Motorola: ಮೊಟೊರೊಲಾ ಇನ್ಮುಂದೆ ತನ್ನ ಫೋನ್‌ಗಳಿಗೆ ಈ ವಿಶೇಷ ಸೌಲಭ್ಯ ನೀಡಲಿದೆ! ಏನದು..? ಪ್ರಯೋಜನ ಏನು?
ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಮೊಟೊರೊಲಾ (Motorola) ಫೋನ್‌ಗಳು ಬಳಕೆದಾರರಿಗೆ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಫೀಚರ್ಸ್ ಅನುಭವ ನೀಡುತ್ತಿವೆ. ಈಗಾಗಲೇ ಸಾಕಷ್ಟು ಭಿನ್ನ ಫೀಚರ್ಸ್ ಆಯ್ಕೆಯ ಸ್ಮಾರ್ಟ್‌ಫೋನ್‌ಗಳು ಸದ್ದು ಮಾಡುತ್ತಿದ್ದು, ಈ ನಡುವೆ ಮೊಟೊರೊಲಾ ತನ್ನ ಫೋನ್‌ಗಳಲ್ಲಿ ಹೊಸ ಸೌಲಭ್ಯ ಕಲ್ಪಿಸಿಕೊಡಲು ಮುಂದಾಗಿದೆ.
ಹೌದು, ನಾವೀನ್ಯತೆಗೆ ಹೆಸರುವಾಸಿಯಾಗಿರುವ ಮೊಟೊರೊಲಾ ಇದೀಗ ಮುಂಬರುವ ಸ್ಮಾರ್ಟ್‌ಫೋನ್‌ಗಳಲ್ಲಿ ಈ ವರ್ಷದಿಂದಲೇ ಈ ಪ್ರಯೋಜನ ಕಲ್ಪಿಸಿಕೊಡುವುದಾಗಿ ತಿಳಿಸಿದೆ. ಈ ಮೂಲಕ ಬಜೆಟ್-ಸ್ನೇಹಿ ಸ್ಮಾರ್ಟ್‌ಫೋನ್‌ಗಳೂ ಸಹ ಸ್ಕ್ರ್ಯಾಚ್ ಮತ್ತು ಡ್ರಾಪ್ ರೆಸಿಸ್ಟೆನ್ಸ್ (Scratch and drop resistance) ಆಗಿರಲಿವೆ. ಹಾಗಿದ್ರೆ, ಏನಿದು ಹೊಸ ಸೌಲಭ್ಯ?, ಇದರಿಂದ ಆಗುವ ಅನುಕೂಲಗಳು ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಮೊಟೊರೊಲಾ ಸ್ಮಾರ್ಟ್‌ಫೋನ್‌ಗಳು: ಮೊಟೊರೊಲಾದ ತಮ್ಮ ಸ್ಮಾರ್ಟ್‌ಫೋನ್‌ಗಳ ದೀರ್ಘ ಬಾಳಿಕೆಗಾಗಿ ಒಂದು ದೊಡ್ಡ ಕ್ರಮವನ್ನು ತೆಗೆದುಕೊಳ್ಳುತ್ತಿದೆ. ಅಂದರೆ ಇನ್ಮುಂದೆ ಲಾಂಚ್ ಆಗುವ ತನ್ನ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ (Corning Gorilla Glass) ಅನ್ನು ಬಳಸುವುದಾಗಿ ಘೋಷಣೆ ಮಾಡಿದೆ. ಈ ಮೂಲಕ ಅತ್ಯಂತ ಬಜೆಟ್-ಸ್ನೇಹಿ ಸ್ಮಾರ್ಟ್‌ಫೋನ್‌ಗಳು ಸಹ ಇನ್ಮುಂದೆ ಸ್ಕ್ರ್ಯಾಚ್ ಮತ್ತು ಡ್ರಾಪ್ ರೆಸಿಸ್ಟೆನ್ಸ್ ಆಗಿರಲಿವೆ.
ಈ ಗೊರಿಲ್ಲಾ ಗ್ಲಾಸ್‌ಅನ್ನು ಈಗಾಗಲೇ ಉನ್ನತ-ಮಟ್ಟದ ಫೋನ್‌ಗಳಲ್ಲಿ ಮಾತ್ರ ಬಳಕೆ ಮಾಡಲಾಗುತ್ತಿತ್ತು. ಜೊತೆಗೆ ಇದು ಸಾಮಾನ್ಯ ಅಭ್ಯಾಸ ಸಹ ಆಗಿತ್ತು. ಆದರೆ ಈಗ ಬಜೆಟ್ ಬೆಲೆಯ ಫೋನ್‌ಗಳಲ್ಲೂ ಲಭ್ಯವಾಗುತ್ತಿರುವುದು ಸಂತಸದ ವಿಚಾರವಾಗಿದೆ.ಆದರೆ ಮೊಟೊರೊಲಾ ಇದೀಗ ಗ್ಲಾಸ್‌ನ ಯಾವ ಆವೃತ್ತಿಗಳನ್ನು ಬಳಕೆ ಮಾಡುತ್ತಾರೆ ಅನ್ನೋ ವಿಚಾರವನ್ನು ಮಾತ್ರ ನಿರ್ದಿಷ್ಟಪಡಿಸಿಲ್ಲ. ಅದಾಗ್ಯೂ ಇತ್ತೀಚಿನ ಈವೆಂಟ್‌ನಲ್ಲಿ ಗೊರಿಲ್ಲಾ ಗ್ಲಾಸ್ 5 ಮತ್ತು ಹೊಸ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಅನ್ನು ಪ್ರದರ್ಶಿಸಿದ್ದಾರೆ.

ಸಾಕಷ್ಟು ಸ್ಮಾರ್ಟ್ ಫೋನ್ ತಯಾರಿಕಾ ಬ್ರ್ಯಾಂಡ್‌ಗಳು ವಿಶೇಷ ಫೀಚರ್ಸ್‌ನೊಂದಿಗೆ ಸಾಕು ಎನಿಸುವಷ್ಟು ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿವೆ. ಇದು ಹೆಚ್ಚಿನ ಸ್ಪರ್ಧೆಗೆ ಕಾರಣವಾಗಿದ್ದು, ಮೊಟೊರೊಲಾ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಈಗ ಈ ಮಾರ್ಗ ಅನುಸರಿಸುತ್ತಿದೆ ಎನ್ನಲಾಗಿದೆ. ಸ್ಪರ್ಧಾತ್ಮಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಇದು ಸ್ವಲ್ಪ ಸಹಾಯ ಸಹ ಆಗಬಹುದು.
ಗೊರಿಲ್ಲಾ ಗ್ಲಾಸ್ ಎಂದರೇನು?: ಗೊರಿಲ್ಲಾ ಗ್ಲಾಸ್ ಅನ್ನು ಕಾರ್ನಿಂಗ್ ಇಂಕ್ ಅಭಿವೃದ್ಧಿಪಡಿಸಿದ ಮತ್ತು ತಯಾರಿಸಿದ ಟೆಂಪರ್ಡ್ ಗ್ಲಾಸ್ ಆಗಿದೆ. ಇದು ಒಂದು ರೀತಿಯ ಅಲ್ಯುಮಿನೋಸಿಲಿಕೇಟ್ ಗ್ಲಾಸ್ ಆಗಿದ್ದು ಅದು ರಾಸಾಯನಿಕ ಪ್ರಕ್ರಿಯೆಯ ಮೂಲಕ ಬಲಗೊಳ್ಳುತ್ತದೆ. ಗೊರಿಲ್ಲಾ ಗ್ಲಾಸ್ ಹಗುರವಾದ, ತೆಳ್ಳಗಿನ ಮತ್ತು ಹಾನಿಗೆ ನಿರೋಧಕವಾಗಿದ್ದು ಈ ಗ್ಲಾಸ್‌ನ ಸಂಯೋಜನೆಯು ಪೊಟ್ಯಾಸಿಯಮ್ ಅಯಾನುಗಳನ್ನು ಮೇಲ್ಮೈಗೆ ಹರಡಲು ಅನುವು ಮಾಡಿಕೊಡುತ್ತದೆ.
ಗೊರಿಲ್ಲಾ ಗ್ಲಾಸ್ ಅನ್ನು ಮೊಬೈಲ್ ಫೋನ್‌ಗಳು, ಪೋರ್ಟಬಲ್ ಮೀಡಿಯಾ ಪ್ಲೇಯರ್‌ಗಳು, ಕಂಪ್ಯೂಟರ್ ಡಿಸ್‌ಪ್ಲೇಗಳು ಮತ್ತು ಟೆಲಿವಿಷನ್ ಸ್ಕ್ರೀನ್‌ಗಳಂತಹ ಪೋರ್ಟಬಲ್ ಎಲೆಕ್ಟ್ರಾನಿಕ್ ಡಿವೈಸ್‌ಗಳಿಗೆ ಕವರ್ ಗ್ಲಾಸ್ ಆಗಿ ಬಳಕೆ ಮಾಡಲಾಗುತ್ತದೆ. ಇದು ಸ್ಕ್ರಾಚ್ ಮತ್ತು ಒತ್ತಡ ನಿರೋಧಕವಾಗಿದೆ ಮತ್ತು ಗಟ್ಟಿಯಾದ ಮತ್ತು ಒರಟಾದ ಮೇಲ್ಮೈಗಳಲ್ಲಿ 1.6 ಮೀಟರ್‌ಗಳಷ್ಟು ಹನಿಗಳನ್ನು ತಡೆದುಕೊಳ್ಳಬಲ್ಲದು. ಸಾಂಪ್ರದಾಯಿಕ ಗಾಜಿನ ವಿನ್ಯಾಸಗಳಿಗಿಂತ ಇದು ನಾಲ್ಕು ಪಟ್ಟು ಬಲಶಾಲಿಯಾಗಿದೆ ಎಂದು ಕಾರ್ನಿಂಗ್ ಹೇಳಿದೆ.

ಇನ್ನು ಈ ಮೇಲಿನ ವಿಷಯ ಹೊರತುಪಡಿಸಿ ಮೊಟೊರೊಲಾ MWC ನಲ್ಲಿ ಸ್ಮಾರ್ಟ್ ಕನೆಕ್ಟ್ ಎಂಬ ಹೊಸ ಸಾಫ್ಟ್‌ವೇರ್ ಫೀಚರ್ಸ್ ಅನ್ನೂ ಸಹ ಅನಾವರಣಗೊಳಿಸಿದೆ. ಈ ನಿಫ್ಟಿ ಟೂಲ್ಸ್ ಮೊಟೊರೊಲಾ ಮತ್ತು ಲೆನೊವೊ ಡಿವೈಸ್‌ಗಳನ್ನು ಲೆನೊವೊ ಪಿಸಿ ಗಳಿಗೆ ಸಂಪರ್ಕಿಸಲು ಅನುಮತಿಸುತ್ತದೆ. ಎರಡೂ ಸಾಧನಗಳಲ್ಲಿ ಪಿಸಿ ಯ ಕೀಬೋರ್ಡ್ ಅನ್ನು ಬಳಕೆ ಮಾಡಲು, ನೋಡಿಫಿಕೇಶನ್ ಮತ್ತು ಕ್ಲಿಪ್‌ಬೋರ್ಡ್ ಕಂಟೆಂಟ್ ಅನ್ನು ಹಂಚಿಕೊಳ್ಳಲು, ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್ ಅನ್ನು ವೆಬ್‌ಕ್ಯಾಮ್ ಅಥವಾ ಹಾಟ್‌ಸ್ಪಾಟ್ ಆಗಿ ಬಳಸಲು ನಿಮಗೆ ಅನುಮತಿಸುತ್ತದೆ.


Click it and Unblock the Notifications








