Home
ಸುದ್ದಿಜಾಲ

ನಾಳೆ ಗ್ರ್ಯಾಂಡ್‌ ಎಂಟ್ರಿ ಕೊಡಲಿದೆ ಮೊಟೊರೊಲಾ ಎಡ್ಜ್‌ 50 ಅಲ್ಟ್ರಾ ಫೋನ್‌!..ಖರೀದಿಗೆ ಕ್ಯೂ ಗ್ಯಾರಂಟಿ!

ಜನಪ್ರಿಯ ಮೊಟೊರೊಲಾ ಸಂಸ್ಥೆಯ ಬಹುನಿರೀಕ್ಷಿತ ಹೊಸ ಮೊಟೊರೊಲಾ ಎಡ್ಜ್‌ 50 ಅಲ್ಟ್ರಾ 5G ( Motorola Edge 50 Ultra 5G ) ಸ್ಮಾರ್ಟ್‌ಫೋನ್‌ ನಾಳೆ (ಜೂನ್‌ 18 ರಂದು) ದೇಶಿಯ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಈ ನೂತನ ಸ್ಮಾರ್ಟ್‌ಫೋನ್ ಸ್ಟೈಲಿಶ್‌ ಡಿಸೈನ್‌ ಮತ್ತು ಕೆಲವು ಆಕರ್ಷಕ ಫೀಚರ್ಸ್‌ಗಳಿಂದಾಗಿ ಈಗಾಗಲೇ ಮೊಬೈಲ್‌ ಪ್ರಿಯ ಗ್ರಾಹಕರ ಗಮನ ಸೆಳೆದುಕೊಂಡಿದೆ. ಇದು ಮೊಟೊ AI ಸೌಲಭ್ಯ ಪಡೆದಿದ್ದು, ಇದರೊಂದಿಗೆ 100X AI ಜೂಮ್‌ ಆಯ್ಕೆಯನ್ನು ಪಡೆದಿರುವುದು ಖಚಿತ ಎನ್ನಲಾಗಿದೆ.

ಹೌದು, ಮೊಟೊರೊಲಾ ಎಡ್ಜ್‌ 50 ಅಲ್ಟ್ರಾ 5G ಸ್ಮಾರ್ಟ್‌ಫೋನ್‌ ಭಾರತೀಯ ಮಾರುಕಟ್ಟೆಯಲ್ಲಿ ನಾಳೆ ಲಾಂಚ್ ಆಗಲಿದೆ. ಈ ಮೊಬೈಲ್‌ ಬಿಡುಗಡೆ ಕುರಿತಾಗಿ ದೈತ್ಯ ಇ ಕಾಮರ್ಸ್‌ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ಮೈಕ್ರೋ ಪೇಜ್‌ ಪ್ರಾರಂಭ ಮಾಡಿದೆ. ಇನ್ನು ಈ ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 8s ಜೆನ್‌ 3 ಪ್ರೊಸೆಸರ್‌ ಪವರ್‌ನಲ್ಲಿ ಕಾರ್ಯ ನಿರ್ವಹಿಸುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ನಾಳೆ ಗ್ರ್ಯಾಂಡ್‌ ಎಂಟ್ರಿ ಕೊಡಲಿದೆ ಮೊಟೊರೊಲಾ ಎಡ್ಜ್‌ 50 ಅಲ್ಟ್ರಾ ಫೋನ್‌!

ಹಾಗೆಯೇ ಈ ಫೋನ್‌ ಟ್ರಿಪಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇರಲಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾ ಕೂಡಾ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸೌಲಭ್ಯದಲ್ಲಿ ಇರಲಿದೆ ಎಂದು ಹೇಳಲಾಗಿದೆ. ಹಾಗಾದರೇ ಮೊಟೊರೊಲಾ ಎಡ್ಜ್‌ 50 ಅಲ್ಟ್ರಾ 5G ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಸಲಾಗಿದೆ ಓದಿರಿ.

ಮೊಟೊರೊಲಾ ಎಡ್ಜ್‌ 50 ಅಲ್ಟ್ರಾ 5G ನಿರೀಕ್ಷಿತ ಫೀಚರ್ಸ್‌
ಮೊಟೊರೊಲಾ ಎಡ್ಜ್‌ 50 ಅಲ್ಟ್ರಾ ಮೊಬೈಲ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಒಳಗೊಂಡಿರಲಿದ್ದು, ಈ ಡಿಸ್‌ಪ್ಲೇಯು 1200 x 2780 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಬೆಂಬಲಿಸಲಿದೆ. ಇದಲ್ಲದೆ ಡಿಸ್‌ಪ್ಲೇ 144 ಟ್ರೂ ಕಲರ್‌ ಡಿಸ್‌ಪ್ಲೇ ಸೌಲಭ್ಯ ಪಡೆದಿರಲಿದ್ದು, ಇದರ ಜೊತೆಗೆ ಡಿಸ್‌ಪ್ಲೇ 2500 ನಿಟ್ಸ್‌ ಬ್ರೈಟ್‌ನೆಸ್‌ ಸಪೋರ್ಟ್‌ ಬರಲಿದ್ದು, 3D ಕರ್ವ್‌ ಡಿಸ್‌ಪ್ಲೇ ರಚನೆ ಅನ್ನು ಹೊಂದಿರಲಿದೆ.

ಮೊಟೊರೊಲಾ ಎಡ್ಜ್‌ 50 ಅಲ್ಟ್ರಾ ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 8s ಜೆನ್‌ 3 ಪ್ರೊಸೆಸರ್‌ ಸಪೋರ್ಟ್‌ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಬೆಂಬಲ ಇರಲಿದೆ. ಇದರೊಂದಿಗೆ 12 GB RAM ಮತ್ತು 256 GB ಆಂತರೀಕ ಸ್ಟೋರೇಜ್‌ ಆಯ್ಕೆ ಸಹ ಪಡೆದಿರಲಿದೆ. ಇನ್ನು ಎಸ್‌ಡಿ ಕಾರ್ಡ್‌ ಸ್ಲಾಟ್‌ ಸೌಲಭ್ಯ ಅಲಭ್ಯ ಎಂದು ಹೇಳಲಾಗುತ್ತಿದೆ.

ಮೊಟೊರೊಲಾ ಎಡ್ಜ್‌ 50 ಅಲ್ಟ್ರಾ ಮೊಬೈಲ್‌ ಮೂರು ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದಿರಲಿದ್ದು, ಇದರ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಆಗಿರಲಿದೆ. ಸೆಕೆಂಡರಿ ಹಾಗೂ ತೃತೀಯ ಕ್ಯಾಮೆರಾಗಳು ಕ್ರಮವಾಗಿ 64 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಹಾಗೂ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಇರಲಿದೆ. ವಿಶೇಷ ಅಂದ್ರೆ, ಇದು 50  ಮೆಗಾಪಿಕ್ಸೆಲ್‌ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಪಡೆದಿರಲಿದೆ.

ಮೊಟೊರೊಲಾ ಎಡ್ಜ್‌ 50 ಅಲ್ಟ್ರಾ ಮೊಬೈಲ್‌ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ 125W ಫಾಸ್ಟ್‌ ಟರ್ಬೋ ಚಾರ್ಜಿಂಗ್‌ ಸೌಲಭ್ಯ ಪಡೆದಿರಲಿದೆ. ಹಾಗೆಯೇ 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸುವ ಇರುವ ನಿರೀಕ್ಷೆಯಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 4G, 5G, VoLTE, Vo5G, ಬ್ಲೂಟೂತ್ v5.3, ವೈಫೈ, NFC, USB-C v3.2 ಆಯ್ಕೆಗಳು ಇರಲಿವೆ.

ಇನ್ನು ಮೊಟೊರೊಲಾ ಎಡ್ಜ್‌ 50 ಅಲ್ಟ್ರಾ ಸ್ಮಾರ್ಟ್‌ಫೋನ್‌ ನಾಳೆ (ಜೂನ್ 18 ರಂದು) ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸಲಿದೆ. ಈ ಫೋನ್‌ ವೈಟ್‌, ಪಿಂಕ್ ಹಾಗೂ ಬ್ಲ್ಯಾಕ್‌ ಕಲರ್‌ ಆಯ್ಕೆಗಳಲ್ಲಿ ಎಂಟ್ರಿ ಕೊಡುವ ನಿರೀಕ್ಷೆಗಳು ಇವೆ. ಅಂದಹಾಗೆ ಈ ಫೋನ್‌ ಮಿಡ್‌ರೇಂಜ್‌ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಳ್ಳಲಿದೆ.

Best Mobiles in India

English summary
Motorola Edge 50 Ultra 5G is launching in India Tomorrow: Expected Specifications and more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+