Home
ಸುದ್ದಿಜಾಲ

ಇದೇ ಆಗಸ್ಟ್ 17ರಂದು ಮೊಟೊ ಎಡ್ಜ್ 20 ಮತ್ತು ಮೊಟೊ ಎಡ್ಜ್ 20 ಫ್ಯೂಶನ್ ಲಾಂಚ್!

ಪ್ರತಿಷ್ಠಿತ ಮೊಬೈಲ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ಲೆನೊವಾ ಮಾಲೀಕತ್ವದ ಮೊಟೊರೊಲಾ ಕಂಪೆನಿಯ ತನ್ನ ಮೊಟೊ ಎಡ್ಜ್ ಸರಣಿಯಲ್ಲಿ ಈಗಾಗಲೇ ಕೆಲವು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿದೆ. ಮೊಟೊರೊಲಾ ಇದೀಗ ಅದೇ ಸರಣಿಯಲ್ಲಿ ಮೊಟೊ ಎಡ್ಜ್ 20 ಮತ್ತು ಮೊಟೊ ಎಡ್ಜ್ 20 ಫ್ಯೂಷನ್ ಸ್ಮಾರ್ಟ್‌ಫೋನ್‌ಗಳನ್ನು ಅಧಿಕೃತವಾಗಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಹೂರ್ತ ಫಿಕ್ಸ್‌ ಮಾಡಿಕೊಂಡಿದೆ.

ಫೋನ್‌ಗಳನ್ನು

ಹೌದು, ಮೊಟೊರೊಲಾ ಕಂಪೆನಿ ನೂತನವಾಗಿ ಮೊಟೊ ಎಡ್ಜ್ 20 ಮತ್ತು ಮೊಟೊ ಎಡ್ಜ್ 20 ಫ್ಯೂಷನ್ ಫೋನ್‌ಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಕಂಪನಿಯು ಈ ಎರಡು ಸ್ಮಾರ್ಟ್‌ಫೋನ್‌ಗಳನ್ನು ಇದೇ ಆಗಷ್ಟ 17ರಂದು ಭಾರತದಲ್ಲಿ ಲಾಂಚ್ ಮಾಡಲಿದೆ. ಈ ಎರಡು ಫೋನ್‌ಗಳ ಫೀಚರ್ಸ್‌ಗಳು ಏನಿರಲಿವೆ ಮತ್ತು ಬೆಲೆ ಎಷ್ಟಿರಲಿದೆ ಎನ್ನುವುದು ಗ್ರಾಹಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಹಾಗಾದರೇ ಮೊಟೊ ಎಡ್ಜ್ 20 ಮತ್ತು ಮೊಟೊ ಎಡ್ಜ್ 20 ಫ್ಯೂಷನ್ ಫೋನ್‌ಗಳು ಯಾವೆಲ್ಲಾ ಫೀಚರ್ಸ್‌ ಹೊಂದಿರಲಿದೆ ಹಾಗೂ ಬೆಲೆ ಎಷ್ಟಿರಲಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಮೊಟೊ ಎಡ್ಜ್ 20 ಫೀಚರ್ಸ್‌

ಮೊಟೊ ಎಡ್ಜ್ 20 ಫೀಚರ್ಸ್‌

ಮೊಟೊ ಎಡ್ಜ್ 20 ಸ್ಮಾರ್ಟ್‌ಫೋನ್ 6.67 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಒಳಗೊಂಡಿರಲಿದೆ. ಈ ಡಿಸ್‌ಪ್ಲೇಯು 1080x2400 ಪಿಕ್ಸಲ್ ರೆಸಲ್ಯೂಶನ್ ಅನ್ನು ಒಳಗೊಂಡಿರಲಿದೆ. ಹಾಗೆಯೇ ಆಕ್ಟಾ ಕೋರ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 778G ಪ್ರೊಸೆಸರ್‌ ಬಲವನ್ನು ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಓಎಸ್‌ ಸಪೋರ್ಟ್‌ ಹೊಂದಿರಲಿದೆ. ಇನ್ನು ಈ ಫೋನ್ ಟ್ರಿಪಲ್ ಕ್ಯಾಮೆರಾ ರಚನೆ ಹೊಂದಿರಲಿದ್ದು, ಕ್ರಮವಾಗಿ 108ಎಂಪಿ + 16ಎಂಪಿ + 8ಎಂಪಿ ಸೆನ್ಸಾರ್‌ ಪಡೆದಿರಲಿವೆ. ಇನ್ನು ಸೆಲ್ಫಿ ಕ್ಯಾಮೆರಾವು 32ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇರಲಿದೆ. ಜೊತೆಗೆ 4000mAh ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿರಲಿದ್ದು, 33W ಟರ್ಬೊಪವರ್ ಚಾರ್ಜಿಂಗ್ ಬೆಂಬಲ ಇರಲಿದೆ.

ಮೊಟೊ ಎಡ್ಜ್ 20 ಫ್ಯೂಷನ್ ಫೀಚರ್ಸ್‌

ಮೊಟೊ ಎಡ್ಜ್ 20 ಫ್ಯೂಷನ್ ಫೀಚರ್ಸ್‌

ಮೊಟೊ ಎಡ್ಜ್ 20 ಫ್ಯೂಷನ್ ಅಥವಾ ಮೊಟೊ ಎಡ್ಜ್ 20 ಲೈಟ್ ಸ್ಮಾರ್ಟ್‌ಫೋನ್ 6.67 ಇಂಚಿನ ಪೂರ್ಣ OLED ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಒಳಗೊಂಡಿರಲಿದೆ. ಈ ಡಿಸ್‌ಪ್ಲೇಯು 1080x2400 ಪಿಕ್ಸಲ್ ರೆಸಲ್ಯೂಶನ್ ಅನ್ನು ಒಳಗೊಂಡಿರಲಿದ್ದು, 90Hz ರೀಫ್ರೇಶ್ ರೇಟ್ ಹೊಂದಿರಲಿದೆ. ಹಾಗೆಯೇ ಆಕ್ಟಾ ಕೋರ್ ಮೀಡಿಯಾ ಟೆಕ್ Dimensity 720 ಪ್ರೊಸೆಸರ್‌ ಬಲವನ್ನು ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಓಎಸ್‌ ಸಪೋರ್ಟ್‌ ಹೊಂದಿರಲಿದೆ. 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿರಲಿದೆ.ಇನ್ನು ಈ ಫೋನ್ ಟ್ರಿಪಲ್ ಕ್ಯಾಮೆರಾ ರಚನೆ ಹೊಂದಿರಲಿದ್ದು, ಕ್ರಮವಾಗಿ 108ಎಂಪಿ + 8ಎಂಪಿ + 2ಎಂಪಿ ಸೆನ್ಸಾರ್‌ ಪಡೆದಿರಲಿವೆ. ಇನ್ನು ಸೆಲ್ಫಿ ಕ್ಯಾಮೆರಾವು 32ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇರಲಿದೆ. ಜೊತೆಗೆ 5000mAh ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿರಲಿದ್ದು, 30W ಫಾಸ್ಟ್‌ ಚಾರ್ಜಿಂಗ್ ಬೆಂಬಲ ಇರಲಿದೆ.

ಬೆಲೆ ಮತ್ತು ಲಭ್ಯತೆ?

ಬೆಲೆ ಮತ್ತು ಲಭ್ಯತೆ?

ಮೊಟೊ ಎಡ್ಜ್ 20 ಮತ್ತು ಮೊಟೊ ಎಡ್ಜ್ 20 ಫ್ಯೂಷನ್ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಇದೇ ಆಗಸ್ಟ್ 17ರಂದು ಬಿಡುಗಡೆ ಆಗಲಿದೆ. ಈ ಎರಡು ಫೋನ್‌ಗಳ ಬೆಲೆಯ ಬಗ್ಗೆ ಕಂಪನಿಯು ಸುಳಿವು ಬಿಟ್ಟಿಲ್ಲ. ಇನ್ನು ಈ ಲಾಂಚ್ ನಂತರ ಮೊಟೊ ಎಡ್ಜ್ 20 ಮತ್ತು ಮೊಟೊ ಎಡ್ಜ್ 20 ಫ್ಯೂಷನ್ ಸ್ಮಾರ್ಟ್‌ಫೋನ್‌ಗಳು ಫ್ಲಿಪ್‌ಕಾರ್ಟ್‌ ಇ-ಕಾಮರ್ಸ್‌ ತಾಣದಲ್ಲಿ ಖರೀದಿಗೆ ಲಭ್ಯವಾಗಲಿದೆ.

Best Mobiles in India

English summary
Motorola Edge 20 And Edge 20 Fusion Will Launch In India on August 17: Price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+