Motorola: ಮೊಟೊರೊಲಾದ ಈ ಫೋನ್‌ಗೆ ಬಿಗ್ ಡಿಸ್ಕೌಂಟ್! 108MP ಕ್ಯಾಮೆರಾ.. 6GB RAM
ಮೊಟೊರೊಲಾದ (Motorola) ಸ್ಮಾರ್ಟ್‌ಫೋನ್‌ಗಳಿಗೆ ಭಾರತದಲ್ಲಿ ಬಹಳ ಬೇಡಿಕೆ ಇದೆ. ಈ ನಡುವೆ ಮೊಟೊರೊಲಾ ಸಾಕಷ್ಟು ಸ್ಮಾರ್ಟ್‌ಫೋನ್‌ಗಳನ್ನು ಸುಧಾರಿತ ಫೀಚರ್ಸ್ ಆಯ್ಕೆ ನೀಡುವ ಮೂಲಕ ಪರಿಚಯಿಸಿದ್ದು, ಈ ಬೆಳವಣಿಗೆ ನಡುವೆ ಭಾರತದಲ್ಲಿ ಬೇಡಿಕೆ ಇರುವ ಮೊಟೊರೊಲಾದ ಈ ಫೋನ್ ಆಫರ್ ಬೆಲೆಯಲ್ಲಿ ಲಭ್ಯವಿದೆ.
ಹೌದು, ಮೊಟೊರೊಲಾ ಫೋನ್‌ಗಳು ಬಜೆಟ್ ಬೆಲೆಯಲ್ಲಿ ಪ್ರೀಮಿಯಂ ಫೀಚರ್ಸ್ ಆಯ್ಕೆಯನ್ನು ನೀಡುತ್ತವೆ. ಈ ಕಾರಣಕ್ಕೆ ಭಾರತದಲ್ಲಿ ಈ ಫೋನ್‌ಗಳಿಗೆ ವಿಶೇಷವಾದ ಬೇಡಿಕೆ ಇದೆ. ಈ ನಡುವೆ ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ ಮೊಟೊರೊಲಾ G60 ಸ್ಮಾರ್ಟ್‌ಫೋನ್‌ಗೆ (Motorola G60 Smartphone) ಭಾರೀ ರಿಯಾಯಿತಿ ನೀಡಲಾಗಿದೆ. ಈ ಫೋನ್ 108MP ಪ್ರಾಥಮಿಕ ಕ್ಯಾಮೆರಾ ಆಯ್ಕೆ ಹಾಗೂ 6GB RAM ಸೌಲಭ್ಯ ಪಡೆದುಕೊಂಡಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಎಂದು ನೋಡೋಣ ಬನ್ನಿ.

ಮೊಟೊರೊಲಾ G60 ಸ್ಮಾರ್ಟ್‌ಫೋನ್‌ಗೆ ಆಫರ್: ಈ ಸ್ಮಾರ್ಟ್‌ಫೋನ್‌ನ ಸಾಮಾನ್ಯ ದರ 21,999 ರೂ.ಗಳಾಗಿದೆ. ಆದರೆ, ಇದನ್ನು ನೀವು 14,999ರೂ.ಗಳಿಗೆ ಖರೀದಿ ಮಾಡಬಹುದು. ಅಂದರೆ ಈ ಫೋನ್ ಮೇಲೆ ಬರೋಬ್ಬರಿ 31% ರಿಯಾಯಿತಿಯನ್ನು ನೀಡಲಾಗಿದೆ. ಇಷ್ಟೇ ಅಲ್ಲದೆ ಕೆಲವು ಬ್ಯಾಂಕ್ ಕಾರ್ಡ್‌ಗಳ ಮೂಲಕ ಖರೀದಿ ಮಾಡಿದ್ರೆ ಇನ್ನೂ ಕಡಿಮೆ ಬೆಲೆಗೆ ಈ ಫೋನ್ ನಿಮ್ಮದಾಗಿಸಿಕೊಳ್ಳಬಹುದು.
ಬ್ಯಾಂಕ್ ಆಫರ್ ಬಗ್ಗೆ ಹೇಳುವುದಾದರೆ ಈ ಫೋನ್ ಅನ್ನು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ (Flipkart Axis Bank Card) ಬಳಕೆ ಮಾಡಿ ಖರೀದಿ ಮಾಡಿದ್ರೆ 5%ಕ್ಯಾಶ್‌ಬ್ಯಾಕ್ ಸಿಗಲಿದೆ. ಇದರೊಂದಿಗೆ ವಿಶೇಷವಾಗಿ ಹೆಚ್ಚುವರಿ 7000 ರೂ.ವರೆಗೂ ಕ್ಯಾಶ್‌ಬ್ಯಾಕ್ ಅಥವಾ ಕೂಪನ್ ಅನ್ನೂ ಸಹ ನೀಡಲಾಗುತ್ತದೆ. ಉಳಿದಂತೆ ಪಾರ್ಟನರ್‌ಶಿಫ್ ಆಫರ್‌ಗೆ ಸೈನ್ ಅಪ್ ಮಾಡಿ ಪೇ ಲೇಟರ್ ಆಯ್ಕೆ ಮೂಲಕ ಖರೀದಿ ಮಾಡಿದರೆ 20,000ರೂ. ಮೌಲ್ಯದ ಉಚಿತ ಟೈಮ್ಸ್ ಪ್ರೈಮ್ ಬೆನಿಫಿಟ್‌ಗಳನ್ನು ಪಡೆದುಕೊಳ್ಳಬಹುದು. ಇದರೊಂದಿಗೆ ಡೆಬಿಟ್ ಕಾರ್ಡ್ ಇಎಮ್‌ಐ 929ರೂ.ಗಳಿಗೆ ಆರಂಭ ಆಗಲಿದೆ.
ಮೊಟೊರೊಲಾ G60 ಡಿಸ್‌ಪ್ಲೇ ವಿವರ: ಈ ಫೋನ್ ಆಫರ್ ಬೆಲೆಗೆ ಲಭ್ಯವಾಗುತ್ತಿರುವುದೇ ನಿಜ. ಆದರೆ, ಈ ಬೆಲೆಗೆ ಇದು ಯೋಗ್ಯವೇ ಎಂಬುದನ್ನು ನೋಡುವುದಾದರೆ ಈ ಫೋನ್ 6.8-ಇಂಚಿನ ಪಂಚ್ ಹೋಲ್ ಆಯ್ಕೆ ಇರುವ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ (IPS LCD display) ಹೊಂದಿದೆ. ಇದರೊಂದಿಗೆ 20.5:9 ಆಕಾರ ಅನುಪಾತ ಮತ್ತು 395ppi ಪಿಕ್ಸೆಲ್ ಸಾಂದ್ರತೆ, 120Hz ರಿಫ್ರೆಶ್ ರೇಟ್ ಮತ್ತು 1080 x 2460 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ.
ಮೊಟೊರೊಲಾ G60 ಪ್ರೊಸೆಸರ್ ಮಾಹಿತಿ: ಈ ಫೋನ್ 8nm ಫ್ಯಾಬ್ರಿಕೇಟೆಡ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 732G ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ. ಇದು ಆಕ್ಟಾ-ಕೋರ್ ಸಿಪಿಯು ಮತ್ತು ಅಡ್ರಿನೋ 618 ಜಿಪಿಯು ಮೂಲಕ ತಡೆರಹಿತ ಬಳಕೆದಾರ ಅನುಭವವನ್ನು ನೀಡುತ್ತದೆ. ಪ್ರಮುಖವಾಗಿ ಈ ಫೋನ್ 6GB RAM ನಲ್ಲಿ ಕಾಣಿಸಿಕೊಂಡಿದ್ದು, 128 GB ಇಂಟರ್ ಸ್ಟೋರೇಜ್ ಮೂಲಕ ಉತ್ತಮ ಅನುಭವ ನೀಡಲಿದೆ.
ಮೊಟೊರೊಲಾ G60 ಕ್ಯಾಮೆರಾ ರಚನೆ: ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆಯೊಂದಿಗೆ ಪ್ಯಾಕ್ ಆಗಿದೆ. ಇದು 108 ಮೆಗಾಪಿಕ್ಸೆಲ್‌ನ f/1.9 ಪ್ರಾಥಮಿಕ ಕ್ಯಾಮೆರಾ, 8 ಮೆಗಾಪಿಕ್ಸೆಲ್‌ನ f/2.2 ಅಲ್ಟ್ರಾ-ವೈಡ್ ಆಂಗಲ್ ಶೂಟರ್ ಮತ್ತು 2 ಮೆಗಾಪಿಕ್ಸೆಲ್‌ನ f/2.4 ಡೆಪ್ತ್ ಕ್ಯಾಮೆರಾ ಹೊಂದಿದ್ದು, ಸೆಲ್ಫಿಗಾಗಿ 32 ಮೆಗಾಪಿಕ್ಸೆಲ್‌ನ f/2.2 ಸೆಲ್ಫಿ ಸೆನ್ಸರ್ ಆಯ್ಕೆ ಪಡೆದುಕೊಂಡಿದೆ.

ಮೊಟೊರೊಲಾ G60 ಬ್ಯಾಟರಿ ಹಾಗೂ ಇತರೆ: ಆಫರ್ ಬೆಲೆಗೆ ಲಭ್ಯ ಇರುವ ಈ ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, ಈ ಮೂಲಕ ಉತ್ತಮ ಹಾಗೂ ದೀರ್ಘಕಾಲದ ಬ್ಯಾಕಪ್ ಪಡೆದುಕೊಳ್ಳಬಹುದಾಗಿದೆ. ಇದರ ಜೊತೆಗೆ ಎ-ಜಿಪಿಎಸ್, ಗ್ಲೋನಾಸ್, ಬ್ಲೂಟೂತ್ ಆವೃತ್ತಿ v5.0, ವೈ ಫೈ , ಎನ್‌ಎಫ್‌ಸಿ ಮತ್ತು 5G , 4G ನೆಟ್‌ವರ್ಕ ಬೆಂಬಲ ಪಡೆದಿದೆ.


Click it and Unblock the Notifications








