Home
ಸುದ್ದಿಜಾಲ

12GB RAM ಮತ್ತು 256GB ಸ್ಟೋರೇಜ್‌ ಇರುವ ಈ ಸ್ಲಿಮ್‌ ಫೋನ್‌ ಆಫರ್‌ನಲ್ಲಿ ಲಭ್ಯ!

ಮೊಟೊರೊಲಾ ಮೊಬೈಲ್‌ ಕಂಪನಿಯ ಇತ್ತೀಚಿನ ಕೆಲವು ಫೋನ್‌ಗಳು ದೇಶದ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಅದರಲ್ಲಿಯೂ ಸಂಸ್ಥೆಯ ಬಜೆಟ್‌ ಹಾಗೂ ಮೀಡ್‌ರೇಂಜ್‌ ಬೆಲೆಯ ಫೋನ್‌ಗಳು ಹೆಚ್ಚಿನ ಗಮನ ಸೆಳೆದಿವೆ. ಸದ್ಯ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಮೊಟೊ ಸಂಸ್ಥೆಯ ಮೊಟೊರೊಲಾ G85 5G (Motorola G85 5G) ಮೊಬೈಲ್‌ ವಾವ್‌ ಎನಿಸುವ ಡಿಸ್ಕೌಂಟ್‌ ಪಡೆದಿದ್ದು, ಖರೀದಿದಾರರಿಗೆ ಸಂತಸ ಎನಿಸಿದೆ.

ಹೌದು, ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ನಲ್ಲಿ ಮೊಟೊರೊಲಾ ಸಂಸ್ಥೆಯ ಮೊಟೊರೊಲಾ G85 5G (Motorola G85 5G) ಫೋನ್‌ ಶೇ. 13% ರಷ್ಟು ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಈ ಫೋನಿನ 12 GB RAM + 256 GB ಸ್ಟೋರೇಜ್‌ನ ವೇರಿಯಂಟ್‌ ಅನ್ನು ಗ್ರಾಹಕರು 19,999ರೂ. ಗಳ ಆಫರ್‌ ಬೆಲೆಯಲ್ಲಿ ಖರೀದಿ ಮಾಡಬಹುದು. ಈ ಫೋನ್‌ ಸ್ನಾಪ್‌ಡ್ರಾಗನ್‌ 8 ಜೆನ್‌ 3 SoC ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದೆ.

12GB RAM ಮತ್ತು 256GB ಸ್ಟೋರೇಜ್‌ ಇರುವ ಈ ಸ್ಲಿಮ್‌ ಫೋನ್‌ ಆಫರ್‌ನಲ್ಲಿ ಲಭ್ಯ!

ಮೊಟೊ G85 5G ಫೋನ್‌ ಕೋಬಾಲ್ಟ್ ಬ್ಲೂ, ಅರ್ಬನ್ ಗ್ರೇ ಮತ್ತು ಆಲಿವ್ ಗ್ರೀನ್ ಕಲರ್‌ ಆಯ್ಕೆ ಪಡೆದಿದೆ. ಇನ್ನು ಈ ಫೋನಿನ ಸೆಲ್ಫಿ ಕ್ಯಾಮೆರಾವು 32 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಹಾಗಾದರೇ ಮೊಟೊ G85 5G ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ ಓದಿರಿ.

ಡಿಸ್‌ಪ್ಲೇ ರಚನೆ

ಮೊಟೊ G85 5G ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ pOLED ಡಿಸ್‌ಪ್ಲೇ ಅನ್ನು ಪಡೆದುಕೊಂಡಿದ್ದು, ಇದು 2712 × 1220 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಪೋರ್ಟ್‌ ಪಡೆದಿದೆ. ಇದರ ಜೊತೆಗೆ 120Hz ರಿಫ್ರೆಶ್ ರೇಟ್‌ ಅನ್ನು ಪಡೆದಿದ್ದು, ಹಾಗೆಯೇ ಡಿಸ್‌ಪ್ಲೇ 1600 nits ಬ್ರೈಟ್‌ನೆಸ್‌ ಸಪೋರ್ಟ್‌ ಸಹ ಪಡೆದಿದ್ದು, ಕರ್ವ್‌ ಡಿಸ್‌ಪ್ಲೇ ರಚನೆ ಹೊಂದಿದ್ದು, ಗೊರಿಲ್ಲಾ ಗ್ಲಾಸ್‌ 5 ಅನ್ನು ಒಳಗೊಂಡಿದೆ.

ಪ್ರೊಸೆಸರ್‌ ಪವರ್

ಮೊಟೊ G85 5G ಫೋನ್‌ ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್‌ 8 ಜೆನ್‌ 3 SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಣೆ ಮಾಡಲಿದ್ದು, ಇದಕ್ಕೆ ಸಪೋರ್ಟ್‌ ಆಗಿ ಆಂಡ್ರಾಯ್ಡ್‌ 14 ಓಎಸ್‌ ಸೌಲಭ್ಯ ಸಹ ಇದೆ. ಹಾಗೆಯೇ ಈ ಫೋನ್‌ 8GB RAM + 128GB ಹಾಗೂ 12GB RAM + 256GB ಸ್ಟೋರೇಜ್‌ ಅನ್ನು ಪಡೆದುಕೊಂಡಿದೆ.

ಕ್ಯಾಮೆರಾ ಸೆನ್ಸಾರ್‌

ಮೊಟೊ G85 5G ಫೋನ್‌ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿದುಕೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸೌಲಭ್ಯ ಪಡೆದಿದ್ದು, ಎರಡನೇ ಕ್ಯಾಮೆರಾವು 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯ ಪಡೆದಿದೆ. ಇನ್ನು ಮುಂಭಾಗದಲ್ಲಿ 32 ಮೆಗಾ ಪಿಕ್ಸೆಲ್‌ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ.

ಬ್ಯಾಟರಿ ಸಾಮರ್ಥ್ಯ

ಮೊಟೊ G85 5G ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯ ಪಡೆದಿದ್ದು, ಇದಕ್ಕೆ ಸಪೋರ್ಟ್‌ ಆಗಿ 33W ಟರ್ಬೋಪವರ್‌ ಫಾಸ್ಟ್‌ ಚಾರ್ಜಿಂಗ್‌ ಆಯ್ಕೆ ಇದೆ. ಹಾಗೆಯೇ ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಇದು 4G, 5G, VoLTE, Vo5G, ಬ್ಲೂಟೂತ್ v5.3, ವೈಫೈ, NFC, USB-C v3.2 ಆಯ್ಕೆಗಳನ್ನು ಪಡೆದುಕೊಂಡಿದೆ. ಅಲ್ಲದೇ ಇನ್‌ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌, ಡಾಲ್ಬಿ ಅಟ್ಮೋಸ್‌ ಆಯ್ಕೆಗಳು ಇವೆ.

Best Mobiles in India

English summary
Motorola G85 5G received huge price cut on Flipkart Website in India. Know more details here. ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ನಲ್ಲಿ ಮೊಟೊರೊಲಾ ಸಂಸ್ಥೆಯ ಮೊಟೊರೊಲಾ G85 5G (Motorola G85 5G) ಫೋನ್‌ ಶೇ. 13% ರಷ್ಟು ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಈ ಫೋನಿನ 12 GB RAM + 256 GB ಸ್ಟೋರೇಜ್‌ನ ವೇರಿಯಂಟ್‌ ಅನ್ನು ಗ್ರಾಹಕರು 19,999ರೂ. ಗಳ ಆಫರ್‌ ಬೆಲೆಯಲ್ಲಿ ಖರೀದಿ ಮಾಡಬಹುದು.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+