ನಾಳೆ 3D ಕರ್ವ್ ಡಿಸ್‌ಪ್ಲೇ ಇರುವ ಈ ಫೋನಿನ ಸ್ಪೆಷಲ್ ಸೇಲ್!..ಸಖತ್ ಆಫರ್ ಇದೆ!
ಜನಪ್ರಿಯ ಮೊಟೊರೊಲಾ ಸಂಸ್ಥೆಯು ಇತ್ತೀಚಿಗೆ ಭಾರತದಲ್ಲಿ ಬಿಡುಗಡೆ ಮಾಡಿರುವ 'ಮೊಟೊರೊಲಾ ಎಡ್ಜ್ 50 ಪ್ರೊ' ಮೊಬೈಲ್ ಈಗಾಗಲೇ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಮೂಲಕ ಮಾರಾಟ ಕಂಡಿದೆ. 3D ಕರ್ವ್ ಡಿಸ್‌ಪ್ಲೇ ರಚನೆ ಪಡೆದಿರುವ ಈ ಫೋನಿನ ಸ್ಪೆಷಲ್ ಸೇಲ್ ನಾಳೆ (ಏಪ್ರಿಲ್ 16 ರಂದು) ಮತ್ತೆ ಫ್ಲಿಪ್‌ಕಾರ್ಟ್ ವೆಬ್‌ಸೈಟ್ ಮೂಲಕ ಪ್ರಾರಂಭವಾಗಲಿದೆ.
ಈಗಾಗಲೇ ಬೆಲೆ ಹಾಗೂ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸಿದೆ. ಈ ಫೋನ್ ನಾಳೆ (ಏಪ್ರಿಲ್ 16 ರಂದು) ಮಧ್ಯಾಹ್ನ 3 ಗಂಟೆಗೆ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ವಿಶೇಷ ಸೇಲ್ ಶುರು ಮಾಡಲಿದೆ. ಅಂದಹಾಗೆ ಈ ಫೋನಿನ ಆರಂಭಿಕ ಆಫರ್ ಬೆಲೆಯು 27,999ರೂ. ಆಗಿದೆ.

ಈ ನೂತನ ಮೊಟೊರೊಲಾ ಎಡ್ಜ್ 50 ಪ್ರೊ ಫೋನ್ 4500 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯವನ್ನು ಪಡೆದುಕೊಂಡಿದೆ. ಅಲ್ಲದೇ ಈ ಫೋನ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 7 ಜೆನ್ 3 SoC ಪ್ರೊಸೆಸರ್ ಪವರ್‌ನಲ್ಲಿ ಕಾರ್ಯ ನಿರ್ವಹಿಲಸಿದೆ. ಹಾಗಾದರೇ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಮೊಟೊ ಎಡ್ಜ್ 50 ಪ್ರೊ - ಫೀಚರ್ಸ್ ಹೀಗಿವೆ
ಮೊಟೊರೊಲಾ ಸಂಸ್ಥೆಯ ಎಡ್ಜ್ 50 ಪ್ರೊ ಫೋನ್ 6.7 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದ್ದು, ಇದು 2712 × 1220 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಪೋರ್ಟ್ ಪಡೆದಿದೆ. ಇದರೊಂದಿಗೆ ಸ್ಕ್ರೀನ್ ಕಡಿಮೆ ಅಂಚಿನ ರಚನೆ ಪಡೆದಿದ್ದು, ಈ ಡಿಸ್‌ಪ್ಲೇ 144 ಟ್ರೂ ಕಲರ್ ಡಿಸ್‌ಪ್ಲೇ ಸೌಲಭ್ಯ ಒಳಗೊಂಡಿದೆ. ಹಾಗೆಯೇ ಡಿಸ್‌ಪ್ಲೇ 2000 ನಿಟ್ಸ್ ಬ್ರೈಟ್‌ನೆಸ್ ಸಪೋರ್ಟ್ ಸಹ ಪಡೆದಿದ್ದು, 3D ಕರ್ವ್ ಡಿಸ್‌ಪ್ಲೇ ರಚನೆ ಹೊಂದಿದೆ.
ಮೊಟೊ ಎಡ್ಜ್ 50 ಪ್ರೊ ಫೋನ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 7 ಜೆನ್ 3 SoC ಪ್ರೊಸೆಸರ್ ಸಾಮರ್ಥ್ಯದ ಬಲವನ್ನು ಹೊಂದಿದ್ದು, ಇದಕ್ಕೆ ಬೆಂಬಲವಾಗಿ ಆಂಡ್ರಾಯ್ಡ್ 14 ಓಎಸ್ ಸೌಲಭ್ಯ ಸಹ ಇದೆ. ಹಾಗೆಯೇ ಇದು 12 GB RAM ಮತ್ತು 256 GB ಆಂತರೀಕ ಸ್ಟೋರೇಜ್ ಆಯ್ಕೆ ಹೊಂದಿದೆ.
ಮೊಟೊ ಎಡ್ಜ್ 50 ಪ್ರೊ ಫೋನ್ ಮೂರು ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದ್ದು, ಇದರ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸೌಲಭ್ಯ ಹೊಂದಿದೆ. ದ್ವಿತೀಯ ಹಾಗೂ ಮೂರನೇ ಕ್ಯಾಮೆರಾಗಳು ಕ್ರಮವಾಗಿ 13 ಮೆಗಾ ಪಿಕ್ಸೆಲ್ ಸೆನ್ಸಾರ್ ಹಾಗೂ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇವೆ. ಇದು 50 ಮೆಗಾ ಪಿಕ್ಸೆಲ್ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಹೊಂದಿರುವುದು ಪ್ಲಸ್ ಪಾಯಿಂಟ್ ಆಗಿದೆ.
ಮೊಟೊರೊಲಾ ಎಡ್ಜ್ 50 ಪ್ರೊ ಫೋನ್ 4500 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯ ಹೊಂದಿದ್ದು, ಇದಕ್ಕೆ ಸಪೋರ್ಟ್ ಆಗಿ 125W ಫಾಸ್ಟ್ ಟರ್ಬೋ ಚಾರ್ಜಿಂಗ್ ಆಯ್ಕೆ ಇದೆ. ಅಲ್ಲದೇ 50W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯದ ಆಯ್ಕೆ ಸಹ ಪಡೆದಿದೆ. ಹಾಗೆಯೇ ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಇದು 4G, 5G, VoLTE, Vo5G, ಬ್ಲೂಟೂತ್ v5.3, ವೈಫೈ, NFC, USB-C v3.2 ಆಯ್ಕೆಗಳನ್ನು ಪಡೆದುಕೊಂಡಿದೆ.
ಅಂದಹಾಗೆ ಈ ಮೊಟೊರೊಲಾ ಎಡ್ಜ್ 50 ಪ್ರೊ ಮೊಬೈಲ್ ಆರಂಭಿಕ ಬೆಲೆಯು 29,999ರೂ. ಗಳು ಆಗಿದೆ. ಗ್ರಾಹಕರು ಈ ಫೋನ್ ಮೂನ್ಲೈಟ್ ಪರ್ಲ್, ಲಕ್ಸ್ ಲ್ಯಾವೆಂಡರ್ ಮತ್ತು ಬ್ಲ್ಯಾಕ್ ಬ್ಯೂಟಿ ಬಣ್ಣಗಳ ಆಯ್ಕೆಗಳಲ್ಲಿ ಖರೀದಿ ಮಾಡಲು ಅವಕಾಶ ಇದ್ದು, ನಾಳೆ ಸ್ಪೆಷಲ್ ಸೇಲ್ ಪ್ರಾರಂಭವಾಗಲಿದೆ.


Click it and Unblock the Notifications








