Home
ಸುದ್ದಿಜಾಲ

ಇಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ ಮೊಟೊರೊಲಾ ಎಡ್ಜ್‌ 50 ಫ್ಯೂಶನ್!..ಫೀಚರ್ಸ್‌ ಏನು?

ಮೊಟೊರೊಲಾ ಸಂಸ್ಥೆಯ ಬಹುನಿರೀಕ್ಷಿತ ಮೊಟೊರೊಲಾ ಎಡ್ಜ್‌ 50 ಫ್ಯೂಶನ್ ಫೋನ್‌ ಇಂದು (ಮೇ 16 ರಂದು) ಬಿಡುಗಡೆ ಆಗಲಿದೆ. ಈ ಫೋನ್‌ ಸ್ನ್ಯಾಪ್‌ಡ್ರಾಗನ್‌ 7s ಜೆನ್‌ 2 ಪ್ರೊಸೆಸರ್‌ ಪವರ್‌ ಪಡೆದಿರುವುದು ಬಹುತೇಕ ಖಚಿತ ಆಗಿದೆ. ಅಲ್ಲದೇ ಇದರ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸೌಲಭ್ಯದಲ್ಲಿ ಇರಲಿದೆ.

ಹೌದು, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಮೂಲಕ ಇಂದು ಮಧ್ಯಾಹ್ನ 12 ಗಂಟೆಗೆ ಮೊಟೊರೊಲಾ ಎಡ್ಜ್‌ 50 ಫ್ಯೂಶನ್ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಸ್ಟೈಲಿಶ್‌ ಲುಕ್‌ನಲ್ಲಿರುವ ಈ ಫೋನ್‌ ಕರ್ವ್ಡ್‌ ಡಿಸ್‌ಪ್ಲೇ ಅನ್ನು ಪಡೆದಿದೆ. ಹಾಗೆಯೇ 68W ಟರ್ಬೋ ಪವರ್‌ ಚಾರ್ಜಿಂಗ್ ವ್ಯವಸ್ಥೆಯನ್ನು ಪಡೆದಿರುವುದು ನಿಕ್ಕಿ ಎನ್ನಲಾಗಿದೆ.

ಇಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ ಮೊಟೊರೊಲಾ ಎಡ್ಜ್‌ 50 ಫ್ಯೂಶನ್..ಫೀಚರ್ಸ್‌ ಏನು

ಹಾಗೆಯೇ ಈ ಫೋನ್‌ 12 GB RAM ಮತ್ತು 256 GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿರಲಿದೆ. ಇದರ ಜೊತೆಗೆ ಫಾರೆಸ್ಟ್ ಬ್ಲೂ, ಮಾರ್ಷ್ಮ್ಯಾಲೋ ಬ್ಲೂ ಮತ್ತು ಹಾಟ್ ಪಿಂಕ್ ಕಲರ್‌ ಆಯ್ಕೆ ಗಳಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ. ಹಾಗಾದರೇ ಮೊಟೊರೊಲಾ ಎಡ್ಜ್‌ 50 ಫ್ಯೂಶನ್ ಮೊಬೈಲ್‌ ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಮೊಟೊರೊಲಾ ಎಡ್ಜ್‌ 50 ಫ್ಯೂಶನ್ - ಫೀಚರ್ಸ್‌

ಮೊಟೊರೊಲಾ ಎಡ್ಜ್‌ 50 ಫ್ಯೂಶನ್ ಸ್ಮಾರ್ಟ್‌ಫೋನ್‌ 6.7 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ರಚನೆ ಪಡೆದಿರಲಿದ್ದು, ಇದರ ಈ ಡಿಸ್‌ಪ್ಲೇಯು 1200 x 2780 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಅನ್ನು ಒಳಗೊಂಡಿರಲಿದೆ. ಹಾಗೆಯೇ ಡಿಸ್‌ಪ್ಲೇ 144 ಟ್ರೂ ಕಲರ್‌ ಡಿಸ್‌ಪ್ಲೇ ಸೌಲಭ್ಯ ಹೊಂದಿರಲಿದ್ದು, ಇದರೊಂದಿಗೆ ಡಿಸ್‌ಪ್ಲೇಯು 2000 ನಿಟ್ಸ್‌ ಬ್ರೈಟ್‌ನೆಸ್‌ ಸೌಲಭ್ಯದೊಂದಿಗೆ ಇರಲಿದ್ದು, 3D ಕರ್ವ್‌ ಡಿಸ್‌ಪ್ಲೇ ಪಡೆದಿರಲಿದೆ.

ಮೊಟೊರೊಲಾ ಎಡ್ಜ್‌ 50 ಫ್ಯೂಶನ್ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 7 ಜೆನ್‌ 2 SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯ ಮಾಡಲಿದ್ದು, ಇದಕ್ಕೆ ಸಪೋರ್ಟ್‌ ಆಗಿ ಆಂಡ್ರಾಯ್ಡ್‌ 14 ಓಎಸ್‌ ಕೆಲಸ ಮಾಡಲಿದೆ. ಇದರ ಜೊತೆಗೆ 12 GB RAM ಮತ್ತು 256 GB ಆಂತರೀಕ ಸ್ಟೋರೇಜ್‌ ಆಯ್ಕೆ ಇರಲಿದ್ದು. ಆದರೆ ಇದರಲ್ಲಿ ಎಸ್‌ಡಿ ಕಾರ್ಡ್‌ ಸ್ಲಾಟ್‌ ಸೌಲಭ್ಯದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

ಮೊಟೊರೊಲಾ ಎಡ್ಜ್‌ 50 ಫ್ಯೂಶನ್ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದಿರಲಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಆಗಿರಲಿದೆ. ಎರಡನೇ ಕ್ಯಾಮೆರಾ 13 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇರಲಿದೆ. ಹಾಗೆಯೇ 50 ಮೆಗಾ ಪಿಕ್ಸೆಲ್‌ ಇಲ್ಲವೇ 32 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಆಯ್ಕೆಯಲ್ಲಿ ಸೆಲ್ಫಿ ಕ್ಯಾಮೆರಾ ನೀಡಬಹುದು.

ಮೊಟೊರೊಲಾ ಎಡ್ಜ್‌ 50 ಫ್ಯೂಶನ್ ಸ್ಮಾರ್ಟ್‌ಫೋನ್‌ 5000 mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯ ಹೊಂದಿರಲಿದ್ದು, ಜೊತೆಗೆ 68W ಫಾಸ್ಟ್‌ ಟರ್ಬೋ ಚಾರ್ಜಿಂಗ್‌ ಸೌಲಭ್ಯ ಪಡೆದಿರಲಿದೆ. ಅಲ್ಲದೇ 50W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್‌ ಸಹ ನೀಡುವ ನಿರೀಕ್ಷೆಗಳಿವೆ. ಈ ಫೋನಿನ ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 4G, 5G, VoLTE, Vo5G, ಬ್ಲೂಟೂತ್ v5.3, ವೈಫೈ, NFC, USB-C v3.2 ಆಯ್ಕೆಗಳನ್ನು ನಿರೀಕ್ಷಿಸಲಾಗಿದೆ.

ಮೊಟೊರೊಲಾ ಎಡ್ಜ್‌ 50 ಫ್ಯೂಶನ್ ಸ್ಮಾರ್ಟ್‌ಫೋನ್‌ ಇಂದು ಮೊಬೈಲ್‌ ಮಾರುಕಟ್ಟೆ ಎಂಟ್ರಿ ಕೊಡಲಿದೆ. ಅಂದಹಾಗೆ ಈ ಮೊಬೈಲ್‌ ಫಾರೆಸ್ಟ್ ಬ್ಲೂ, ಮಾರ್ಷ್ಮ್ಯಾಲೋ ಬ್ಲೂ ಮತ್ತು ಹಾಟ್ ಪಿಂಕ್ ಬಣ್ಣಗಳ ಆಯ್ಕೆಗಳನ್ನು ಪಡೆದಿರಲಿದೆ.

Best Mobiles in India

English summary
Motorola Edge 50 Fusion India Launch Today: Specifications and more. check out camera, battery, display and more information here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+