ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಈ ಮೊಟೊ ಫೋನ್‌ಗೆ 22% ಡಿಸ್ಕೌಂಟ್!
ಮೊಟೊರೊಲಾ ಕಂಪೆನಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಆಗಾಗ್ಗೆ ಭಾರೀ ಸದ್ದು ಮಾಡುತ್ತಿರುತ್ತದೆ. ಈ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಿಗೆ ಭಾರೀ ಬೇಡಿಕೆ ಇದ್ದು, ಅದರಂತೆ ಮಾರ್ಚ್‌ನಲ್ಲಿ ಲಾಂಚ್ ಆದ ಹೊಸ ಸ್ಮಾರ್ಟ್‌ಫೋನ್‌ಗೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ. ಹೀಗಾಗಿ ಉತ್ತಮ ಸ್ಮಾರ್ಟ್‌ಫೋನ್ ಅನ್ನು ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬೇಕು ಎಂದುಕೊಂಡವರಿಗೆ ಇದು ಸುವರ್ಣಾವಕಾಶ.
ಹೌದು, ಸ್ಟೈಲಿಶ್ ಲುಕ್ ಹಾಗೂ ವಿಭಿನ್ನ ಡಿಸೈನ್ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿರುವ ಮೊಟೊರೊಲಾ ಇದೀಗ ಹೊಸ ಮೊಟೊ G73 5G (motorola g73 5g) ಸ್ಮಾರ್ಟ್‌ಫೋನ್‌ಗೆ ಭಾರೀ ರಿಯಾಯಿತಿ ಘೋಷಿಸಿದೆ. ಈ ಫೋನ್ ಆಕ್ಟಾ-ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 930 SoC ಪ್ರೊಸೆಸರ್ ನಲ್ಲಿ ಖಾರ್ಯನಿರ್ವಹಿಸಲಿದ್ದು, ಡ್ಯುಯಲ್ ರಿಯರ್ ಕ್ಯಾಮೆರಾ ರಚನೆಯೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದೆ. ಹಾಗಿದ್ರೆ, ಬನ್ನಿ ಈ ಫೋನ್‌ಗೆ ಇರುವ ಆಫರ್ ಹಾಗೂ ಇದರ ಪ್ರಮುಖ ಫೀಚರ್ಸ್ ತಿಳಿಯೋಣ.

ಮೊಟೊ G73 5G ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ವಿವರ: ಈ ಫೋನ್ ಅನ್ನು ಈ ಆಫರ್ ಬೆಲೆಗೆ ಖರೀದಿ ಮಾಡುವ ಮುನ್ನ ಇದರ ಪ್ರಮುಖ ಫೀಚರ್ಸ್ ಅನ್ನು ತಿಳಿಯೋಣ. ಅದರಂತೆ ಈ ಫೋನ್ 6.5 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, ಇದು 2400 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ 120Hz ರಿಫ್ರೆಶ್ ರೇಟ್ ಆಯ್ಕೆ ಇದರಲ್ಲಿದೆ.
ಮೊಟೊ G73 5G ಪ್ರೊಸೆಸರ್ ಯಾವುದು?: ಮೊಟೊ G73 5G ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 930 SoC ಪ್ರೊಸೆಸರ್‌ಮೂಲಕ ಕಾರ್ಯನಿರ್ವಸಲಿದ್ದು ಆಂಡ್ರಾಯ್ಡ್ 13 ಈ ಫೋನ್‌ನಲ್ಲಿ ರನ್ ಆಗಲಿದೆ. ಹಾಗೆಯೇ ಆಂಡ್ರಾಯ್ಡ್ 14 ಗೆ ಅಪ್‌ಗ್ರೇಡ್ ಮಾಡುವುದಕ್ಕೆ ಅವಕಾಶ ನೀಡುವುದಾಗಿಯೂ ಸಂಸ್ಥೆ ಹೇಳಿದೆ. ಇನ್ನು 8GB RAM ಮತ್ತು 128GB ಇಂಟರ್ ಸ್ಟೋರೇಜ್ ಆಯ್ಕೆ ಇದರಲ್ಲಿದ್ದು, ಮೆಮೊರಿ ಕಾರ್ಡ್ ಬೆಂಬಲದೊಂದಿಗೆ 1TB ವರೆಗೆ ಸ್ಟೋರೇಜ್ ಹೆಚ್ಚಿಗೆ ಮಾಡಿಕೊಳ್ಳಬಹುದು.

ಮೊಟೊ G73 5G ಕ್ಯಾಮೆರಾ ರಚನೆ: ಇದರ ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹಾಗೂ ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಮ್ಯಾಕ್ರೋ ಡೆಪ್ತ್ ಶೂಟರ್ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಸೆಲ್ಫಿ ಉದ್ದೇಶಕ್ಕಾಗಿ 16 ಮೆಗಾಪಿಕ್ಸೆಲ್ ಸೆನ್ಸಾರ್ ಆಯ್ಕೆ ನೀಡಲಾಗಿದೆ.
ಮೊಟೊ G73 5G ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, 30W ಟರ್ಬೋಪವರ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನುಳಿದಂತೆ 5G, ವೈ-ಫೈ 802.11a/b/g/n/ac, ಬ್ಲೂಟೂತ್ ಆವೃತ್ತಿ 5.3, FM ರೇಡಿಯೋ, GPS/ A-GPS, NFC, LTEPP, ಗ್ಲೋನಾಸ್ ಸೇರಿದಂತೆ ವಿವಿಧ ಕನೆಕ್ಟಿವಿಟಿ ಆಯ್ಕೆಯನ್ನು ಈ ಫೋನ್ ಹೊಂದಿದೆ.

ಮೊಟೊ G73 5G ಆಫರ್ ಬೆಲೆ ವಿವರ: ಈ ಫೋನ್ ಸಾಮಾನ್ಯ ದರ 21,999ರೂ.ಆಗಿದ್ದು, ಆದರೆ ನೀವು ಇದನ್ನು ಕೇವಲ 16,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ಫೋನ್ ಗೆ 22% ಡಿಸ್ಕೌಂಟ್ ಪಡೆದುಕೊಂಡಿದೆ. ಇದರೊಂದಿಗೆ ಕೆಲವು ಬ್ಯಾಂಕ್ ಕಾರ್ಡ್‌ಗಳು ಹಾಗೂ ಇಎಮ್‌ಐ ಆಫರ್ ಸಹ ಲಭ್ಯವಿದ್ದು, ಸರಳ ಮಾರ್ಗದಲ್ಲಿ ಈ ಫೋನ್ ಖರೀದಿಗೆ ಹಲವು ಆಯ್ಕೆಗಳನ್ನು ನೀಡಲಾಗಿದೆ. ಹಾಗೆಯೇ ಈ ಫೋನ್ ಅನ್ನು ನೀವು ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿ ಮಾಡಬಹುದಾಗಿದೆ.


Click it and Unblock the Notifications








