಡೆದಿರಲಿದ್ದು, 120 Hz ರಿಫ್ರೆಶ್ ರೇಟ್ ಅನ್ನು ಪಡೆದಿರಲಿದೆ. ಇನ್‌ಬಿಲ್ಟ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆಯನ್ನು ಕೂಡಾ ಹೊಂದಿರಲಿದೆ ಎನ್ನಲಾಗಿದೆ.
ಪ್ರೊಸೆಸರ್ ಪವರ್ ಹಾಗೂ ಬ್ಯಾಟರಿ ಮಾಹಿತಿ
ಮೊಟೊರೊಲಾ G ಸ್ಟೈಲಸ್ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಪ್ರೊಸೆಸರ್ ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಇತ್ತೀಚಿನ ಆಂಡ್ರಾಯ್ಡ್ ಓಎಸ್ ಸೌಲಭ್ಯ ಹೊಂದಿರಲಿದೆ. ಇನ್ನು ಇದರ ಪ್ರಮುಖ ಹೈಲೈಟ್ 5500mAh ಬ್ಯಾಟರಿ ಬ್ಯಾಕ್‌ಅಪ್ ಆಗಿರಲಿದ್ದು, ಇದಕ್ಕೆ ಪೂರಕವಾಗಿ ಬರೋಬ್ಬರಿ 210 W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದಿರಲಿದೆ. ಇದು ಜಸ್ಟ್ 15 ನಿಮಿಷಗಳಲ್ಲಿ ಪೂರ್ಣ ಚಾರ್ಜ್ ಒದಗಿಸಲಿದೆ.
ಕ್ಯಾಮೆರಾ ಸೆಟ್‌ಅಪ್ ಹೇಗೆ
ಮೊಟೊರೊಲಾ G ಸ್ಟೈಲಸ್ ಫೋನ್ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಒಳಗೊಂಡಿರಲಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 200 ಮೆಗಾಪಿಕ್ಸಲ್ ಆಗಿರಲಿದೆ. ಉಳಿದಂತೆ ಎರಡನೇ ಕ್ಯಾಮೆರಾವು 32 MP ಅಲ್ಟ್ರಾ-ವೈಡ್ ಸೆನ್ಸಾರ್ ಆಗಿರಲಿದ್ದು, ಹಾಗೆಯೇ ತೃತೀಯ ಕ್ಯಾಮೆರಾವು 8 MP ಟೆಲಿಫೋಟೋ ಸೆನ್ಸಾರ್ ರಚನೆ ಅನ್ನು ಪಡೆದಿರಲಿದೆ. ಅಲ್ಲದೇ ಮುಂಭಾಗದಲ್ಲಿ 32 ಮೆಗಾ ಪಿಕ್ಸಲ್ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ರಚನೆ ಅನ್ನು ಒಳಗೊಂಡಿರಲಿದೆ.
ಮೆಮೊರಿ ಆಯ್ಕೆ ಹಾಗೂ ಬೆಲೆ ಎಷ್ಟು
ಮೊಟೊರೊಲಾ G ಸ್ಟೈಲಸ್ ಫೋನ್ 8 GB RAM + 128 GB ಸ್ಟೋರೇಜ್, 12 GB RAM + 256 GB ಸ್ಟೋರೇಜ್ ಹಾಗೂ 12 GB RAM + 512 GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದಿರುವ ನಿರೀಕ್ಷೆಗಳು ಇವೆ. ಅಲ್ಲದೇ ಈ ಫೋನಿನ ಆರಂಭಿಕ ಬೆಲೆಯು 30,999ರೂ. ಗಳಿಂದ 35,999ರೂ. ಗಳ ನಡುವೆ ಇರಬಹುದು ಎಂದು ಅಂದಾಜಿಸಲಾಗಿದೆ. ಅಂದಹಾಗೆ ಈ ಮೊಬೈಲ್ 2025 ರಲ್ಲಿ ಬಿಡುಗಡೆ ಆಗಲಿದೆ.


Click it and Unblock the Notifications








