ಇದೇ ಸೆಪ್ಟೆಂಬರ್ 16 ರಂದು ಗ್ರ್ಯಾಂಡ್ ಎಂಟ್ರಿ ಕೊಡಲಿದೆ Motorola Edge 50 Neo!
ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಮೊಟೊರೊಲಾ (Motorola) ಸಂಸ್ಥೆಯು ಭಿನ್ನ ಶ್ರೇಣಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಆ ಪೈಕಿ ಮೊಟೊ ಎಡ್ಜ್ ಸರಣಿಯ ಫೋನ್‌ಗಳು ಮೊಬೈಲ್ ಪ್ರಿಯರ ಗಮನ ಸೆಳೆದಿದೆ. ಸಂಸ್ಥೆಯು ಇದೀಗ ಇತ್ತೀಚಿಗಿನ ಮೊಟೊರೊಲಾ ಎಡ್ಜ್ 50 ಫೋನಿನ ಮುಂದುವರಿದ ಭಾಗವಾಗಿ ಮೊಟೊರೊಲಾ ಎಡ್ಜ್ 50 ನಿಯೋ (Motorola Edge 50 Neo) ಸ್ಮಾರ್ಟ್‌ಫೋನ್ ಬಿಡುಗಡೆಗೆ ಮಾಡಲು ತಯಾರಿ ನಡೆಸಿದ್ದು, ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ.
ಹೌದು, ಮೊಟೊ ಸಂಸ್ಥೆಯು ಮೊಟೊರೊಲಾ ಎಡ್ಜ್ 50 ನಿಯೋ (Motorola Edge 50 Neo) ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದ್ದು, ಅದರ ದಿನಾಂಕ ಅಧಿಕೃತವಾಗಿ ಬಹಿರಂಗವಾಗಿದೆ. ಮೊಟೊರೊಲಾ ಸಂಸ್ಥೆಯು ತಿಳಿಸಿರುವಂತೆ ಈ ಸ್ಮಾರ್ಟ್‌ಫೋನ್ ಇದೇ ಸೆಪ್ಟೆಂಬರ್ 16 ರಂದು ಭಾರತದಲ್ಲಿ ಲಾಂಚ್ ಆಗಲಿದೆ. ಇನ್ನು ಮೊಟೊರೊಲಾ ಎಡ್ಜ್ 50 ನಿಯೋ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 SoC ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ.

ಹಾಗೆಯೇ ಮೊಟೊರೊಲಾದ ನೂತನ ಎಡ್ಜ್ ಸ್ಮಾರ್ಟ್‌ಫೋನ್ 4,310mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ 68W ವೈರ್ಡ್ ಚಾರ್ಜಿಂಗ್ ಸೌಲಭ್ಯ ಸಹ ಪಡೆದಿರಲಿದೆ. ಅಲ್ಲದೇ 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದ ಪ್ರಾಥಮಿಕ ಕ್ಯಾಮೆರಾ ಪಡೆದಿರಲಿದೆ. ಹಾಗಾದರೇ ಬರಲಿರುವ ಮೊಟೊರೊಲಾ ಎಡ್ಜ್ 50 ನಿಯೋ ಫೋನಿನ ಇತರೆ ನಿರೀಕ್ಷಿತ ಫೀಚರ್ಸ್ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಮೊಟೊರೊಲಾ ಎಡ್ಜ್ 50 ನಿಯೋ - ಫೀಚರ್ಸ್
ಮೊಟೊರೊಲಾ ಎಡ್ಜ್ 50 ನಿಯೋ ಫೋನ್ 6.7 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿರಲಿದ್ದು, ಈ ಡಿಸ್‌ಪ್ಲೇಯು 1200 x 2780 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಪೋರ್ಟ್ ಮಾಡಲಿದೆ. ಇದಲ್ಲದೆ ಡಿಸ್‌ಪ್ಲೇ 144 ಟ್ರೂ ಕಲರ್ ಡಿಸ್‌ಪ್ಲೇ ಸೌಲಭ್ಯ ಪಡೆದಿರಲಿದ್ದು, ಇದರ ಜೊತೆಗೆ ಡಿಸ್‌ಪ್ಲೇ 2500 ನಿಟ್ಸ್ ಬ್ರೈಟ್‌ನೆಸ್ ಸಪೋರ್ಟ್ ಒದಗಿಸಲಿದೆ. ಇದರ ಜೊತೆಗೆ 3D ಕರ್ವ್ ಡಿಸ್‌ಪ್ಲೇ ರಚನೆ ಅನ್ನು ಪಡೆದಿರಲಿದೆ.
ಮೊಟೊರೊಲಾ ಎಡ್ಜ್ 50 ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 SoC ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ಮಾಡಲಿರುವ ಸಾಧ್ಯತೆಗಳು ಇದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಬೆಂಬಲ ಇರಲಿದೆ. ಇದರೊಂದಿಗೆ 12GB RAM + 256GB ಸ್ಟೋರೇಜ್‌ನ ವೇರಿಯಂಟ್ ಆಯ್ಕೆ ಸಹ ಪಡೆದಿರುವ ನಿರೀಕ್ಷೆಗಳು ಇದೆ.
ಮೊಟೊರೊಲಾ ಎಡ್ಜ್ 50 ಮೊಬೈಲ್ ತ್ರಿವಳಿ ರಿಯರ್ ಕ್ಯಾಮೆರಾ ಸೆಟ್‌ಅಪ್ ಪಡೆದಿರಲಿದ್ದು, ಇದರ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇರಲಿದೆ. ಎರಡನೇಯ ಹಾಗೂ ಮೂರನೇ ಕ್ಯಾಮೆರಾಗಳು ಕ್ರಮವಾಗಿ 13 ಮೆಗಾ ಪಿಕ್ಸೆಲ್ ಸೆನ್ಸಾರ್ ಹಾಗೂ 10 ಮೆಗಾ ಪಿಕ್ಸೆಲ್ ಸೆನ್ಸಾರ್ ಬಲದಲ್ಲಿ ಇವೆ. ಅಲ್ಲದೇ ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಪಡೆದಿರುವ ಸಾಧ್ಯತೆಗಳು ಇವೆ.
ಮೊಟೊರೊಲಾ ಎಡ್ಜ್ 50 ಮೊಬೈಲ್ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ 68 W ಫಾಸ್ಟ್ ಟರ್ಬೋ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಹಾಗೆಯೇ 15W ವೈರ್‌ಲೆಸ್ ಮತ್ತು 5W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಆಯ್ಕೆಗಳು ಇವೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 4G, 5G, VoLTE, Vo5G, ಬ್ಲೂಟೂತ್ v5.3, ವೈಫೈ, NFC, USB-C v3.2 ಆಯ್ಕೆಗಳು ಇರಲಿವೆ.


Click it and Unblock the Notifications








