Home
ಸುದ್ದಿಜಾಲ

MOTOROLA: ಮೊಟೊರೊಲಾದ 128 GB ಸ್ಟೋರೇಜ್‌ನ ಈ ಫೋನ್‌ಗೆ 42% ರಿಯಾಯಿತಿ! 50MP ಕ್ಯಾಮೆರಾ

ಮೊಟೊರೊಲಾ (Motorola) ಸ್ಮಾರ್ಟ್‌ಫೋನ್‌ಗಳು ತಮ್ಮದೇ ಆದ ಭಿನ್ನ ಫೀಚರ್ಸ್‌ ಮೂಲಕ ಅದರಲ್ಲೂ ಕಡಿಮೆ ದರದಲ್ಲಿ ಅತ್ಯುತ್ತಮ ಫೀಚರ್ಸ್‌ ಅನುಭವ ನೀಡುವ ಮೂಲಕ ಜನಪ್ರಿಯತೆ ಪಡೆದುಕೊಂಡಿವೆ. ಈ ಬೆಳವಣಿಗೆ ನಡುವೆ ಮೊಟೊರೊಲಾದ ಈ ಹಳೆಯ ಫೋನ್‌ಗ ಭಾರೀ ಅಫರ್ ನೀಡಲಾಗಿದೆ.

ಹೌದು, ಬಜೆಟ್‌ ಬೆಲೆಯಲ್ಲಿ ಉತ್ತಮ ಫೋನ್‌ ಬೇಕು ಅನ್ನೋರಿಗೆ ಮೊಟೊರೊಲಾ g82 5G ಸ್ಮಾರ್ಟ್‌ಫೋನ್‌ (Motorola g82 5G smartphone) ಉತ್ತಮ ಆಯ್ಕೆ ಆಗಿರಲಿದೆ. ಈ ಫೋನ್ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ ಹೊಂದಿದ್ದು, ಉತ್ತಮ ಪ್ರೊಸೆಸರ್‌ಮೂಲಕ ಬಳಕೆದಾರರಿಗೆ ಬೊಂಬಾಟ್‌ ಅನುಭವ ನೀಡಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಆಫರ್ ಬೆಲೆ ವಿವರ ಇಲ್ಲಿದೆ ನೋಡಿ.

ಮೊಟೊರೊಲಾದ 128 GB ಸ್ಟೋರೇಜ್‌ನ ಈ ಫೋನ್‌ಗೆ 42% ರಿಯಾಯಿತಿ! 50MP ಕ್ಯಾಮೆರಾ

ಮೊಟೊರೊಲಾ g82 5G ಸ್ಮಾರ್ಟ್‌ಫೋನ್‌ ಆಪರ್ ಮಾಹಿತಿ: ಈ ಫೋನ್ 25,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 14,999 ರೂ.ಗಳ ಬೆಲೆಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಫ್ಲಿಪ್‌ಕಾರ್ಟ್‌ (Flipkart) ಈ ಫೋನ್‌ ಮೇಲೆ ಬರೋಬ್ಬರಿ 42% ರಿಯಾಯಿತಿ ಘೋಷಣೆ ಮಾಡಿದೆ. ಅಲ್ಲದೆ ಇತರೆ ಬ್ಯಾಂಕ್‌ ಕೊಡುಗೆ ಸಹ ಲಭ್ಯ ಇದೆ.

ಈ ಫೋನ್ ಅನ್ನು ಫ್ಲಿಪ್‌ಕಾರ್ಟ್‌ ಆಕ್ಸಿಸ್‌ ಬ್ಯಾಂಕ್‌ ಕಾರ್ಡ್‌ ಬಳಕೆ ಮಾಡಿಕೊಂಡು ಖರೀದಿ ಮಾಡಲು ಮುಂದಾದರೆ 5% ಕ್ಯಾಶ್‌ಬ್ಯಾಕ್ ಸಿಗಲಿದೆ. ಅಲ್ಲದೆ 699 ರೂ. ಬೆಲೆಯ FreebieSpotify ಪ್ರೀಮಿಯಂ ಪ್ರಯೋಜನ ಸಹ ಸಿಗಲಿದ್ದು, ಈ ಮೂಲಕ ಭಾರೀ ಹಣ ಉಳಿತಾಯ ಮಾಡಬಹುದಾಗಿದೆ. ಹಾಗಿದ್ರೆ, ಈ ಬೆಲೆಗೆ ಈ ಫೋನ್‌ ಉತ್ತಮವೇ ಅನ್ನೋದನ್ನು ಫೀಚರ್ಸ್‌ ಮೂಲಕ ತಿಳಿದುಕೊಳ್ಳಿ.

ಮೊಟೊರೊಲಾದ 128 GB ಸ್ಟೋರೇಜ್‌ನ ಈ ಫೋನ್‌ಗೆ 42% ರಿಯಾಯಿತಿ! 50MP ಕ್ಯಾಮೆರಾ

ಮೊಟೊರೊಲಾ g82 5G ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 6.6 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, 120Hz ರೇಟ್‌, 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್, 402 ಪಿಪಿಐ ಸಾಂದ್ರತೆ, 86.4% ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ ಉತ್ತಮ ವೀಕ್ಷಣೆಯನ್ನು ಪಡೆಯಬಹುದಾಗಿದೆ.

ಮೊಟೊರೊಲಾ g82 5G ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ವಿವರ: ಇನ್ನು ಈ ಫೋನ್ ಕ್ವಾಲ್ಕಾಮ್ SM6375 ಸ್ನಾಪ್ಡ್ರಾಗನ್ 695 5G (6 nm) ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 12 ಓಎಸ್ ನಲ್ಲಿ ರನ್‌ ಆಗಲಿದೆ. ಅದಾಗ್ಯೂ ನೀವು ಆಂಡ್ರಾಯ್ಡ್ 13 ಗೆ ಅಪ್‌ಗ್ರೇಡ್ ಮಾಡಬಹುದು. ಇದರೊಂದಿಗೆ ಅಡ್ರಿನೊ 619 ಗ್ರಾಫಿಕ್ಸ್‌ ಕಾರ್ಡ್‌ ಬಲದೊಂದಿಗೆ ಸುಗಮವಾಗಿ ಕೆಲಸ ಮಾಡಲಿದೆ. ಉಳಿದಂತೆ ಈ ಫೋನ್ 8GB RAM ಹಾಗೂ 128GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದ್ದು, microSDXC ಬಳಕೆ ಮಾಡಿಕೊಂಡು ಸ್ಟೋರೇಜ್‌ ಅನ್ನು ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ.

ಮೊಟೊರೊಲಾದ 128 GB ಸ್ಟೋರೇಜ್‌ನ ಈ ಫೋನ್‌ಗೆ 42% ರಿಯಾಯಿತಿ! 50MP ಕ್ಯಾಮೆರಾ

ಮೊಟೊರೊಲಾ g82 5G ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ : ಈ ಫೋನ್ ಟ್ರಿಪಲ್ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, ಅದರಲ್ಲಿ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್‌ ಅಲ್ಟ್ರಾವೈಡ್ ಸೆನ್ಸರ್‌ ಹಾಗೂ 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಸೆನ್ಸರ್‌ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಎಲ್‌ಇಡಿ ಫ್ಲ್ಯಾಶ್, ಹೆಚ್‌ಡಿಆರ್‌, ಪನೋರಮಾ ಫೀಚರ್ಸ್‌ ಅನ್ನು ಕಾಣಬಹುದು. ಇದರೊಂದಿಗೆ 16 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ.

ಮೊಟೊರೊಲಾ g82 5G ಸ್ಮಾರ್ಟ್‌ಫೋನ್‌ ಬ್ಯಾಟರಿ ಹಾಗೂ ಲಭ್ಯತೆ: ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, 30W ವೈರ್ಡ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಇದರೊಂದಿಗೆ ವೈ-ಫೈ 802.11 a/b/g/n/ac, ಡ್ಯುಯಲ್-ಬ್ಯಾಂಡ್, ವೈ-ಫೈ ಡೈರೆಕ್ಟ್, ಬ್ಲೂಟೂತ್ ಆವೃತ್ತಿ 5.1, A2DP, LE, ಜಿಪಿಎಸ್, ಗ್ಲೋನಾಸ್, ಗೆಲಿಲಿಯೋ ಸ್ಥಾನೀಕರಣ, ಎಫ್‌ಎಮ್‌ ರೇಡಿಯೋ ಸೌಲಭ್ಯ ಹೊಂದಿದೆ.

Best Mobiles in India

English summary
Motorola g82 5G smartphone have a huge offer on Flipkart . This phone has a 50 megapixel main camera.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+