ಕೇವಲ 8,999ರೂ.ಗೆ ಲಭ್ಯ ಈ 8GB RAM ಸ್ಮಾರ್ಟ್‌ಫೋನ್!
ಮೊಟೊರೊಲಾ ಸಂಸ್ಥೆಯ ಇತ್ತೀಚಿನ ಎಂಟ್ರಿ ಲೆವೆಲ್ ಫೋನ್ ಆಗಿರುವ ಮೊಟೊರೊಲಾ e13 ಆಕರ್ಷಕ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಈ ಫೋನ್ ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್ ನಲ್ಲಿ ಇದೀಗ ಸಖತ್ ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಈ ಫೋನ್ 5000 mAh ಬ್ಯಾಟರಿ ಸಾಮರ್ಥ್ಯದ ಪವರ್ ಪಡೆದಿದೆ.
ಹೌದು, ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಮೊಟೊರೊಲಾ e13 ಫೋನ್ ಈಗ 18% ರಷ್ಟು ಡಿಸ್ಕೌಂಟ್ ದರದಲ್ಲಿ ಕಾಣಿಸಿಕೊಂಡಿದೆ. ಈ ಮೊಬೈಲ್‌ನ 8 GB RAM + 128 GB ಆಂತರೀಕ ಸಂಗ್ರಹದ ವೇರಿಯಂಟ್ ಬೆಲೆಯು 10,999ರೂ. ಬೆಲೆ ಪಡೆದಿದ್ದು, ಆಫರ್‌ನಲ್ಲಿ ಈ ಫೋನ್ 8,999ರೂ. ಪ್ರೈಸ್‌ಟ್ಯಾಗ್ ನಲ್ಲಿ ಲಭ್ಯ ಇದೆ. ಹಾಗೆಯೇ ಕೆಲವು ಆಯ್ದ ಬ್ಯಾಂಕ್ ಗಳ ಕೊಡುಗೆ ಸಹ ಗ್ರಾಹಕರಿಗೆ ದೊರೆಯುತ್ತವೆ.

ಈ ಮೊಬೈಲ್ ಎಂಟ್ರಿ ಲೆವೆಲ್ ವಿಭಾಗದ್ದು, ಜೊತೆಗೆ ಅಗ್ಗದ ಪ್ರೈಸ್‌ಟ್ಯಾಗ್ ಪಡೆದಿದೆ. ಇನ್ನು ಇದು ಯುನಿಸಾಕ್ T606 (Unisoc T606) ಪ್ರೊಸೆಸರ್ ಬಲ ಕಾರ್ಯ ನಿರ್ವಹಿಸಲಿದ್ದು, ಇದರೊಂದಿಗೆ 2GB RAM, 4GB RAM ಹಾಗೂ 8 GB RAM ವೇರಿಯಂಟ್ ಆಯ್ಕೆ ಅನ್ನು ಪಡೆದಿದೆ. ಇನ್ನುಳಿದಂತೆ ಮೊಟೊ e13 ಫೋನ್ ಮೊಬೈಲ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಮೊಟೊ e13 ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ : ಮೊಟೊ e13 ಮೊಬೈಲ್ 6.5 ಇಂಚಿನ IPS LCD ಡಿಸ್‌ಪ್ಲೇಯನ್ನು ಹೊಂದಿದ್ದು, ಈ ಡಿಸ್‌ಪ್ಲೇ 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಒಳಗೊಂಡಿದೆ. ಇನ್ನು ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್ ಬೆಂಬಲಿಸಲಿದ್ದು, ವಾಟರ್‌ಡ್ರಾಪ್ ನಾಚ್ ವಿನ್ಯಾಸವನ್ನು ಪಡೆದಿದೆ. ಹಾಗೆಯೇ ಡಿಸ್‌ಪ್ಲೇ ಅನುಪಾತವು 20:9 ಆಗಿದೆ.
ಮೊಟೊ e13 ಪ್ರೊಸೆಸರ್ ಪವರ್ ಯಾವುದು : ಮೊಟೊ e13 ಮೊಬೈಲ್ ಯುನಿಸಾಕ್ T606 (Unisoc T606) ಪ್ರೊಸೆಸರ್ ಪವರ್ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಹಾಗೆಯೇ 2GB RAM + 64GB, 4GB RAM + 64GB ಮತ್ತು 8 GB RAM + 128 GB ಸ್ಟೋರೇಜ್ ಸಾಮರ್ಥ್ಯ ಆಯ್ಕೆಗಳನ್ನು ಒಳಗೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಸಾಧ್ಯ.
ಮೊಟೊ e13 ರಿಯರ್ ಸಿಂಗಲ್ ಕ್ಯಾಮೆರಾ : ಮೊಟೊ e13 ಮೊಬೈಲ್ ಎಂಟ್ರಿ ಲೆವೆಲ್ ವಿಭಾಗದಲ್ಲಿ ಕಾಣಿಸಿಕೊಂಡಿದ್ದು, ಇದರ ಹಿಂಬದಿಯಲ್ಲಿ ಸಿಂಗಲ್ ರಿಯರ್ ಕ್ಯಾಮೆರಾ ರಚನೆ ಇದೆ. ಈ ಮೊಬೈಲ್ 13 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದ್ದು, ಎಲ್‌ಇಡಿ ಫ್ಲ್ಯಾಷ್ ಸೌಲಭ್ಯ ಸಹ ಹೊಂದಿದೆ. ಇದಲ್ಲದೆ ಈ ಮೊಬೈಲ್ 5 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.
ಮೊಟೊ e13 ಬ್ಯಾಟರಿ ಬ್ಯಾಕ್‌ಅಪ್ ಮತ್ತು ಇತರೆ ಆಯ್ಕೆ : ಮೊಟೊ e13 ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ಇದಕ್ಕೆ ಪೂರಕವಾಗಿ 10W ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ.
ಹಾಗೆಯೇ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ವೈಫೈ, ಬ್ಲೂಟೂತ್ 5.0, ಜಿಪಿಎಸ್, ಫೇಸ್ ಅನ್‌ಲಾಕ್, ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್, ಯುಎಸ್‌ಬಿ ಟೈಪ್-ಸಿ ಪೋರ್ಟ್, ಡಾಲ್ಬಿ ಅಟ್ಮಾಸ್ ಬೆಂಬಲ, 3.5 ಎಂಎಂ ಆಡಿಯೊ ಜ್ಯಾಕ್ ಮತ್ತು ಐಪಿ52 ಸ್ಪ್ಲಾಶ್-ರೆಸಿಸ್ಟೆಂಟ್ ಕೋಟಿಂಗ್ ಆಯ್ಕೆ ಪಡೆದಿದೆ.
ಮೊಟೊ e13 ಮೆಮೊರಿ ಎಷ್ಟು ಹಾಗೂ ಕಲರ್ ಮಾಹಿತಿ : ಮೊಟೊ e13 ಸ್ಮಾರ್ಟ್‌ಫೋನ್ 2GB RAM + 64GB, 4GB RAM + 64GB ಮತ್ತು 8 GB RAM + 128 GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳಲ್ಲಿ ಲಭ್ಯ. ಇದರೊಂದಿಗೆ ಗ್ರೀನ್, ಬ್ಲ್ಯಾಕ್ ಹಾಗೂ ವೈಟ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.


Click it and Unblock the Notifications








