Home
ಸುದ್ದಿಜಾಲ

Motorola: 48MP ನೊಂದಿಗೆ ಟ್ರಿಪಲ್‌ ರಿಯರ್‌ ಕ್ಯಾಮೆರಾ, ಮೊಟೊರೊಲಾ ಫೋನ್‌ಗೆ ದೊಡ್ಡ ಆಫರ್!

ಮೊಟೊರೊಲಾ (Motorola) ಫೋನ್‌ಗಳು ಸಾಮಾನ್ಯವಾಗಿ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಸ್ಟೋರೇಜ್‌ ಹಾಗೂ ಕ್ಯಾಮೆರಾ ಫೀಚರ್ಸ್‌ ನೀಡುವ ಫೋನ್‌ಗಳಾಗಿವೆ. ಅದರಂತೆ ಈಗ ಬಜೆಟ್‌ ಬೆಲೆ ವಿಭಾಗದಲ್ಲಿ ಹೆಚ್ಚು ಸೇಲ್‌ ಆಗುತ್ತಿರುವ ಮೊಟೊರೊಲಾ ಫೋನ್‌ಗೆ ಇದೀಗ ದೊಡ್ಡ ಪ್ರಮಾಣದ ಆಫರ್ ನೀಡಲಾಗಿದೆ.

ಹೌದು, ಮೊಟೊರೊಲಾ G9 ಸ್ಮಾರ್ಟ್‌ಫೋನ್ (Motorola G9 smartphone) ಇದೀಗ ಭಾರೀ ಆಫರ್ ಬೆಲೆಯಲ್ಲಿ ಲಭ್ಯ ಇದೆ. ಈ ಸ್ಮಾರ್ಟ್‌ಫೋನ್ 48 ಮೆಗಾಪಿಕ್ಸೆಲ್‌ನೊಂದಿಗೆ ಟ್ರಿಪಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು, 5000 mAh ಸಾಮರ್ಥ್ಯದ ಬ್ಯಾಟರಿ ಮೂಲಕ ಉತ್ತಮ ಬ್ಯಾಕಪ್‌ ನೀಡಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಆಫರ್ ಬೆಲೆ ವಿವರ ಏನು ಅನ್ನೋದನ್ನು ನೋಡೋಣ ಬನ್ನಿ.

48MP ನೊಂದಿಗೆ ಟ್ರಿಪಲ್‌ ರಿಯರ್‌ ಕ್ಯಾಮೆರಾ, ಮೊಟೊರೊಲಾ ಫೋನ್‌ಗೆ ದೊಡ್ಡ ಆಫರ್!

ಮೊಟೊರೊಲಾ G9 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್‌ ಆಫರ್ ಬೆಲೆ ತಿಳಿಯುವ ಮುನ್ನ ಇದು ಏನೇನೆಲ್ಲಾ ವಿಶೇಷ ಫೀಚರ್ಸ್‌ ಆಯ್ಕೆ ಪಡೆದುಕೊಂಡಿದೆ ಅನ್ನೋದನ್ನು ತಿಳಿಯುವ ಪ್ರಯತ್ನ ಮಾಡೋಣ. ಅದರಂತೆ ಈ ಫೋನ್ 6.5 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, ಇದು 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಹಾಗೂ 82.2% ಸ್ಕ್ರೀನ್-ಟು-ಬಾಡಿ ಅನುಪಾತ, 269 ppi ಸಾಂದ್ರತೆಯೊಂದಿಗೆ ಉತ್ತಮ ವೀಕ್ಷಣೆ ನೀಡಲಿದೆ.

ಮೊಟೊರೊಲಾ G9 ಸ್ಮಾರ್ಟ್‌ಫೋನ್ ಪ್ರೊಸೆಸರ್‌ ವಿವರ: ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ SM6115 ಸ್ನಾಪ್ಡ್ರಾಗನ್ 662 (11 nm) ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 10 ಓಎಸ್‌ ಅನ್ನು ರನ್‌ ಮಾಡಲಿದೆ. ಇದರೊಂದಿಗೆ ಅಡ್ರಿನೊ 610 ಗ್ರಾಫಿಕ್ಸ್‌ ಕಾರ್ಡ್‌ ಬಲ ಪಡೆದಿದ್ದು, 4GB RAM ಹಾಗೂ 64GB ಇಂಟರ್‌ ಸ್ಟೋರೇಜ್‌ ಮೂಲಕ ಉತ್ತಮವಾಗಿ ಕೆಲಸ ಮಾಡಲಿದೆ. ಅದಾಗ್ಯೂ ನೀವು ಎಸ್‌ಡಿ ಕಾರ್ಡ್ ಬಳಕೆ ಮಾಡಿಕೊಂಡು ಸ್ಟೋರೇಜ್‌ ಅನ್ನು ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ.

48MP ನೊಂದಿಗೆ ಟ್ರಿಪಲ್‌ ರಿಯರ್‌ ಕ್ಯಾಮೆರಾ, ಮೊಟೊರೊಲಾ ಫೋನ್‌ಗೆ ದೊಡ್ಡ ಆಫರ್!

ಮೊಟೊರೊಲಾ G9 ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು, ಅದರಲ್ಲಿ 48 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ ಹಾಗೂ 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಹಾಗೂ 2 ಮೆಗಾಪಿಕ್ಸೆಲ್‌ ಡೆಪ್ಥ್ ಸೆನ್ಸರ್ ಹೊಂದಿದ್ದು, ಈ ಕ್ಯಾಮೆರಾಗಳು ಎಲ್‌ಇಡಿ ಫ್ಲ್ಯಾಶ್, ಹೆಚ್‌ಡಿಆರ್‌ ಹಾಗೂ ಪನೋರಮಾ ಫೀಚರ್ಸ್‌ ಪಡೆದಿದೆ. ಇದರೊಂದಿಗೆ 8 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾವನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ.

ಮೊಟೊರೊಲಾ G9 ಬ್ಯಾಟರಿ ಹಾಗೂ ಇತರೆ: ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, 20W ವೈರ್ಡ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಇದರೊಂದಿಗೆ 3.5 ಎಂಎಂ ಜ್ಯಾಕ್ , ವೈ-ಫೈ 802.11 a/b/g/n/ac, ಡ್ಯುಯಲ್-ಬ್ಯಾಂಡ್, ವೈ-ಫೈ ಡೈರೆಕ್ಟ್, ಬ್ಲೂಟೂತ್ ಆವೃತ್ತಿ 5.0, A2DP, LE, ಎಫ್‌ಎಮ್‌ ರೇಡಿಯೋ ಸೇರಿದಂತೆ ಅನೇಕ ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ.

ಮೊಟೊರೊಲಾ G9 ಸ್ಮಾರ್ಟ್‌ಫೋನ್‌ ಆಫರ್ ಮಾಹಿತಿ: ಈ ಸ್ಮಾರ್ಟ್‌ಫೋನ್ 14,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 8,999ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ಫೋನ್‌ಗೆ ಫ್ಲಿಪ್‌ಕಾರ್ಟ್‌ನಲ್ಲಿ 40% ರಿಯಾಯಿತಿ ಘೋಷಣೆ ಮಾಡಲಾಗಿದೆ. ಅದಾಗ್ಯೂ ನೀವು ಕೆಲವು ಬ್ಯಾಂಕ್‌ ಆಪರ್ ಬಳಕೆ ಮಾಡಿಕೊಂಡು ಇನ್ನೂ ಕಡಿಮೆ ದರದಲ್ಲಿ ಈ ಫೋನ್‌ ಖರೀದಿ ಮಾಡಬಹುದಾಗಿದೆ.

48MP ನೊಂದಿಗೆ ಟ್ರಿಪಲ್‌ ರಿಯರ್‌ ಕ್ಯಾಮೆರಾ, ಮೊಟೊರೊಲಾ ಫೋನ್‌ಗೆ ದೊಡ್ಡ ಆಫರ್!

ಈ ಫೋನ್ ಖರೀದಿ ಮಾಡುವಾಗ ನೀವು ಆಕ್ಸಿಸ್ ಬ್ಯಾಂಕ್‌ ಕಾರ್ಡ್ ಬಳಕೆ ಮಾಡಿಕೊಂಡು ಖರೀದಿ ಮಾಡಿದ್ರೆ 5% ಕ್ಯಾಶ್‌ಬ್ಯಾಕ್ ಸಿಗಲಿದೆ. ಇದರೊಂದಿಗೆ ನೀವು ಎಸಿ ಖರೀದಿ ಮಾಡಲು ಮುಂದಾದರೆ ಈ ಫೋನ್‌ ಖರೀದಿ ಆಧಾರದ ಮೇಲೆ ಎಸಿ ಮೇಲೆ ಇನ್ನೂ ಹೆಚ್ಚಿನ ಆಫರ್ ಸಿಗಲಿದೆ. ಅಲ್ಲದೆ ಇಷ್ಟು ಹಣ ಪಾವತಿ ಮಾಡಿ ಖರೀದಿ ಮಾಡಲು ಸಾಧ್ಯವಿಲ್ಲ್ ಎಂದಾದರೆ ನೀವು ತಿಂಗಳಿಗೆ 317 ರೂ.ಗಳನ್ನು ಪಾವತಿ ಮಾಡಿ ಇಎಮ್‌ಐ ಆಯ್ಕೆ ಮೂಲಕ ಖರೀದಿ ಮಾಡಬಹುದು.

Best Mobiles in India

English summary
Motorola G9 smartphone is now available at a huge offer price. This smartphone has got a triple rear camera option with 48 megapixels.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+