ಈ ಅಗ್ಗದ ಫೋನಿಗೂ ಭರ್ಜರಿ ರಿಯಾಯಿತಿ!..ಗ್ರಾಹಕರಿಗೆ ಉಳಿತಾಯ!
ಜನಪ್ರಿಯ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಎಂದು ಗುರುತಿಸಿಕೊಂಡಿರುವ ಫ್ಲಿಪ್‌ಕಾರ್ಟ್ ಹಬ್ಬದ ಅಂಗವಾಗಿ ಆನ್‌ಲೈನ್ ಶಾಪಿಂಗ್ ಪ್ರಿಯರು ಸಖತ್ ಸಿಹಿ ಕೊಡುಗೆಗಳನ್ನು ಘೋಷಿಸಿದೆ. ಮೊಬೈಲ್‌ಗಳಿಗೆ ಬಿಗ್ ಡಿಸ್ಕೌಂಟ್ ಲಭ್ಯ ಮಾಡಿದ್ದು, ಈ ಸಂದರ್ಭದಲ್ಲಿ ಹೊಸ ಮೊಬೈಲ್ ಖರೀದಿಸುವವರಿಗೆ ಇದು ಭರ್ಜರಿ ಆಫರ್ ಎನಿಸಿದೆ. ಆ ಪೈಕಿ ಎಂಟ್ರಿ ಲೆವೆಲ್ ಮಾದರಿಯ ಮೊಟೊರೊಲಾ e13 ಅತ್ಯುತ್ತಮ ಕೊಡುಗೆಯಲ್ಲಿ ಕಾಣಿಸಿಕೊಂಡಿದೆ.
ಹೌದು, ಫ್ಲಿಪ್‌ಕಾರ್ಟ್ ತಾಣದಲ್ಲಿ ಮೊಟೊರೊಲಾ e13 ಮೊಬೈಲ್ ಶೇ. 31% ರಷ್ಟು ನೇರ ರಿಯಾಯಿತಿ ಹೊಂದಿದ್ದು, 8 GB RAM + 128 GB ವೇರಿಯಂಟ್ ಮಾದರಿಯು 7,499ರೂ. ಗಳ ಪ್ರೈಸ್ ಟ್ಯಾಗ್ ದರದಲ್ಲಿ ಖರೀದಿಗೆ ಲಭ್ಯ ಇದೆ. ಇದಲ್ಲದೇ ಆಯ್ದ ಬ್ಯಾಂಕ್ ಆಫರ್, ಎಕ್ಸ್‌ಚೇಂಜ್ ಕೊಡುಗೆ ಹಾಗೂ ಇತರೆ ಆಫರ್ ಸಹ ಸಿಗಲಿವೆ.

ಅಂದಹಾಗೆ ಮೊಟೊ ಸಂಸ್ಥೆಯು ಈ ಮೊಟೊರೊಲಾ e13 ಮೊಬೈಲ್ ಯುನಿಸಾಕ್ T606 (Unisoc T606) ಪ್ರೊಸೆಸರ್ ಬಲವನ್ನು ಪಡೆದಿದೆ. ಇದರೊಂದಿಗೆ ಇದು 2GB RAM + 64GB, 4GB RAM + 64GB ಮತ್ತು 8 GB RAM + 128 GB ಸ್ಟೋರೇಜ್ ಆಯ್ಕೆ ಕೂಡಾ ಒಳಗೊಂಡಿದೆ. ಹಾಗಾದರೇ ಮೊಟೊರೊಲಾ e13 ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ಡಿಸೈನ್ ಹಾಗೂ ರಚನೆ
ಮೊಟೊ e13 ಫೋನ್ 6.5 ಇಂಚಿನ IPS LCD ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇ 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಒಳಗೊಂಡಿದೆ. ಇನ್ನು ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್ ಬೆಂಬಲಿಸಲಿದ್ದು, ವಾಟರ್‌ಡ್ರಾಪ್ ನಾಚ್ ವಿನ್ಯಾಸವನ್ನು ಪಡೆದಿದೆ. ಹಾಗೆಯೇ ಡಿಸ್‌ಪ್ಲೇ ಅನುಪಾತವು 20:9 ಆಗಿದೆ.

ಯಾವ ಪ್ರೊಸೆಸರ್ ಸೌಲಭ್ಯ
ಮೊಟೊರೊಲಾ e13 ಫೋನ್ ಯುನಿಸಾಕ್ T606 (Unisoc T606) ಪ್ರೊಸೆಸರ್ ಪವರ್ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಅದೇ ರೀತಿ 2GB RAM + 64GB, 4GB RAM + 64GB ಮತ್ತು 8 GB RAM + 128 GB ಸ್ಟೋರೇಜ್ ಸಾಮರ್ಥ್ಯ ಆಯ್ಕೆಗಳನ್ನು ಪಡೆದುಕೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಸಾಧ್ಯ.
ಕ್ಯಾಮೆರಾ ರಚನೆ ಹೇಗಿದೆ
ಮೊಟೊ e13 ಮೊಬೈಲ್ ಎಂಟ್ರಿ ಲೆವೆಲ್ ವಿಭಾಗದಲ್ಲಿ ಕಾಣಿಸಿಕೊಂಡಿದ್ದು, ಇದರ ಹಿಂಬದಿಯಲ್ಲಿ ಸಿಂಗಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದೆ. ಈ ಮೊಬೈಲ್ 13 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದ್ದು, ಎಲ್‌ಇಡಿ ಫ್ಲ್ಯಾಷ್ ಸೌಲಭ್ಯ ಸಹ ಪಡೆದಿದೆ. ಇದಲ್ಲದೆ ಈ ಮೊಬೈಲ್ 5 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಪಡೆದುಕೊಂಡಿದೆ.

ಅಧಿಕ ಬ್ಯಾಟರಿ ಬ್ಯಾಕ್‌ಅಪ್ ಮತ್ತು ಇತರೆ ಸೌಲಭ್ಯಗಳು
ಮೊಟೊ ಸಂಸ್ಥೆಯ ಈ ಮೊಟೊರೊಲಾ e13 ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ 10W ಚಾರ್ಜಿಂಗ್ ಸೌಲಭ್ಯವನ್ನು ಕೂಡಾ ಪಡೆದುಕೊಂಡಿದೆ.
ಇದರೊಂದಿಗೆ ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಹಾಟ್‌ಸ್ಪಾಟ್, ವೈಫೈ, ಬ್ಲೂಟೂತ್ 5.0, ಜಿಪಿಎಸ್, ಫೇಸ್ ಅನ್‌ಲಾಕ್, ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್, ಯುಎಸ್‌ಬಿ ಟೈಪ್-ಸಿ ಪೋರ್ಟ್, ಡಾಲ್ಬಿ ಅಟ್ಮಾಸ್ ಬೆಂಬಲ, 3.5 ಎಂಎಂ ಆಡಿಯೊ ಜ್ಯಾಕ್ ಮತ್ತು ಐಪಿ52 ಸ್ಪ್ಲಾಶ್-ರೆಸಿಸ್ಟೆಂಟ್ ಕೋಟಿಂಗ್ ಆಯ್ಕೆಗಳ ಅನ್ನು ಇದು ಹೊಂದಿದೆ. ಇದು ಗ್ರೀನ್, ಬ್ಲ್ಯಾಕ್ ಹಾಗೂ ವೈಟ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.


Click it and Unblock the Notifications








