Home
ಸುದ್ದಿಜಾಲ

ಮೊಟೊ G13 ಫೋನ್‌ಗೆ ಈಗ ಸಖತ್ ರಿಯಾಯಿತಿ!..ಖರೀದಿಗೆ ಬೆಸ್ಟ್‌ ಟೈಮ್‌!

ಮೊಟೊರೊಲಾ ಕಂಪನಿಯು ಮೊಟೊ G13 ಸ್ಮಾರ್ಟ್‌ಫೋನ್‌ ಈಗ ಆಕರ್ಷಕ ದರದಲ್ಲಿ ಖರೀದಿಗೆ ಲಭ್ಯವಿದೆ. ಈ ಮೊಬೈಲ್‌ ಫೋನ್‌ ಜನಪ್ರಿಯ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ದೊಡ್ಡ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ಗ್ರಾಹಕರಿಗೆ ಖುಷಿ ನೀಡಿದೆ.

ಹೌದು, ಮೊಟೊರೊಲಾ ಸಂಸ್ಥೆಯ ಮೊಟೊ G13 ಫೋನ್‌ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಈಗ 28% ರಷ್ಟು ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈ ಮೊಬೈಲ್‌ನ 4 GB RAM +128 GB ROM ಆಂತರೀಕ ಸಂಗ್ರಹದ ವೇರಿಯಂಟ್‌ ಬೆಲೆಯು 13,999ರೂ. ದರ ಹೊಂದಿದ್ದು, ಆಫರ್‌ನಲ್ಲಿ ಇದು 9,999ರೂ. ದರದಲ್ಲಿ ಖರೀದಿಗೆ ಲಭ್ಯ ಇದೆ. ಹಾಗೆಯೇ ಕೆಲವು ಆಯ್ದ ಬ್ಯಾಂಕ್ ಗಳ ಕೊಡುಗೆ ಸಹ ಗ್ರಾಹಕರಿಗೆ ಖಚಿತವಾಗಿ ದೊರೆಯುತ್ತದೆ.

ಮೊಟೊ G13 ಫೋನ್‌ಗೆ ಈಗ ಸಖತ್ ರಿಯಾಯಿತಿ!..ಖರೀದಿಗೆ ಬೆಸ್ಟ್‌ ಟೈಮ್‌!

ಈ ಮೊಬೈಲ್‌ ಬಜೆಟ್‌ ವಿಭಾಗದಲ್ಲಿ ಕಾಣಿಸಿಕೊಂಡಿದ್ದರೂ, ಆಫರ್‌ನಲ್ಲಿ ಈಗ ಅಗ್ಗದ ಪ್ರೈಸ್‌ಟ್ಯಾಗ್ ಪಡೆದಿದೆ. ಇನ್ನು ಇದು ಮೀಡಿಯಾ ಟೆಕ್ ಹಿಲಿಯೊ G85 SoC ಪ್ರೊಸೆಸರ್‌ ಪವರ್‌ ಅನ್ನು ಒಳಗೊಂಡಿದ್ದು, ಇದರೊಂದಿಗೆ 5000 mAh ಬ್ಯಾಟರಿ ಸಾಮರ್ಥ್ಯದ ಪವರ್‌ ಪಡೆದಿದೆ. ಇನ್ನುಳಿದಂತೆ ಮೊಟೊ G13 ಫೋನ್‌ ಮೊಬೈಲ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಮೊಟೊ G13 ಡಿಸ್‌ಪ್ಲೇ ಹೇಗಿದೆ ಮತ್ತು ವಿನ್ಯಾಸ ಏನು : ಈ ಸ್ಮಾರ್ಟ್‌ಫೋನ್ 6.5 ಇಂಚಿನ IPS LCD ಹೆಚ್‌ಡಿ+ ರೆಸಲ್ಯೂಶನ್‌ ಡಿಸ್‌ಪ್ಲೇ ಪಡೆದಿದ್ದು, ಇದು 576Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಹೊಂದಿದೆ. ಹಾಗೆಯೇ 90Hz ರಿಫ್ರೆಶ್ ರೇಟ್‌ ಆಯ್ಕೆಯೊಂದಿಗೆ ಈ ಡಿಸ್‌ಪ್ಲೇ ಪಾಂಡ ಗ್ಲಾಸ್ ರಕ್ಷಣೆಯನ್ನು ಹೊಂದಿದೆ.

ಮೊಟೊ G13 ಪ್ರೊಸೆಸರ್‌ ಪವರ್‌ ಯಾವುದು : ಮೊಟೊ G13 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ G85 SoC ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದ್ದು, ಆಂಡ್ರಾಯ್ಡ್‌ 13 ಓಎಸ್‌ ನಲ್ಲಿ ರನ್ ಆಗುತ್ತದೆ. ಇದರೊಂದಿಗೆ 4 GB RAM ಹಾಗೂ 128 GB ಇಂಟರ್‌ ಸ್ಟೋರೇಜ್‌ ಆಯ್ಕೆ ನೀಡಲಾಗಿದ್ದು, ಈ ಸ್ಟೋರೇಜ್‌ ಅನ್ನು ವಿಸ್ತರಣೆ ಮಾಡಿಕೊಳ್ಳಲು ಎಸ್‌ಡಿ ಕಾರ್ಡ್‌ ಸ್ಲಾಟ್‌ ಆಯ್ಕೆ ಅನ್ನು ಪಡೆದಿದೆ.

ಮೊಟೊ G13 ಡ್ಯುಯಲ್‌ ಕ್ಯಾಮೆರಾ ಸೆನ್ಸಾರ್ ರಚನೆ : ಈ ಸ್ಮಾರ್ಟ್‌ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ಅದರಲ್ಲಿ 50 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2 ಮೆಗಾ ಪಿಕ್ಸೆಲ್ ಸೆಕೆಂಡರಿ ಸೆನ್ಸರ್‌ ಹಾಗೂ 2 ಮೆಗಾ ಪಿಕ್ಸೆಲ್ ಸೆನ್ಸರ್‌ ಅನ್ನು ಹೊಂದಿದೆ. ಜೊತೆಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್ 8 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿದೆ.

ಮೊಟೊ G13 ಬ್ಯಾಟರಿ ಬ್ಯಾಕ್‌ಅಪ್‌ ಬಲ ಹೇಗಿದೆ: ಮೊಟೊ G13 ಫೋನ್‌ನ ಬ್ಯಾಟರಿ ಬ್ಯಾಕ್‌ಅಪ್‌ ಬಲ ಮಾಹಿತಿ ನೋಡುವುದಾದರೆ, ಈ ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿಯಿಂದ ಭರ್ತಿ ಆಗಿದ್ದು, 10W ಚಾರ್ಜಿಂಗ್‌ ಬೆಂಬಲ ಪಡೆದಿದೆ. ತನ್ನ ವರ್ಗದಲ್ಲೇ ಇದು ಉತ್ತಮ ಎಂದು ಹೇಳಬಹುದಾಗಿದೆ.

ಮೊಟೊ G13 ಇತರೆ ಸೌಲಭ್ಯಗಳು: ಈ ಫೋನ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ ಆಯ್ಕೆ ಹೊಂದಿದ್ದು, ಚಾರ್ಜಿಂಗ್‌ ಗಾಗಿ ಯುಎಸ್‌ಬಿ ಟೈಪ್‌ ಸಿ ಚಾರ್ಜಿಂಗ್ ಪೋರ್ಟ್‌ ಹೊಂದಿದೆ. ಇದರೊಂದಿಗೆ ಡ್ಯುಯಲ್ 4G VoLTE, ವೈ ಫೈ 802.11 ac (2.4GHz + 5GHz), ಬ್ಲೂಟೂತ್ ಆವೃತ್ತಿ 5.1, ಜಿಪಿಎಸ್‌ ಹೊಂದಿದ್ದು, 3.5 ಎಂಎಂ ಆಡಿಯೊ ಜಾಕ್, ಸ್ಟಿರಿಯೊ ಸ್ಪೀಕರ್‌ ಗಳು, ಡಾಲ್ಬಿ ಅಟ್ಮಾಸ್ ಸೌಂಡ್‌ ನೊಂದಿಗೆ IP52 ರೇಟಿಂಗ್‌ ಪಡೆದಿದೆ.

Best Mobiles in India

English summary
Motorola G13 available at great discount on Flipkart: offer price and specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+