Home
ಸುದ್ದಿಜಾಲ

ಅತ್ಯುತ್ತಮ ಕ್ಯಾಮೆರಾ ಇರುವ ಈ ಫೋನ್‌ ಬೆಲೆಯಲ್ಲಿ ಜಬರ್ದಸ್ತ್‌ ಇಳಿಕೆ; ಅಚ್ಚರಿಯ ಡಿಸ್ಕೌಂಟ್‌!

ಅನೇಕ ಗ್ರಾಹಕರು ಹೊಸ ಮೊಬೈಲ್‌ ಖರೀದಿಸುವಾಗ ಮೊದಲು ಆನ್‌ಲೈನ್‌ ಇ ಕಾಮರ್ಸ್‌ ತಾಣಗಳಲ್ಲಿ ಏನಾದ್ರೂ ಆಫರ್‌ ಇದೆಯಾ ಎಂದು ಚೆಕ್‌ ಮಾಡುತ್ತಾರೆ. ಆ ಬಳಿಕವೇ ನಿರ್ಧಾರ ಮಾಡುತ್ತಾರೆ. ಸದ್ಯ ಜನಪ್ರಿಯ ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಬಿಗ್ ಬಚತ್‌ ಡೇಸ್‌ ಮಾರಾಟ ಪ್ರಾರಂಭ ಮಾಡಿದ್ದು, ಈ ಸೇಲ್‌ನಲ್ಲಿ ಕೆಲವು ಆಯ್ದ ಫೋನ್‌ಗಳಿಗೆ ಆಕರ್ಷಕ ಡಿಸ್ಕೌಂಟ್‌ ನೀಡಿದೆ. ಮುಖ್ಯವಾಗಿ ಮೊಟೊರೊಲಾ ಎಡ್ಜ್‌ 50 ಫ್ಯೂಜನ್‌ (Motorola Edge 50 Fusion) ಸ್ಮಾರ್ಟ್‌ಫೋನ್‌ ಸ್ಪೆಷಲ್‌ ಡಿಸ್ಕೌಂಟ್‌ನಲ್ಲಿ ಕಾಣಿಸಿಕೊಂಡಿದೆ.

ಹೌದು, ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ನಲ್ಲಿ ಕರ್ವ್ಡ್‌ ಡಿಸ್‌ಪ್ಲೇ ರಚನೆ ಪಡೆದಿರುವ ಮೊಟೊರೊಲಾ ಎಡ್ಜ್‌ 50 ಫ್ಯೂಜನ್‌ (Motorola Edge 50 Fusion) ಫೋನ್‌ ಶೇ. 10% ರಷ್ಟು ನೇರ ಡಿಸ್ಕೌಂಟ್‌ ಪಡೆದುಕೊಂಡಿದೆ. ಈ ಮೊಬೈಲ್‌ನ 12 GB RAM + 128 GB ಸ್ಟೋರೇಜ್‌ ವೇರಿಯಂಟ್‌ 24,999ರೂ. ಗಳ ಆಕರ್ಷಕ ಬೆಲೆ ಇಳಿಕೆಯಲ್ಲಿ ಕಾಣಿಸಿಕೊಂಡಿದೆ. ಇದಲ್ಲದೇ ಎಕ್ಸ್‌ಚೇಂಜ್ ಆಫರ್‌ ಸಹ ಪಡೆದುಕೊಂಡರೆ, ಈ ಮೊಬೈಲ್‌ ಅನ್ನು ಇನ್ನಷ್ಟು ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿಸಬಹುದು.

ಅತ್ಯುತ್ತಮ ಕ್ಯಾಮೆರಾ ಇರುವ ಈ ಫೋನ್‌ ಬೆಲೆಯಲ್ಲಿ ಜಬರ್ದಸ್ತ್‌ ಇಳಿಕೆ!

ಅಂದಹಾಗೆ ಈ ಮೊಬೈಲ್‌ 68W ಟರ್ಬೋ ಪವರ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದುಕೊಂಡಿದೆ. ಅಲ್ಲದೇ ಸ್ನ್ಯಾಪ್‌ಡ್ರಾಗನ್‌ 7s ಜೆನ್ 3 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಇನ್ನುಳಿದಂತೆ ಮೊಟೊರೊಲಾ ಎಡ್ಜ್‌ 50 ಫ್ಯೂಜನ್‌ ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಕರ್ವ್ಡ್‌ ಡಿಸ್‌ಪ್ಲೇ

ಮೊಟೊರೊಲಾ ಎಡ್ಜ್‌ 50 ಫ್ಯೂಜನ್‌ ಮೊಬೈಲ್‌ 6.7 ಇಂಚಿನ 3D ಕರ್ವ್ಡ್‌ pOLED ಡಿಸ್‌ಪ್ಲೇ ಅನ್ನು ಹೊಂದಿದ್ದು, ಡಿಸ್‌ಪ್ಲೇಯು 2400 × 1080p ಪಿಕ್ಸಲ್‌ ರೆಸಲ್ಯೂಶನ್‌ ಸೌಲಭ್ಯ ಒಳಗೊಂಡಿದೆ. ಅಲ್ಲದೇ ಈ ಫೋನಿನ 1600 ನಿಟ್ಸ್‌ ಪೀಕ್ ಬ್ರೈಟ್ನೆಸ್‌ ಸೌಲಭ್ಯ, 144Hz ರಿಫ್ರೆಶ್‌ ರೇಟ್‌ ಆಯ್ಕೆ ಜೊತೆಗೆ ಗೊರಿಲ್ಲಾ ಗ್ಲಾಸ್‌ 5 ಪ್ರೊಟೆಕ್ಷನ್‌ ಸೌಲಭ್ಯ ಸಹ ಪಡೆದುಕೊಂಡಿದೆ.

ಸ್ನ್ಯಾಪ್‌ಡ್ರಾಗನ್‌ ಪ್ರೊಸೆಸರ್‌

ಮೊಟೊರೊಲಾ ಎಡ್ಜ್‌ 50 ಫ್ಯೂಜನ್‌ ಫೋನ್‌ ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್‌ 7s ಜೆನ್ 3 ಚಿಪ್‌ಸೆಟ್‌ ಪ್ರೊಸೆಸರ್‌ ಸೌಲಭ್ಯ ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಸಹ ಇದೆ. ಅಲ್ಲದೇ ಈ ಫೋನ್‌ 8GB + 128GB ಹಾಗೂ 12GB + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಒಳಗೊಂಡಿದೆ.

ಡ್ಯುಯಲ್‌ ಕ್ಯಾಮೆರಾ

ಮೊಟೊರೊಲಾ ಎಡ್ಜ್‌ 50 ಫ್ಯೂಜನ್‌ ಫೋನ್‌ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸೌಲಭ್ಯ ಪಡೆದಿದೆ. ಇನ್ನು ಎರಡನೇ ಕ್ಯಾಮೆರಾವು 50 ಮೆಗಾ ಪಿಕ್ಸೆಲ್‌ನ 2x ಟೆಲಿಫೋಟೋ ಲೆನ್ಸ್‌ ಸೌಲಭ್ಯ ಒಳಗೊಂಡಿದೆ. ಇನ್ನು ಈ ಮೊಬೈಲ್‌ನ ಸೆಲ್ಫಿ ಕ್ಯಾಮೆರಾ 32 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯ ಪಡೆದಿದೆ.

ಬಿಗ್‌ ಬ್ಯಾಟರಿ ಸೌಲಭ್ಯ

ಮೊಟೊರೊಲಾ ಎಡ್ಜ್‌ 50 ಫ್ಯೂಜನ್‌ ಫೋನ್‌ 5,000 mAh ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿದ್ದು, ಇದಕ್ಕೆ ಬೆಂಬಲವಾಗಿ 68W ಟರ್ಬೋ ಪವರ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಹಾಗೆಯೇ ಇದು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಫೇಸ್ ಅನ್‌ಲಾಕ್ ಆಯ್ಕೆಗಳು ಹಾಗೂ ಡಾಲ್ಬಿ ಅಟ್ಮಾಸ್ ಆಡಿಯೋ ಸೌಲಭ್ಯ ಸಹ ಇದೆ. ಹಾಗೆಯೇ GPS, Wi-Fi 6, ಬ್ಲೂಟೂತ್ 5.2, ಮತ್ತು USB 2.0 ಟೈಪ್ - C ಪೋರ್ಟ್ ಆಯ್ಕೆಗಳು ಸಹ ಕಾಣಬಹುದಾಗಿದೆ.

Best Mobiles in India

English summary
Motorola Edge 50 Fusion now Fabulous Price Slash on Flipkart Website. Check offers, Specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+