Home
ಸುದ್ದಿಜಾಲ

IP68 ಸೌಲಭ್ಯ ಪಡೆದ ಮೊಟೊದ ಈ ಫೋನಿಗೆ ಈಗ ಬಿಗ್ ಡಿಸ್ಕೌಂಟ್‌!

ಮೊಟೊರೊಲಾ ಸಂಸ್ಥೆಯು ಕೆಲವು ಆಕರ್ಷಕ ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಆ ಪೈಕಿ ಮೊಟೊರೊಲಾ ಸಂಸ್ಥೆಯು ಎಡ್ಜ್ 40 ಫೋನ್‌ ಸಹ ಬೊಂಬಾಟ್‌ ಫೀಚರ್ಸ್‌ ಮೂಲಕ ಸದ್ದು ಮಾಡಿದೆ. ಇದೀಗ ಈ ಫೋನ್‌ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಸಖತ್ ರಿಯಾಯಿತಿ ಪ್ರೈಸ್‌ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ.

ಹೌದು, ಜನಪ್ರಿಯ ಇ ಕಾಮರ್ಸ್‌ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಮೊಟೊರೊಲಾ ಎಡ್ಜ್‌ 40 ಮೊಬೈಲ್‌ ಶೇ. 22% ರಷ್ಟು ರಿಯಾಯಿತಿ ಪಡೆದಿದ್ದು, 256GB ವೇರಿಯಂಟ್‌ ಫೋನ್‌ 26,999ರೂ. ಗಳ ಆಫರ್ ಬೆಲೆಯಲ್ಲಿ ಲಭ್ಯ ಇದೆ. ಇದಲ್ಲದೇ ಲಭ್ಯ ಇರುವ ಇತರೆ ಆಯ್ದ ಬ್ಯಾಂಕ್ ಆಫರ್‌, ಎಕ್ಸ್‌ಚೇಂಜ್ ಕೊಡುಗೆ ಸೇರಿ ಈ ಫೋನ್‌ ಅನ್ನು ಮತ್ತಷ್ಟು ರಿಯಾಯಿತಿ ಬೆಲೆಯಲ್ಲಿ ಖರೀದಿ ಮಾಡಬಹುದು.

IP68 ಸೌಲಭ್ಯ ಪಡೆದ ಮೊಟೊದ ಈ ಫೋನಿಗೆ ಈಗ ಬಿಗ್ ಡಿಸ್ಕೌಂಟ್‌!

ಅಂದಹಾಗೆ ಮೊಟೊರೊಲಾ ಎಡ್ಜ್‌ 40 ಫೋನ್‌ IP68 ಅಂಡರ್‌ ವಾಟರ್‌ ಪ್ರೊಟೆಕ್ಷನ್‌ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಡ್ಯುಯಲ್‌ ಕ್ಯಾಮೆರಾ ರಚನೆ ಪಡೆದಿದ್ದು, 50 ಮೆಗಾ ಪಿಕ್ಸೆಲ್ ಸೆನ್ಸಾರ್‌ನಲ್ಲಿ ಮುಖ್ಯ ಕ್ಯಾಮೆರಾ ಇದೆ. ಹಾಗಾದರೆ ಮೊಟೊರೊಲಾ ಎಡ್ಜ್‌ 40 ಫೋನಿನ ಇತರ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಮಾಹಿತಿ
ಮೊಟೊರೊಲಾ ಎಡ್ಜ್‌ 40 ಸ್ಮಾರ್ಟ್‌ಫೋನ್‌ 6.55 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಫೋಲ್ಡ್‌ ಸ್ಕ್ರೀನ್‌ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ 2,400 x 1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್, 360 Hz ಟಚ್ ಸ್ಯಾಂಪ್ಲಿಂಗ್ ರೇಟ್, 1,200 nits ಪೀಕ್ ಬ್ರೈಟ್‌ನೆಸ್ ಮತ್ತು HDR10+ ಪ್ರಮಾಣೀಕರಣವನ್ನು ಕೂಡಾ ಹೊಂದಿದೆ.

ಪ್ರೊಸೆಸರ್‌ ಪವರ್ ಬಗ್ಗೆ ಮಾಹಿತಿ
ಸಂಸ್ಥೆಯ ಎಡ್ಜ್‌ 40 ಮೊಬೈಲ್‌ ಮಿಡಿಯಾ ಟೆಕ್ ಡೈಮೆನ್ಸಿಟಿ 8020 SoC ಪ್ರೊಸೆಸರ್‌ ಪವರ್‌ ಅನ್ನು ಹೊಂದಿದೆ. ಅಲ್ಲದೇ ಇದು ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕೆಲಸ ನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 256 GB ಇಂಟರ್‌ ಸ್ಟೋರೇಜ್ ಸಾಮರ್ಥ್ಯವನ್ನು ಸಹ ಒಳಗೊಂಡಿದೆ. ತನ್ನ ವರ್ಗದಲ್ಲೇ ಪೈಪೋಟಿಯ ಪ್ರೊಸೆಸರ್‌ ಇದಾಗಿದೆ.

ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆನ್ಸಾರ್‌ ಸೌಲಭ್ಯ
ಈ ಫೋನ್‌ ಹಿಂಬದಿಯಲ್ಲಿ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು OIS ಬೆಂಬಲವನ್ನು ಪಡೆದಿದೆ. ಇನ್ನು ಸೆಕೆಂಡರಿ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅಲ್ಟ್ರಾವೈಡ್ ಮ್ಯಾಕ್ರೋ ವಿಷನ್ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಬ್ಯಾಟರಿ ಬ್ಯಾಕ್‌ಅಪ್‌ ಬಗ್ಗೆ ಮಾಹಿತಿ
ಮೊಟೊದ ಈ ಸ್ಮಾರ್ಟ್‌ಫೋನ್‌ 4,400mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಇದು ಹೊಂದಿದೆ. ಇದು 68W ಟರ್ಬೋಪವರ್ ವೈರ್ಡ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್‌ ಅನ್ನು ಸಪೋರ್ಟ್ ಮಾಡುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌, ಬ್ಲೂಟೂತ್ 5.2, ಜಿಪಿಎಸ್, ಎನ್‌ಎಫ್‌ಸಿ ಯನ್ನು ಒಳಗೊಂಡಿದೆ.

ಕಲರ್‌ ಆಯ್ಕೆ ಹಾಗೂ ಮೆಮೊರಿ ಆಯ್ಕೆ ಹೀಗಿದೆ
ಮೊಟೊರೊಲಾ ಎಡ್ಜ್‌ 40 ಸ್ಮಾರ್ಟ್‌ಫೋನ್‌ 8GB RAM ಮತ್ತು 256 GB ಇಂಟರ್‌ ಸ್ಟೋರೇಜ್ ಆಯ್ಕೆ ಪಡೆದುಕೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಎಕ್ಲಿಪ್ಸ್ ಬ್ಲ್ಯಾಕ್, ಲೂನಾರ್ ಬ್ಲೂ ಮತ್ತು ನೆಬ್ಯುಲಾ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.

Best Mobiles in India

English summary
Motorola Edge 40 available attractive price drop on flipkart. all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+