ಈ ಫೋನ್ ಬೆಲೆಯಲ್ಲಿ ಇಳಿಕೆ!..ಇದರ ಫೀಚರ್ಸ್ ಹಾಗೂ ಡಿಸೈನ್‌ಗೆ ನೀವು ಫಿದಾ ಆಗ್ತೀರಾ!
ಮೊಟೊರೊಲಾ ಮೊಬೈಲ್ ಸಂಸ್ಥೆಯು ಅಗ್ಗದ ಬೆಲೆಯಿಂದ ಹೈ ಎಂಡ್ ಬೆಲೆಯ ವರೆಗೂ ಭಿನ್ನ ಫೋನ್‌ಗಳ ಆಯ್ಕೆ ಒಳಗೊಂಡಿದೆ. ಸಂಸ್ಥೆಯ ಎಡ್ಜ್ ಸರಣಿಯ ಫೋನ್‌ಗಳು ಸಹ ಹೆಚ್ಚು ಆಕರ್ಷಕ ಎನಿಸಿದ್ದು, ಆ ಪೈಕಿ ಇತ್ತೀಚಿನ ಸೇರ್ಪಡೆ ಆಗಿರುವ ಮೊಟೊರೊಲಾ ಎಡ್ಜ್ 40 ನಿಯೋ ಮೊಬೈಲ್ ಇದೀಗ ಸಖತ್ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದೆ.
ಹೌದು, ದೈತ್ಯ ಇ ಕಾಮರ್ಸ್ ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್ ನಲ್ಲಿ ಮೊಟೊರೊಲಾ ಎಡ್ಜ್ 40 ನಿಯೋ ಮೊಬೈಲ್ ಶೇ. 17% ರಷ್ಟು ಡಿಸ್ಕೌಂಟ್ ಪಡೆದಿದ್ದು, 8 GB RAM + 128 GB ವೇರಿಯಂಟ್ ಫೋನ್ 22,999ರೂ. ಗಳ ಆಫರ್ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಹಾಗೆಯೇ ಆನ್‌ಲೈನ್‌ನಲ್ಲಿ ಲಭ್ಯ ಇರುವ ಇತರೆ ಆಯ್ದ ಬ್ಯಾಂಕ್ ಆಫರ್, ಎಕ್ಸ್‌ಚೇಂಜ್ ಕೊಡುಗೆ ಸೇರಿ ಈ ಮೊಬೈಲ್ ಅನ್ನು ಮತ್ತಷ್ಟು ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬಹುದು.

ಹಾಗೆಯೇ ಮೊಟೊರೊಲಾ ಸಂಸ್ಥೆಯ ಈ ಫೋನ್ IP68 ಅಂಡರ್ ವಾಟರ್ ಪ್ರೊಟೆಕ್ಷನ್ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಇದರ ಜೊತೆಗೆ ಡ್ಯುಯಲ್ ಕ್ಯಾಮೆರಾ ರಚನೆ ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ನಲ್ಲಿ ಇದೆ. ಹಾಗಾದರೆ ಮೊಟೊರೊಲಾ ಎಡ್ಜ್ 40 ನಿಯೋ ಫೋನಿನ ಇತರ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಮೊಟೊರೊಲಾ ಎಡ್ಜ್ 40 ನಿಯೋ - ಫೀಚರ್ಸ್
ಮೊಟೊರೊಲಾ ಎಡ್ಜ್ 40 ನಿಯೋ ಮೊಬೈಲ್ 6.55 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಪೋಲೆಡ್ ಡಿಸ್‌ಪ್ಲೇ ಅನ್ನು ಪಡೆದಿದೆ. ಡಿಸ್‌ಪ್ಲೇಯು 2400 × 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದ್ದು. ಜೊತೆಗೆ ಈ ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್ ಒಳಗೊಂಡಿದೆ. ಹಾಗೆಯೇ 360Hz ಟಚ್ ಸ್ಯಾಪ್ಲಿಂಗ್ ರೇಟ್ ಅನ್ನು ಹೊಂದಿದ್ದು, 1,300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಸಪೋರ್ಟ್ ಮಾಡಲಿದೆ.

ಮೊಟೊರೊಲಾ ಎಡ್ಜ್ 40 ನಿಯೋ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 7030 SoC ಪ್ರೊಸೆಸರ್ ಸಾಮರ್ಥ್ಯ ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಬೆಂಬಲ ದೊಂದಿಗೆ ಕೆಲಸ ನಿರ್ವಹಿಸಲಿದೆ. ಹಾಗೆಯೇ 8GB + 128GB ಹಾಗೂ 12 GB RAM ಜೊತೆಗೆ 256 GB ಸ್ಟೋರೇಜ್ ಸಾಮರ್ಥ್ಯದ ಆಯ್ಕೆ ಒಳಗೊಂಡಿದೆ.
ಮೊಟೊರೊಲಾ ಸಂಸ್ಥೆಯ ಎಡ್ಜ್ 40 ನಿಯೋ ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಆಗಿದೆ. ಇನ್ನು ಸೆಕೆಂಡರಿ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಹೊಂದಿದೆ. ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.
ಮೊಟೊರೊಲಾ ಕಂಪನಿಯ ಎಡ್ಜ್ 40 ನಿಯೋ ಮೊಬೈಲ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ಇದಕ್ಕೆ ಪೂರಕವಾಗಿ 68W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಕೂಡಾ ಪಡೆದಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಫೇಸ್‌ಅನ್‌ಲಾಕ್, 5G, ಬ್ಲೂಟೂತ್, NFC, Wi-Fi ಮತ್ತು USB ಟೈಪ್-ಸಿ ಮತ್ತು ಸ್ಪೀಕರ್ ಗ್ರಿಲ್‌ನೊಂದಿಗೆ ಎಂಟ್ರಿ ಪಡೆದಿದೆ.
ಮೊಟೊ ಸಂಸ್ಥೆಯ ಎಡ್ಜ್ 40 ನಿಯೋ ಮೊಬೈಲ್ ಭಾರತದಲ್ಲಿ 8GB + 128GB ವೇರಿಯಂಟ್ ಹಾಗೂ 12GB + 256GB ವೇರಿಯಂಟ್ ಆಯ್ಕೆ ಪಡೆದಿದೆ. ಇನ್ನು ಈ ಫೋನ್ ಕ್ಯಾನೆಲ್ ಬೇ, ಬ್ಲ್ಯಾಕ್ ಬ್ಯೂಟಿ ಹಾಗೂ ಸೂಥಿಂಗ್ ಸೀ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.


Click it and Unblock the Notifications








