ಟ್ರಿಪಲ್ ಕ್ಯಾಮೆರಾ, 128 GB ಸ್ಟೋರೇಜ್‌ನ ಈ ಫೋನ್ ಈಗ 10 ಸಾವಿರಕ್ಕೂ ಕಡಿಮೆ ಬೆಲೆಗೆ!
ಸ್ಮಾರ್ಟ್‌ಫೋನ್‌ಗಳ (Smartphone) ಮೇಲೆ ಈಗ ಪ್ರಮುಖ ಇ-ಕಾಮರ್ಸ್ ಸೈಟ್‌ಗಳೊಂದಿಗೆ ಬ್ರ್ಯಾಂಡ್‌ಗಳು ಸಹ ಭಾರೀ ಆಫರ್ ನೀಡುತ್ತಿವೆ. ಈ ನಡುವೆ ಭಾರತೀಯರ ನೆಚ್ಚಿನ ಬ್ರ್ಯಾಂಡ್ ಆಗಿರುವ ಮೊಟೊರೊಲಾ ತನ್ನ ಫೋನ್‌ಗಳಿಗೂ ಆಫರ್ ಘೋಷಣೆ ಮಾಡಲಾಗಿದ್ದು, ಈ ಫೋನ್ ಈಗ ನಿಮಗೆ ಅಗ್ಗದ ದರಕ್ಕೆ ಲಭ್ಯ ಆಗಲಿದೆ.
ಹೌದು, ಮೊಟೊರೊಲಾ ಫೋನ್‌ಗಳು ಅಗ್ಗದ ಬೆಲೆಯಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತವೆ. ಅದರ ಸಾಲಿನಲ್ಲಿ ಮೊಟೊರೊಲಾ G32 (Motorola G32) ಫೋನ್ ಸಹ ಇದ್ದು, ಈ ಫೋನ್ ಅನ್ನು ನೀವೀಗ 10,000ರೂ.ಕ್ಕಿಂತ ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ. ಅಂದರೆ ಈ ಫೋನ್ ಮೇಲೆ 47% ರಿಯಾಯಿತಿ ಘೋಷಣೆ ಮಾಡಲಾಗಿದೆ. ಹಾಗಿದ್ರೆ, ಈ ಫೋನ್‌ನ ಆಫರ್ ಬೆಲೆ ಎಷ್ಟು?, ಈ ಬೆಲೆಗೆ ಇದು ಯೋಗ್ಯವೇ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಮೊಟೊರೊಲಾ G32: ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ಗೆ (Flipkart Big Billion Days Sale) ಮುಂಚಿತವಾಗಿ ಈ ಫೋನ್ ಭಾರಿ ರಿಯಾಯಿತಿಯನ್ನು ಪಡೆದುಕೊಂಡಿದೆ. ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಅಕ್ಟೋಬರ್ 8, 2023 ರಿಂದ ಅಂದರೆ ನಾಳೆಯಿಂದ ಆರಂಭ ಆಗಲಿದೆ. ಈ ವೇಳೆ ಎಲ್ಲಾ ಡಿವೈಸ್‌ಗಳಿಗೂ ಭಾರೀ ಆಫರ್ ಅನ್ನು ನೀಡಲಾಗುತ್ತದೆ. ಅದರಲ್ಲೂ ಸ್ಮಾರ್ಟ್‌ಫೋನ್‌ಗಳಿಗಂತೂ ನೀವು ಕಂಡು ಕೇಳರಿಯದ ಆಫರ್ ಅಂತೂ ಪಕ್ಕಾ. ಹಾಗಿದ್ರೆ, ಬನ್ನಿ ಈಗ ಈ ಫೋನ್‌ನ ಬಗ್ಗೆ ತಿಳಿಯೋಣ.
ಮೊಟೊರೊಲಾ G32 ಗೆ ಭರ್ಜರಿ ಆಫರ್: ಈ ಫೋನ್ ಅನ್ನು ನೀವು ಇದೀಗ ಹತ್ತು ಸಾವಿರಕ್ಕೂ ಕಡಿಮೆ ಬೆಲೆಗೆ ಖರೀದಿ ಮಾಡುವುದು ಮಾತ್ರ ಸಂತಸದ ವಿಷಯವಲ್ಲ. ಬದಲಾಗಿ ಕೆಲವು ಬ್ಯಾಂಕ್ ಆಫರ್ ಅನ್ನು ಬಳಕೆ ಮಾಡಿಕೊಂಡು ಇನ್ನೂ ಅಗ್ಗದ ಬೆಲೆಗೆ ಈ ಫೋನ್ ಅನ್ನು ಖರೀದಿ ಮಾಡಬಹುದಾಗಿದೆ. ಈಗಾಗಲೇ ಫ್ಲಿಪ್‌ಕಾರ್ಟ್ 47 % ರಷ್ಟು ರಿಯಾಯಿತಿಯಲ್ಲಿ ನೀಡಿದೆ.
8 GB +128 GB ಸ್ಟೋರೇಜ್ ವೇರಿಯಂಟ್ ಫೋನ್ ಸಾಮಾನ್ಯ ದರ 18,999ರೂ.ಗಳಾಗಿದೆ. ಆದರೆ, ನೀವು ಈಗ ಇದನ್ನು 9,999ರೂ. ಗಳಿಗೆ ಖರೀದಿ ಮಾಡಬಹುದು. ಇದರೊಂದಿಗೆ ಬಳಕೆದಾರರು ಆಯ್ದ ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು ಮತ್ತು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ 1,000ರೂ.ವರೆಗೆ 10 ಪ್ರತಿಶತ ತ್ವರಿತ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದ ನೀವು ಈ ಫೋನ್ ಖರೀದಿ ಮೇಲೆ ಭಾರೀ ಹಣ ಉಳಿಸಬಹುದಾಗಿದೆ.
ಈ ಬೆಲೆಗೆ ಈ ಫೋನ್ ಯೋಗ್ಯವೇ?: ನಾವು ಈ ಫೋನ್‌ನ ಯೋಗ್ಯತೆ ಬಗ್ಗೆ ತಿಳಿಯುವ ಮುನ್ನ ಇದರ G ಸರಣಿ ವಿಶೇಷತೆ ತಿಳಿಯೋಣ. G ಸರಣಿಯಲ್ಲಿ ಕಂಪನಿಯ ಆರನೇ ಫೋನ್ ಇದಾಗಿದೆ. ಈ ಫೋನ್ ಅನ್ನು ಆಗಸ್ಟ್ 2022 ರಲ್ಲಿ ಲಾಂಚ್ ಮಾಡಲಾಗಿದ್ದು, ಈ ಫೋನ್ ಲಾಂಚ್‌ಗೂ ಮುನ್ನ ಮೊಟೊ G82 5G, G71 5G, G52, G42 ಮತ್ತು G22 ಸ್ಮಾರ್ಟ್‌ಫೋನ್ ಗಳನ್ನು ಲಾಂಚ್ ಮಾಡಲಾಗಿತ್ತು.
ಉಳಿದಂತೆ ಈ ಫೋನ್ 6.5 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಇದರ ಜೊತೆಗೆ 90 Hz ರಿಫ್ರೆಶ್ ರೇಟ್ ಆಯ್ಕೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 ಆಕ್ಟಾ-ಕೋರ್ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಜೊತೆಗೆ ಇದು 64 GB ಮತ್ತು 128 GB ಸ್ಟೋರೇಜ್‌ನ ಆಯ್ಕೆ ಪಡೆದಿದೆ. ಪ್ರಮುಖವಾಗಿ ಈ ಫೋನ್ ರೋಸ್ ಗೋಲ್ಡ್, ಸ್ಯಾಟಿನ್ ಮೆರೂನ್, ಸ್ಯಾಟಿನ್ ಸಿಲ್ವರ್, ಮಿನರಲ್ ಗ್ರೇ ಎಂಬ ನಾಲ್ಕು ಬಣ್ಣದಲ್ಲಿ ಲಭ್ಯ ಇದೆ.
ಇದರೊಂದಿಗೆ ಮೊಟೊರೊಲಾ G32 ಸ್ಮಾರ್ಟ್‌ಫೋನ್ 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, ಅತ್ಯುತ್ತಮ ಬ್ಯಾಕಪ್ ನೀಡಲಿದೆ. ಜೊತೆಗೆ ಡಾಲ್ಬಿ ಅಟ್ಮಾಸ್ ಬೆಂಬಲ ಹಾಗೂ ಸ್ಟಿರಿಯೊ ಸ್ಪೀಕರ್ ಆಯ್ಕೆ ಇದ್ದು, IP52 ರೇಟಿಂಗ್ ಹೊಂದಿರುವ ಮೂಲಕ ವಿಶೇಷ ಎನಿಸಿದೆ. ಅಷ್ಟೇ ಅಲ್ಲದೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ರೀಡರ್ ಈ ಫೋನ್ ಬಳಕೆದಾರರಿಗೆ ಇನ್ನಷ್ಟು ಹೊಸ ಅನುಭವ ನೀಡಲಿದೆ.

ಇನ್ನು ಈ ಫೋನ್‌ನ ಪ್ರಮುಖವ ವಿಚಾರಕ್ಕೆ ಬರುವುದಾದರೆ, 50 ಮೆಗಾಪಿಕ್ಸೆಲ್‌ನೊಂದಿಗೆ 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು ಡೆಪ್ತ್ ಕ್ಯಾಮೆರಾ ಸೆನ್ಸಾರ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಆಯ್ಕೆ ಪಡೆದುಕೊಂಡಿದೆ. ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್ 16 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಆಯ್ಕೆ ಪಡೆದುಕೊಂಡಿದ್ದು ಈ ಬೆಲೆಗೆ ತಕ್ಕ ಫೀಚರ್ಸ್ ಆಯ್ಕೆಯನ್ನು ಈ ಫೋನ್ ಹೊಂದಿದೆ.


Click it and Unblock the Notifications








