Home
ಸುದ್ದಿಜಾಲ

ಮೊಟೊರೊಲಾ G71 5G ಸ್ಮಾರ್ಟ್‌ಫೋನ್‌ಗೆ ಭಾರೀ ಡಿಸ್ಕೌಂಟ್‌!

ಮೊಟೊರೊಲಾ ಫೋನ್‌ಗಳಿಗೆ ಭಾರತದಲ್ಲಿ ಭಾರೀ ಬೇಡಿಕೆ ಇದ್ದು, ಈ ಕಾರಣಕ್ಕೆ ಕಾಲಕಾಲಕ್ಕೆ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿದೆ. ಈ ನಡುವೆ ಮೊಟೊರೊಲಾದ ಈ ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ ಕಂಡು ಬಂದಿದ್ದು, ಇದರಿಂದಾಗಿ ಗ್ರಾಹಕರು ಅಗ್ಗದ ದರದಲ್ಲಿ ಅತ್ಯುತ್ತಮ ಫೋನ್‌ ಅನ್ನು ಖರೀದಿ ಮಾಡಲು ವೇದಿಕೆ ಒದಗಿಸಲಾಗಿದೆ.

ಹೌದು, ಪ್ರಮುಖ ಇ-ಕಾಮರ್ಸ್‌ ಸೈಟ್‌ಗಳು ಆಗಾಗ್ಗೆ ಸ್ಮಾರ್ಟ್‌ಡಿವೈಸ್‌ಗಳ ಮೇಲೆ ಭಾರೀ ಡಿಸ್ಕೌಂಟ್‌ ಘೋಷಣೆ ಮಾಡಿಕೊಂಡು ಬರುತ್ತಲೇ ಇವೆ. ಇದೀಗ ಮೊಟೊರೊಲಾ G71 5G (Motorola G71 5G) ಸ್ಮಾರ್ಟ್‌ಫೋನ್‌ಗೆ ಭರ್ಜರಿ ಡಿಸ್ಕೌಂಟ್‌ ನೀಡಲಾಗಿದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 695 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, 33W ಟರ್ಬೊ ಪವರ್ ಚಾರ್ಜಿಂಗ್‌ಗೆ ಬೆಂಬಲ ನೀಡುತ್ತದೆ. ಹಾಗಿದ್ರೆ, ಮತ್ಯಾಕೆ ತಡ ಬನ್ನಿ ಈ ಸ್ಮಾರ್ಟ್‌ಫೋನ್‌ನ ಆಫರ್‌ ವಿವರ ಹಾಗೂ ಫೀಚರ್ಸ್‌ ಬಗ್ಗೆ ತಿಳಿಯೋಣ.

ಮೊಟೊರೊಲಾ G71 5G ಸ್ಮಾರ್ಟ್‌ಫೋನ್‌ಗೆ ಭಾರೀ ಡಿಸ್ಕೌಂಟ್‌!

ಮೊಟೊರೊಲಾ G71 5G ಡಿಸ್‌ಪ್ಲೇ ವಿವರ: ಈ ಫೋನ್‌ ಅನ್ನು ಖರೀದಿ ಮಾಡುವ ಮುನ್ನ ಇದರ ಪ್ರಮುಖ ಫೀಚರ್ಸ್‌ ತಿಳಿದುಕೊಳ್ಳುವುದು ಒಳಿತು. ಅದರಂತೆ ಇದು 6.4 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, 1080 x 2400 ಪಿಕ್ಸೆಲ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ 411ppi ಪಿಕ್ಸೆಲ್ ಸಾಂದ್ರತೆ, 60Hz ರಿಫ್ರೆಶ್ ರೇಟ್‌ ಆಯ್ಕೆ ಇದ್ದು, ಪಂಚ್ ಹೋಲ್ ಶೈಲಿಯಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿದೆ.

ಮೊಟೊರೊಲಾ G71 5G ಪ್ರೊಸೆಸರ್‌ ಮಾಹಿತಿ: ಇದರ ಕಾರ್ಯಕ್ಷಮತೆ ವಿಚಾರಕ್ಕೆ ಬರುವುದಾದರೆ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 695 ಪ್ರೊಸೆಸರ್ ಮತ್ತು ಆಕ್ಟಾ-ಕೋರ್ ಡ್ಯುಯಲ್ ಕ್ರಿಯೋ 660 CPU ಕಾಂಬೊದಿಂದ ಕಾರ್ಯನಿರ್ವಹಿಸಲಿದ್ದು, ಇದು 2.2GHz ನ ಅತ್ಯುತ್ತಮ ಗಡಿಯಾರದ ವೇಗವನ್ನು ಹೊಂದಿದೆ. ಇನ್ನುಳಿದಂತೆ ಅಡ್ರಿನೊ 619 GPU ಜೊತೆಗೆ 6GB RAM ಮೂಲಕ ಉತ್ತಮ ಬಳಕೆಯ ಅನುಭವ ನೀಡಲಿದೆ.

ಮೊಟೊರೊಲಾ G71 5G ಸ್ಮಾರ್ಟ್‌ಫೋನ್‌ಗೆ ಭಾರೀ ಡಿಸ್ಕೌಂಟ್‌!

ಮೊಟೊರೊಲಾ G71 5G ಕ್ಯಾಮೆರಾ ರಚನೆ: ಈ ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಪಡೆದುಕೊಂಡಿದ್ದು, ಅದರಲ್ಲಿ 50 ಮೆಗಾಪಿಕ್ಸೆಲ್‌ ವೈಡ್-ಆಂಗಲ್ ಪ್ರೈಮರಿ ಕ್ಯಾಮೆರಾ, 8 ಮೆಗಾಪಿಕ್ಸೆಲ್ ‌ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಕ್ಯಾಮೆರಾ ಆಯ್ಕೆ ಹೊಂದಿದೆ. ಇದರೊಂದಿಗೆ 16 ಮೆಗಾಪಿಕ್ಸೆಲ್‌ ವೈಡ್ ಆಂಗಲ್ ಕ್ಯಾಮೆರಾ ಸೆನ್ಸರ್‌ ಪಡೆದುಕೊಂಡಿದೆ. ಈ ಸೆನ್ಸರ್‌ ಫೇಸ್ ಡಿಟೆಕ್ಷನ್, ಎಲ್ಇಡಿ ಫ್ಲ್ಯಾಶ್, ಡಿಜಿಟಲ್ ಜೂಮ್, ಎಚ್‌ಡಿಆರ್ ಮೋಡ್, ಆಟೋಫೋಕಸ್ ಮತ್ತು ಎಕ್ಸ್‌ಪೋಶರ್ ಕಾಂಪೆನ್ಸೇಶನ್ ಫೀಚರ್ಸ್‌ ಹೊಂದಿವೆ.

ಮೊಟೊರೊಲಾ G71 5G ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಈ ಫೋನ್‌ನ ಬ್ಯಾಟರಿ ವಿಚಾರಕ್ಕೆ ಬರುವುದಾದರೆ 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, ಹೆಚ್ಚುವರಿಯಾಗಿ 33W ಟರ್ಬೊ ಪವರ್ ಚಾರ್ಜಿಂಗ್‌ಗೆ ಹೊಂದಿಕೊಳ್ಳುತ್ತದೆ. ಇದರೊಂದಿಗೆ ಆಂಡ್ರಾಯ್ಡ್ 13.0 ರನ್‌ ಆಗಲಿದ್ದು, 5G , ಬ್ಲೂಟೂತ್‌, ವೈ-ಫೈ ಹಾಗೂ ಇನ್ನಿತರೆ ಅಗತ್ಯ ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ.

ಮೊಟೊರೊಲಾ G71 5G ಸ್ಮಾರ್ಟ್‌ಫೋನ್‌ಗೆ ಭಾರೀ ಡಿಸ್ಕೌಂಟ್‌!

ಮೊಟೊರೊಲಾ G71 5G ಆಫರ್‌ ವಿವರ: ಇದರ ಪ್ರಮುಖ ವಿಚಾರವಾದ ಆಫರ್‌ ಬಗ್ಗೆ ಈಗ ತಿಳಿದುಕೊಳ್ಳೋಣ. ಈ ಫೋನ್ 24,999ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, 18,800ರೂ.ಗಳ ಬೆಲೆಯಲ್ಲಿ ಇದು ಮಾರಾಟ ಆಗುತ್ತಿದೆ. ಅಂದರೆ ಈ ಫೋನ್‌ಗೆ ಬರೋಬ್ಬರಿ 25% ರಿಯಾಯಿತಿ ನೀಡಲಾಗಿದೆ. ಜೊತೆಗೆ ಬ್ಯಾಂಕ್ ರಿಯಾಯಿತಿಗಳು ಮತ್ತು ವಿನಿಮಯ ಕೊಡುಗೆಗಳು ಸಹ ಲಭ್ಯ ಇದ್ದು, ಇದರ ಬೆಲೆ ಇನ್ನೂ ಕಡಿಮೆ ಆಗಲಿದೆ. ಇದನ್ನು ನೀವು ಅಮೆಜಾನ್‌ ಮೂಲಕ ಖರೀದಿ ಮಾಡಬಹುದಾಗಿದೆ.

Best Mobiles in India

English summary
Motorola G71 5G phone powered by the Qualcomm Snapdragon 695 processor and will support 33W Turbo Power charging. This phone is currently on a great offer on Amazon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+