Home
ಸುದ್ದಿಜಾಲ

ನಾಳೆ ಮತ್ತೆ ಈ ಸ್ಟೈಲಿಶ್‌ ಸ್ಮಾರ್ಟ್‌ಫೋನ್‌ ಖರೀದಿಗೆ ಲಭ್ಯ; ಬೆಲೆ ಎಷ್ಟು ಗೊತ್ತಾ?

ಮೊಟೊರೊಲಾ (Motorola) ಸಂಸ್ಥೆಯು ಇತ್ತೀಚಿಗೆ ಲಾಂಚ್‌ ಮಾಡಿರುವ ಮೊಟೊರೊಲಾ ಎಡ್ಜ್‌ 50 ಫ್ಯೂಜನ್‌ ( Motorola Edge 50 Fusion ) ಫೋನ್‌ 3D ಕರ್ವ್ಡ್‌ ಡಿಸ್‌ಪ್ಲೇ ಹಾಗೂ ಫೀಚರ್ಸ್‌ ಮೂಲಕ ಆಕರ್ಷಕ ಎನಿಸಿದೆ. ಈ ಮೊಬೈಲ್‌ನ ನಾಳೆ (ಜುಲೈ 9 ರಂದು) ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಮೂಲಕ ಮತ್ತೆ ಖರೀದಿಗೆ ಲಭ್ಯ ಆಗಲಿದೆ. ಅಂದಹಾಗೆ ಈ ಮೊಬೈಲ್‌ 8GB + 128GB ಹಾಗೂ 12GB + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ.

ಹೌದು, ಮೊಟೊರೊಲಾ ಸಂಸ್ಥೆಯ ಮೊಟೊರೊಲಾ ಎಡ್ಜ್‌ 50 ಫ್ಯೂಜನ್‌ ( Motorola Edge 50 Fusion ) ಮೊಬೈಲ್‌ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಮೂಲಕ ಮತ್ತೆ ಸೇಲ್‌ ಶುರು ಮಾಡಲಿದೆ. ಈ ಮೊಬೈಲ್‌ 3D ಕರ್ವ್ಡ್‌ pOLED ಡಿಸ್‌ಪ್ಲೇ ಸೌಲಭ್ಯ ಪಡೆದಿದ್ದು, ಇದರ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸೌಲಭ್ಯ ಪಡೆದಿದೆ.

ನಾಳೆ ಮತ್ತೆ ಈ ಸ್ಟೈಲಿಶ್‌ ಸ್ಮಾರ್ಟ್‌ಫೋನ್‌ ಖರೀದಿಗೆ ಲಭ್ಯ; ಬೆಲೆ ಎಷ್ಟು ಗೊತ್ತಾ?

ಈ ಫೋನ್‌ 8GB + 128GB ಹಾಗೂ 12GB + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯಲ್ಲಿ ಈ ಫೋನ್‌ ಖರೀದಿಗೆ ಲಭ್ಯ. ಅಲ್ಲದೇ ಈ ಮೊಬೈಲ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದರ ಜೊತೆಗೆ 68W ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯವನ್ನು ಒಳಗೊಂಡಿದೆ. ಹಾಗಾದರೇ ಮೊಟೊರೊಲಾ ಎಡ್ಜ್‌ 50 ಫ್ಯೂಜನ್‌ ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಪಡೆದಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಮೊಟೊರೊಲಾ ಎಡ್ಜ್‌ 50 ಫ್ಯೂಜನ್‌ - ಫೀಚರ್ಸ್‌

ಮೊಟೊರೊಲಾ ಎಡ್ಜ್‌ 50 ಫ್ಯೂಜನ್‌ ಫೋನ್‌ 6.7 ಇಂಚಿನ 3D ಕರ್ವ್ಡ್‌ pOLED ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಇದರ ಡಿಸ್‌ಪ್ಲೇಯು 2400 × 1080p ಪಿಕ್ಸಲ್‌ ರೆಸಲ್ಯೂಶನ್‌ ಸೌಲಭ್ಯ ಪಡೆದಿದೆ. ಅಲ್ಲದೇ ಈ ಫೋನಿನ 1600 ನಿಟ್ಸ್‌ ಪೀಕ್ ಬ್ರೈಟ್ನೆಸ್‌, 144Hz ರಿಫ್ರೆಶ್‌ ರೇಟ್‌ ಸೌಲಭ್ಯ ಜೊತೆಗೆ ಗೊರಿಲ್ಲಾ ಗ್ಲಾಸ್‌ 5 ಪ್ರೊಟೆಕ್ಷನ್‌ ಸೌಲಭ್ಯ ಸಹ ಕಾಣಬಹುದಾಗಿದೆ

ಮೊಟೊರೊಲಾ ಎಡ್ಜ್‌ 50 ಫ್ಯೂಜನ್‌ ಫೋನ್‌ ಕ್ವಾಲ್ಕಮ್‌ ಸ್ನಾಪ್ಡ್ರಾಗನ್ 7s ಜೆನ್ 3 ಚಿಪ್‌ಸೆಟ್‌ ಪ್ರೊಸೆಸರ್‌ ಸೌಲಭ್ಯ ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಸಹ ಇದೆ. ಅಲ್ಲದೇ ಈ ಫೋನ್‌ 8GB + 128GB ಹಾಗೂ 12GB + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಒಳಗೊಂಡಿದೆ.

ಮೊಟೊರೊಲಾ ಎಡ್ಜ್‌ 50 ಫ್ಯೂಜನ್‌ ಫೋನ್‌ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸೌಲಭ್ಯ ಪಡೆದಿದೆ. ಇನ್ನು ಎರಡನೇ ಕ್ಯಾಮೆರಾವು 50 ಮೆಗಾ ಪಿಕ್ಸೆಲ್‌ನ 2x ಟೆಲಿಫೋಟೋ ಲೆನ್ಸ್‌ ಸೌಲಭ್ಯ ಒಳಗೊಂಡಿದೆ. ಇನ್ನು ಈ ಮೊಬೈಲ್‌ನ ಸೆಲ್ಫಿ ಕ್ಯಾಮೆರಾ 32 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯ ಪಡೆದಿದೆ.

ಮೊಟೊರೊಲಾ ಎಡ್ಜ್‌ 50 ಫ್ಯೂಜನ್‌ ಫೋನ್‌ 5,000 mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಹೊಂದಿದ್ದು, ಇದರ ಜೊತೆಗೆ 68W ಟರ್ಬೋ ಪವರ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ. ಹಾಗೆಯೇ ಇದು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಫೇಸ್ ಅನ್‌ಲಾಕ್ ಆಯ್ಕೆಗಳು ಹಾಗೂ ಡಾಲ್ಬಿ ಅಟ್ಮಾಸ್ ಆಡಿಯೋ ಸೌಲಭ್ಯ ಸಹ ಇದೆ. ಇದರೊಂದಿಗೆ 5G, GPS, Wi-Fi 6, ಬ್ಲೂಟೂತ್ 5.2, ಮತ್ತು USB 2.0 ಟೈಪ್ - C ಪೋರ್ಟ್ ಆಯ್ಕೆಗಳು ಸಹ ಇದೆ.

Best Mobiles in India

English summary
Motorola Edge 50 Fusion again goes on sale tomorrow via flipkart. Check offer, price, specifications and know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+