Home
ಸುದ್ದಿಜಾಲ

Motorola: ಶೀಘ್ರದಲ್ಲೇ ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಲಾಂಚ್‌... ನಿರೀಕ್ಷಿತ ಫೀಚರ್ಸ್‌ ಏನು?

ಮೊಟೊರೊಲಾ ಸ್ಮಾರ್ಟ್‌ಫೋನ್‌ಗಳು (Motorola smartphones) ವಿವಿಧ ಫೀಚರ್ಸ್‌ ಆಯ್ಕೆ ಮೂಲಕ ಬಳಕೆದಾರರ ಭಿನ್ನ ಅನುಭವ ನೀಡುತ್ತವೆ. ಅದರಂತೆ ಈಗ ಶೀಘ್ರದಲ್ಲೆ ಭಾರತದಲ್ಲಿ ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಲಾಂಚ್‌ (Motorola Edge 50 Ultra Launch) ಆಗಲಿದೆ ಎಂದು ತಿಳಿದುಬಂದಿದೆ.

ಹೌದು, ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್‌ಫೋನ್ ಬಿಐಎಸ್ ಪ್ರಮಾಣೀಕರಣ ಸೈಟ್‌ನಲ್ಲಿ ಕಾಣಿಸಿಕೊಂಡಿದ್ದು, 6.7 ಇಂಚಿನ ಸೂಪರ್ ಹೆಚ್‌ಡಿ ಪೋಲೆಡ್ ಡಿಸ್‌ಪ್ಲೇ, ಸ್ನಾಪ್‌ಡ್ರಾಗನ್ 8s ಜನ್ 3 ಪ್ರೊಸೆಸರ್‌ ಬಲ ಪಡೆದಿರಲಿದೆ ಎನ್ನಲಾಗಿದ್ದು, ಟ್ರಿಪಲ್ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿರಲಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಈ ಫೋನ್‌ ಏನೆಲ್ಲಾ ಫೀಚರ್ಸ್‌ ಪಡೆದಿರಲಿದೆ?, ಯಾವಾಗ ಲಾಂಚ್‌ ಆಗಲಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಶೀಘ್ರದಲ್ಲೇ ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಲಾಂಚ್‌... ನಿರೀಕ್ಷಿತ ಫೀಚರ್ಸ್‌ ಏನು?

ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್‌ಫೋನ್: ಮೊಟೊರೊಲಾ ಇತ್ತೀಚಿನ ಪ್ರೀಮಿಯಂ ಸ್ಮಾರ್ಟ್‌ಫೋನ್, ಎಡ್ಜ್ 50 ಅಲ್ಟ್ರಾ ಅಂತಿಮವಾಗಿ ಭಾರತಕ್ಕೆ ಬರಬಹುದು ಎಂದು ಟೆಕ್ ಔಟ್‌ಲುಕ್‌ನ ಇತ್ತೀಚಿನ ವರದಿಯು ಬಿಐಎಸ್‌ ಪ್ರಮಾಣೀಕರಣ ವೆಬ್‌ಸೈಟ್‌ನಲ್ಲಿ ಮಾದರಿ ಸಂಖ್ಯೆ XT2401-1 ನೊಂದಿಗೆ ಸ್ಮಾರ್ಟ್‌ಫೋನ್ ಅನ್ನು ಗುರುತಿಸಿದೆ. ಏಷ್ಯಾ, ಯುರೋಪ್, ಲ್ಯಾಟಿನ್ ಅಮೇರಿಕಾ ಮತ್ತು ಓಷಿಯಾನಿಯಾದ ಕೆಲವು ಮಾರುಕಟ್ಟೆಗಳಲ್ಲಿ ಮೊಟೊರೊಲಾ ಎಡ್ಜ್ 50 ಅಲ್ಟ್ರಾವನ್ನು ಬಿಡುಗಡೆ ಮಾಡಿದ ಸ್ವಲ್ಪ ಸಮಯದ ನಂತರ ಈ ಸುದ್ದಿ ಬಂದಿದೆ.

ಮೊಟೊರೊಲಾ ಎಡ್ಜ್‌ 50 ಅಲ್ಟ್ರಾ ಫೀಚರ್ಸ್: ಮೊಟೊರೊಲಾ ಎಡ್ಜ್‌ 50 ಅಲ್ಟ್ರಾದ ಭಾರತೀಯ ಆವೃತ್ತಿಯ ಬಗ್ಗೆ ಮೊಟೊರೊಲಾ ಯಾವುದೇ ಅಧಿಕೃತ ಪ್ರಕಟಣೆಗಳನ್ನು ಮಾಡಿಲ್ಲವಾದರೂ, ಸ್ಮಾರ್ಟ್‌ಫೋನ್‌ನ ಯುರೋಪಿಯನ್ ಆವೃತ್ತಿಯ ನೋಟವು ಅಂತಿಮವಾಗಿ ಅದರ ಭಾರತೀಯ ಪ್ರತಿರೂಪಕ್ಕೆ ದಾರಿ ಮಾಡಿಕೊಡುವ ಫೀಚರ್ಸ್‌ಗಳ ಕಲ್ಪನೆಯನ್ನು ನಮಗೆ ನೀಡುತ್ತದೆ.

ಅದರಂತೆ ಮೊಟೊರೊಲಾ ಎಡ್ಜ್‌50 ಅಲ್ಟ್ರಾ ಸ್ಮಾರ್ಟ್‌ಫೋನ್ 2712 x 1220 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ ಕಾಣಿಸಿಕೊಳ್ಳಲಿದೆ ಎನ್ನಲಾಗಿದ್ದು, 144Hz ರಿಫ್ರೆಶ್ ರೇಟ್‌ ಬೆಂಬಲದೊಂದಿಗೆ ಕಾಣಿಸಿಕೊಳ್ಳಬಹುದು ಎನ್ನಲಾಗಿದೆ.

ಶೀಘ್ರದಲ್ಲೇ ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಲಾಂಚ್‌... ನಿರೀಕ್ಷಿತ ಫೀಚರ್ಸ್‌ ಏನು?

ಇದರ ಜೊತೆಗೆ 6.7 ಇಂಚಿನ ಸೂಪರ್ ಹೆಚ್‌ಡಿ ಪೋಲೆಡ್ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎಂದು ತಿಳಿದುಬಂದಿದ್ದು, ಸ್ಮಾರ್ಟ್‌ಫೋನ್ 2800 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌, 360Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಮತ್ತು HDR10+ ಪ್ರಮಾಣೀಕರಣವನ್ನು ಪಡೆದಿರಲಿದೆ ಎಂದು ಹೇಳಲಾಗಿದೆ. ಇದರ ಜೊತೆಗೆ ಎಡ್ಜ್ 50 ಅಲ್ಟ್ರಾ ಮುಂಭಾಗದಲ್ಲಿ 3D ಕಾರ್ನಿಂಗ್ ಗೊರಿಲ್ಲಾ ವಿಕ್ಟಸ್ ರಕ್ಷಣೆಯಿಂದ ರಕ್ಷಿಸಲ್ಪಟ್ಟಿದೆ.

ಈಗಾಗಲೇ ಲಾಂಚ್‌ ಆಗಿರುವ ಫೋನ್‌ನಲ್ಲಿ ಎಡ್ಜ್ 50 ಅಲ್ಟ್ರಾ ಫ್ರೇಮ್ ಸ್ಯಾಂಡ್‌ಬ್ಲಾಸ್ಟೆಡ್ ಅಲ್ಯೂಮಿನಿಯಂನಿಂದ ನಿರ್ಮಾಣ ಆಗಿದ್ದು, ಫೋನ್ IP68 ನೀರು ಮತ್ತು ಧೂಳಿನ ರಕ್ಷಣೆಯನ್ನು ಸಹ ಪಡೆದುಕೊಂಡಿದೆ.

ಈ ಫೋನ್‌ನ ಪ್ರೊಸೆಸರ್ ವಿಚಾರಕ್ಕೆ ಬಂದರೆ ಅಡ್ರಿನೋ 735 ಜಿಪಿಯು ಬಲದೊಂದಿಗೆ ಕಾಣಿಸಿಕೊಳ್ಳಲಿದೆ ಎನ್ನಲಾಗಿದ್ದು, ಸ್ನಾಪ್‌ಡ್ರಾಗನ್ 8s ಜನ್‌ 3 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಈ ಫೋನ್ 16GB ವರೆಗೆ LPDDR5X RAM ಮತ್ತು 1TB ವರೆಗಿನ UFS 4.0 ಇಂಟರ್‌ ಸ್ಟೋರೇಜ್‌ ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯ ಇರಲಿದೆ.

ಶೀಘ್ರದಲ್ಲೇ ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಲಾಂಚ್‌... ನಿರೀಕ್ಷಿತ ಫೀಚರ್ಸ್‌ ಏನು?

ಇನ್ನು ಎಡ್ಜ್ 50 ಅಲ್ಟ್ರಾ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆದಿರಲಿದೆ ಎನ್ನಲಾಗಿದ್ದು, ಇದರಲ್ಲಿ 50 ಮೆಗಾಪಿಕ್ಸೆಲ್‌ ಪ್ರಾಥಮಿಕ ಸೆನ್ಸರ್‌, 3x ಆಪ್ಟಿಕಲ್ ಜೂಮ್‌ನೊಂದಿಗೆ 64 ಮೆಗಾಪಿಕ್ಸೆಲ್‌ ಟೆಲಿಫೋಟೋ ಲೆನ್ಸ್ ಮತ್ತು 50 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಆಯ್ಕೆ ಪಡೆದಿರಲಿದೆ ಎನ್ನಲಾಗಿದ್ದು, ಸೆಲ್ಫಿಗಳು ಮತ್ತು ವಿಡಿಯೋ ಕರೆಗಾಗಿ 50 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.

ಇದರ ಜೊತೆಗೆ ಈ ಫೋನ್‌ನ ಬ್ಯಾಟರಿ ವಿಚಾರಕ್ಕೆ ಬಂದರೆ 4500mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿರಲಿದ್ದು, ಇದನ್ನು 125W ವೈರ್ಡ್ ಚಾರ್ಜರ್ ಅಥವಾ 50W ವೈರ್ಲೆಸ್ ಚಾರ್ಜರ್ ಬಳಸಿ ಚಾರ್ಜ್ ಮಾಡಬಹುದು. ಈ ಮೂಲಕ ಕ್ಷಣಮಾತ್ರದಲ್ಲಿ ಚಾರ್ಜಿಂಗ್‌ ಮಾಡಬಹುದಾಗಿದೆ.

Best Mobiles in India

English summary
Motorola Edge 50 Ultra smartphone has appeared on the BIS certification site and is said to be powered by a 6.7-inch Super HD display, Snapdragon 8s Gen 3 processor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+