ಗ್ರ್ಯಾಂಡ್ ಎಂಟ್ರಿ ಕೊಟ್ಟ ಮೊಟೊರೊಲಾ ಎಡ್ಜ್ 40 ನಿಯೋ!..ವಾಟರ್ ಪ್ರೊಟೆಕ್ಷನ್ ಇದೆ!
ಮೊಟೊರೊಲಾ ಸಂಸ್ಥೆಯು ಹೊಸದಾಗಿ ಮೊಟೊರೊಲಾ ಎಡ್ಜ್ 40 ನಿಯೋ ಸ್ಮಾರ್ಟ್‌ಫೋನ್ ಅನ್ನು ಇಂದು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ ಮೀಡ್‌ರೇಂಜ್ ಪ್ರೈಸ್‌ಟ್ಯಾಗ್ ದರದಲ್ಲಿ ಕಾಣಿಸಿಕೊಂಡಿದ್ದು, ಆಕರ್ಷಕ ಫೀಚರ್ಸ್‌ಗಳಿಂದ ಗಮನ ಸೆಳದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7030 SoC ಪ್ರೊಸೆಸರ್ ಅನ್ನು ಪಡೆದಿದೆ.
ಹೌದು, ಮೊಟೊರೊಲಾ ಸಂಸ್ಥೆಯು ದೇಶಿಯ ಮಾರುಕಟ್ಟೆಗೆ 'ಮೊಟೊರೊಲಾ ಎಡ್ಜ್ 40 ನಿಯೋ' ಅನ್ನು ಬಿಡುಗಡೆ ಮಾಡಿದೆ. ಈ ಫೋನ್ IP68 ಅಂಡರ್ ವಾಟರ್ ಪ್ರೊಟೆಕ್ಷನ್ ಸೌಲಭ್ಯ ಪಡೆದಿದ್ದು, ಇದರ ಜೊತೆಗೆ 68W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಕೂಡಾ ಪಡೆದಿದೆ. ಹಾಗದರೇ ಈ ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಮೊಟೊರೊಲಾ ಎಡ್ಜ್ 40 ನಿಯೋ ಡಿಸ್‌ಪ್ಲೇ ಹೀಗಿದೆ :
ಮೊಟೊರೊಲಾ ಎಡ್ಜ್ 40 ನಿಯೋ ಮೊಬೈಲ್ 6.55 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಪೋಲೆಡ್ ಡಿಸ್‌ಪ್ಲೇ ಪಡೆದಿದೆ. ಡಿಸ್‌ಪ್ಲೇಯು 2400 × 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದ್ದು. ಜೊತೆಗೆ ಈ ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್ ಒಳಗೊಂಡಿದೆ. ಹಾಗೆಯೇ 360Hz ಟಚ್ ಸ್ಯಾಪ್ಲಿಂಗ್ ರೇಟ್ ಅನ್ನು ಹೊಂದಿದ್ದು, 1,300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಸಪೋರ್ಟ್ ಮಾಡಲಿದೆ.
ಮೊಟೊರೊಲಾ ಎಡ್ಜ್ 40 ನಿಯೋ ಪ್ರೊಸೆಸರ್ ಬಲ :
ಮೊಟೊರೊಲಾ ಎಡ್ಜ್ 40 ನಿಯೋ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 7030 SoC ಪ್ರೊಸೆಸರ್ ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಬೆಂಬಲ ದೊಂದಿಗೆ ಕೆಲಸ ನಿರ್ವಹಿಸಲಿದೆ. ಹಾಗೆಯೇ 8GB + 12GB ಹಾಗೂ 12GB RAM + 256GB ಸ್ಟೋರೇಜ್ ಸಾಮರ್ಥ್ಯದ ಆಯ್ಕೆ ಒಳಗೊಂಡಿದೆ.
ಮೊಟೊರೊಲಾ ಎಡ್ಜ್ 40 ನಿಯೋ ಕ್ಯಾಮೆರಾ ಸೆನ್ಸಾರ್ :
ಮೊಟೊರೊಲಾ ಎಡ್ಜ್ 40 ನಿಯೋ ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಆಗಿದೆ. ಇನ್ನು ಸೆಕೆಂಡರಿ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಹೊಂದಿದೆ. ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒದಗಿಸಲಾಗಿದೆ.
ಮೊಟೊರೊಲಾ ಎಡ್ಜ್ 40 ನಿಯೋ ಬ್ಯಾಟರಿ ಬ್ಯಾಕ್‌ಅಪ್ ಎಷ್ಟು :
ಮೊಟೊರೊಲಾ ಎಡ್ಜ್ 40 ನಿಯೋ ಮೊಬೈಲ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ಇದಕ್ಕೆ ಪೂರಕವಾಗಿ 68W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಕೂಡಾ ಪಡೆದಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಫೇಸ್‌ಅನ್‌ಲಾಕ್, 5G, ಬ್ಲೂಟೂತ್, NFC, Wi-Fi ಮತ್ತು USB ಟೈಪ್-ಸಿ ಮತ್ತು ಸ್ಪೀಕರ್ ಗ್ರಿಲ್‌ನೊಂದಿಗೆ ಎಂಟ್ರಿ ಪಡೆದಿದೆ.
ಮೊಟೊರೊಲಾ ಎಡ್ಜ್ 40 ನಿಯೋ ಬೆಲೆ ಮತ್ತು ಲಭ್ಯತೆ :
ಮೊಟೊರೊಲಾ ಎಡ್ಜ್ 40 ನಿಯೋ ಮೊಬೈಲ್ ಭಾರತದಲ್ಲಿ 8GB + 128GB ವೇರಿಯಂಟ್ ಬೆಲೆಯು 24,999ರೂ. ಪ್ರೈಸ್‌ಟ್ಯಾಗ್‌ಆಗಿದೆ. ಅದೇ ರೀತಿ 12GB + 256GB ವೇರಿಯಂಟ್ ದರವು 27,999ರೂ. ಗಳು ಆಗಿದೆ. ಇನ್ನು ಈ ಫೋನ್ ಕ್ಯಾನೆಲ್ ಬೇ, ಬ್ಲ್ಯಾಕ್ ಬ್ಯೂಟಿ ಹಾಗೂ ಸೂಥಿಂಗ್ ಸೀ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಇದೇ ಸೆಪ್ಟೆಂಬರ್ 28 ರಂದು ಫ್ಲಿಪ್‌ಕಾರ್ಟ್ ಮೂಲಕ ಸಂಜೆ 7 ಗಂಟೆಗೆ ಫಸ್ಟ್ ಸೇಲ್ ನಡೆಯಲಿದೆ.


Click it and Unblock the Notifications








