ಇಂದು ಮೊಟೊ G24 ಪವರ್ ಸೇಲ್!..ಅಗ್ಗದ ಬೆಲೆಗೆ ಖರೀದಿಸಬಹುದು!
ಜನಪ್ರಿಯ ಮೊಬೈಲ್ ಬ್ರ್ಯಾಂಡ್ ಮೊಟೊ ಸಂಸ್ಥೆಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಮೊಟೊ G24 ಪವರ್ ಸ್ಮಾರ್ಟ್‌ಫೋನ್ ಫೋನ್ ತನ್ನ ಫೀಚರ್ಸ್‌ಗಳಿಂದ ಬಜೆಟ್ ದರದಲ್ಲಿ ಆಕರ್ಷಕ ಫೋನ್ ಎನಿಸಿದೆ. ಈ ಫೋನ್ ಇಂದು (ಫೆಬ್ರವರಿ 7 ರಂದು) ಅಧಿಕೃತ ಫ್ಲಿಪ್‌ಕಾರ್ಟ್ (Flipkart) ಇಂಡಿಯಾ ಪ್ಲಾಟ್‌ಫಾರ್ಮ್ ಮೂಲಕ ಮಾರಾಟ ಶುರು ಮಾಡಲಿದೆ.
ಹೌದು, ಮೊಟೊ G24 ಪವರ್ ಸ್ಮಾರ್ಟ್‌ಫೋನ್ ಇಂದು ಫಸ್ಟ್ ಸೇಲ್ ಪ್ರಾರಂಭ ಮಾಡಲಿದೆ. ಈ ಫೋನ್ 4 GB RAM + 128 GB ವೇರಿಯಂಟ್ ಆಯ್ಕೆ ಪಡೆದಿದ್ದು, ಮೀಡಿಯಾ ಟೆಕ್ ಹಿಲಿಯೋ G85 12nm ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದೆ.

ಮೊಟೊ G24 ಪವರ್ ಫೋನಿನ ಆರಂಭಿಕ ವೇರಿಯಂಟ್ ಬೆಲೆಯು 8,999ರೂ. ಆಗಿದ್ದು, 8GB RAM ವೇರಿಯಂಟ್ ದರವು 9,999ರೂ. ಆಗಿದೆ. ಹಾಗೆಯೇ ಫ್ಲಿಪ್‌ಕಾರ್ಟ್ ತಾಣದಲ್ಲಿ ಕೆಲವು ರಿಯಾಯಿತಿ ಆಫರ್ ಕೂಡಾ ಖರೀದಿದಾರರಿಗೆ ಸಿಗಲಿವೆ. ಹಾಗಾದರೆ ಮೊಟೊ G24 ಪವರ್ ಫೋನಿನ ಇತರೆ ಫೀಚರ್ಸ್ ಯಾವುವು ಹಾಗೂ ಆಫರ್ ಏನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಮೊಟೊ G24 ಪವರ್ ಮೊಬೈಲ್ - ಫೀಚರ್ಸ್
ಮೊಟೊ ಕಂಪನಿಯ ಈ ಮೊಬೈಲ್ 6.6 ಇಂಚಿನ ಹೆಚ್‌ಡಿ + ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಫೋನ್ 90Hz ರಿಫ್ರೆಶ್ ರೇಟ್ ಆಯ್ಕೆಯೊಂದಿಗೆ, ಸ್ಟಿರಿಯೊ ಸ್ಪೀಕರ್‌ಗಳು ಮತ್ತು ಡಾಲ್ಬಿ ಅಟ್ಮಾಸ್ ಸೌಲಭ್ಯ ಒಳಗೊಂಡಿದೆ. ಅಲ್ಲದೆ ಈ ಮೊಬೈಲ್ 537 ನಿಟ್ಸ್ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ.
ಮೊಟೊ G24 ಪವರ್ ಮೊಬೈಲ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೋ G85 12nm ಪ್ರೊಸೆಸರ್ ಮೂಲಕ ಕೆಲಸ ನಿರ್ವಹಿಸಲಿದ್ದು, ಆಂಡ್ರಾಯ್ಡ್ 14 ಅನ್ನು ಬೆಂಬಲ ಸಹ ಪಡೆದಿದೆ. ಇದರೊಂದಿಗೆ 4GB RAM + 128GB ಸ್ಟೋರೇಜ್ ಆಯ್ಕೆ ಒಳಗೊಂಡಿದ್ದು, ಇದರ ಜೊತೆಗೆ ಮೈಕ್ರೊ ಎಸ್‌ಡಿ ಕಾರ್ಡ್ ಬಳಕೆ ಮಾಡಿಕೊಂಡು 1TB ವರೆಗೆ ಸ್ಟೋರೇಜ್ ಹೆಚ್ಚಿಗೆ ಮಾಡಿಕೊಳ್ಳಲು ಅವಕಾಶ ಇದೆ.
ಈ ಫೋನ್ ಡ್ಯುಯಲ್ ಕ್ಯಾಮೆರಾ ರಚನೆ ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸೌಲಭ್ಯದಲ್ಲಿ ಇದೆ. ಈ ಪೋನಿನ ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಪಡೆದಿದ್ದು, ಇದೂ ಸಹ ಎಲ್‌ಇಡಿ ಫ್ಲ್ಯಾಶ್ ಸಪೋರ್ಟ್ ಪಡೆದಿದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ.
ಅಂದಹಾಗೆ ಮೊಟೊ G24 ಪವರ್ ಫೋನ್ 6,000mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ 33W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಪಡೆದಿದೆ. ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 4G VoLTE, ವೈ-ಫೈ 802.11 ac (2.4GHz + 5GHz), ಬ್ಲೂಟೂತ್ ಆವೃತ್ತಿ 5.0, ಜಿಪಿಎಸ್, ಯುಎಸ್‌ಬಿ ಟೈಪ್-ಸಿ, 3.5 ಎಂಎಂ ಆಡಿಯೊ ಜಾಕ್, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಧೂಳು ಹಾಗೂ ಸ್ಪ್ಲಾಶ್ ನಿರೋಧಕ (IP52) ಆಯ್ಕೆಗಳನ್ನು ಪಡೆದಿದೆ.
ಇನ್ನು ಮೊಟೊ G24 ಪವರ್ ಫೋನ್ 4GB + 128GB ಹಾಗೂ 8GB RAM + 128GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಆಗಲಿದೆ. ಅಲ್ಲದೇ ಹೆಚ್ಚುವರಿಯಾಗಿ 8GB ವರ್ಚುವಲ್ RAM ಸೌಲಭ್ಯ ಕೂಡಾ ಈ ಫೋನ್ ಹೊಂದಿದೆ. ಇನ್ನು ಈ ಫೋನ್ ಮ್ಯಾಟ್ ಚಾರ್ಕೋಲ್, ಐಸ್ ಗ್ರೀನ್, ಬ್ಲೂಬೆರ್ರಿ ಮತ್ತು ಪಿಂಕ್ ಲ್ಯಾವೆಂಡರ್ ಬಣ್ಣದ ಆಯ್ಕೆಗಳಲ್ಲಿ ಲಭ್ಯ ಇದೆ.


Click it and Unblock the Notifications








