Motorola:ಮೊಟೊರೊಲಾದ ಈ ಬಹು ಬೇಡಿಕೆಯ ಫೋನ್‌ಗೆ 31% ಡಿಸ್ಕೌಂಟ್,ಆಫರ್ ಎಲ್ಲಿ ಲಭ್ಯ!?
ಭಾರತದಲ್ಲಿ ಮೊಟೊರೊಲಾ (Motorola) ಸಂಸ್ಥೆಯ ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷವಾದ ಬೇಡಿಕೆ ಇದೆ. ಈ ನಡುವೆ ಇನ್ನೇನು ಶೀಘ್ರದಲ್ಲೇ ಫೋಲ್ಟಬಲ್ ಫೋನ್ ಅನ್ನು ಸಹ ಲಾಂಚ್ ಮಾಡಲು ಸಿದ್ಧತೆ ನಡೆಸಿದ್ದು, ಈ ಖುಷಿಯ ವಿಚಾರದೊಂದಿಗೆ ಮೊಟೊದ ಈ ಫೋನ್‌ಗೆ ಬರೋಬ್ಬರಿ 31% ರಿಯಾಯಿತಿ ನೀಡಲಾಗಿದೆ.
ಹೌದು, ಸ್ಮಾರ್ಟ್‌ಫೋನ್ ವಿಭಾಗದಲ್ಲಿ ವಿಶೇಷವಾದ ಫೀಚರ್ಸ್ ಹಾಗೂ ಕಡಿಮೆ ಬೆಲೆ ಮೂಲಕ ಗುರುತಿಸಿಕೊಂಡಿರುವ ಮೊಟೊರೊಲಾ ಇದೀಗ ಮೊಟೊರೊಲಾ G60 (Motorola G60) ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿದೆ. ಅಂದರೆ ಈ ಫೋನ್ ದರದಲ್ಲಿ 31% ರಿಯಾಯಿತಿ ಸಿಗುತ್ತಿದೆ. ಹಾಗೆಯೇ ಈ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 732G ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, ಉತ್ತಮವಾಗಿ ಕೆಲಸ ಮಾಡಲಿದೆ. ಹಾಗಿದ್ರೆ, ಬನ್ನಿ ಇದರ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರ ತಿಳಿಯೋಣ.

ಮೊಟೊರೊಲಾ G60 ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ ಅನ್ನು ಈ ಬೆಲೆಗೆ ಖರೀದಿ ಮಾಡುವ ಮುನ್ನ ಇದರ ಪ್ರಮುಖ ಫೀಚರ್ಸ್ ಅನ್ನು ತಿಳಿದುಕೊಂಡರೆ ನೀವು ಉತ್ತಮ. ಅಂತೆಯೇ ಈ ಫೋನ್ 6.8 ಇಂಚಿನ ಬೆಜೆಲ್ ಮುಕ್ತ ದೊಡ್ಡ IPS LCD ಡಿಸ್‌ಪ್ಲೇ ಹೊಂದಿದ್ದು, ಪಂಚ್ ಹೋಲ್ ಮೂಲಕ ಆಕರ್ಷಕವಾಗಿ ಕಾಣುತ್ತದೆ. ಜೊತೆಗೆ 120Hz ನ ರಿಫ್ರೆಶ್ ರೇಟ್ ಹೊಂದಿರುವ ಈ ಫೋನ್ 1080 x 2460 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಮೂಲಕ ಉತ್ತಮ ಎನಿಸಿದೆ.
ಮೊಟೊರೊಲಾ G60 ಪ್ರೊಸೆಸರ್ ಮಾಹಿತಿ: ಇದರ ಕಾರ್ಯಕ್ಷಮತೆ ವಿಚಾರಕ್ಕೆ ಬರುವುದಾದರೆ ಈ ಫೋನ್ 8nm ಫ್ಯಾಬ್ರಿಕೇಟೆಡ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 732G ಪ್ರೊಸೆಸರ್ ಹೊಂದಿದ್ದು, ಈ ಆಕ್ಟಾ-ಕೋರ್ (2.3GHz, ಕ್ರಿಯೋ 470, ಡ್ಯುಯಲ್ ಕೋರ್ + 1.8GHz, ಕ್ರಿಯೋ 470, ಹೆಕ್ಸಾ-ಕೋರ್) ಪ್ರೊಸೆಸರ್‌ನ ಸಂಯೋಜನೆಯು ಸುಗಮ ಬಳಕೆದಾರ ಅನುಭವವನ್ನು ನೀಡುತ್ತದೆ. ಅಡ್ರಿನೊ 618 GPU ಬಲ ಪಡೆದುಕೊಂಡಿದ್ದು, 6GB RAM ಹಾಗೂ 128GB ಇಂಟರ್ ಸ್ಟೋರೇಜ್ ಹೊಂದಿದೆ.

ಮೊಟೊರೊಲಾ G60 ಕ್ಯಾಮೆರಾ ರಚನೆ: ಈ ಫೋನ್ ಟ್ರಿಪಪ್ ರಿಯರ್ ಕ್ಯಾಮೆರಾ ಹೊಂದಿದ್ದು, ಅದರಲ್ಲಿ 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಶೂಟರ್ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಆಯ್ಕೆ ನೀಡಲಾಗಿದೆ. ಇದರೊಂದಿಗೆ ಸೆಲ್ಫಿ ಉದ್ದೇಶಕ್ಕಾಗಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ.
ಮೊಟೊರೊಲಾ G60 ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, ಹೆಚ್ಚಿನ ಸಮಯದ ಬ್ಯಾಟರಿ ಬ್ಯಾಕಪ್ ಹೊಂದಿದೆ. ಇನ್ನುಳಿದಂತೆ ಈ ಫೋನ್ ಎ-ಜಿಪಿಎಸ್ ಗ್ಲೋನಾಸ್, ಬ್ಲೂಟೂತ್ ಆವೃತ್ತಿ v5.0, ವೈ ಫೈ, ಎನ್‌ಎಫ್‌ಸಿ ಮತ್ತು 5G ಹಾಗೂ 4G ನೆಟ್‌ವರ್ಕ್ ಕನೆಕ್ಟಿವಿಟಿ ಆಯ್ಕೆ ಮೂಲಕ ಬಳಕೆದಾರರಿಗೆ ವಿಶೇಷ ಅನುಭವ ನೀಡುತ್ತದೆ.

ಮೊಟೊರೊಲಾ G60 ಬೆಲೆ ಹಾಗೂ ಆಫರ್ ವಿವರ: ಈ ಮೊಟೊರೊಲಾ ಫೋನ್ 21,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದೆ. ಆದರೆ, ನೀವು ಈಗ ಈ ಫೋನ್ ಅನ್ನು ಕೇವಲ 14,999ರೂ.ಗಳಿಗೆ ಖರೀದಿ ಮಾಡಬಹುದು. ಅಂದರೆ ಈ ಫೋನ್ ಮೇಲೆ 31% ರಷ್ಟು ರಿಯಾಯಿತಿಯನ್ನು ಘೋಷಣೆ ಮಾಡಲಾಗಿದೆ. ಇದಿಷ್ಟು ಮಾತ್ರವಲ್ಲದೆ ಕೆಲವು ಬ್ಯಾಂಕ್ ಆಫರ್ ಹಾಗೂ ವಿನಿಮಯ ಆಫರ್ ಸಹ ಲಭ್ಯ ಆಗುತ್ತಿದ್ದು, ಈ ಫೋನ್ ಇನ್ನೂ ಕಡಿಮೆ ಬೆಲೆಗೆ ಲಭ್ಯ ಇರುತ್ತದೆ. ಇದನ್ನು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿ ಮಾಡಬಹುದು.


Click it and Unblock the Notifications








