ಮೊಟೊರೊಲಾ ಎಡ್ಜ್ 20 ಪ್ರೀ-ಆರ್ಡರ್ ಪ್ರಾರಂಭ; ಬೆಲೆ ಎಷ್ಟು?..ಫೀಚರ್ಸ್ ಏನು?
ಇತ್ತೀಚಿಗೆ ಬಿಡುಗಡೆ ಆಗಿರುವ ಮೊಟೊರೊಲಾ ಕಂಪನಿಯ ಹೊಸ ಮೊಟೊರೊಲಾ ಎಡ್ಜ್ 20 ಸ್ಮಾರ್ಟ್‌ಫೋನ್ ಸರಣಿಯು ಈಗಾಗಲೆ ಗ್ರಾಹಕರ ಗಮನ ಸೆಳೆದಿದ್ದು, ಈ ಸರಣಿಯು ಮೊಟೊರೊಲಾ ಎಡ್ಜ್ 20 ಮತ್ತು ಮೊಟೊರೊಲಾ ಎಡ್ಜ್ 20 ಫ್ಯೂಷನ್ ಮಾದರಿಗಳನ್ನು ಹೊಂದಿದೆ. ಆ ಪೈಕಿ ಮೊಟೊರೊಲಾ ಎಡ್ಜ್ 20 ಸ್ಮಾರ್ಟ್‌ಫೋನ್ ಖರೀದಿಗಾಗಿ ಎದುರುನೋಡುತ್ತಿರುವ ಗ್ರಾಹಕರಿಗೆ ಈಗ ಸಿಹಿಸುದ್ದಿ ಲಭ್ಯವಾಗಿದೆ. ದೇಶದಲ್ಲಿ ಮೊಟೊರೊಲಾ ಎಡ್ಜ್ 20 ಫೋನ್ ಇಂದಿನಿಂದ ಪ್ರೀ ಆರ್ಡರ್ ಆರಂಭವಾಗಿದೆ.

ಹೌದು, ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ತಾಣದಲ್ಲಿ ಇಂದಿನಿಂದ (ಆಗಷ್ಟ 24) ರಿಂದ ಮೊಟೊರೊಲಾ ಎಡ್ಜ್ 20 ಫೋನ್ ಪ್ರೀ ಆರ್ಡರ್ ಶುರುವಾಗಿದೆ. ಇನ್ನು ಈ ಫೋನ್ 8GB RAM ಮತ್ತು 128GB ವೇರಿಯಮಟ್ ಆಯ್ಕೆ ಹೊಂದಿದೆ. ಇದರೊಂದಿಗೆ ಡಿಸ್‌ಪ್ಲೇಯು 144Hz ರಿಫ್ರೆಶ್ ದರವನ್ನು ಒಳಗೊಂಡಿದೆ. ಇನ್ನು ಈ ಫೋನಿನ ಬೇಸ್ ವೇರಿಯಂಟ್ ಬೆಲೆಯು 29,999.ರೂ ಆಗಿದೆ. ಹಾಗಾದರೇ ಮೊಟೊರೊಲಾ ಎಡ್ಜ್ 20 ಫೋನಿನ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಹೇಗಿದೆ
ಮೊಟೊರೊಲಾ ಎಡ್ಜ್ 20 ಸ್ಮಾರ್ಟ್‌ಫೋನ್ 6.7-ಇಂಚಿನ ಫುಲ್ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3-ಪ್ರೊಟೆಕ್ಷನ್ ಹೊಂದಿದ್ದು, 144Hz ರಿಫ್ರೆಶ್ ದರ ಮತ್ತು 576Hz ಟಚ್ ಲೇಟೆನ್ಸಿ ಹೊಂದಿದೆ.

ಪ್ರೊಸೆಸರ್ ಬಲ ಯಾವುದು
ಮೊಟೊರೊಲಾ ಎಡ್ಜ್ 20 ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯದ ಹೊಂದಿದೆ.

ಕ್ಯಾಮೆರಾ ಸೆನ್ಸಾರ್ ಏನು
ಮೊಟೊರೊಲಾ ಎಡ್ಜ್ 20 ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ.

ಬ್ಯಾಟರಿ ಪವರ್ ಹಾಗೂ ಇತರೆ
ಮೊಟೊರೊಲಾ ಎಡ್ಜ್ 20 ಸ್ಮಾರ್ಟ್‌ಫೋನ್ 4,000mAh ಬ್ಯಾಟರಿ ಹೊಂದಿದ್ದು, 30W ಟರ್ಬೊಪವರ್ ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2,ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಮೊಟೊರೊಲಾ ಎಡ್ಜ್ 20 ಸ್ಮಾರ್ಟ್‌ಫೋನ್ ಬೆಲೆ 8GB + 128GB ಸ್ಟೋರೇಜ್ ರೂಪಾಂತರಕ್ಕೆ 29,999.ರೂ ಆಗಿದೆ. ಇದು ಫ್ರಾಸ್ಟೆಡ್ ಪರ್ಲ್ ಮತ್ತು ಫ್ರಾಸ್ಟೆಡ್ ಪಚ್ಚೆ ಬಣ್ಣದ ಆಯ್ಕೆಗಳನ್ನು ಹೊಂದಿದೆ.


Click it and Unblock the Notifications








