Motorola: 200 MP ಕ್ಯಾಮೆರಾ, 8GB RAM.. ಮೊಟೊರೊಲಾದ ಈ ಫೋನ್‌ಗಿದೆ ಬೊಂಬಾಟ್ ಅಫರ್!
ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು (Smartphones) ಮಾರುಕಟ್ಟೆಗೆ ಲಾಂಚ್ ಆಗುತ್ತಿದ್ದಂತೆ ಅವುಗಳ ಮೇಲಿನ ಗ್ರಾಹಕರ ಆಕರ್ಷಣೆ ಸಹ ಹೆಚ್ಚಾಗುತ್ತಿದೆ. ಈ ನಡುವೆ ಮೊಟೊರೊಲಾ (Motorola) ಸಾಕಷ್ಟು ಸ್ಮಾರ್ಟ್‌ಫೋನ್‌ಗಳನ್ನು ಕೈಗೆಟಕುವ ದರದಲ್ಲಿ ಪರಿಚಯಿಸಿದ್ದು, ಈ ಮೂಲಕ ಬಳಕೆದಾರರು ಉತ್ತಮ ಅನುಭವ ಪಡೆದುಕೊಳ್ಳುತ್ತಿದ್ದಾರೆ. ಇದರೊಂದಿಗೆ ಈಗ ಮೊಟೊದ ಈ ಫೋನ್‌ಗೆ ಭರ್ಜರಿ ಆಫರ್ ನೀಡಲಾಗಿದೆ.
ಹೌದು, ಮೊಟೊರೊಲಾ ಎಡ್ಜ್ 30 ಅಲ್ಟ್ರಾ 5G ಸ್ಮಾರ್ಟ್‌ಫೋನ್‌ಗೆ (Motorola Edge 30 Ultra 5G Smartphone) ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ ಭಾರೀ ಡಿಸ್ಕೌಂಟ್ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ 8GB RAM ಆಯ್ಕೆ ಹೊಂದಿದ್ದು, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಪ್ಲಸ್ ಜನ್ 1 ಬಲ ಪಡೆದುಕೊಂಡಿದೆ. ಯಾರೆಲ್ಲಾ ಪ್ರೀಮಿಯಂ ಫೋನ್ ಖರೀದಿ ಮೂಲಕ ಹಣ ಉಳಿತಾಯ ಮಾಡಬೇಕು ಅಂದುಕೊಂಡಿದ್ದಾರೋ ಅವರು ಈ ಫೋನ್ ಖರೀದಿ ಮಾಡಬಹುದಾಗಿದೆ. ಹಾಗಿದ್ರೆ, ಈ ಫೋನ್‌ಗೆ ಇರುವ ಆಫರ್ ಬೆಲೆ ಎಷ್ಟು? ಇದರ ಫೀಚರ್ಸ್ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಮೊಟೊರೊಲಾ ಎಡ್ಜ್ 30 ಅಲ್ಟ್ರಾ 5G ಸ್ಮಾರ್ಟ್‌ಫೋನ್ ಆಫರ್ ವಿವರ: ಈ ಸ್ಮಾರ್ಟ್‌ಫೋನ್ 69,999ರೂ.ಗಳ ಸಾಮಾನ್ಯ ಬೆಲೆ ಹೊಂದಿದೆ. ಆದರೆ ನೀವು ಇದನ್ನು ಈಗ 54,999ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ಫೋನ್‌ಗೆ ಫ್ಲಿಪ್‌ಕಾರ್ಟ್‌ನಲ್ಲಿ (Flipkart) 21% ರಿಯಾಯಿತಿ ನೀಡಲಾಗಿದೆ. ಇದರೊಂದಿಗೆ ಇನ್ನೂ ಹೆಚ್ಚಿನ ಹಣ ಉಳಿತಾಯ ಮಾಡಬೇಕು ಅಂದುಕೊಂಡರೆ ಬ್ಯಾಂಕ್ ಆಫರ್ ಬಳಕೆ ಮಾಡಿಕೊಳ್ಳಬಹುದು.
ಹೆಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಬ್ಯಾಂಕ್ ಆಫರ್ ವಿಭಾಗದಲ್ಲಿ 6 ತಿಂಗಳ ಇಎಮ್‌ಐ ವ್ಯವಹಾರದ ಮೇಲೆ 250ರೂ.ಗಳ ರಿಯಾಯಿತಿ, 9 ತಿಂಗಳ ಇಎಮ್ಐ ವಹಿವಾಟಿನ ಮೇಲೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಹೆಚ್ಚುವರಿ 750ರೂ.ಗಳ ರಿಯಾಯಿತಿ, 12 ತಿಂಗಳು ಮತ್ತು ಅದಕ್ಕಿಂತ ಹೆಚ್ಚಿನ ಇಎಮ್‌ಐ ವ್ಯವಹಾರದ ಮೇಲೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 1,250ರೂ.ಗಳ ರಿಯಾಯಿತಿ ಸಿಗಲಿದೆ. ಇದರೊಂದಿಗೆ ಕ್ಯಾಶ್ ಬ್ಯಾಕ್ ಪ್ರಯೋಜನ ಸಹ ಸಿಗಲಿದೆ.

ಮೊಟೊರೊಲಾ ಎಡ್ಜ್ 30 ಅಲ್ಟ್ರಾ 5G ಡಿಸ್‌ಪ್ಲೇ ವಿವರ: ಈ ಪ್ರೀಮಿಯಂ ಫೋನ್ ಅನ್ನು ಆಫರ್ ಬೆಲೆಗೆ ಖರೀದಿ ಮಾಡುವ ಮುನ್ನ ಇದರ ಪ್ರಮುಖ ಫೀಚರ್ಸ್ ಕಡೆಯೂ ಕಣ್ಣಯಿಸಿ. ಈ ಫೋನ್ 6.67 ಇಂಚಿನ P-OLED ಡಿಸ್‌ಪ್ಲೇ ಹೊಂದಿದ್ದು, 20:9 ಆಕಾರ ಅನುಪಾತ ಮತ್ತು 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ 395ppi ಪಿಕ್ಸೆಲ್ ಸಾಂದ್ರತೆ ಮತ್ತು 144Hz ರಿಫ್ರೆಶ್ ರೇಟ್ ಈ ಫೋನ್ ನಲ್ಲಿ ಅತ್ಯುತ್ತಮವಾದ ಅನುಭವವನ್ನು ಪಡೆಯುವಂತೆ ಮಾಡುತ್ತದೆ. ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ v5 ನಿಂದ ರಕ್ಷಣೆಗೊಳಪಟ್ಟಿದೆ.
ಮೊಟೊರೊಲಾ ಎಡ್ಜ್ 30 ಅಲ್ಟ್ರಾ 5G ಪ್ರೊಸೆಸರ್ ಮಾಹಿತಿ: ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಪ್ಲಸ್ ಜನ್ 1 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, ಇದು ಕಾರ್ಟೆಕ್ಸ್ A510, ಕಾರ್ಟೆಕ್ಸ್ X2 ಮತ್ತು ಕಾರ್ಟೆಕ್ಸ್ A710 ವಿನ್ಯಾಸಗಳೊಂದಿಗೆ ಆಕ್ಟಾ-ಕೋರ್ ಸಿಪಿಯುನೊಂದಿಗೆ ರನ್ ಆಗಲಿದೆ. ಜೊತೆಗೆ 3GHz ಗರಿಷ್ಠ ವೇಗದಲ್ಲಿ ರನ್ ಆಗುವ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ 8GB RAM ಅನ್ನು ಆಯ್ಕೆ ಪಡೆದಿದ್ದು, ಈ ಫೋನ್ ಇನ್ನಷ್ಟು ಶಕ್ತಿಶಾಲಿಯಾಗಿ ಕೆಲಸ ಮಾಡಲು ಅನುಕೂಲ ಮಾಡಿಕೊಟ್ಟಿದೆ.
ಮೊಟೊರೊಲಾ ಎಡ್ಜ್ 30 ಅಲ್ಟ್ರಾ 5G ಕ್ಯಾಮೆರಾ ರಚನೆ: ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದ್ದು, 200 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 12 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಹೊಂದಿದ್ದು, ಈ ಸೆನ್ಸರ್‌ಗಳು ಹೆಚ್‌ಡಿಆರ್ ಮೋಡ್, ಎಕ್ಸ್‌ಪೋಸರ್ ಕರೆಕ್ಷನ್, ಡಿಜಿಟಲ್ ಜೂಮ್, ಫೇಸ್ ರೆಕಗ್ನಿಷನ್ ಸೌಲಭ್ಯ ಪಡೆದಿವೆ. ಹಾಗೆಯೇ 60 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಮೊಟೊರೊಲಾ ಎಡ್ಜ್ 30 ಅಲ್ಟ್ರಾ 5G ಬ್ಯಾಟರಿ ಹಾಗೂ ಇತರೆ: ಈ ಫೋನ್ 4610mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, ಈ ಮೂಲಕ ಉತ್ತಮ ಬ್ಯಾಟರಿ ಬ್ಯಾಕಪ್ ಅನ್ನು ನೀಡಲಿದೆ. ವೈ ಫೈ 802.11 a/b/g/n/ac/6e, ಟ್ರೈ-ಬ್ಯಾಂಡ್, ವೈ-ಫೈ ಡೈರೆಕ್ಟ್, ಬ್ಲೂಟೂತ್ ಆವೃತ್ತಿ 5.2, A2DP, LE, ಯುಎಸ್‌ಬಿ ಟೈಪ್-ಸಿ 3.1,ಓಟಿಜಿ, ಡಿಸ್‌ಪ್ಲೇ ಪೋರ್ಟ್ 1.4 ಸೇರಿದಂತೆ ಅನೇಕ ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ.


Click it and Unblock the Notifications








