ಮೀಡ್‌ರೇಂಜ್ ಬೆಲೆಯಲ್ಲಿ ಸದ್ದು ಮಾಡಿರುವ ಈ ಫೋನಿಗೆ ಬಿಗ್ ಆಫರ್!
ಮೊಟೊರೊಲಾ ಸಂಸ್ಥೆಯು ತನ್ನ ಎಡ್ಜ್ ಸರಣಿಯಲ್ಲಿ ಕೆಲವು ಬೊಂಬಾಟ್ ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರಿಂದ ಸೈ ಎನಿಸಿಕೊಂಡಿದೆ. ಅವುಗಳಲ್ಲಿ ಒಂದಾದ ಮೊಟೊರೊಲಾ ಎಡ್ಜ್ 40 ಮೊಬೈಲ್ ಕೆಲವು ಆಕರ್ಷಕ ಫೀಚರ್ಸ್‌ಗಳಿಂದ ಫೋನ್ ಪ್ರಿಯರ ಮನಗೆದ್ದಿದೆ. ಇದೀಗ ಫ್ಲಿಪ್‌ಕಾರ್ಟ್ ಈ ಕಾಮರ್ಸ್ ತಾಣದಲ್ಲಿ ಭಾರೀ ರಿಯಾಯಿತಿ ಪಡೆದಿದ್ದು, ಈ ಮೂಲಕ ಮತ್ತೆ ಫೋನ್ ಪ್ರಿಯರನ್ನು ಆಕರ್ಷಿಸಿದೆ.
ಹೌದು, ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್ನಲ್ಲಿ ಮೊಟೊರೊಲಾ ಎಡ್ಜ್ 40 5G ಫೋನ್ ನೇರವಾಗಿ ಶೇ. 22% ರಷ್ಟು ರಿಯಾಯಿತಿ ಪಡೆದುಕೊಂಡಿದೆ. ಹೀಗಾಗಿ ಈ ಮೊಬೈಲ್ 8 GB RAM + 256 GB ಸ್ಟೋರೇಜ್ ವೇರಿಯಂಟ್ 34,999 ರೂ. ಬೆಲೆ ಅನ್ನು ಪಡೆದುಕೊಂಡಿದ್ದು, ಆಫರ್ ದರದಲ್ಲಿ 26,999ರೂ. ಗಳಿಗೆ ಗ್ರಾಹಕರು ಖರೀದಿಸಲು ಮಾಡಬಹುದು. ಇದಲ್ಲದೇ ಗ್ರಾಹಕರಿಗೆ ಆಯ್ದ ಬ್ಯಾಂಕ್ ಆಫರ್ ಸೌಲಭ್ಯ ಸಹ ಸಿಗಲಿವೆ.

ಮೀಡಿಯಾ ಟೆಕ್ ಡೈಮೆನ್ಸಿಟಿ 8020 5G SoC ಪ್ರೊಸೆಸರ್ ಪಡೆದಿರುವುದು ಪ್ರಮುಖ ಹೈಲೈಟ್ಸ್‌ಗಳಲ್ಲಿ ಒಂದಾಗಿದೆ. ಇದರ ಜೊತೆಗೆ ಈ ಫೋನ್ ಸ್ಲಿಮ್ IP68 ರೇಟ್ ಸೌಲಭ್ಯ ಸಹ ಪಡೆದುಕೊಂಡಿದೆ. ಹಾಗೆಯೇ 8 GB RAM + 256 GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದೆ. ಹಾಗಾದರೆ ಈ ಫೋನಿನ ಇತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ಡಿಸೈನ್ ಹೀಗಿದೆ
ಮೊಟೊರೊಲಾ ಎಡ್ಜ್ 40 5G ಮೊಬೈಲ್ 6.5 ಇಂಚಿನ ಫುಲ್ ಹೆಚ್‌ಡಿ ಸಾಮರ್ಥ್ಯದ ಕರ್ವ್ಡ್ ಡಿಸ್‌ಪ್ಲೇ ಇದಾಗಿದ್ದು, 2400 x 1080 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ 144Hz ನ ರಿಫ್ರೆಶ್ ರೇಟ್ ಹಾಗೂ 1200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ನೀಡಲಿದ್ದು, ಈ ಡಿಸ್‌ಪ್ಲೇ ಯನ್ನು ಸ್ಯಾಂಡ್‌ಬ್ಲಾಸ್ಟೆಡ್ ಅಲ್ಯೂಮಿನಿಯಂ ಬೆಜೆಲ್‌ಗಳಿಂದ ರೂಪಿಸಲಾಗಿದೆ. ಹಾಗೆಯೇ ಈ ಕರ್ವ್ಡ್ 3D ಗ್ಲಾಸ್ ಆಂಟಿಫಿಂಗರ್‌ಪ್ರಿಂಟ್ ಟಚ್ ಪಡೆದಿದೆ.

ಪ್ರೊಸೆಸರ್ ಪವರ್ ಯಾವುದು
ಈ ಮೊಬೈಲ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8020 5G SoC ಪ್ರೊಸೆಸರ್‌ನಿಂದ ಕೆಲಸ ನಿರ್ವಹಿಸಲಿದ್ದು, ಆಂಡ್ರಾಯ್ಡ್ 13 ಅನ್ನು ರನ್ ಮಾಡುತ್ತದೆ. ಇದರೊಂದಿಗೆ ಎರಡು ವರ್ಷಗಳ ಓಎಸ್ ನವೀಕರಣ ಮತ್ತು ಮೂರು ವರ್ಷಗಳ ಭದ್ರತಾ ನವೀಕರಣ ಸಹ ಲಭ್ಯ ಪಡೆದಿದೆ. ಇನ್ನು 8GB RAM ಮತ್ತು 256GB ಆಂತರೀಕ ಸ್ಟೋರೇಜ್‌ನಲ್ಲಿ ಈ ಫೋನ್ ಕಾಣಿಸಿಕೊಂಡಿದೆ.

ಡ್ಯುಯಲ್ ಕ್ಯಾಮೆರಾ ರಚನೆ
ಇದು ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಸಪೋರ್ಟ್ ಜೊತೆಗೆ 50 ಮೆಗಾ ಪಿಕ್ಸೆಲ್ ಪ್ರಮುಖ ಸೆನ್ಸರ್ ಮತ್ತು 13 ಮೆಗಾ ಪಿಕ್ಸೆಲ್ ಮ್ಯಾಕ್ರೋ ಅಲ್ಟ್ರಾವೈಡ್ ಲೆನ್ಸ್ ಅನ್ನು ಪಡೆದುಕೊಂಡಿದೆ. ಜೊತೆಗೆ ಎರಡು ಎಲ್ಇಡಿ ಫ್ಲ್ಯಾಶ್ ಲೈಟ್ ಆಯ್ಕೆಯನ್ನೂ ಸಹ ನೀಡಲಾಗಿದೆ. ಇದರೊಂದಿಗೆ 32 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಇದೆ.
ಬ್ಯಾಟರಿ ಸಾಮರ್ಥ್ಯ ಎಷ್ಟಿದೆ
ಎಡ್ಜ್ 40 ಫೋನ್ 68W ಟರ್ಬೋಪವರ್ ವೈರ್ಡ್ ಚಾರ್ಜಿಂಗ್ ಮತ್ತು 15W ವಾಯರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 4,400 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದೆ. ಇನ್ನುಳಿದಂತೆ ಈ ಫೋನ್ ವೈ-ಫೈ 6, ಬ್ಲೂಟೂತ್ ಆವೃತ್ತಿ v5.2 ಮತ್ತು ಜಿಪಿಎಸ್ ಕನೆಕ್ಟಿವಿಟಿ ಸಪೋರ್ಟ್ ಇದ್ದು, ಹಾಗೆಯೇ ಯುಎಸ್‌ಬಿ ಟೈಪ್-ಸಿ ಪೋರ್ಟ್ ಆಯ್ಕೆ ಒಳಗೊಂಡಿದೆ.
ಮೆಮೊರಿ ಆಯ್ಕೆ ಹಾಗೂ ಕಲರ್ ಲಭ್ಯತೆ
ಮೊಟೊರೊಲಾ ಎಡ್ಜ್ 40 ಫೋನ್ 8 GB RAM ಮತ್ತು 256 GB ಹಾಗೂ 8 GB RAM ಮತ್ತು 128 GB ಸ್ಟೋರೇಜ್‌ನ ಆಯ್ಕೆಗಳು ಇವೆ. ಇನ್ನು ಈ ಫೋನ್ ರೆಸೆಡಾ ಗ್ರೀನ್, ಎಕ್ಲಿಪ್ಸ್ ಬ್ಲ್ಯಾಕ್ ಲೆದರ್ ಫಿನಿಶ್, ಲೂನಾರ್ ಬ್ಲೂ ಎಂಬ ಮೂರು ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಲಭ್ಯ.


Click it and Unblock the Notifications








