Home
ಸುದ್ದಿಜಾಲ

ಇಂದು ಮತ್ತೆ ಮೊಟೊರೊಲಾ ಎಡ್ಜ್‌ 50 ಪ್ರೊ ಫೋನಿನ ಸ್ಪೆಷಲ್‌ ಸೇಲ್‌!..ಡಿಸ್ಕೌಂಟ್‌ ಎಷ್ಟು?

ಮೊಟೊರೊಲಾ ಮೊಬೈಲ್‌ ಕಂಪನಿಯು ಇತ್ತೀಚಿಗೆ ಬಿಡುಗಡೆ ಮಾಡಿರುವ 'ಮೊಟೊರೊಲಾ ಎಡ್ಜ್‌ 50 ಪ್ರೊ' ಮೊಬೈಲ್‌ ಈಗಾಗಲೇ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಸೇಲ್‌ ಕಂಡಿದೆ. ಈ ಫೋನ್ ಇಂದು (ಏಪ್ರಿಲ್‌ 18 ರಂದು) ಮತ್ತೆ ಸ್ಪೆಷಲ್‌ ಸೇಲ್‌ ಪ್ರಾರಂಭ ಮಾಡಲಿದೆ. ಈ ಫೋನ್‌ 3D ಕರ್ವ್‌ ಡಿಸ್‌ಪ್ಲೇ ಸೌಲಭ್ಯ ಪಡೆದುಕೊಂಡಿದೆ.

ಹೌದು, ಮೊಟೊರೊಲಾ ಎಡ್ಜ್‌ 50 ಪ್ರೊ ಫೋನ್ ಇಂದು (ಏಪ್ರಿಲ್‌ 18 ರಂದು) ಮಧ್ಯಾಹ್ನ 3 ಗಂಟೆಗೆ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಮೂಲಕ ಮತ್ತೊಮ್ಮೆ ವಿಶೇಷ ಸೇಲ್‌ ಆರಂಭಿಸಲಿದೆ. ಈ ನೂತನ ಮೊಬೈಲ್‌ 125 W ಫಾಸ್ಟ್‌ ಟರ್ಬೋ ಚಾರ್ಜಿಂಗ್‌ ಸೌಲಭ್ಯ ಸಹ ಪಡೆದು ಗ್ರಾಹಕರನ್ನು ಸೆಳೆದಿದೆ.

ಇಂದು ಮತ್ತೆ ಮೊಟೊರೊಲಾ ಎಡ್ಜ್‌ 50 ಪ್ರೊ ಸ್ಪೆಷಲ್‌ ಸೇಲ್‌!..ಡಿಸ್ಕೌಂಟ್‌ ಎಷ್ಟು?

ಅಲ್ಲದೇ ಈ ಫೋನ್‌ 4500 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದುಕೊಂಡಿದ್ದು, ಇದಲ್ಲದೇ ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್‌ 7 ಜೆನ್‌ 3 SoC ಪ್ರೊಸೆಸರ್‌ ಬಲದಲ್ಲಿ ಕೆಲಸ ಮಾಡಲಿದೆ. ಇನ್ನು ಈ ಮೊಬೈಲ್‌ನ ಆರಂಭಿಕ ಕೊಡುಗೆಯ ದರವು 27,999 ರೂ. ಆಗಿದೆ. ಇನ್ನುಳಿದಂತೆ ಮೊಟೊರೊಲಾ ಎಡ್ಜ್‌ 50 ಪ್ರೊ ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಮೊಟೊ ಎಡ್ಜ್‌ 50 ಪ್ರೊ - ಫೀಚರ್ಸ್‌ ಮಾಹಿತಿ

ಮೊಟೊರೊಲಾ ಸಂಸ್ಥೆಯ ಎಡ್ಜ್‌ 50 ಪ್ರೊ ಫೋನ್‌ 2712 × 1220 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಪೋರ್ಟ್‌ ಒಳಗೊಂಡ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದೆ. ಅಲ್ಲದೇ ಈ ಫೋನಿನ ಸ್ಕ್ರೀನ್‌ ಕಡಿಮೆ ಅಂಚಿನ ರಚನೆ ಹೊಂದಿದ್ದು, ಇದರೊಂದಿಗೆ 144 ಟ್ರೂ ಕಲರ್‌ ಡಿಸ್‌ಪ್ಲೇ ಸೌಲಭ್ಯ ಪಡೆದಿದೆ. ಹಾಗೆಯೇ ಕರ್ವ್‌ ಡಿಸ್‌ಪ್ಲೇ ರಚನೆ ಹೊಂದಿದ್ದು, ಈ ಡಿಸ್‌ಪ್ಲೇ 2000 ನಿಟ್ಸ್‌ ಬ್ರೈಟ್‌ನೆಸ್‌ ಸಪೋರ್ಟ್‌ ಸಹ ಹೊಂದಿದೆ.

ಇಂದು ಮತ್ತೆ ಮೊಟೊರೊಲಾ ಎಡ್ಜ್‌ 50 ಪ್ರೊ ಸ್ಪೆಷಲ್‌ ಸೇಲ್‌!..ಡಿಸ್ಕೌಂಟ್‌ ಎಷ್ಟು?

ಹಾಗೆಯೇ ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್‌ 7 ಜೆನ್‌ 3 SoC ಪ್ರೊಸೆಸರ್‌ ಸಾಮರ್ಥ್ಯದ ಬಲವನ್ನು ಪಡೆದಿರುವ ಮೊಟೊರೊಲಾ ಎಡ್ಜ್‌ 50 ಪ್ರೊ ಫೋನ್‌ ಆಂಡ್ರಾಯ್ಡ್‌ 14 ಓಎಸ್‌ ಸೌಲಭ್ಯ ಸಹ ಹೊಂದಿದೆ. ಇದರೊಂದಿಗೆ ಇದು 12 GB RAM ಮತ್ತು 256 GB ಆಂತರೀಕ ಸ್ಟೋರೇಜ್‌ ಆಯ್ಕೆ ಕೂಡಾ ಪಡೆದುಕೊಂಡಿದೆ.

ಮೊಟೊರೊಲಾ ಎಡ್ಜ್‌ 50 ಪ್ರೊ ಮೊಬೈಲ್‌ ಮೂರು ಕ್ಯಾಮೆರಾ ಸೆಟ್‌ಅಪ್‌ ಇದ್ದು, ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸೌಲಭ್ಯದಲ್ಲಿ ಇದೆ. ದ್ವಿತೀಯ ಹಾಗೂ ತೃತೀಯ ಕ್ಯಾಮೆರಾಗಳು ಕ್ರಮವಾಗಿ 13 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಮತ್ತು 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ರಚನೆ ಪಡೆದಿವೆ. ಹಾಗೆಯೇ ಮುಂಭಾಗದಲ್ಲಿ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಮೊಟೊರೊಲಾ ಎಡ್ಜ್‌ 50 ಪ್ರೊ ಫೋನ್‌ 4500 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯ ಹೊಂದಿದ್ದು, ಇದಕ್ಕೆ ಸಪೋರ್ಟ್‌ ಆಗಿ 125 W ಫಾಸ್ಟ್‌ ಟರ್ಬೋ ಚಾರ್ಜಿಂಗ್‌ ಆಯ್ಕೆ ಇದೆ. ಅಲ್ಲದೇ 50W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯದ ಆಯ್ಕೆ ಸಹ ಪಡೆದಿದೆ.

ಹಾಗೆಯೇ ಕನೆಕ್ಟಿವಿಟಿ ಆಯ್ಕೆ ಗಳಲ್ಲಿ ಇದು 4G, 5G, VoLTE, Vo5G, ಬ್ಲೂಟೂತ್ v5.3, ವೈಫೈ, NFC, USB C v3.2 ಆಯ್ಕೆಗಳನ್ನು ಪಡೆದುಕೊಂಡಿದೆ. ಖರೀದಿದಾರರು ಇದನ್ನು ಮೂನ್ಲೈಟ್ ಪರ್ಲ್, ಲಕ್ಸ್ ಲ್ಯಾವೆಂಡರ್ ಮತ್ತು ಬ್ಲ್ಯಾಕ್ ಬ್ಯೂಟಿ ಬಣ್ಣಗಳ ಆಯ್ಕೆ ಗಳಲ್ಲಿ ಖರೀದಿ ಮಾಡಬಹುದಾಗಿದೆ.

Best Mobiles in India

English summary
Motorola Edge 50 Pro 5G goes again Special sale today via flipkart. check offer price, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+