Home
ಸುದ್ದಿಜಾಲ

ಇಂದು Motorola Edge 50 Neo ಫೋನ್‌ ಬಿಡುಗಡೆ; ಬೆಲೆ ಎಷ್ಟು?..ಫೀಚರ್ಸ್‌ ಏನು?

ಪ್ರಮುಖ ಮೊಬೈಲ್‌ ಬ್ರ್ಯಾಂಡ್‌ ಮೊಟೊರೊಲಾ (Motorola) ಸಂಸ್ಥೆಯು ಭಿನ್ನ ಶ್ರೇಣಿ ಮೊಬೈಲ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸಂಸ್ಥೆಯ ಮೊಟೊ ಎಡ್ಜ್‌ ಸರಣಿಯ ಮೊಬೈಲ್‌ಗಳು ಅಧಿಕ ಗ್ರಾಹಕರ ಗಮನ ಸೆಳೆದಿದೆ. ಮೊಟೊ ಇದೀಗ ಇತ್ತೀಚಿಗಿನ ಮೊಟೊರೊಲಾ ಎಡ್ಜ್‌ 50 ಫೋನಿನ ಮುಂದುವರಿದ ಭಾಗವಾಗಿ ಮೊಟೊರೊಲಾ ಎಡ್ಜ್‌ 50 ನಿಯೋ (Motorola Edge 50 Neo) ಸ್ಮಾರ್ಟ್‌ಫೋನ್‌ ಇಂದು (ಸೆಪ್ಟೆಂಬರ್‌ 16 ರಂದು) ಬಿಡುಗಡೆಗೆ ಮಾಡಲಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿರಲಿದೆ.

ಹೌದು, ಮೊಟೊ ಸಂಸ್ಥೆಯು ಮೊಟೊರೊಲಾ ಎಡ್ಜ್‌ 50 ನಿಯೋ (Motorola Edge 50 Neo) ಸ್ಮಾರ್ಟ್‌ಫೋನ್‌ ಇಂದು ಲಾಂಚ್ ಮಾಡಲಿದೆ. ಈ ಬಗ್ಗೆ ಈಗಾಗಲೇ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣವು ಮೈಕ್ರೋ ಪೇಜ್‌ ಕೂಡಾ ತೆರೆದಿದೆ. ಅಂದಹಾಗೆ ಮೊಟೊರೊಲಾ ಎಡ್ಜ್‌ 50 ನಿಯೋ ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7300 SoC ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ.

ಇಂದು Motorola Edge 50 Neo ಫೋನ್‌ ಬಿಡುಗಡೆ; ಬೆಲೆ ಎಷ್ಟು?..ಫೀಚರ್ಸ್‌ ಏನು?

ಇನ್ನು ಮೊಟೊರೊಲಾದ ಈ ಹೊಸ ಫೋನ್‌ 4,310mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ 68W ವೈರ್ಡ್ ಚಾರ್ಜಿಂಗ್ ಸೌಲಭ್ಯ ಸಹ ಒಳಗೊಂಡಿರಲಿದೆ. ಹಾಗೆಯೇ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದ ಪ್ರಾಥಮಿಕ ಕ್ಯಾಮೆರಾ ಬಹುತೇಕ ಖಚಿತ. ಹಾಗಾದರೇ ಮೊಟೊರೊಲಾ ಎಡ್ಜ್‌ 50 ನಿಯೋ ಫೋನಿನ ಇತರೆ ನಿರೀಕ್ಷಿತ ಫೀಚರ್ಸ್‌ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಮೊಟೊರೊಲಾ ಎಡ್ಜ್‌ 50 ನಿಯೋ - ಫೀಚರ್ಸ್‌ ಹೀಗಿವೆ

ಮೊಟೊರೊಲಾ ಎಡ್ಜ್‌ 50 ನಿಯೋ ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿರಲಿದ್ದು, ಈ ಡಿಸ್‌ಪ್ಲೇಯು 1200 x 2780 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಪೋರ್ಟ್‌ ಮಾಡಲಿದೆ. ಇದಲ್ಲದೆ ಡಿಸ್‌ಪ್ಲೇ 144 ಟ್ರೂ ಕಲರ್‌ ಡಿಸ್‌ಪ್ಲೇ ಸೌಲಭ್ಯ ಪಡೆದಿರಲಿದ್ದು, ಇದರ ಜೊತೆಗೆ ಡಿಸ್‌ಪ್ಲೇ 2500 ನಿಟ್ಸ್‌ ಬ್ರೈಟ್‌ನೆಸ್‌ ಸಪೋರ್ಟ್‌ ಒದಗಿಸಲಿದೆ. ಇದರ ಜೊತೆಗೆ 3D ಕರ್ವ್‌ ಡಿಸ್‌ಪ್ಲೇ ರಚನೆ ಅನ್ನು ಪಡೆದಿರಲಿದೆ.

ಮೊಟೊರೊಲಾ ಎಡ್ಜ್‌ 50 ನಿಯೋ ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7300 SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ಮಾಡಲಿರುವ ಸಾಧ್ಯತೆಗಳು ಇದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಬೆಂಬಲ ಇರಲಿದೆ. ಇದರೊಂದಿಗೆ 12GB RAM + 256GB ಸ್ಟೋರೇಜ್‌ನ ವೇರಿಯಂಟ್‌ ಆಯ್ಕೆ ಸಹ ಪಡೆದಿರುವ ನಿರೀಕ್ಷೆಗಳು ಇದೆ.

ಮೊಟೊರೊಲಾ ಎಡ್ಜ್‌ 50 ನಿಯೋ ಫೋನ್‌ ಮೂರು ರಿಯರ್‌ ಕ್ಯಾಮೆರಾ ರಚನೆ ಪಡೆದಿರಲಿದ್ದು, ಇದರ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇರಲಿದೆ. ಎರಡನೇಯ ಹಾಗೂ ಮೂರನೇ ಕ್ಯಾಮೆರಾಗಳು ಕ್ರಮವಾಗಿ 13 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಹಾಗೂ 10 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಬಲದಲ್ಲಿ ಇವೆ. ಅಲ್ಲದೇ ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಪಡೆದಿರುವ ಸಾಧ್ಯತೆಗಳು ಇವೆ.

ಮೊಟೊರೊಲಾ ಎಡ್ಜ್‌ 50 ನಿಯೋ ಫೋನ್‌ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ 68 W ಫಾಸ್ಟ್‌ ಟರ್ಬೋ ಚಾರ್ಜಿಂಗ್‌ ಸೌಲಭ್ಯ ಪಡೆದಿದೆ. ಹಾಗೆಯೇ 15W ವೈರ್‌ಲೆಸ್ ಮತ್ತು 5W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್‌ ಆಯ್ಕೆಗಳು ಇವೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 4G, 5G, VoLTE, Vo5G, ಬ್ಲೂಟೂತ್ v5.3, ವೈಫೈ, NFC, USB-C v3.2 ಆಯ್ಕೆಗಳು ಸಾಧ್ಯತೆ ಇದೆ.

Best Mobiles in India

English summary
Motorola Edge 50 Neo to Launch in India Today. Check out Expected Specs and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+