Home
ಸುದ್ದಿಜಾಲ

Smartphone: ಈ ಫೋನ್‌ ಇಷ್ಟೊಂದು ಕಡಿಮೆ ಬೆಲೆಗೆ ಲಭ್ಯವೇ? ಈ ಆಫರ್ ಮಿಸ್‌ ಮಾಡ್ಕೋಬೇಡಿ

ಸ್ಮಾರ್ಟ್‌ಫೋನ್‌ಗಳು (Smartphone) ಬಜೆಟ್‌ ಬೆಲೆಯಿಂದ ಹಿಡಿದು ದುಬಾರಿ ಬೆಲೆಗೆ ಲಭ್ಯ ಇವೆ. ಈ ಮೂಲಕ ಗ್ರಾಹಕರು ತಮಗೆ ಅಗತ್ಯ ಇರುವ ಫೋನ್‌ಗಳನ್ನು ಖರೀದಿ ಮಾಡುತ್ತಿದ್ದಾರೆ. ಅದಾಗ್ಯೂ ಕಡಿಮೆ ಬೆಲೆಗೆ ಲಭ್ಯ ಇರುವ ಫೋನ್‌ಗಳು ಉತ್ತಮ ಫೀಚರ್ಸ್‌ ಆಯ್ಕೆ ಹೊಂದಿದ್ದು, ಈ ಮೂಲಕ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಅದರಂತೆ ಇದೀಗ ಈ ಬಜೆಟ್‌ ಬೆಲೆಯ ಫೋನ್‌ಗೆ ಭರ್ಜರಿ ರಿಯಾಯಿತಿ ನೀಡಲಾಗಿದೆ.

ಹೌದು, ಸ್ಮಾರ್ಟ್‌ಫೋನ್‌ ಅಂದಾಕ್ಷಣ ನಮ್ಮ ಕಣ್ಣಮುಂದೆ ನೂರಾರು ಫೋನ್‌ಗಳು ಕಾಣಿಸಿಕೊಳ್ಳುತ್ತವೆ. ಈ ನಡುವೆ ಹಲವಾರು ಜನರು ಯಾವುದನ್ನು ಖರೀದಿ ಮಾಡಬೇಕು ಎಂದು ಗೊಂದಲಕ್ಕೆ ಒಳಗಾಗುತ್ತಾರೆ. ಆದರೆ, ಬಜೆಟ್‌ ಬೆಲೆಯಲ್ಲಿ ಫೋನ್‌ ಖರೀದಿ ಮಾಡಲು ಮುಂದಾಗಿದ್ದೀರಿ ಎಂದರೆ ನಿಮಗೆ ಯಾವುದೇ ಗೊಂದಲ ಬೇಡ. ಯಾಕೆಂದರೆ ಉತ್ತಮ ಫೀಚರ್ಸ್‌ ಆಯ್ಕೆ ಇರುವ ಮೊಟೊರೊಲಾ e32 ಸ್ಮಾರ್ಟ್‌ಫೋನ್‌ (Motorola e32 smartphone) ಖರೀದಿ ಮಾಡಬಹುದಾಗಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಆಫರ್ ಬೆಲೆ ವಿವರ ಇಲ್ಲಿದೆ ನೋಡಿ.

ಈ ಫೋನ್‌ ಇಷ್ಟೊಂದು ಕಡಿಮೆ ಬೆಲೆಗೆ ಲಭ್ಯವೇ? ಈ ಆಫರ್ ಮಿಸ್‌ ಮಾಡ್ಕೋಬೇಡಿ

ಮೊಟೊರೊಲಾ e32 ಸ್ಮಾರ್ಟ್‌ಫೋನ್‌ ಆಫರ್ ವಿವರ: ಈ ಸ್ಮಾರ್ಟ್‌ಫೋನ್ 11,999 ರೂ.ಗಳ ಆಫರ್ ಹೊಂದಿದ್ದು, 7,999 ರೂ.ಗಳ ಆಫರ್‌ ಬೆಲೆಯ ಮೂಲಕ ಇದನ್ನು ಖರೀದಿ ಮಾಡಬಹುದಾಗಿದೆ. ಈ ಮೂಲಕ ನಾಲ್ಕು ಸಾವಿರ ಹಣ ಉಳಿತಾಯ ಮಾಡಬಹುದಾಗಿದೆ. ಅಂದರೆ ಈ ಫೋನ್‌ಗೆ ಫ್ಲಿಪ್‌ಕಾರ್ಟ್‌ನಲ್ಲಿ (Flipkart) 33% ರಿಯಾಯಿತಿ ಘೋಷಣೆ ಮಾಡಲಾಗಿದ್ದು, ಇದನ್ನು ಹೊರತುಪಡಿಸಿ ಇನ್ನೂ ಕಡಿಮೆ ಬೆಲೆಗೆ ಈ ಫೋನ್ ಖರೀದಿ ಮಾಡಲು ಅನುಕೂಲ ಮಾಡಲಾಗಿದೆ.

ಈ ಸ್ಮಾರ್ಟ್‌ಫೋನ್‌ ಅನ್ನು ಫ್ಲಿಪ್‌ಕಾರ್ಟ್‌ ಆಕ್ಸಿಸ್ ಬ್ಯಾಂಕ್‌ ಕ್ರೆಡಿಟ್ ಕಾರ್ಡ್‌ ಬಳಕೆ ಮಾಡಿಕೊಂಡು ಖರೀದಿ ಮಾಡಿದರೆ 5% ಕ್ಯಾಶ್‌ಬ್ಯಾಕ್ ಸಿಗಲಿದೆ. ಜೊತೆಗೆ ತಿಂಗಳಿಗೆ ಕೇವಲ 496 ರೂ.ಗಳ ಆರಂಭಿಕ ಇಎಮ್‌ಐ ಮೂಲಕವೂ ಸಹ ಈ ಫೋನ್‌ ಅನ್ನು ಖರೀದಿ ಮಾಡಬಹುದಾಗಿದ್ದು, ಇದರೊಂದಿಗೆ ವಿನಿಮಯ ಆಫರ್ ಅನ್ನೂ ಸಹ ಘೋಷಣೆ ಮಾಡಲಾಗಿದೆ. ಅಂದರೆ ನಿಮ್ಮ ಹಳೆಯ ಫೋನ್‌ ಉತ್ತಮವಾಗಿದ್ದರೆ 6,900 ರೂ.ಗಳವರೆಗೆ ಹಣ ಉಳಿತಾಯ ಮಾಡಬಹುದಾಗಿದೆ. ಹಾಗಿದ್ರೆ, ಈ ಬೆಲೆಗೆ ಈ ಫೋನ್‌ ಯೋಗ್ಯವೇ ಎಂದು ತಿಳಿದುಕೊಳ್ಳಲು ಇದರ ಫೀಚರ್ಸ್‌ ಕಡೆ ಕಣ್ಣಾಯಿಸಿ.

ಈ ಫೋನ್‌ ಇಷ್ಟೊಂದು ಕಡಿಮೆ ಬೆಲೆಗೆ ಲಭ್ಯವೇ? ಈ ಆಫರ್ ಮಿಸ್‌ ಮಾಡ್ಕೋಬೇಡಿ

ಮೊಟೊರೊಲಾ e32 ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ 6.5 ಇಂಚಿನ HD+ IPS LCD ಡಿಸ್‌ಪ್ಲೇ ಹೊಂದಿದ್ದು, ಇದು 1600 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ 90 Hz ರಿಫ್ರೆಶ್‌ ರೆಟ್‌ ಹಾಗೂ 20:9 ಆಕಾರ ಅನುಪಾತ, 89.03% ಸ್ಕ್ರೀನ್-ಟು-ಬಾಡಿ ಅನುಪಾತ ಪಡೆದಿದೆ.

ಮೊಟೊರೊಲಾ e32 ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ಮಾಹಿತಿ: ಈ ಫೋನ್ ಆಕ್ಟಾ ಕೋರ್ ಮೀಡಿಯಾಟೆಕ್ ಹಿಲಿಯೊ G37 ಪ್ರೊಸೆಸರ್‌ ಬಲ ಪಡೆದಿದ್ದು, ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಮ್ ಅನ್ನು ರನ್‌ ಮಾಡಲಿದೆ. ಇದರೊಂದಿಗೆ ಪವರ್‌ ವಿಆರ್‌ GE8320 ಜಿಪಿಯು ಶಕ್ತಿಯೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡಲಿದೆ. ಜೊತೆಗೆ ಈ ಫೋನ್ 64 GB ಇಂಟರ್‌ ಸ್ಟೋರೇಜ್‌ ಹಾಗೂ 4GB RAM ಆಯ್ಕೆ ಪಡೆದಿದ್ದು, 1 TB ವರೆಗೂ ವಿಸ್ತರಣೆ ಮಾಡಬಹುದಾದ ಆಯ್ಕೆ ಪಡೆದಿದೆ.

ಮೊಟೊರೊಲಾ e32 ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್‌‌ ಮುಖ್ಯ ಕ್ಯಾಮೆರಾ ಹೊಂದಿದ್ದು, ಇದು ಕ್ವಾಡ್ ಪಿಕ್ಸೆಲ್ ತಂತ್ರಜ್ಞಾನ ಪಡೆದಿದೆ. ಇದರೊಂದಿಗೆ 2MP ಡೆಪ್ತ್ ಸೆನ್ಸರ್‌ ಆಯ್ಕೆ ಪಡೆದುಕೊಂಡಿದೆ. ಈ ಸೆನ್ಸರ್‌ಗಳು ಪೋರ್ಟ್ರೇಟ್, ಫೋಟೋ, ಪನೋರಮಾ, ನೈಟ್ ವಿಷನ್, ಪ್ರೊ ಮೋಡ್, ಡ್ಯುಯಲ್ ಕ್ಯಾಪ್ಚರ್ ಫೋಟೋ, ಲೈವ್ ಫಿಲ್ಟರ್, ಫೇಸ್ ಬ್ಯೂಟಿ, ಗೂಗಲ್ ಲೆನ್ಸ್ ಇಂಟಿಗ್ರೇಷನ್, ಎಚ್‌ಡಿಆರ್, ಟೈಮರ್, ಅಸಿಸ್ಟೆವ್ ಗ್ರಿಡ್, ವಾಟರ್‌ಮಾರ್ಕ್ ಸೇರಿದಂತೆ ಇನ್ನೂ ಅನೇಕ ಆಕರ್ಷಕ ಫೀಚರ್ಸ್‌ ಅನ್ನು ಈ ಕ್ಯಾಮೆರಾ ಹೊಂದಿದೆ. ಇದರೊಂದಿಗೆ 8 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾವನ್ನು ಈ ಫೋನ್‌ ಹೊಂದಿದೆ.

ಈ ಫೋನ್‌ ಇಷ್ಟೊಂದು ಕಡಿಮೆ ಬೆಲೆಗೆ ಲಭ್ಯವೇ? ಈ ಆಫರ್ ಮಿಸ್‌ ಮಾಡ್ಕೋಬೇಡಿ

ಮೊಟೊರೊಲಾ e32 ಸ್ಮಾರ್ಟ್‌ಫೋನ್‌ ಬ್ಯಾಟರಿ ಹಾಗೂ ಇತರೆ: 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಫಿಂಗರ್‌ಪ್ರಿಂಟ್ ಸೆನ್ಸರ್‌, ಪ್ರಾಕ್ಸಿಮಿಟಿ ಸೆನ್ಸರ್, ಆಂಬಿಯೆಂಟ್ ಲೈಟ್ ಸೆನ್ಸರ್, ಅಕ್ಸೆಲೆರೊಮೀಟರ್, ನೋಟಿಫಿಕೇಶನ್ ಎಲ್‌ಇಡಿ ಆಯ್ಕೆ ಸೇರಿದಂತೆ ಇನ್ನೂ ಅನೇಕ ಆಕರ್ಷಕ ಫೀಚರ್ಸ್‌ ಅನ್ನು ಈ ಫೋನ್ ಪಡೆದುಕೊಂಡಿದೆ. ಈ ಮೂಲಕ ಬಜೆಟ್‌ ಬೆಲೆಯಲ್ಲಿ ಈ ಫೋನ್‌ ಉತ್ತಮ ಎನಿಸಿದೆ.

Best Mobiles in India

English summary
Motorola e32 smartphone available in huge discount on Flipkart. This smartphone has good storage options and camera features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+