Home
ಮೊಬೈಲ್

Motorola: ಲಾಂಚ್ ಆಗಲಿದೆ ಹೊಸ ಮೊಟೊ ಫೋನ್! 125W ಚಾರ್ಜಿಂಗ್ ಬೆಂಬಲ, ಟ್ರಿಪಲ್ ಕ್ಯಾಮೆರಾ

ಮೊಟೊರೊಲಾ (Motorola) ಫೋನ್‌ಗಳಿಗೆ ಭಾರತದಲ್ಲಿ ಭರ್ಜರಿ ಬೇಡಿಕೆ ಇದೆ. ಈ ಫೋನ್‌ಗಳಲ್ಲಿ ವಿಶೇಷ ಫೀಚರ್ಸ್ ಆಯ್ಕೆ ಇದ್ದು, ಈ ಮೂಲಕ ಬಳಕೆದಾರರು ಭಿನ್ನ ಅನುಭವ ಪಡೆಯುತ್ತಿದ್ದಾರೆ. ಈ ನಡುವೆ ಮೊಟೊರೊಲಾ ಮಗದೊಂದು ಫೋನ್‌ ಅನ್ನು ಅನಾವರಣ ಮಾಡಲಿದೆ. ಅದೂ ಸಹ 125W ಚಾರ್ಜಿಂಗ್ ಬೆಂಬಲದೊಂದಿಗೆ.

ಹೌದು, ಮೊಟೊರೊಲಾ ಕೆಲವೇ ದಿನಗಳಲ್ಲಿ ಮೊಟೊ X50 ಅಲ್ಟ್ರಾ (Moto X50 Ultra) ಸ್ಮಾರ್ಟ್‌ಫೋನ್ ಅನ್ನು ಚೀನಾದಲ್ಲಿ ಲಾಂಚ್‌ ಮಾಡಲಿದೆ ಎನ್ನಲಾಗಿದೆ. ಈ ಮೊಟೊ X50 ಅಲ್ಟ್ರಾ ಫೋನ್ ಅನ್ನು ಮೊಟೊರೊಲಾ ಎಡ್ಜ್‌ 50 ಪ್ರೊ (Motorola Edge 50 Pro) ಎಂದು ಹೆಸರಿಸಿ ಜಾಗತಿಕ ಮಾರುಕಟ್ಟೆ ಮತ್ತು ಭಾರತೀಯ ಮಾರುಕಟ್ಟೆಗಳಲ್ಲಿ ಲಾಂಚ್‌ ಮಾಡಲಾಗುವುದು ಎಂದು ತಿಳಿದುಬಂದಿದೆ. ಹಾಗಿದ್ರೆ, ಈ ಸ್ಮಾರ್ಟ್‌ಪೋನ್‌ ಏನೆಲ್ಲಾ ಫೀಚರ್ಸ್‌ ಪಡೆದಿದೆ ಬನ್ನಿ ನೋಡೋಣ.

ಲಾಂಚ್ ಆಗಲಿದೆ ಹೊಸ ಮೊಟೊ ಫೋನ್! 125W ಚಾರ್ಜಿಂಗ್ ಬೆಂಬಲ, ಟ್ರಿಪಲ್ ಕ್ಯಾಮೆರಾ

ಮೊಟೊ X50 ಅಲ್ಟ್ರಾ ಸ್ಮಾರ್ಟ್‌ಫೋನ್: ಮೋಟೋ X50 ಅಲ್ಟ್ರಾ ಶೀಘ್ರದಲ್ಲೇ ಲಾಂಚ್‌ ಆಗಲಿದೆ. ಈ ಫೋನ್‌ ಅನ್ನು ಇತ್ತೀಚೆಗೆ ಅಧಿಕೃತವಾಗಿ ಲೇವಡಿ ಮಾಡಲಾಗಿದೆ. ಕಂಪನಿಯ ಟೀಸರ್ ಫೋನ್‌ನ ವಿನ್ಯಾಸದ ಬಗ್ಗೆ ಸುಳಿವು ನೀಡಿದ್ದು, ಇದು ಹಿಂದಿನ ಮಾದರಿಗಳ ವಿನ್ಯಾಸಕ್ಕಿಂತ ಭಿನ್ನವಾಗಿರಬಹುದು ಎನ್ನಲಾಗಿದೆ. ವೈಬೋ ಪೋಸ್ಟ್‌ನಲ್ಲಿ ಮೊಟೊರೊಲಾ ಹಂಚಿಕೊಂಡ ಟೀಸರ್ ವಿಡಿಯೋದಲ್ಲಿ ಮುಂಬರುವ ಮೊಟೊ X50 ಅಲ್ಟ್ರಾವನ್ನು ಫಾರ್ಮುಲಾ 1 ಕ್ಲಿಪ್‌ಗಳೊಂದಿಗೆ ಜೋಡಿಸಲಾಗಿದೆ ಎಂದು ತೋರಿಸಲಾಗಿದೆ.

ವಿಡಿಯೋದಲ್ಲಿ ಕಾಣಿಸುವಂತೆ ಬ್ಲ್ಯಾಕ್‌, ಫಾಕ್ಸ್ ಲೆದರ್ ಫಿನಿಶ್‌ನೊಂದಿಗೆ ಮೊಟೊ X50 ಅಲ್ಟ್ರಾವನ್ನು ನಾವು ನೋಡಬಹುದಾಗಿದೆ. ಆಯತಾಕಾರದ ಹಿಂಬದಿಯ ಕ್ಯಾಮೆರಾ ಮಾಡ್ಯೂಲ್ ಕಾಣಿಸಿಕೊಂಡಿದ್ದು, ಉಳಿದಂತೆ ಸ್ಪ್ಲಿಟ್ ವಾಲ್ಯೂಮ್ ಕೀಗಳು ಮತ್ತು ಪವರ್ ಬಟನ್ ಹ್ಯಾಂಡ್‌ಸೆಟ್‌ನ ಬಲಭಾಗದಲ್ಲಿ ಕಾಣಿಸಿಕೊಂಡಿದೆ.

ಲಾಂಚ್ ಆಗಲಿದೆ ಹೊಸ ಮೊಟೊ ಫೋನ್! 125W ಚಾರ್ಜಿಂಗ್ ಬೆಂಬಲ, ಟ್ರಿಪಲ್ ಕ್ಯಾಮೆರಾ

ಕಂಪನಿಯು ಫೋನ್ ಅನ್ನು ಎಐ ಮೊಬೈಲ್ ಫೋನ್ (AI mobile phone) ಎಂದು ಹೆಸರಿಸಿದೆ. ಆದ್ದರಿಂದ ಇದು ಎಐ ಬೆಂಬಲಿತ ಫೀಚರ್ಸ್‌ನೊಂದಿಗೆ ಬರಲಿದೆ ಎನ್ನಲಾಗಿದೆ. ಹಾಗಿದ್ರೆ, ಬನ್ನಿ ಮೊಟೊರೊಲಾ ಎಡ್ಜ್‌ 50 ಪ್ರೊ ಸ್ಮಾರ್ಟ್‌ಫೋನ್‌ ಏನೆಲ್ಲಾ ಫೀಚರ್ಸ್‌ ಪಡೆದಿರಲಿದೆ ಅನ್ನೋ ಲೀಕ್‌ ಮಾಹಿತಿಯನ್ನು ಗಮನಿಸೋಣ ಬನ್ನಿ.

ಮೊಟೊರೊಲಾ ಎಡ್ಜ್‌ 50 ಪ್ರೊ ಸ್ಮಾರ್ಟ್‌ಫೋನ್ 125W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ ಎನ್ನಲಾಗಿದೆ. ಇದರಿಂದ ಕ್ಷಣಮಾತ್ರದಲ್ಲಿ ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡಬಹುದಾಗಿದೆ. ಇದರೊಂದಿಗೆ ಈ ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್‌ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆಯಲಿದೆ ಎನ್ನಲಾಗಿದೆ.

ಹಾಗೆಯೇ ಸ್ನಾಪ್‌ಡ್ರಾಗನ್ ಪ್ರೊಸೆಸರ್‌ ಬಲದಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದ್ದು, ಅಲೋಲೆಡ್‌ ಡಿಸ್‌ಪ್ಲೇ ಹೊಂದಿರಲಿದೆ ಎಂದು ತಿಳಿದುಬಂದಿದೆ. ವಿಶೇಷವಾಗಿ ಇದು ಸುಧಾರಿತ ಫೀಚರ್ಸ್‌ನೊಂದಿಗೆ ಬಜೆಟ್ ಬೆಲೆಯಲ್ಲಿ ಬಿಡುಗಡೆಯಾಗುವುದರಿಂದ ಫೋನ್ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುವ ಸಾಧ್ಯತೆ ಇದೆ.

ಇದಕ್ಕೂ ಮೊದಲು ಮೊಟೊರೊಲಾ ಮೊಟೊ X40 (Moto X40) ಮಾದರಿಗೆ ಕೆಲವು ಸಣ್ಣ ಬದಲಾವಣೆ ಮಾಡುವ ಮೂಲಕ ಮೊಟೊ ಎಡ್ಜ್ 40 ಪ್ರೊ (Moto Edge 40 Pro) ಅನ್ನು ಜಾಗತಿಕವಾಗಿ ಲಾಂಚ್‌ ಮಾಡಲಾಗಿದೆ. ಗಮನಾರ್ಹವಾಗಿ, ಮೊಟೊ X40 ಸ್ನಾಪ್‌ಡ್ರಾಗನ್ 8 ಜನ್ 2 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 50 ಮೆಗಾಪಿಕ್ಸೆಲ್‌ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಯೂನಿಟ್ ಪಡೆದಿದ್ದು, 60 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.

ಲಾಂಚ್ ಆಗಲಿದೆ ಹೊಸ ಮೊಟೊ ಫೋನ್! 125W ಚಾರ್ಜಿಂಗ್ ಬೆಂಬಲ, ಟ್ರಿಪಲ್ ಕ್ಯಾಮೆರಾ

ಹಾಗೆಯೇ ಈ ಫೋನ್ 6.7 ಇಂಚಿನ ಫುಲ್‌ ಹೆಚ್‌ಡಿ+ ಕರ್ವ್ಡ್ ಅಮೋಲೆಡ್‌ ಡಿಸ್‌ಪ್ಲೇ ಮತ್ತು 4,600mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಕಾಣಿಸಿಕೊಂಡಿದ್ದು, ಇದು 125W ಚಾರ್ಜಿಂಗ್‌ ಬೆಂಬಲ ಪಡೆದುಕೊಂಡಿದೆ. ಜೊತೆಗೆ ಆಂಡ್ರಾಯ್ಡ್ 13 ಆಧಾರಿತ MyUI 5.0 ಅನ್ನು ಈ ಫೋನ್ ರನ್‌ ಮಾಡಲಿದೆ.

Best Mobiles in India

English summary
Motorola will launch the Moto X50 Ultra smartphone in China in a few days, and the same phone will be launched in the Indian markets under the name of Motorola Edge 50 Pro.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+