ಬಿಡುಗಡೆಗೆ ರೆಡಿಯಾಗಿದೆ ಮೊಟೊರೊಲಾ ಎಡ್ಜ್ 50 ಫ್ಯೂಶನ್!..ನಿರೀಕ್ಷೆ ಏನು?
ಮೊಬೈಲ್ ಸಂಸ್ಥೆಯು ತನ್ನ ಕೆಲವು ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿರುವ ಮೊಟೊರೊಲಾ ಸಂಸ್ಥೆಯು ಈಗ ಹೊಸ ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ. ಸಂಸ್ಥೆಯು ನಾಳೆ (ಮೇ 16 ರಂದು) ಭಾರತೀಯ ಮಾರುಕಟ್ಟೆಯಲ್ಲಿ ನೂತನವಾಗಿ ಮೊಟೊರೊಲಾ ಸಂಸ್ಥೆಯು ಮೊಟೊರೊಲಾ ಎಡ್ಜ್ 50 ಫ್ಯೂಶನ್ ಮೊಬೈಲ್ ಅನ್ನು ಲಾಂಚ್ ಮಾಡಲಿದೆ.
ಹೌದು, ಮೊಟೊರೊಲಾ ಕಂಪನಿಯು ದೇಶಿಯ ಮಾರುಕಟ್ಟೆಗೆ ನಾಳೆ ಮೊಟೊರೊಲಾ ಎಡ್ಜ್ 50 ಫ್ಯೂಶನ್ ಫೋನ್ ಅನ್ನು ಪರಿಚಯಿಸಲಿದೆ. ಈ ನೂತನ ಫೋನ್ 3D ಕರ್ವ್ ಡಿಸ್‌ಪ್ಲೇ ರಚನೆ ಪಡೆದಿರಲಿದ್ದು, ಇದರ ಜೊತೆಗೆ 5000mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಸಹ ಒಳಗೊಂಡಿರುವುದು ಬಹುತೇಕ ಖಚಿತ ಎನ್ನಲಾಗಿದೆ.

ಹಾಗೆಯೇ ಈ ಮೊಬೈಲ್ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ರಚನೆ ಹಾಗೂ 120Hz ರಿಫ್ರೆಶ್ ರೇಟ್ ಡಿಸ್‌ಪ್ಲೇ ಗಳಂತಹ ಆಕರ್ಷಕ ಫೀಚರ್ಸ್ ಒಳಗೊಂಡಿರಲಿದೆ. ಹಾಗೆಯೇ ಈ ಫೋನ್ ಫಾರೆಸ್ಟ್ ಬ್ಲೂ, ಮಾರ್ಷ್ಮ್ಯಾಲೋ ಬ್ಲೂ ಮತ್ತು ಹಾಟ್ ಪಿಂಕ್ ಕಲರ್ ಆಯ್ಕೆಗಳಲ್ಲಿ ಲಗ್ಗೆ ಇಡುವುದು ಬಹುತೇಕ ಖಚಿತ ಆಗಿದೆ. ಇನ್ನುಳಿದಂತೆ ಮೊಟೊರೊಲಾ ಎಡ್ಜ್ 50 ಫ್ಯೂಶನ್ ಮೊಬೈಲ್ ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಮೊಟೊರೊಲಾ ಎಡ್ಜ್ 50 ಫ್ಯೂಶನ್ - ನಿರೀಕ್ಷಿತ ಫೀಚರ್ಸ್
ಮೊಟೊರೊಲಾ ಎಡ್ಜ್ 50 ಫ್ಯೂಶನ್ ಮೊಬೈಲ್ 6.7 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಒಳಗೊಂಡಿರಲಿದ್ದು, ಈ ಡಿಸ್‌ಪ್ಲೇಯು 1200 x 2780 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಪೋರ್ಟ್ ಪಡೆದಿದೆ. ಇದರ ಜೊತೆಗೆ ಡಿಸ್‌ಪ್ಲೇ 144 ಟ್ರೂ ಕಲರ್ ಡಿಸ್‌ಪ್ಲೇ ಸೌಲಭ್ಯ ಪಡೆದಿರಲಿದ್ದು, ಇದರ ಜೊತೆಗೆ ಡಿಸ್‌ಪ್ಲೇ 2000 ನಿಟ್ಸ್ ಬ್ರೈಟ್‌ನೆಸ್ ಸಪೋರ್ಟ್ ಬರಲಿದ್ದು, 3D ಕರ್ವ್ ಡಿಸ್‌ಪ್ಲೇ ರಚನೆ ಅನ್ನು ಒಳಗೊಂಡಿರಲಿದೆ.
ಮೊಟೊರೊಲಾ ಎಡ್ಜ್ 50 ಫ್ಯೂಶನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜೆನ್ 2 SoC ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಇರಲಿದೆ. ಇದರೊಂದಿಗೆ 12 GB RAM ಮತ್ತು 256 GB ಆಂತರೀಕ ಸ್ಟೋರೇಜ್ ಆಯ್ಕೆ ಸಹ ಪಡೆದಿರಲಿದೆ. ಆದರೆ ಇದರಲ್ಲಿ ಎಸ್‌ಡಿ ಕಾರ್ಡ್ ಸ್ಲಾಟ್ ಸೌಲಭ್ಯ ಅಲಭ್ಯ ಎಂದು ಹೇಳಲಾಗುತ್ತಿದೆ.
ಮೊಟೊರೊಲಾ ಎಡ್ಜ್ 50 ಫ್ಯೂಶನ್ ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆದಿರಲಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಆಗಿರಲಿದೆ. ದ್ವಿತೀಯ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್ ನಲ್ಲಿ ಇರಲಿದೆ. ಹಾಗೆಯೇ 50 ಅಥವಾ 32 ಮೆಗಾ ಪಿಕ್ಸೆಲ್ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಪಡೆದಿರಲಿದೆ.
ಮೊಟೊರೊಲಾ ಎಡ್ಜ್ 50 ಫ್ಯೂಶನ್ ಮೊಬೈಲ್ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ 68W ಫಾಸ್ಟ್ ಟರ್ಬೋ ಚಾರ್ಜಿಂಗ್ ಸೌಲಭ್ಯ ಪಡೆದಿರಲಿದೆ. ಹಾಗೆಯೇ 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸುವ ಇರುವ ನಿರೀಕ್ಷೆಯಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, 5G, VoLTE, Vo5G, ಬ್ಲೂಟೂತ್ v5.3, ವೈಫೈ, NFC, USB-C v3.2 ಆಯ್ಕೆಗಳು ಇರಲಿವೆ.
ಮೊಟೊರೊಲಾ ಎಡ್ಜ್ 50 ಫ್ಯೂಶನ್ ನಾಳೆ ಅಧಿಕೃತವಾಗಿ ದೇಶಿಯ ಮಾರುಕಟ್ಟೆ ಲಗ್ಗೆ ಇಡಲಿದೆ. ಈ ಮೊಬೈಲ್ ಫಾರೆಸ್ಟ್ ಬ್ಲೂ, ಮಾರ್ಷ್ಮ್ಯಾಲೋ ಬ್ಲೂ ಮತ್ತು ಹಾಟ್ ಪಿಂಕ್ ಬಣ್ಣಗಳ ಆಯ್ಕೆಗಳಲ್ಲಿ ಎಂಟ್ರಿ ಕೊಡುವ ನಿರೀಕ್ಷೆಗಳು ಇವೆ. ಇನ್ನು ಈ ಮೊಬೈಲ್ ಮಿಡ್‌ರೇಂಜ್ ಪ್ರೈಸ್‌ಟ್ಯಾಗ್‌ನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇವೆ.


Click it and Unblock the Notifications








