Home
ಸುದ್ದಿಜಾಲ

ಜಸ್ಟ್‌ 7,299ರೂ.ಗೆ ಲಭ್ಯ ಈ ಫೋನ್‌!..5000mAh ಬ್ಯಾಟರಿ, 50MP ಕ್ಯಾಮೆರಾ ಸೌಲಭ್ಯ!

ದೈತ್ಯ ಆನ್‌ಲೈನ್‌ ಶಾಪಿಂಗ್‌ ತಾಣ ಎಂದೇ ಬಿಂಬಿತವಾಗಿರುವ ಫ್ಲಿಪ್‌ಕಾರ್ಟ್‌ ಆಕರ್ಷಕ ಡಿಸ್ಕೌಂಟ್‌ ನೀಡುತ್ತದೆ. ಅದರಲ್ಲಿಯೂ ಮುಖ್ಯವಾಗಿ ಸ್ಮಾರ್ಟ್‌ಫೋನ್‌ ಒಂದಿಲ್ಲೊಂದು ವಿಶೇಷ ರಿಯಾಯಿತಿ ನೀಡಿ ಗಮನ ಸೆಳೆಯುತ್ತದೆ. ಹೀಗೆ ಇದೀಗ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಮೊಟೊರೊಲಾ ಸಂಸ್ಥೆಯ ಮೊಟೊರೊಲಾ G04s ( Motorola g04s ) ಮೊಬೈಲ್‌ ಸಖತ್ ರಿಯಾಯಿತಿ ಪಡೆದಿದ್ದು, ಎಂಟ್ರಿ ಲೆವೆಲ್‌ ವಿಭಾಗದಲ್ಲಿ ಹೊಸ ಫೋನ್‌ ಖರೀದಿಸುವವರ ಗ್ರಾಹಕರು ಹಬ್ಬೇರಿಸುವಂತೆ ಮಾಡಿದೆ.

ಹೌದು, ಫ್ಲಿಪ್‌ಕಾರ್ಟ್‌ ತಾಣದಲ್ಲಿ ಇದೀಗ ಮೊಟೊರೊಲಾ G04s ( Motorola g04s ) ಫೋನ್‌ ಶೇ. 27% ರಷ್ಟು ನೇರ ಡಿಸ್ಕೌಂಟ್‌ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈ ಮೊಬೈಲ್‌ನ 4 GB RAM + 64 GB ಸ್ಟೋರೇಜ್‌ ವೇರಿಯಂಟ್‌ ಕೊಡುಗೆಯಲ್ಲಿ 7,299 ರೂ. ಗಳ ಪ್ರೈಸ್‌ಟ್ಯಾಗ್‌ನಲ್ಲಿ ಖರೀದಿಗೆ ಲಭ್ಯ ಇದೆ. ಅಲ್ಲದೇ ಹೆಚ್ಚುವರಿಯಾಗಿ ಕೆಲವು ಆಯ್ದ ಬ್ಯಾಂಕ್‌ಗಳಿಂದ ರಿಯಾಯಿತಿ ಸಹ ಪಡೆಯಲು ಚಾನ್ಸ್‌ ಇದೆ.

ಜಸ್ಟ್‌ 7,299ರೂ.ಗೆ ಲಭ್ಯ ಈ ಫೋನ್‌!..5000mAh ಬ್ಯಾಟರಿ, 50MP ಕ್ಯಾಮೆರಾ ಸೌಲಭ್ಯ

ಹಾಗೆಯೇ ಮೊಟೊರೊಲಾ G04s ಫೋನ್‌ ಕಾನ್ಕಾರ್ಡ್ ಬ್ಲಾಕ್, ಸೀ ಗ್ರೀನ್, ಸ್ಯಾಟಿನ್ ಬ್ಲೂ ಮತ್ತು ಸನ್‌ರೈಸ್ ಆರೆಂಜ್ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಅಲ್ಲದೇ ಈ ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದೆ. ಇನ್ನುಳಿದಂತೆ ಮೊಟೊರೊಲಾ G04s ( Motorola g04s ) ಫೋನ್‌ ಇತರೆ ಫೀಚರ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಮೊಟೊರೊಲಾ G04s - ಫೀಚರ್ಸ್‌

ಮೊಟೊರೊಲಾ G04s ಫೋನ್‌ 6.56 ಇಂಚಿನ ಹೆಚ್‌ಡಿ + ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಫೋನ್ ಡಿಸ್‌ಪ್ಲೇ 1,612 x 720 ಪಿಕ್ಸಲ್‌ ರೆಸಲ್ಯೂಶನ್‌ ಸೌಲಬ್ಯ ಪಡೆದಿದೆ. 90Hz ರಿಫ್ರೆಶ್ ರೇಟ್‌ ಆಯ್ಕೆಯೊಂದಿಗೆ, ಗೊರಿಲ್ಲಾ ಗ್ಲಾಸ್‌ 3 ರಕ್ಷಣೆ ಸಹ ಪಡೆದುಕೊಂಡಿದೆ.

ಮೊಟೊರೊಲಾ G04s ಫೋನ್‌ ಆಕ್ಟಾ ಕೋರ್ Unisoc T606 ಚಿಪ್‌ಸೆಟ್ ಪ್ರೊಸೆಸರ್ ಮೂಲಕ ಕೆಲಸ ನಿರ್ವಹಿಸಲಿದ್ದು, ಆಂಡ್ರಾಯ್ಡ್‌ 14 ಓಎಸ್ ಅನ್ನು ಬೆಂಬಲ ಸಹ ಪಡೆದಿದೆ. ಇದರೊಂದಿಗೆ 4 GB RAM + 64 GB ವೇರಿಯಂಟ್‌ ಆಯ್ಕೆ ಒಳಗೊಂಡಿದ್ದು, ಇದರ ಜೊತೆಗೆ ಮೈಕ್ರೊ ಎಸ್‌ಡಿ ಕಾರ್ಡ್‌ ಬಳಕೆ ಮಾಡಿಕೊಂಡು 1 TB ವರೆಗೆ ಸ್ಟೋರೇಜ್‌ ಹೆಚ್ಚಿಗೆ ಮಾಡಿಕೊಳ್ಳಲು ಅವಕಾಶ ಇದೆ.

ಕ್ಯಾಮೆರಾ ರಚನೆ

ಮೊಟೊರೊಲಾ G04s ಮೊಬೈಲ್‌ ಹಿಂಭಾಗದಲ್ಲಿ ಸಿಂಗಲ್‌ ಕ್ಯಾಮೆರಾ ರಚನೆ ಪಡೆದಿದ್ದು, ಅದು 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸೌಲಭ್ಯದಲ್ಲಿ ಇದೆ. ಇದರೊಂದಿಗೆ ಎಲ್‌ಇಡಿ ಫ್ಲ್ಯಾಶ್‌ ಲೈಟ್ ಸಪೋರ್ಟ್‌ ಪಡೆದಿದೆ. ಇನ್ನು ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್ 5 ಮೆಗಾ ಪಿಕ್ಸೆಲ್‌ ಕ್ಯಾಮೆರಾ ನೀಡಲಾಗಿದೆ.

ಬ್ಯಾಟರಿ ಬ್ಯಾಕ್‌ಅಪ್‌

ಮೊಟೊರೊಲಾ G04s ಮೊಬೈಲ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಜೊತೆಗೆ 15W ಚಾರ್ಜಿಂಗ್ ಬೆಂಬಲ ಪಡೆದಿದೆ. ಅಲ್ಲದೇ ಇದು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಜೊತೆಗೆ 3.5 ಎಂಎಂ ಆಡಿಯೊ ಜಾಕ್ ಅನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ ಫೈ, ಜಿಪಿಎಸ್, ಬ್ಲೂಟೂತ್ 5.0 ಮತ್ತು ಯುಎಸ್‌ಬಿ ಟೈಪ್ ಸಿ ಆಯ್ಕೆಗಳನ್ನು ಪಡೆದಿದೆ. ಇನ್ನು ಈ ಮೊಬೈಲ್‌ ಕಾನ್ಕಾರ್ಡ್ ಬ್ಲಾಕ್, ಸೀ ಗ್ರೀನ್, ಸ್ಯಾಟಿನ್ ಬ್ಲೂ ಮತ್ತು ಸನ್‌ರೈಸ್ ಆರೆಂಜ್ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಆಗಲಿದೆ.

Best Mobiles in India

English summary
Motorola g04s price drops in Flipkart India. check out offer price and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+