8000ರೂ, ಕಡಿತ!..8GB RAM ಮತ್ತು 256GB ಸ್ಟೋರೇಜ್..ಇದು ಸ್ಟೈಲಿಶ್ ಫೋನ್!
ಪ್ರಮುಖ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಎನಿಸಿರುವ ಫ್ಲಿಪ್‌ಕಾರ್ಟ್‌ನಲ್ಲಿ ( Flipkart ) ಮೊಬೈಲ್‌ಗಳಿಗೆ ಸಖತ್ ಸ್ಪೆಷಲ್ ಆಫರ್ ನೀಡುತ್ತಾ ಮುನ್ನಡೆದಿದೆ. ಆ ಪೈಕಿ ಇದೀಗ ಮೊಟೊರೊಲಾ ಎಡ್ಜ್ 50 ನಿಯೋ (Motorola Edge 50 Neo) ಫೋನ್ ಭರ್ಜರಿ ಬೆಲೆ ಇಳಿಕೆಯಲ್ಲಿ ಕಾಣಿಸಿಕೊಂಡಿದ್ದು, ಖರೀದಿದಾರರು OMG ಎಂದು ಅಚ್ಚರಿ ಪಡುವಂತೆ ಆಗಿದೆ.
ಹೌದು, ಇ ಕಾಮರ್ಸ್ ದೊಡ್ಡಣ್ಣ ಎನಿಸಿರುವ ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್ನಲ್ಲಿ ಮೊಟೊರೊಲಾ ಎಡ್ಜ್ 50 ನಿಯೋ (Motorola Edge 50 Neo) ಮೊಬೈಲ್ ಶೇ. 26% ರಷ್ಟು ನೇರ ಡಿಸ್ಕೌಂಟ್ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಈ ಫೋನಿನ 8 GB RAM + 256 GB ವೇರಿಯಂಟ್ ಮೊಬೈಲ್ ಅನ್ನು 21,999ರೂ. ಗಳ ಡಿಸ್ಕೌಂಟ್ ಬೆಲೆಯಲ್ಲಿ ಖರೀದಿ ಮಾಡಲು ಅವಕಾಶ ಇದೆ. ಇದಲ್ಲದೇ ಈ ಮೊಬೈಲ್‌ಗೆ ಕೆಲವು ಆಯ್ದ ಬ್ಯಾಂಕ್ ಆಫರ್ ಸಹ ಲಭ್ಯ ಸಿಗಲಿವೆ.

ಮೊಟೊರೊಲಾ ಎಡ್ಜ್ 50 ನಿಯೋ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 SoC ಪ್ರೊಸೆಸರ್ ಪವರ್ ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ ಹಾಗೂ ಸೆಲ್ಫಿ ಕ್ಯಾಮೆರಾವು 32 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಹಾಗಾದರೇ ಮೊಟೊರೊಲಾ ಎಡ್ಜ್ 50 ನಿಯೋ ಫೋನಿನ ಇತರೆ ಫೀಚರ್ಸ್ ಬಗ್ಗೆ ತಿಳಿಯಲು ಮುಂದೆ ಓದಿರಿ.
ಮೊಟೊರೊಲಾ ಎಡ್ಜ್ 50 ನಿಯೋ - ಫೀಚರ್ಸ್ ಮಾಹಿತಿ
ಮೊಟೊರೊಲಾ ಎಡ್ಜ್ 50 ನಿಯೋ ಮೊಬೈಲ್ 6.4 ಇಂಚಿನ pOLED LTPO ಡಿಸ್‌ಪ್ಲೇ ಹೊಂದಿದ್ದು, ಈ ಡಿಸ್‌ಪ್ಲೇಯು 2670 x 1220 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಪೋರ್ಟ್ ಮಾಡಲಿದೆ. ಇದಲ್ಲದೆ 120 Hz ರಿಫ್ರೆಶ್ ರೇಟ್ ಡಿಸ್‌ಪ್ಲೇ ಸೌಲಭ್ಯ ಹೊಂದಿದ್ದು, ಇದರ ಜೊತೆಗೆ ಡಿಸ್‌ಪ್ಲೇ 3,000 nits ಬ್ರೈಟ್‌ನೆಸ್ ಸಪೋರ್ಟ್ ನೀಡಲಿದೆ. ಇದರ ಜೊತೆಗೆ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ಅನ್ನು ಪಡೆದಿದೆ.
ಮೊಟೊರೊಲಾ ಎಡ್ಜ್ 50 ನಿಯೋ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 SoC ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಬೆಂಬಲ ಪಡೆದಿದೆ. ಇದರೊಂದಿಗೆ 8 GB RAM + 256 GB ಸ್ಟೋರೇಜ್‌ನ ವೇರಿಯಂಟ್ ಆಯ್ಕೆ ಸಹ ಪಡೆದಿದೆ.
ಮೊಟೊರೊಲಾ ಎಡ್ಜ್ 50 ನಿಯೋ ಮೊಬೈಲ್ ಟ್ರಿಪಲ್ ಕ್ಯಾಮೆರಾ ರಚನೆ ಒಳಗೊಂಡಿದ್ದು, ಇದರ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ದ್ವಿತೀಯ ಹಾಗೂ ಮೂರನೇ ಕ್ಯಾಮೆರಾಗಳು ಕ್ರಮವಾಗಿ 13 ಮೆಗಾ ಪಿಕ್ಸೆಲ್ ಸೆನ್ಸಾರ್ ಹಾಗೂ 10 ಮೆಗಾ ಪಿಕ್ಸೆಲ್ ಸೆನ್ಸಾರ್ ಬಲದಲ್ಲಿ ಇವೆ. ಅಲ್ಲದೇ ಮುಂಭಾಗದಲ್ಲಿ 32 ಮೆಗಾ ಪಿಕ್ಸೆಲ್ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಪಡೆದುಕೊಂಡಿದೆ.
ಮೊಟೊರೊಲಾ ಎಡ್ಜ್ 50 ನಿಯೋ ಮೊಬೈಲ್ 4,310 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಹೊಂದಿದ್ದು, ಇದಕ್ಕೆ ಪೂರಕವಾಗಿ 68 W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಹಾಗೆಯೇ 15W ವೈರ್‌ಲೆಸ್ ಚಾರ್ಜಿಂಗ್ ಆಯ್ಕೆ ಸಹ ಇದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಡಾಲ್ಬಿ ಅಟ್ಮಾಸ್, ಎನ್‌ಎಫ್‌ಸಿ, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌ನೊಂದಿಗೆ ಡ್ಯುಯಲ್ ಸ್ಪೀಕರ್‌ಗಳನ್ನು ಪಡೆದಿದೆ.


Click it and Unblock the Notifications








