Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್‌ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
ಮೊಟೊರೊಲಾ (Motorola) ಸ್ಮಾರ್ಟ್‌ಫೋನ್‌ಗಳು ಸ್ಮಾರ್ಟ್‌ಫೋನ್ ವಲಯದಲ್ಲಿ ವಿಶೇಷ ಸ್ಥಾನ ಮಾನ ಪಡೆದುಕೊಂಡಿವೆ. ಅಂದರೆ ಈ ಫೋನ್‌ಗಳಿಗೆ ಭಾರತದಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದ್ದು, ಜನರು ಇವುಗಳನ್ನು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಈ ಬೆಳವಣಿಗೆ ನಡುವೆ ಮೊಟೊರೊಲಾ ಎಡ್ಜ್ 50 ಅಲ್ಟ್ರಾ (Motorola Edge 50 Ultra) ಸ್ಮಾರ್ಟ್‌ಫೋನ್ ಫೀಚರ್ಸ್ ಲೀಕ್ ಆಗಿದೆ.
ಹೌದು, ಇದೀಗ ಬಹು ನಿರೀಕ್ಷಿತ ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್‌ಫೋನ್ ಸಂಬಂಧ ಕೆಲವು ಮಾಹಿತಿ ಲೀಕ್ ಆಗಿವೆ. ಈ ಲೀಕ್ ಫೀಚರ್ಸ್ ನಿಜವೇ ಆದರೆ ಸ್ಮಾರ್ಟ್‌ಫೋನ್ ವಲಯದಲ್ಲಿ ಈ ಫೋನ್ ಸುಮಾಮಿಯನ್ನೇ ಎಬ್ಬಿಸಲಿದೆ. ಹಾಗಿದ್ರೆ, ಯಾವೆಲ್ಲಾ ಫೀಚರ್ಸ್ ಅನ್ನು ಈ ಫೋನ್ ಹೊಂದಿರಲಿದೆ?, ಯಾವಾಗ ಲಾಂಚ್ ಆಗಲಿದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಮೊಟೊರೊಲಾ ಎಡ್ಜ್ 50 ಅಲ್ಟ್ರಾ: ಏಪ್ರಿಲ್ 3 ರಂದು ಮೊಟೊರೊಲಾ ಮೊಟೊರೊಲಾ ಭಾರತದಲ್ಲಿ ಸ್ನಾಪ್‌ಡ್ರಾಗನ್ 7 ಜನ್ 3 ಹೊಂದಿರುವ ಮೊಟೊರೊಲಾ ಎಡ್ಜ್ 50 ಸರಣಿಯನ್ನು ಲಾಂಚ್ ಮಾಡಲಿದ್ದು, ಈ ಸರಣಿಯಲ್ಲಿ ಎಡ್ಜ್ 50 ಫ್ಯೂಷನ್ ಮತ್ತು ಎಡ್ಜ್ 50 ಅಲ್ಟ್ರಾದಂತಹ ವೇರಿಯಂಟ್ ಫೋನ್‌ಗಳನ್ನು ಕಾಣಬಹುದಾಗಿದೆ. ಇನ್ನು ಈ ಅಲ್ಟ್ರಾ ವೇರಿಯಂಟ್ ಅನ್ನು ಚೀನಾದಲ್ಲಿ ಮೊಟೊ X50 ಅಲ್ಟ್ರಾ ಮತ್ತು ಯುಎಸ್‌ನಲ್ಲಿ ಮೊಟೊರೊಲಾ ಎಡ್ಜ್+ 2024 ಎಂದು ಕರೆಯುವ ಸಾಧ್ಯತೆಯಿದೆ.
ಅಲ್ಲದೆ ಈ ಸ್ಮಾರ್ಟ್‌ಫೋನ್ ಸಂಬಂಧ ಆಂಡ್ರಾಯ್ಡ್ ಹೆಡ್‌ಲೈನ್ಸ್ (Android Headlines) ವರದಿ ಮಾಡಿದ್ದು, ಎಡ್ಜ್ 50 ಅಲ್ಟ್ರಾದ ವಿನ್ಯಾಸ ಮತ್ತು ಬಣ್ಣ ಆಯ್ಕೆಗಳನ್ನು ಬಹಿರಂಗಪಡಿಸಿದೆ. ಇದರ ಜೊತೆಗೆ, ಚೀನಾದ ಲೀಕರ್ ಈ ಫೋನ್‌ನ ಕೆಲವು ಪ್ರಮುಖ ಫೀಚರ್ಸ್ ಬಗ್ಗೆಯೂ ಮಾಹಿತಿ ನೀಡಿದೆ. ಅಂದರೆ ಈ ಲೀಕ್ ಆಧಾರದ ಮೇಲೆ ಮೊಟೊರೊಲಾ ಎಡ್ಜ್ 50 ಅಲ್ಟ್ರಾ/ಮೊಟೊ X50 ಅಲ್ಟ್ರಾ ನ ಡಿಸ್ಪ್ಲೇ 1.5K ರೆಸಲ್ಯೂಶನ್ ಅನ್ನು ಬೆಂಬಲಿಸುತ್ತದೆ ಎಂದು ತಿಳಿದುಬಂದಿದೆ.

ಇದರ ಜೊತೆಗೆ f/1.4 ದ್ಯುತಿರಂಧ್ರದೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಆಯ್ಕೆ ಪಡೆದಿದೆ ಎನ್ನಲಾಗಿದ್ದು, ಅಲ್ಟ್ರಾ-ವೈಡ್ ಲೆನ್ಸ್ ಮತ್ತು 50 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾದೊಂದಿಗೆ 72mm ಫೋಕಲ್ ಲೆಂತ್ ಮತ್ತು 3x ಅಥವಾ 5x ಆಪ್ಟಿಕಲ್ ಜೂಮ್‌ನೊಂದಿಗೆ ಕಾಣಿಸಿಕೊಳ್ಳಲಿವೆ ಎಂದು ಈ ಲೀಕ್ ಮಾಹಿತಿಯಿಂದ ತಿಳಿದುಬಂದಿದೆ.
ಇದರ ಜೊತೆಗೆ ಸ್ನಾಪ್‌ಡ್ರಾಗನ್ 8s ಜನ್ 3 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಫೋನ್ ಹೊಂದಿರಲಿದೆ ಎಂದು ಹೇಳಲಾಗಿದೆ. ಅಲ್ಲದೆ 50W ವೈರ್‌ಲೆಸ್ ಚಾರ್ಜಿಂಗ್ ಮತ್ತು 125W ವೈರ್ಡ್ ಚಾರ್ಜಿಂಗ್ ಅನ್ನು ಈ ಫೋನ್ ಬೆಂಬಲಿಸುತ್ತದೆ ಎಂದು ಲೀಕ್ ಮಾಹಿತಿಯಲ್ಲಿ ಉಲ್ಲೇಖ ಮಾಡಲಾಗಿದ್ದು, ಇದು ಎಡ್ಜ್ 50 ಪ್ರೊ ನಂತಹ ಹಲೋ ಯುಐ ಆಧಾರಿತ ಆಂಡ್ರಾಯ್ಡ್ 14 ನಲ್ಲಿ ರನ್ ಆಗುವ ನಿರೀಕ್ಷೆಯಿದೆ.

ಎಲ್ಲಕ್ಕಿಂತ ಮಿಗಿಲಾಗಿ ಈ ಸ್ಮಾರ್ಟ್‌ಫೋನ್ ಕರ್ವ್ಡ್ ಅಂಚಿನ OLED ಡಿಸ್‌ಪ್ಲೇ ಆಯ್ಕೆ ಪಡೆದಿರಲಿದೆ ಎಂದು ತಿಳಿದುಬದಿದ್ದು, ರಿಯರ್ ಪ್ಯಾನೆಲ್ ಮೂರು ಕ್ಯಾಮೆರಾಗಳಿಗಾಗಿ ವಿಶೇಷ ಶೈಲಿ ಪಡೆದುಕೊಂಡಿದೆ.ಇದರ ಜೊತೆಗೆ ಲೇಸರ್ ಆಟೋಫೋಕಸ್ ಯುನಿಟ್, ಮೈಕ್ರೊಫೋನ್ ಮತ್ತು ಟ್ರಿಪಲ್ ಎಲ್ಇಡಿ ಫ್ಲ್ಯಾಶ್ ಅನ್ನು ಈ ಫೋನ್ ಹೊಂದಿರುವ ಸಾಧ್ಯತೆ ಇದೆ. ಹಾಗೆಯೇ ಎಡ್ಜ್ 50 ಅಲ್ಟ್ರಾದ ಬಲ ಅಂಚಿನಲ್ಲಿ ವಾಲ್ಯೂಮ್ ಮತ್ತು ಪವರ್‌ಗಾಗಿ ಬಟನ್ ಆಯ್ಕೆಯನ್ನು ಕಾಣಬಹುದಾಗಿದೆ.
ಉಳಿದಂತೆ ಈ ಸ್ಮಾರ್ಟ್‌ಫೋನ್‌ನ ಕೆಳಭಾಗದ ಅಂಚಿನಲ್ಲಿ ಸ್ಪೀಕರ್ ಗ್ರಿಲ್, ಯುಎಸ್ ಬಿ ಟೈಪ್ ಸಿ ಪೋರ್ಟ್, ಮೈಕ್ರೊಫೋನ್ ಮತ್ತು ಸಿಮ್ ಸ್ಲಾಟ್ ಅನ್ನು ಕಾಣಬಹುದು. ಹಾಗೆಯೇ ಬಹಿರಂಗವಾದ ಫೋಟೋ ಗಮನಿಸಿದ್ರೆ ಈ ಸ್ಮಾರ್ಟ್‌ಫೋನ್ ಪೀಚ್ ಫಜ್, ಬ್ಲ್ಯಾಕ್ ಮತ್ತು ಲೈಟ್ ಬೀಜ್‌ನಂತಹ ಮೂರು ಬಣ್ಣದ ಆಯ್ಕೆಯಲ್ಲಿ ಲಭ್ಯ ಇರಲಿದೆ ಎಂದು ತಿಳಿದುಬಂದಿದೆ.


Click it and Unblock the Notifications








