Home
ಸುದ್ದಿಜಾಲ

Motorola Edge 50 ಖರೀದಿಸಲು ಇದುವೇ ಬೆಸ್ಟ್‌ ಟೈಮ್‌; ದೊಡ್ಡ ಡಿಸ್ಕೌಂಟ್‌ ಲಭ್ಯ!

ಜನಪ್ರಿಯ ಮೊಟೊರೊಲಾ (Motorola) ಸಂಸ್ಥೆಯ ಎಡ್ಜ್ ಸರಣಿಯ ಕೆಲವು ಮೊಬೈಲ್‌ಗಳ ಆ ಪೈಕಿ ಮೊಟೊರೊಲಾ ಎಡ್ಜ್‌ 50 (Motorola Edge 50) ಅತ್ಯುತ್ತಮ ಫೀಚರ್ಸ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಈ ಮೊಬೈಲ್‌ ಸ್ನ್ಯಾಪ್‌ಡ್ರಾಗನ್‌ 7 ಜೆನ್‌ 1 ಪ್ರೊಸೆಸರ್‌ ಸೌಲಭ್ಯ ಒಳಗೊಂಡಿದ್ದು, ಕರ್ವ್ಡ್‌ ಡಿಸ್‌ಪ್ಲೇ ಪಡೆದಿದೆ. ಇದೀಗ ಈ ಮೊಬೈಲ್‌ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಗಮನಾರ್ಹ ಬೆಲೆ ಕಡಿತ ಪಡೆದಿದ್ದು, ಖರೀದಿದಾರರು ಅಚ್ಚರಿ ಪಡುವಂತೆ ಆಗಿದೆ.

ಹೌದು, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಸದ್ಯ 'ಸ್ಮಾರ್ಟ್‌ಫೋನ್‌ ಫೆಸ್ಟಿವಲ್‌ ಸೇಲ್‌' ಲೈವ್‌ ಇದೆ. ಈ ಸೇಲ್‌ನಲ್ಲಿ ಮೊಟೊರೊಲಾ ಎಡ್ಜ್‌ 50 (Motorola Edge 50) ಮೊಬೈಲ್‌ ಶೇ. 18% ರಷ್ಟು ನೇರ ಡಿಸ್ಕೌಂಟ್‌ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನಿನ 8 GB RAM + 256 GB ಸ್ಟೋರೇಜ್‌ ವೇರಿಯಂಟ್‌ ಆಫರ್‌ನಲ್ಲಿ 26,999ರೂ. ಗಳ ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಹಾಗೆಯೇ ಹೆಚ್ಚುವರಿಯಾಗಿ ಕೆಲವು ಆಯ್ದ ಬ್ಯಾಂಕ್‌ಗಳಿಂದ ರಿಯಾಯಿತಿ ಸಹ ಪಡೆಯಬಹುದಾಗಿದೆ.

Motorola Edge 50 ಖರೀದಿಸಲು ಇದುವೇ ಬೆಸ್ಟ್‌ ಟೈಮ್‌; ದೊಡ್ಡ ಡಿಸ್ಕೌಂಟ್‌ ಲಭ್ಯ!

ಮೊಟೊರೊಲಾ ಎಡ್ಜ್‌ 50 ಮೊಬೈಲ್‌ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ನ ಪ್ರಾಥಮಿಕ ಕ್ಯಾಮೆರಾ ಒಳಗೊಂಡಿದ್ದು, ಜೊತೆಗೆ 32 ಮೆಗಾ ಪಿಕ್ಸೆಲ್‌ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಪಡೆದಿದೆ. ಇದರ ಜೊತೆಗೆ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಮೊಟೊರೊಲಾ ಎಡ್ಜ್‌ 50 ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಪಡೆದಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಮೊಟೊರೊಲಾ ಎಡ್ಜ್‌ 50 - ಫೀಚರ್ಸ್‌

ಮೊಟೊರೊಲಾ ಎಡ್ಜ್‌ 50 ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದ್ದು, ಈ ಡಿಸ್‌ಪ್ಲೇಯು 1200 x 2780 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಪೋರ್ಟ್‌ ಮಾಡಲಿದೆ. ಇದಲ್ಲದೆ ಡಿಸ್‌ಪ್ಲೇ 144 ಟ್ರೂ ಕಲರ್‌ ಡಿಸ್‌ಪ್ಲೇ ಸೌಲಭ್ಯ ಪಡೆದಿದ್ದು, ಇದರ ಜೊತೆಗೆ ಡಿಸ್‌ಪ್ಲೇ 2500 ನಿಟ್ಸ್‌ ಬ್ರೈಟ್‌ನೆಸ್‌ ಸಪೋರ್ಟ್‌ ಮಾಡಲಿದೆ. ಇದಲ್ಲದೇ 3D ಕರ್ವ್‌ ಡಿಸ್‌ಪ್ಲೇ ರಚನೆ ಅನ್ನು ಪಡೆದಿದೆ. ಇದು 1,900 ನಿಟ್ಸ್ ಪೀಕ್ ಬ್ರೈಟ್‌ನೆಸ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಪಡೆದಿದೆ.

ಮೊಟೊರೊಲಾ ಎಡ್ಜ್‌ 50 ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 7 ಜೆನ್‌ 1 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್ ಸಹ ಇದೆ. ಇದರ ಜೊತೆಗೆ 8GB RAM + 256GB ಸ್ಟೋರೇಜ್‌ನ ವೇರಿಯಂಟ್‌ ಆಯ್ಕೆ ಸಹ ಪಡೆದುಕೊಂಡಿದೆ.

ಮೊಟೊರೊಲಾ ಎಡ್ಜ್‌ 50 ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದಿದ್ದು, ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಎರಡನೇ ಹಾಗೂ ಮೂರನೇ ಕ್ಯಾಮೆರಾಗಳು ಕ್ರಮವಾಗಿ 13 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಮತ್ತು 10 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇವೆ. ಮುಂಭಾಗದಲ್ಲಿ 32 ಮೆಗಾ ಪಿಕ್ಸೆಲ್‌ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ.

ಮೊಟೊರೊಲಾ ಎಡ್ಜ್‌ 50 ಫೋನ್‌ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, ಇದಕ್ಕೆ ಪೂರಕವಾಗಿ 68 W ಫಾಸ್ಟ್‌ ಟರ್ಬೋ ಚಾರ್ಜಿಂಗ್‌ ಸೌಲಭ್ಯ ಪಡೆದಿದೆ. ಹಾಗೆಯೇ 15W ವೈರ್‌ಲೆಸ್ ಮತ್ತು 5W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್‌ ಆಯ್ಕೆಗಳು ಇವೆ. ಇನ್ನು ಮೊಬೈಲ್‌ ಜಂಗಲ್ ಗ್ರೀನ್ ಮತ್ತು ಪ್ಯಾಂಟೋನ್ ಪೀಚ್ ಫಜ್ ಬಣ್ಣಗಳು ವೆಗನ್‌ ಲೆದರ್ ಬ್ಯಾಕ್‌ನೊಂದಿಗೆ ಬರುತ್ತವೆ ಹಾಗೂ ಕೋಲಾ ಗ್ರೇ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
Motorola Edge 50 received 18 percent Price Drop on Flipkart india. check out mobile, offer price, discount and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+