ಮೊಟೊರೊಲಾದ ಈ ಹೊಸ ಡಿವೈಸ್ ಅಪಾಯದ ಸಂದರ್ಭದಲ್ಲಿ ನಿಮ್ಮನ್ನು ಕಾಪಾಡುತ್ತದೆ, ಒಂದೇ ಕ್ಲಿಕ್‌ನಲ್ಲಿ!
ಆಪಲ್ ಸ್ಮಾರ್ಟ್ ಡಿವೈಸ್‌ಗಳು ಬಳಕೆದಾರರನ್ನು ಎಂತಹ ಕಠಿಣ ಸ್ಥಿತಿಯಲ್ಲಿದ್ದರೂ ಕಾಪಾಡುವ ಕೆಲಸ ಮಾಡುತ್ತವೆ ಎಂದು ಹೇಳಲಾಗುತ್ತಿತ್ತು. ಜೊತೆಗೆ ಆಪಲ್ ಸೇರಿದಂತೆ ಕೆಲವು ಕಂಪೆನಿಗಳ ಸ್ಮಾರ್ಟ್‌ವಾಚ್ ಹಾಗೂ ಫೋನ್ ಹೊರತುಪಡಿಸಿ ಇತರೆ ಡಿವೈಸ್‌ಗಳು ಈ ಕೆಲಸ ಮಾಡುವ ಸಾಮರ್ಥ್ಯ ಪಡದಿರಲಿಲ್ಲ. ಆದರೆ, ಈಗ ಮೊಟೊರೊಲಾ ಆಪಲ್‌ಗೆ ಸೆಡ್ಡು ಹೊಡೆಯಲು ಮುಂದಾಗಿದೆ.
ಹೌದು, ಯಾರೇ ಆದರೂ ಸಹ ಒಂದಲ್ಲಾ ಒಂದು ಕ್ಷಣ ಅಪಾಯಕ್ಕೆ ಸಿಲುಕುವವರೇ.. ಈ ವೇಳೆ ಕೆಲವರು ಬಚಾವ್ ಆಗಬಹುದು, ಇನ್ನೂ ಕೆಲವರು ಪ್ರಾಣ ಕಳೆದುಕೊಳ್ಳಬಹದು. ಆದರೆ ಇಂತಹ ಪರಿರಿಸ್ಥಿತಿಯಲ್ಲಿ ಸಹಾಯಕ್ಕೆ ಬರಲಿ ಎಂದೇ ಸ್ಮಾರ್ಟ್ ಡಿವೈಸ್‌ಗಳಲ್ಲಿ ವಿಶೇಷ ಉಪಗ್ರಹ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುತ್ತಿದೆ. ಈ ನಡುವೆ ಮೊಟೊರೊಲಾ ಈ ಸೌಲಭ್ಯ ನೀಡಲು ಸಜ್ಜಾಗಿದೆ. ಅಂದರೆ ಬಳಕೆದಾರರ ಸಂಕಷ್ಟಕ್ಕೆ ಸಿಲುಕಿದಾಗ ಕಾಪಾಡುವ ಕೆಲಸ ಮಾಡಲಾಗುತ್ತದೆ, ಅದೂ ಸಹ ಒಂದೇ ಕ್ಲಿಕ್‌ನಲ್ಲಿ. ಹಾಗಿದ್ರೆ, ಏನಿದು ಡಿವೈಸ್?, ಇದರ ಫೀಚರ್ಸ್ ಏನು? ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಈ ಡಿವೈಸ್ ನಿಮ್ಮ ಪ್ರಾಣ ಉಳಿಸಲು ಸಹಕಾರಿ: ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಅದರಲ್ಲೂ ಪ್ರೀಮಿಯಂ ಪೋನ್‌ಗಳಲ್ಲಿ ಮಾತ್ರ ಉಪಗ್ರಹ ಸಂಪರ್ಕ ಫೀಚರ್ಸ್ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಆದರೆ, ಈವರೆಗೆ ಈ ಸೌಲಭ್ಯವನ್ನು ಯುಎಸ್ ಬ್ರ್ಯಾಂಡ್ ಆಪಲ್ ಮತ್ತು ಚೈನೀಸ್ ಟೆಕ್ ದೈತ್ಯ ಹುವಾವೇ ಡಿವೈಸ್‌ಗಳಲ್ಲಿ ಮಾತ್ರ ಕಾಣಲಾಗುತ್ತಿತ್ತು. ಈಗ ಮೊಟೊರೊಲಾ ಸಹ ಈ ಸೌಲಭ್ಯ ನೀಡಲು ಮುಂದಾಗಿದೆ.
ಮೊಟೊರೊಲಾ ಕಳೆದ ಫೆಬ್ರವರಿಯಲ್ಲಿ ಉಪಗ್ರಹ ಸಂಪರ್ಕ ಬೆಂಬಲದೊಂದಿಗೆ ಒರಟಾದ ಸ್ಮಾರ್ಟ್‌ಫೋನ್ ಮೊಟೊರೊಲಾ ಡೆಫ್ಯ್ 2 (Motorola Defy 2)ಅನ್ನು ಲಾಂಚ್ ಮಾಡಿತ್ತು. ಈ ಮೂಲಕ ಲೆನೊವೊನಾ ಉಪ ಬ್ರ್ಯಾಂಡ್ ಆಗಿರುವ ಮೊಟೊರೊಲಾ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿತ್ತು. ಈ ನಡುವೆ ಒಂದು ಹೆಜ್ಜೆ ಮುಂದೆ ಹೋಗಿರುವ ಮೊಟೊರೊಲಾ ದ್ವಿಮುಖ ಉಪಗ್ರಹ ಕರೆ ಮತ್ತು ಟೆಕ್ಸ್ಟ್ ಮೆಸೆಜ್ ಕಳುಹಿಸುವಿಕೆ ಬೆಂಬಲ ಹೊಂದಿರುವ ಹೊಸ ಫೋನ್ ಮಾಡ್ಯೂಲ್ ಬಗ್ಗೆಯೋ ಘೋಷಣೆ ಮಾಡಿದೆ.
ಟಿಯಾಂಟಾಂಗ್ ಉಪಗ್ರಹ ಫೋನ್ ಮಾಡ್ಯೂಲ್ (Tiantong satellite phone module) ಅನ್ನು ಘೋಷಣೆ ಮಾಡಿರುವ ಮೊಟೊರೊಲಾ ಇದು ದ್ವಿಮುಖ ಉಪಗ್ರಹ ಫೋನ್ ಕರೆಗಳು ಮತ್ತು ಟೆಕ್ಸ್ಟ್ ಮೆಸೆಜ್ ಕಳುಹಿಸುವಿಕೆಯನ್ನು ಬೆಂಬಲಿಸುತ್ತದೆ. ಅದರಲ್ಲೂ ಒಂದೇ ಕ್ಲಿಕ್‌ನಲ್ಲಿ ಬಳಕೆದಾರರು ತಮ್ಮ ಫೋನ್‌ಗಳಲ್ಲಿ ಉಪಗ್ರಹ ಕರೆಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಲಾಗಿದೆ.
ಈ ಮಾಡ್ಯೂಲ್‌ನ ಹೆಸರೇ ಸೂಚಿಸುವಂತೆ, ಉಪಗ್ರಹ ಲಿಂಕ್ ಅನ್ನು ಚೀನಾದ ಬಾಹ್ಯಾಕಾಶ-ಆಧಾರಿತ ಮಾಹಿತಿ ಮೂಲಸೌಕರ್ಯ ಮತ್ತು ಬ್ರಿಟಿಷ್ ಇನ್‌ಮಾರ್‌ಸ್ಯಾಟ್ ನೆಟ್‌ವರ್ಕ್‌ಗೆ ಚೀನೀ ಪರ್ಯಾಯವಾದ ಟಿಯಾಂಟಾಂಗ್-1 ಒದಗಿಸುತ್ತದೆ. ಇದರಲ್ಲಿ ಗಮನಿಸಬೇಕಾದ ಪ್ರಮುಖ ವಿಷಯ ಏನೆಂದರೆ ಹುವಾವೇನ ಮೇಟ್ 60 ಸರಣಿಯು ಸಹ ಇದೇ ಉಪಗ್ರಹ ನೆಟ್‌ವರ್ಕ್ ಅನ್ನು ಬಳಕೆ ಮಾಡುತ್ತಿದೆ.
ಆರಂಭದಲ್ಲಿ ಈ ಮಾಡ್ಯೂಲ್ ಕೇವಲ ಚೀನಾದಲ್ಲಿ ಮಾತ್ರ ಲಭ್ಯ ಇರಲಿವೆ ಎನ್ನಲಾಗಿದ್ದು, ಈ ಮಾಡ್ಯೂಲ್ ಅನ್ನು ಮುಂದಿನ ಯಾವ ಸ್ಮಾರ್ಟ್‌ಫೋನ್ ಜೊತೆಗೆ ಜೋಡಿಸಲಾಗುವುದು ಅಥವಾ ಇದನ್ನು ಬಹು ಮೊಟೊರೊಲಾ ಫೋನ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿದೆಯೇ ಅಥವಾ ಇತರೆ ಫೋನ್‌ಗಳಿಗೆ ವಿನ್ಯಾಸಗೊಳಿಸಲಾಗಿದೆಯೇ ಎಂಬ ಬಗ್ಗೆ ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ. ಜೊತೆಗೆ ಇದರ ಬೆಲೆ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ.
ಇನ್ನು ಈಗಾಗಲೇ ಲಾಂಚ್ ಆಗಿರುವ ಮೊಟೊರೊಲಾ ಡೆಫ್ಯ್ 2 ಬಗ್ಗೆ ಬರುವುದಾದ್ರೆ ಇದೂ ಸಹ ಸಂಪೂರ್ಣ ಉಪಗ್ರಹ ಸಂಪರ್ಕ-ಬೆಂಬಲಿತವಾಗಿದೆ. ಬುಲ್ಲಿಟ್‌ನ ಸಹಯೋಗದೊಂದಿಗೆ ನಿರ್ಮಿಸಲಾದ ಡಿವೈಸ್ ದ್ವಿಮುಖ ಉಪಗ್ರಹ ಸಂಪರ್ಕವನ್ನು ಬೆಂಬಲಿಸುತ್ತದೆ. ಜೊತೆಗೆ ಟೆಕ್ಸ್ಟ್ ಮೆಸೆಜ್ ಕಳುಹಿಸುವ ಕೆಲಸ ಮಾಡುತ್ತದೆ. ಈ 24×7 SOS ಬೆಂಬಲದೊಂದಿಗೆ ಬಳಕೆದಾರರು ತಮ್ಮ ಸ್ಥಳವನ್ನು ಈ ಮೂಲಕ ಶೇರ್ ಮಾಡಿಕೊಳ್ಳಬಹುದಾಗಿದೆ.

ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಉಪಗ್ರಹ ಸಂಪರ್ಕ ದೊಡ್ಡ ಫೀಚರ್ಸ್ ಆಗಿ ಗುರುತಿಸಿಕೊಳ್ಳಲಿದೆ. ಈ ಕಾರಣಕ್ಕಾಗಿಯೇ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ನೀಡಲು ಹಲವಾರು ಸ್ಮಾರ್ಟ್‌ಫೋನ್ ತಯಾರಿಕಾ ಬ್ರ್ಯಾಂಡ್‌ಗಳು ಈಗಾಗಲೇ ಈ ಸೌಲಭ್ಯದಲ್ಲಿ ಕೆಲಸ ಮಾಡುತ್ತಿವೆ. ಈ ಮೂಲಕ ಮುಂದಿನ ಕೆಲವೇ ವರ್ಷಗಳಲ್ಲಿ ಎಲ್ಲಾ ಫೋನ್‌ಗಳಲ್ಲಿ ಈ ಸೌಲಭ್ಯ ಬರಲಿದೆ ಎಂಬುದನ್ನು ನಿರೀಕ್ಷೆ ಮಾಡಬಹುದು.


Click it and Unblock the Notifications








