Home
ಸುದ್ದಿಜಾಲ

ನೀವು ಮೊಟೊರೊಲಾ ಫೋನ್‌ ಬಳಕೆ ಮಾಡ್ತೀರಾ?..ಹಾಗಿದ್ರೆ, ಇಲ್ಲಿದೆ ಸಿಹಿಸುದ್ದಿ!

ಮೊಟೊರೊಲಾ ಸ್ಮಾರ್ಟ್‌ಫೋನ್‌ ಬಳಕೆ ಮಾಡುವ ಗ್ರಾಹಕರಿಗೆ ಈಗ ಗುಡ್‌ನ್ಯೂಸ್‌ ಇದೆ. ಮೊಟೊರೊಲಾ ಸಂಸ್ಥೆಯ ಫೋನ್‌ಗಳು ಈಗ ಗೂಗಲ್‌ ಸಂಸ್ಥೆಯು ಇತ್ತೀಚಿಗೆ ಪರಿಚಯಿಸಿರುವ ಆಂಡ್ರಾಯ್ಡ್ 14 ಓಎಸ್‌ ಆಧಾರಿತ ಕಸ್ಟಮ್ ಸ್ಕಿನ್ ಮೈ ಯುಎಕ್ಸ್‌ನ ಅಪ್‌ಡೇಟ್‌ ಸ್ವೀಕರಿಸುವ ಬಗ್ಗೆ ಮೊಟೊರೊಲಾ ಮಾಹಿತಿ ಬಹಿರಂಗಪಡಿಸಿದೆ.

ಹೌದು, ಗೂಗಲ್‌ ಆಂಡ್ರಾಯ್ಡ್ 14 ಓಎಸ್‌ ಆಧಾರಿತ ಕಸ್ಟಮ್ ಸ್ಕಿನ್ ಮೈ ಯುಎಕ್ಸ್‌ ಅಪ್‌ಡೇಟ್‌ ಕಾಣುವ ಮೊಟೊರೊಲಾ ಫೋನ್‌ಗಳ ಲಿಸ್ಟ್‌ ಅನ್ನು ಮೊಟೊರೊಲಾ ಸಂಸ್ಥೆಯು ಅನಾವರಣ ಮಾಡಿದೆ. ಬಹುತೇಕ ಎಲ್ಲ ಮೊಟೊರೊಲಾ ಮೊಬೈಲ್‌ಗಳು ಅಪ್‌ಡೇಟ್‌ ಪಡೆದುಕೊಳ್ಳಲಿವೆ.

ನೀವು ಮೊಟೊರೊಲಾ ಫೋನ್‌ ಬಳಕೆ ಮಾಡ್ತೀರಾ?..ಹಾಗಿದ್ರೆ, ಇಲ್ಲಿದೆ ಸಿಹಿಸುದ್ದಿ!

ಇನ್ನು ಗೂಗಲ್‌ ಸಂಸ್ಥೆಯು ಫೆಬ್ರವರಿ 2023 ರಲ್ಲಿ ಆಂಡ್ರಾಯ್ಡ್‌ 14 ಓಎಸ್‌ನ ಮೊದಲ ಡೆವಲಪರ್ ಪೂರ್ವವೀಕ್ಷಣೆಯನ್ನು ಘೋಷಿಸಿತು. ಹಾಗೆಯೇ ಆಪರೇಟಿಂಗ್ ಸಿಸ್ಟಂನ ಸ್ಥಿರ ಆವೃತ್ತಿಯು ಅಕ್ಟೋಬರ್ 2023 ರಲ್ಲಿ ಪಿಕ್ಸಲ್‌ 8 ಸರಣಿಯೊಂದಿಗೆ ಆರಂಭವಾಯಿತು. ಹಾಗಾದರೇ My UX ಆಧರಿತ ಆಂಡ್ರಾಯ್ಡ್‌ 14 ಅಪ್‌ಗ್ರೇಡ್‌ಗೆ ಅರ್ಹವಾಗಿರುವ ಮೊಟೊರೊಲಾ ಫೋನ್‌ಗಳ ಲಿಸ್ಟ್‌ ಮುಂದೆ ನೋಡೋಣ ಬನ್ನಿರಿ.

ಮೊಟೊ ರೇಜರ್‌ (Razr) ಫೋನ್‌ಗಳು

ಮೊಟೊರೊಲಾ ರೇಜರ್‌ 40 ಅಲ್ಟ್ರಾ
ಮೊಟೊರೊಲಾ ರೇಜರ್‌ 40
ಮೊಟೊರೊಲಾ ರೇಜರ್‌+ 2023
ಮೊಟೊರೊಲಾ ರೇಜರ್‌2023
ಮೊಟೊರೊಲಾ ರೇಜರ್‌2022

ನೀವು ಮೊಟೊರೊಲಾ ಫೋನ್‌ ಬಳಕೆ ಮಾಡ್ತೀರಾ?..ಹಾಗಿದ್ರೆ, ಇಲ್ಲಿದೆ ಸಿಹಿಸುದ್ದಿ!

ಮೊಟೊ G ಸರಣಿಯ ಫೋನ್‌ಗಳು

ಮೊಟೊ G 5G 2023
ಮೊಟೊ G ಸ್ಟೈಲಸ್ 5G 2023
ಮೊಟೊ G ಸ್ಟೈಲಸ್ 2023
ಮೊಟೊ G ಪವರ್‌ 5G 2023

ಮೊಟೊ G84 5G
ಮೊಟೊ G54
ಮೊಟೊ G73 5G
ಮೊಟೊ G53 5G
ಮೊಟೊ G23
ಮೊಟೊ G14

ಮೊಟೊ ಎಡ್ಜ್ ಸರಣಿಯ ಫೋನ್‌ಗಳು

ಮೊಟೊರೊಲಾ ಎಡ್ಜ್‌+ 2023
ಮೊಟೊರೊಲಾ ಎಡ್ಜ್ 2023
ಮೊಟೊರೊಲಾ ಎಡ್ಜ್‌+ 2022

ಮೊಟೊರೊಲಾ ಎಡ್ಜ್ 2022
ಮೊಟೊರೊಲಾ ಎಡ್ಜ್‌+ 5G UW 2022
ಮೊಟೊರೊಲಾ ಎಡ್ಜ್‌ 40 ಪ್ರೊ
ಮೊಟೊರೊಲಾ ಎಡ್ಜ್‌ 40 ನಿಯೋ
ಮೊಟೊರೊಲಾ ಎಡ್ಜ್ 40

ಮೊಟೊರೊಲಾ ಎಡ್ಜ್‌ 30 ಅಲ್ಟ್ರಾ
ಮೊಟೊರೊಲಾ ಎಡ್ಜ್‌ 30 ಪ್ರೊ
ಮೊಟೊರೊಲಾ ಎಡ್ಜ್‌ 30 ನಿಯೋ

ಮೊಟೊರೊಲಾ ಎಡ್ಜ್ 30 ಫ್ಯೂಷನ್
ಮೊಟೊರೊಲಾ ಎಡ್ಜ್ 30

ಮೊಟೊ ಎಡ್ಜ್‌ 40 ಬೆಲೆ ಇಳಿಕೆ

ಮೊಟೊರೊಲಾ ಸಂಸ್ಥೆಯ ಮೊಟೊ ಎಡ್ಜ್‌ 40 ಮೊಬೈಲ್‌ ಬೆಲೆಯಲ್ಲಿ 3,000ರೂ. ಗಳ ಇಳಿಕೆ ಆಗಿದೆ. ದರದ ಕಡಿತದ ಬಳಿಕ ಈ ಫೋನ್‌ 26,999ರೂ. ಗಳ ಪ್ರೈಸ್‌ಟ್ಯಾಗ್‌ನಲ್ಲಿ ಖರೀದಿಗೆ ಲಭ್ಯ ಇದೆ. ಹಾಗೆಯೇ ಆಯ್ದ ಕೆಲವು ಬ್ಯಾಂಕ್‌ಗಳಿಂದ ಶೇ. 10% ರಷ್ಟು ಇನ್‌ಸ್ಟಂಟ್ ಡಿಸ್ಕೌಂಟ್‌ ಕೊಡುಗೆಯು ಸಹ ದೊರೆಯುತ್ತದೆ.

ಇನ್ನು ಈ ಮೊಬೈಲ್‌ 6.55 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಫೋಲ್ಡ್‌ ಸ್ಕ್ರೀನ್‌ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ 2,400 x 1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಅಲ್ಲದೇ ಮಿಡಿಯಾ ಟೆಕ್ ಡೈಮೆನ್ಸಿಟಿ 8020 SoC ಪ್ರೊಸೆಸರ್‌ ಪವರ್‌ ಅನ್ನು ಪಡೆದಿದ್ದು, ಈ ಫೋನ್‌ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿದೆ.

ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಈ ಮೊಬೈಲ್‌ 4,400 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದ್ದು, ಗ್ರಾಹಕರು ಇದನ್ನು ವೈವಾ ಮೆಜೆಂಟಾ, ಬ್ಲ್ಯಾಕ್‌, ಗ್ರೀನ್‌ ಹಾಗೂ ಬ್ಲೂ ಕಲರ್‌ ಬಣ್ಣದ ಆಯ್ಕೆಗಳಲ್ಲಿ ಖರೀದಿ ಮಾಡಬಹುದಾಗಿದೆ.

Best Mobiles in India

English summary
Motorola confirms Phones getting Android 14 update. Check full mobile list here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+