ಇಂದು Motorola Edge 60 Fusion ಲಾಂಚ್; ಸ್ಟೈಲಿಶ್ ಲುಕ್.. ಭರಪೂರ ವೈಶಿಷ್ಟ್ಯಗಳು.. ಬೆಲೆ ಎಷ್ಟು?
ಮೊಟೊರೊಲಾ ಇಂದು ಹೊಸ ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಇದು ಮೊಟೊರೊಲಾ ಎಡ್ಜ್ 60 ಫ್ಯೂಷನ್ 5G (Motorola Edge 60 Fusion 5G) ಹೆಸರಿನೊಂದಿಗೆ ದೇಶೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಈ ಮೊಬೈಲ್ ಪ್ರೀಮಿಯಂ ಸ್ಮಾರ್ಟ್‌ಫೋನ್ ಆಗಿದೆ. ಈಗಾಗಲೇ ತನ್ನ ಸ್ಟೈಲಿಶ್ ಲುಕ್ ಮತ್ತು ಉತ್ತಮ ವೈಶಿಷ್ಟ್ಯಗಳ ಮೂಲಕ ಮೊಬೈಲ್ ಪ್ರಿಯರ ಗಮನ ಸೆಳೆದಿದೆ. ಈಗಾಗಲೇ ಈ ಫೋನಿನ ಪ್ರಮುಖ ವಿಶೇಷತೆಗಳನ್ನು ಕಂಪನಿ ಬಹಿರಂಗಪಡಿಸಿದೆ. ಈ ಹೊಸ ಮೊಬೈಲ್ ನಿರೀಕ್ಷಿತ ಬೆಲೆ, ವಿಶೇಷತೆಗಳು ಮತ್ತು ಇನ್ನಿತರ ವಿವರಗಳು ಇಲ್ಲಿವೆ.
ಮೊಟೊರೊಲಾ ಎಡ್ಜ್ 60 ಫ್ಯೂಷನ್ ಎಐ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7400 ಪ್ರೊಸೆಸರ್ ಹೊಂದಿರಲಿದೆ. ಈ ಫೋನಿನಲ್ಲಿ 50MP ಮುಖ್ಯ ಕ್ಯಾಮೆರಾ ಮತ್ತು 32MP ಸೆಲ್ಫಿ ಕ್ಯಾಮೆರಾ ಇರುತ್ತದೆ. ಈ ಫೋನ್ 6.7 ಇಂಚಿನ 1.5K ಕರ್ವ್ಡ್ ಡಿಸ್ಪ್ಲೇ ಹೊಂದಿರಲಿದೆ. ಇದರೊಂದಿಗೆ 5500mAh ಬ್ಯಾಟರಿ, 68W ವೇಗದ ಚಾರ್ಜಿಂಗ್, 12GB RAM + 256GB ಸ್ಟೋರೇಜ್ ಮತ್ತು IP69 ರೇಟಿಂಗ್ ಸೇರಿದಂತೆ ಹಲವು ಲಭ್ಯವಿರುತ್ತದೆ.

ಮೊಟೊರೊಲಾ ಎಡ್ಜ್ 60 ಫ್ಯೂಷನ್ ಲಾಂಚ್ ಈವೆಂಟ್ ಲೈವ್
ಮೊಟೊರೊಲಾ ಎಡ್ಜ್ 60 ಫ್ಯೂಷನ್ 5G ಫೋನ್ ಇಂದು (ಏಪ್ರಿಲ್ 2) ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ ಅಧಿಕೃತವಾಗಿ ಲಾಂಚ್ ಆಗಲಿದೆ. ಈ ಮೂಲಕ ಫೋನಿನ ಬೆಲೆ ಮತ್ತು ಮಾರಾಟದ ವಿವರಗಳನ್ನು ಬಹಿರಂಗವಾಗಲಿವೆ. ಕಂಪನಿಯ ವೆಬ್‌ಸೈಟ್‌ನಲ್ಲಿ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನಿನ ಮೈಕ್ರೋ ಸೈಟ್ ಅನ್ನು ಲೈವ್ ಮಾಡಲಾಗಿದೆ. ಅಲ್ಲಿ ಲಾಂಚ್ ಈವೆಂಟ್ ಲೈವ್ ಮಾಡಲಾಗುವುದು. ನೀವು ಮೊಟೊರೊಲಾ ಇಂಡಿಯಾದ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿಯೂ ಈ ಸಮಾರಂಭವನ್ನು ವೀಕ್ಷಿಸಬಹುದು.
ಮೊಟೊರೊಲಾ ಎಡ್ಜ್ 60 ಫ್ಯೂಷನ್ ವೈಶಿಷ್ಟ್ಯಗಳು
ನಿರೀಕ್ಷಿತ ಡಿಸ್ಪ್ಲೇ
ಮೊಟೊರೊಲಾ ಎಡ್ಜ್ 60 ಫ್ಯೂಷನ್ 5G ಫೋನ್ 6.7 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿರಲಿದೆ. ಇದು 1.5K ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ ಸಂಪೂರ್ಣ ಬಾಗಿದ ಡಿಸ್ಪ್ಲೇ ಆಗಿದೆ. ಈ ಸ್ಕ್ರೀನ್ 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಇದರೊಂದಿಗೆ ಗೊರಿಲ್ಲಾ ಗ್ಲಾಸ್ 7i ರಕ್ಷಣೆನ್ನು ಹೊಂದಿದೆ.
ಸಂಭಾವ್ಯ ಪ್ರೊಸೆಸರ್
ಮೊಟೊರೊಲಾ ಎಡ್ಜ್ 60 ಫ್ಯೂಷನ್ 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7400 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿರುತ್ತದೆ. ಈ ಪ್ರೊಸೆಸರ್ ಹೊಂದಿರುವ ಭಾರತದಲ್ಲಿ ಮೊದಲ ಫೋನ್ ಇದಾಗಿದೆ ಎಂದು ಕಂಪನಿ ಹೇಳಿದೆ. ಈ ಮೊಬೈಲ್ 3 ವರ್ಷಗಳ ಆಂಡ್ರಾಯ್ಡ್ ಓಎಸ್ ಮತ್ತು 4 ವರ್ಷಗಳ ಭದ್ರತಾ ನವೀಕರಣಗಳೊಂದಿಗೆ ಬರುತ್ತದೆ. ಈ ಫೋನ್ 8GB RAM ಮತ್ತು 12GB RAM ಹೊಂದಿರಲಿದೆ. ಇದರೊಂದಿಗೆ 256GB ಸ್ಟೋರೇಜ್ ಇರಲಿದೆ. ನೀವು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 1 TB ವರೆಗೆ ಸ್ಟೋರೇಜ್ ವಿಸ್ತರಿಸಬಹುದು.
ಹೇಗಿರಲಿದೆ ಕ್ಯಾಮೆರಾ ಸೆಟಪ್
ಮೊಟೊರೊಲಾ ಎಡ್ಜ್ 60 ಫ್ಯೂಷನ್ 5G ಮೊಬೈಲ್‌ನಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅಳವಡಿಸಲಾಗುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು LED ಫ್ಲ್ಯಾಷ್ ಲೈಟ್ ಜೊತೆಗೆ ಬರುತ್ತದೆ. ಇದರೊಂದಿಗೆ 13 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು ಮ್ಯಾಕ್ರೋ ಲೆನ್ಸ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಒಳಗೊಂಡಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಮೊಟೊರೊಲಾ ಎಡ್ಜ್ 60 ಫ್ಯೂಷನ್ 5G ಸ್ಮಾರ್ಟ್‌ಫೋನ್ 5,500mAh ಸಾಮರ್ಥ್ಯದ ಬ್ಯಾಟರಿ ಹೊಂದಿರಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 68W ವೇಗದ ಚಾರ್ಜಿಂಗ್ ತಂತ್ರಜ್ಞಾನ ನೀಡಲಾಗುವುದು. ಈ ಮೊಬೈಲ್ ಮೋಟೋ ಗೆಸ್ಚರ್ ಮತ್ತು ಎಐ ಫೀಚರ್ ಒಳಗೊಂಡಿರಲಿದೆ. ಇದು ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ IP69 ರೇಟಿಂಗ್ ಮತ್ತು ವಾಟರ್ ಟಚ್ 3.0 ವೈಶಿಷ್ಟ್ಯ ಹೊಂದಿದೆ.


Click it and Unblock the Notifications








