Home
ಸುದ್ದಿಜಾಲ

Motorola Edge 50 Neo ಫೋನ್‌ ಲಾಂಚ್‌; ಅಚ್ಚರಿಯ ಫೀಚರ್ಸ್‌, ವಾವ್‌ ಎನಿಸುವ ಕ್ಯಾಮೆರಾ!

ಮೊಟೊರೊಲಾ ಕಂಪನಿಯ ಬಹುನಿರೀಕ್ಷಿತ ನೂತನ ಮೊಟೊರೊಲಾ ಎಡ್ಜ್‌ 50 ನಿಯೋ (Motorola Edge 50 Neo) ಮೊಬೈಲ್‌ ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಲಾಂಚ್ ಆಗಿದೆ. ಈ ಹೊಸ ಸ್ಮಾರ್ಟ್‌ಫೋನ್‌ ಸ್ಟೈಲಿಶ್‌ ಲುಕ್‌ ಜೊತೆಗೆ ಕೆಲವು ಆಕರ್ಷಕ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಪಡೆದಿದೆ. ಈ ನೂತನ ಫೋನ್‌ ದೀರ್ಘ ಬಾಳಿಕೆಗಾಗಿ ಮಿಲಿಟರಿ ದರ್ಜೆಯ ಪ್ರಮಾಣೀಕರಣ 'MIL-STD 810H' ಹೊಂದಿದೆ.

ಹೌದು, ಮೊಟೊರೊಲಾ ಎಡ್ಜ್‌ 50 ನಿಯೋ (Motorola Edge 50 Neo) ಸ್ಮಾರ್ಟ್‌ಫೋನ್‌ ಮೊಬೈಲ್‌ ಭಾರತೀಯ ಮಾರುಕಟ್ಟೆಯಲ್ಲಿ ಇಂದು ಲಾಂಚ್‌ ಆಗಿದೆ. ಈ ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7300 SoC ಪ್ರೊಸೆಸರ್‌ ಪವರ್‌ನಲ್ಲಿ ಕಾರ್ಯ ನಿರ್ವಹಿಸಲಿದ್ದು, ಇದರೊಂದಿಗೆ 8GB RAM + 256GB ಸ್ಟೋರೇಜ್‌ನ ವೇರಿಯಂಟ್‌ ಆಯ್ಕೆ ಪಡೆದುಕೊಂಡಿದೆ.

Motorola Edge 50 Neo ಲಾಂಚ್‌; ಅಚ್ಚರಿಯ ಫೀಚರ್ಸ್‌, ವಾವ್‌ ಎನಿಸುವ ಕ್ಯಾಮೆರಾ!

ಈ ಹೊಸ ಫೋನ್‌ ಟ್ರಿಪಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 32 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇನ್ನು ಈ ಫೋನಿನ ಆರಂಭಿಕ ಬೆಲೆಯು 23,999ರೂ. ಗಳು ಆಗಿದೆ. ಇನ್ನುಳಿದಂತೆ ಮೊಟೊರೊಲಾ ಎಡ್ಜ್‌ 50 ನಿಯೋ ಮೊಬೈಲ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಸಲಾಗಿದೆ ಓದಿರಿ.

ಮೊಟೊರೊಲಾ ಎಡ್ಜ್‌ 50 ನಿಯೋ - ಫೀಚರ್ಸ್‌

ಮೊಟೊರೊಲಾ ಎಡ್ಜ್‌ 50 ನಿಯೋ ಫೋನ್‌ 6.4 ಇಂಚಿನ pOLED LTPO ಡಿಸ್‌ಪ್ಲೇ ಹೊಂದಿದ್ದು, ಈ ಡಿಸ್‌ಪ್ಲೇಯು 2670 x 1220 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಪೋರ್ಟ್‌ ಮಾಡಲಿದೆ. ಇದಲ್ಲದೆ 120Hz ರಿಫ್ರೆಶ್ ರೇಟ್‌ ಡಿಸ್‌ಪ್ಲೇ ಸೌಲಭ್ಯ ಪಡೆದಿದ್ದು, ಇದರ ಜೊತೆಗೆ ಡಿಸ್‌ಪ್ಲೇ 3,000 nits ಬ್ರೈಟ್‌ನೆಸ್‌ ಸಪೋರ್ಟ್‌ ಒದಗಿಸಲಿದೆ. ಇದರ ಜೊತೆಗೆ ಗೊರಿಲ್ಲಾ ಗ್ಲಾಸ್‌ 3 ಪ್ರೊಟೆಕ್ಷನ್‌ ಅನ್ನು ಪಡೆದಿದೆ.

ಮೊಟೊರೊಲಾ ಎಡ್ಜ್‌ 50 ನಿಯೋ ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7300 SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಬೆಂಬಲ ಪಡೆದಿದೆ. ಇದರೊಂದಿಗೆ 8GB RAM + 256GB ಸ್ಟೋರೇಜ್‌ನ ವೇರಿಯಂಟ್‌ ಆಯ್ಕೆ ಸಹ ಪಡೆದಿದೆ.

ಮೊಟೊರೊಲಾ ಎಡ್ಜ್‌ 50 ನಿಯೋ ಫೋನ್‌ ಮೂರು ರಿಯರ್‌ ಕ್ಯಾಮೆರಾ ರಚನೆ ಪಡೆದಿರಲಿದ್ದು, ಇದರ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಎರಡನೇಯ ಹಾಗೂ ಮೂರನೇ ಕ್ಯಾಮೆರಾಗಳು ಕ್ರಮವಾಗಿ 13 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಹಾಗೂ 10 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಬಲದಲ್ಲಿ ಇವೆ. ಅಲ್ಲದೇ ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ಮೊಟೊರೊಲಾ ಎಡ್ಜ್‌ 50 ನಿಯೋ ಫೋನ್‌ 4,310mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ 68 W ವೈರ್ಡ್‌ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ಪಡೆದಿದೆ. ಹಾಗೆಯೇ 15W ವೈರ್‌ಲೆಸ್ ಚಾರ್ಜಿಂಗ್‌ ಆಯ್ಕೆ ಸಹ ಇದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಡಾಲ್ಬಿ ಅಟ್ಮಾಸ್, ಎನ್‌ಎಫ್‌ಸಿ, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌ನೊಂದಿಗೆ ಡ್ಯುಯಲ್ ಸ್ಪೀಕರ್‌ಗಳನ್ನು ಪಡೆದಿದೆ.

ಬೆಲೆ ಹಾಗೂ ಲಭ್ಯತೆ

ಮೊಟೊರೊಲಾ ಎಡ್ಜ್‌ 50 ನಿಯೋ 8GB RAM + 256GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 23,999ರೂ. ಗಳು ಆಗಿದೆ. ಈ ಫೋನ್‌ ನಾಟಿಕಲ್ ಬ್ಲೂ, ಲ್ಯಾಟೆ, ಗ್ರಿಸೈಲ್ಲೆ ಮತ್ತು ಪೊಯಿನ್ಸಿಯಾನಾ ಕಲರ್‌ ಆಯ್ಕೆಗಳಲ್ಲಿ ಲಭ್ಯ. ಇನ್ನು ಈ ಫೋನ್‌ ಇದೇ ಸೆಪ್ಟೆಂಬರ್ 16 ರಂದು (ಇಂದು) ಸಂಜೆ 7 ಗಂಟೆಗೆ ವಿಶೇಷ ಸೇಲ್ ಪ್ರಾರಂಭ ಮಾಡಲಿದೆ.

Best Mobiles in India

English summary
Motorola Edge 50 Neo with MediaTek Dimensity 7300 SoC launched in India. check out all other details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+