Home
ಸುದ್ದಿಜಾಲ

Motorola: ಮೊಟೊರೊಲಾದ ಈ ಸ್ಟೈಲಿಶ್ ಫೋನ್‌ಗೆ ಬೊಂಬಾಟ್‌ ಆಫರ್! 50MP ಕ್ಯಾಮೆರಾ... 128 GB ಸ್ಟೋರೇಜ್

ಮೊಟೊರೊಲಾ ಫೋನ್‌ಗಳು (Motorola phone) ಉತ್ತಮ ಫೀಚರ್ಸ್ ಆಯ್ಕೆಯೊಂದಿಗೆ ಅತ್ಯುತ್ತಮ ಶೈಲಿಯನ್ನೂ ಸಹ ಪಡೆದುಕೊಂಡಿವೆ. ಈ ನಡುವೆ ಮೊಟೊರೊಲಾದ ಈ ಪ್ರೀಮಿಯಂ ಫೋನ್‌ಗೆ ದೊಟ್ಟ ಮಟ್ಟದ ಆಫರ್ ಘೋಷಣೆ ಮಾಡಲಾಗಿದೆ. ಈ ಫೋನ್ 128 GB ಸ್ಟೋರೇಜ್ ಆಯ್ಕೆ ಪಡೆದಿದೆ.

ಹೌದು, ಮೊಟೊರೊಲಾದ ಮೊಟೊರೊಲಾ ಎಡ್ಜ್ 30 ಫ್ಯೂಷನ್ (Motorola Edge 30 Fusion) ಬೆಲೆ ಇಳಿಕೆ ಆಗಿದೆ. ಅಂದರೆ ಪ್ರಮುಖ ಇ-ಕಾಮರ್ಸ್‌ ಸೈಟ್‌ ಈ ಫೋನ್‌ ಮೇಲೆ ಆಫರ್ ಘೋಷಣೆ ಮಾಡಿದೆ. ಇದು 50 ಮೆಗಾಪಿಕ್ಸೆಲ್‌ ಕ್ಯಾಮೆರಾ ಆಯ್ಕೆ ಪಡೆದ್ದು, ಮೊಟೊರೊಲಾದ ಫೋನ್‌ಗಳ ವಿಭಾಗದಲ್ಲಿ ಇದು ಹೆಚ್ಚು ಸೇಲ್‌ ಆಗುತ್ತಿರುವ ಫೋನ್‌ ಆಗಿದೆ. ಹಾಗಿದ್ರೆ ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರ ಇಲ್ಲದೆ ನೋಡಿ.

ಮೊಟೊರೊಲಾದ ಈ ಸ್ಟೈಲಿಶ್ ಫೋನ್‌ಗೆ ಬೊಂಬಾಟ್‌ ಆಫರ್! 50MP ಕ್ಯಾಮೆರಾ...

ಮೊಟೊರೊಲಾ ಎಡ್ಜ್ 30 ಫ್ಯೂಷನ್ ಆಫರ್ ಮಾಹಿತಿ: ಈ ಫೋನ್ 49,999 ರೂ.ಗಳ ಬೆಲೆ ಹೊಂದಿದ್ದು, ನೀವು ಇದನ್ನು ಆಫರ್ ಬೆಲೆಯಾದ 34,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಫ್ಲಿಪ್‌ಕಾರ್ಟ್‌ ಈ ಫೋನ್ ಮೇಲೆ ಭರ್ಜರಿ 30% ರಿಯಾಯಿತಿ ಘೋಷಣೆ ಮಾಡಿದೆ. ಇದರೊಂದಿಗೆ ಬ್ಯಾಂಕ್‌ ಆಫರ್ ಸಹ ಇದ್ದು ಇನ್ನೂ ಕಡಿಮೆ ದರದಲ್ಲಿ ಈ ಫೋನ್‌ ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ಫ್ಲಿಪ್‌ಕಾರ್ಟ್‌ ಆಕ್ಸಿಸ್‌ ಬ್ಯಾಂಕ್‌ ಕಾರ್ಡ್‌ ಬಳಕೆ ಮಾಡಿಕೊಂಡು ಖರೀದಿ ಮಾಡಿದ್ರೆ 5% ಕ್ಯಾಶ್‌ಬ್ಯಾಕ್ ಲಭ್ಯವಾಗಲಿದೆ. ಇದರೊಂದಿಗೆ ಆಯ್ದ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಇಎಂಐ ಅಲ್ಲದ ವ್ಯವಹಾರದ ಮೇಲೆ 5000 ರೂ.ಗಳ ರಿಯಾಯಿತಿ ಸಿಗಲಿದ್ದು, 699 ರೂ.ಗಳ ಮೌಲ್ಯದ FreebieSpotify ಪ್ರೀಮಿಯಂಗೆ ಚಂದಾದಾರಿಕೆ ಸಿಗಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಫೀಚರ್ಸ್‌ ಕಡೆ ಕಣ್ಣಾಯಿಸೋಣ ಬನ್ನಿ.

ಮೊಟೊರೊಲಾದ ಈ ಸ್ಟೈಲಿಶ್ ಫೋನ್‌ಗೆ ಬೊಂಬಾಟ್‌ ಆಫರ್! 50MP ಕ್ಯಾಮೆರಾ...

ಮೊಟೊರೊಲಾ ಎಡ್ಜ್ 30 ಫ್ಯೂಷನ್ ಡಿಸ್‌ಪ್ಲೇ ಮಾಹಿತಿ: ಈ ಫೋನ್ 6.55 ಇಂಚಿನ P-OLED ಡಿಸ್‌ಪ್ಲೇ ಹೊಂದಿದ್ದು ಇದು 1080 x 2400 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯ ಹಾಗೂ 144Hz ರಿಫ್ರೆಶ್‌ ರೇಟ್‌, HDR10+, 1100 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದಿದೆ. ಇದರೊಂದಿಗೆ 90.8% ಸ್ಕ್ರೀನ್-ಟು-ಬಾಡಿ ಅನುಪಾತ, 402 ಪಿಪಿಐ ಸಾಂದ್ರತೆಯೊಂದಿಗೆ ಉತ್ತಮ ವೀಕ್ಷಣೆ ಅನುಭವ ನೀಡಲಿದೆ. ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಪಡೆದಿದೆ.

ಮೊಟೊರೊಲಾ ಎಡ್ಜ್ 30 ಫ್ಯೂಷನ್ ಪ್ರೊಸೆಸರ್‌ ವಿವರ: ಈ ಫೋನ್ ಆಂಡ್ರಾಯ್ಡ್‌ 12 ಓಎಸ್‌ ಅನ್ನು ರನ್‌ ಮಾಡಲಿದ್ದು ಆಂಡ್ರಾಯ್ಡ್ 13, ಆಂಡ್ರಾಯ್ಡ್ 14 ಗೆ ಅಪ್‌ಗ್ರೇಡ್ ಮಾಡಲು ಯೋಜಿಸಲಾಗಿದೆ. ಇದರೊಂದಿಗೆ ಕ್ವಾಲ್ಕಾಮ್ SM8350 ಸ್ನಾಪ್ಡ್ರಾಗನ್ 888+ 5G (5 nm) ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಅಡ್ರಿನೊ 660 ಗ್ರಾಫಿಕ್ಸ್‌ ಕಾರ್ಡ್‌ ಬೆಂಬಲ ಪಡೆದಿದೆ. ಇದರೊಂದಿಗೆ ಆಫರ್ ಬೆಲೆಗೆ ಲಭ್ಯ ಇರುವ ಫೋನ್ 128GB ಇಂಟರ್‌ ಸ್ಟೋರೇಜ್‌ ಹಾಗೂ 8GB RAM ನಲ್ಲಿ ಉತ್ತಮವಾಗಿ ಕೆಲಸ ಮಾಡಲಿದೆ.

ಮೊಟೊರೊಲಾದ ಈ ಸ್ಟೈಲಿಶ್ ಫೋನ್‌ಗೆ ಬೊಂಬಾಟ್‌ ಆಫರ್! 50MP ಕ್ಯಾಮೆರಾ...

ಮೊಟೊರೊಲಾ ಎಡ್ಜ್ 30 ಫ್ಯೂಷನ್ ಕ್ಯಾಮೆರಾ ರಚನೆ: ಈ ಫೋನ್ ಟ್ರಿಪಲ್‌ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದೆ. ಅದರಲ್ಲಿ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ, 13 ಮೆಗಾಪಿಕ್ಸೆಲ್‌ ಅಲ್ಟ್ರಾವೈಡ್ ಸೆನ್ಸರ್‌ ಹಾಗೂ 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಸೆನ್ಸರ್‌ ಅನ್ನು ಹೊಂದಿದೆ. ಇದರ ಜೊತೆಗೆ 32 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾವನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ. ಉಳಿದಂತೆ ಈ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್‌, ಪನೋರಮಾ, ಎಚ್‌ಡಿಆರ್ ಫೀಚರ್ಸ್‌ ಅನ್ನು ಪಡೆದಿದೆ.

ಮೊಟೊರೊಲಾ ಎಡ್ಜ್ 30 ಫ್ಯೂಷನ್ ಬ್ಯಾಟರಿ ಹಾಗೂ ಇತರೆ: ಈ ಫೋನ್ 4400 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 68W ವೈರ್ಡ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಈ ಮೂಲಕ ಕೇವಲ 10 ನಿಮಿಷದಲ್ಲಿ 50% ಚಾರ್ಜ್‌ ಆಗಲಿದೆ. ಉಳಿದಂತೆ ಈ ಫೋನ್ ವೈ-ಫೈ 802.11 a/b/g/n/ac/6e, ಟ್ರೈ-ಬ್ಯಾಂಡ್, ವೈ-ಫೈ ಡೈರೆಕ್ಟ್, ಬ್ಲೂಟೂತ್ ಆವೃತ್ತಿ 5.2, A2DP, LE, aptX HD, aptX ಅಡಾಪ್ಟಿವ್ ಕನೆಕ್ಟಿವಿಟಿ ಬೆಂಬಲ ಪಡೆದಿದೆ.

Best Mobiles in India

English summary
Motorola Edge 30 Fusion has come down in price. This phone has got a 50 megapixel camera.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+