Home
ಸುದ್ದಿಜಾಲ

6000mAh ಬ್ಯಾಟರಿ ಇರುವ ಈ ಮೊಬೈಲ್‌ ಈಗ ಸಸ್ತಾ ಬೆಲೆಗೆ ಲಭ್ಯ!

ಜನಪ್ರಿಯ ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ( Flipkart ) ಸದ್ಯ ಬಿಗ್‌ ಸೇವಿಂಗ್‌ ಡೇಸ್‌ ಮಾರಾಟ ಲೈವ್‌ ಇದೆ. ಈ ವಿಶೇ‍ಷ ಸೇಲ್‌ನಲ್ಲಿ ಕೆಲವು ಆಯ್ದ ಫೋನ್‌ಗಳಿಗೆ ಭಾರೀ ಡಿಸ್ಕೌಂಟ್‌ ಲಭ್ಯ ಮಾಡಲಾಗಿದೆ. ಎಲ್ಲ ವಿಭಾಗದ ಮೊಬೈಲ್‌ಗಳು ಕೂಡಾ ಭಾರೀ ರಿಯಾಯಿತಿ ದರದಲ್ಲಿ ಗ್ರಾಹಕರನ್ನು ಸೆಳೆಯುವಂತೆ ಇವೆ. ಆ ಪೈಕಿ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ವೆಬ್‌ಸೈಟ್‌ನಲ್ಲಿ ಮೊಟೊರೊಲಾ G64 5G (Motorola G64 5G) ಫೋನ್‌ ಸಖತ್‌ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ.

ಹೌದು, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ನಲ್ಲಿ ಮೊಟೊರೊಲಾ G64 5G (Motorola G64 5G) ಮೊಬೈಲ್‌ ಶೇ. 16% ರಷ್ಟು ನೇರ ರಿಯಾಯಿತಿ ಹೊಂದಿದೆ. ಈ ಮೊಬೈಲ್‌ನ 8GB RAM + 128 GB ಸ್ಟೋರೇಜ್‌ ವೇರಿಯಂಟ್‌ ಆಫರ್‌ನಲ್ಲಿ 14,999ರೂ. ಗಳ ಬೆಲೆಯಲ್ಲಿ ಲಭ್ಯ ಇದೆ. ಅಲ್ಲದೇ ಹೆಚ್ಚುವರಿಯಾಗಿ ಕೆಲವು ಆಯ್ದ ಬ್ಯಾಂಕ್‌ಗಳಿಂದ ರಿಯಾಯಿತಿ ಸಹ ಲಭ್ಯವಾಗಲಿವೆ.

6000mAh ಬ್ಯಾಟರಿ ಇರುವ ಈ ಮೊಬೈಲ್‌ ಈಗ ಸಸ್ತಾ ಬೆಲೆಗೆ ಲಭ್ಯ!

ಇನ್ನು ಮೊಟೊ ಸಂಸ್ಥೆಯ ಈ ಫೋನ್‌ 8GB + 128GB ಸ್ಟೋರೇಜ್‌ ಹಾಗೂ 12 GB RAM + 256 GB ವೇರಿಯಂಟ್‌ ಸೌಲಭ್ಯ ಪಡೆದಿದೆ. ಇದರೊಂದಿಗೆ 6000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸಹ ಹೊಂದಿದ್ದು, ಇದು 16 ಮೆಗಾಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಸಹ ಪಡೆದುಕೊಂಡಿದೆ. ಹಾಗಾದರೇ ಮೊಟೊರೊಲಾ G64 5G ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಹೀಗಿದೆ

ಮೊಟೊರೊಲಾ G64 5G ಫೋನ್‌ 6.5 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ LCD ಅನ್ನು ಡಿಸ್‌ಪ್ಲೇ ಹೊಂದಿದ್ದು, ಈ ಫೋನಿನ ಡಿಸ್‌ಪ್ಲೇಯು 2400 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಪೋರ್ಟ್‌ ಪಡೆದಿದೆ. ಇದಲ್ಲದೆ ಸ್ಕ್ರೀನ್‌ ಕಡಿಮೆ ಅಂಚಿನ ರಚನೆ ಹೊಂದಿದ್ದು, ಈ ಡಿಸ್‌ಪ್ಲೇ 120 Hz ರಿಫ್ರೆಶ್‌ ರೇಟ್‌ ಸೌಲಭ್ಯ ಒಳಗೊಂಡಿದೆ. ಅಲ್ಲದೇ ಡಿಸ್‌ಪ್ಲೇ ಗೊರಿಲ್ಲಾ ಗ್ಲಾಸ್‌ ಸಪೋರ್ಟ್‌ ಕೂಡಾ ಒಳಗೊಂಡಿದೆ.

ವೇಗದ ಪ್ರೊಸೆಸರ್‌

ಮೊಟೊರೊಲಾ G64 5G ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7025 ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಸಪೋರ್ಟ್‌ ಆಗಿ ಆಂಡ್ರಾಯ್ಡ್‌ 14 ಓಎಸ್‌ ಕೆಲಸ ಮಾಡಲಿದೆ. ಹಾಗೆಯೇ ಇದು 8GB + 128GB ಸ್ಟೋರೇಜ್‌ ಹಾಗೂ 12 GB RAM + 256 GB ಆಂತರೀಕ ಸ್ಟೋರೇಜ್‌ ಆಯ್ಕೆಗಳನ್ನು ಕೂಡಾ ಒಳಗೊಂಡಿದ್ದು, 24GB ವರೆಗೂ RAM ಬೂಸ್ಟ್‌ ಸೌಲಭ್ಯ ಸಹ ಇದೆ.

ಕ್ಯಾಮೆರಾ ಸೆನ್ಸಾರ್‌ ಎಷ್ಟು

ಮೊಟೊರೊಲಾ G64 5G ಫೋನ್‌ ಮೂರು ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದ್ದು, ಇದರ ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸೌಲಭ್ಯ ಪಡೆದಿದೆ. ಎರಡನೇ ಹಾಗೂ ಮೂರನೇ ಕ್ಯಾಮೆರಾಗಳು ಕ್ರಮವಾಗಿ 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಹಾಗೂ 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ನಲ್ಲಿ ಇವೆ. ಇನ್ನು ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್‌ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ಬ್ಯಾಟರಿ ಬ್ಯಾಕ್‌ಅಪ್‌

ಮೊಟೊರೊಲಾ G64 5G ಫೋನ್‌ 6000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯವನ್ನು ಹೊಂದಿದ್ದು, ಪ್ರಮುಖ ಹೈಲೈಟ್‌ ಆಗಿದೆ. ಇದಕ್ಕೆ ಪೂರಕವಾಗಿ 33W ಟರ್ಬೋ ಪವರ್‌ ಚಾರ್ಜಿಂಗ್ ಸೌಲಭ್ಯ ಸಹ ಪಡೆದಿದೆ. ಇನ್ನು ಈ ಮೊಬೈಲ್‌ ಐಸ್ ಲಿಲಾಕ್, ಮಿಂಟ್ ಗ್ರೀನ್ ಮತ್ತು ಪರ್ಲ್ ಬ್ಲೂ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಸಿಗಲಿದೆ.

Best Mobiles in India

English summary
Motorola g64 5G received fabulous price cut on flipkart Sale. Check out offers, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+