Home
ಸುದ್ದಿಜಾಲ

Bending Smartphone: ಫೋಲ್ಡಬಲ್ ಫೋನ್‌ ಓಕೆ, ಇದೇನಿದು ಬೆಂಡಿಂಗ್ ಸ್ಮಾರ್ಟ್‌ಫೋನ್? ಇದರ ವಿಶೇಷತೆ ಏನು?

ಈಗಂತೂ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಫೋಲ್ಡಬಲ್‌ ಫೋನ್‌ಗಳಿಗೆ (foldable smartphone) ಹೆಚ್ಚಿನ ಬೇಡಿಕೆ ಇದೆ. ಸ್ಯಾಮ್‌ಸಂಗ್‌ (Samsung) ಅನ್ನೇ ಅನುಕರಣೆ ಮಾಡಿದ ಅದೆಷ್ಟೋ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪೆನಿಗಳು ಸುಧಾರಿತ ಫೀಚರ್ಸ್‌ನೊಂದಿಗೆ ಹೊಸ ಹೊಸ ಫೋಲ್ಡಬಲ್‌ ಫೋನ್‌ಗಳನ್ನು ಲಾಂಚ್‌ ಮಾಡಿಕೊಂಡು ಬಂದಿವೆ. ಆದರೆ ಈಗ ಇದಕ್ಕೂ ಮೀರಿದ ಅನ್ವೇಷಣೆಯೊಂದು ಈಗ ವರದಿಯಾಗಿದೆ.

ಹೌದು, ಈಗಂತೂ ಬಹುತೇಕ ಎಲ್ಲಾ ಬ್ರ್ಯಾಂಡ್‌ಗಳು ತಮ್ಮದೇ ಆದ ಫೋಲ್ಡ್ ಅಥವಾ ಫ್ಲಿಪ್ ಸ್ಮಾರ್ಟ್‌ಫೋನ್‌ಗಳನ್ನು (fold or flip smartphone) ಲಾಂಚ್‌ ಮಾಡುವುದರಲ್ಲಿ ಬ್ಯುಸಿ ಆಗಿವೆ. ಅದರಲ್ಲೂ ಕಳೆದ ವರ್ಷಗಳಲ್ಲಿ ಲಾಂಚ್‌ ಮಾಡಲಾದ ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್ (Samsung Galaxy Z Fold) ಮತ್ತು ಫ್ಲಿಪ್‌ ಸರಣಿಯ ಫೋನ್‌ಗಳು, ಒಪ್ಪೋ ಫೈಂಡ್‌ N3 ಫ್ಲಿಪ್‌(Oppo Find N3 Flip), ಗೂಗಲ್‌ ಪಿಕ್ಸೆಲ್‌ ಫೋಲ್ಡ್, ಒನ್‌ಪ್ಲಸ್ ಓಪನ್ ಮುಂತಾದ ಸ್ಮಾರ್ಟ್‌ಫೋನ್‌ಗಳು ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನವನ್ನೇ ಉಂಟು ಮಾಡಿವೆ. ಆದರೆ, ಈಗ ಬೆಂಡಿಂಗ್ ಸ್ಮಾರ್ಟ್‌ಫೋನ್ (motorola Bending Smartphone) ಸುಂಟರಗಾಳಿಯನ್ನೇ ಎಬ್ಬಿಸಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಫೋಲ್ಡಬಲ್ ಫೋನ್‌ ಓಕೆ, ಇದೇನಿದು ಬೆಂಡಿಂಗ್ ಸ್ಮಾರ್ಟ್‌ಫೋನ್? ಇದರ ವಿಶೇಷತೆ ಏನು?

ಮೊಟೊರೊಲಾ ತನ್ನ ಇತ್ತೀಚಿನ ಪರಿಕಲ್ಪನೆಯ ಸ್ಮಾರ್ಟ್‌ಫೋನ್ ಅನ್ನು ಲೆನೊವೊ ಟೆಕ್‌ ವರ್ಡ್‌ 23 (Lenovo Tech Word 23) ರಲ್ಲಿ ಪ್ರದರ್ಶಿಸಿದೆ. ಈ ಫೋನ್ ಬೃಹತ್ ಡಿಸ್‌ಪ್ಲೇಯೊಂದಿಗೆ ದೈತ್ಯ ಸ್ಮಾರ್ಟ್‌ವಾಚ್‌ನಂತೆ ಕಾಣಿಸಿಕೊಂಡಿದೆ. ಆದರೆ, ಇದು ಸ್ಮಾರ್ಟ್‌ಫೋನ್‌. ಅಂದರೆ ಹೊಸ ಪರಿಕಲ್ಪನೆಯನ್ನು ಹೊಂದಿರುವ ಬೆಂಡಿಂಗ್ ಸ್ಮಾರ್ಟ್‌ಫೋನ್ ಆಗಿದೆ. 2016 ಅನ್ನು ಬಿಟ್ಟರೆ ಅಂದಿನಿಂದ ಮೊಟೊರೊಲಾ ಹೊಸ ಪರಿಕಲ್ಪನೆ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿರಲಿಲ್ಲ. ಆದರೆ ಸುಮಾರು 7 ವರ್ಷಗಳ ನಂತರ ಈ ವಿಷಯ ಮುನ್ನೆಲೆಗೆ ಬಂದಿದೆ.

ಮೊಟೊರೊಲಾ ನೀಡಿದ ಮಾಹಿತಿ ನೀಡಿರುವ ಪ್ರಕಾರ, ಈ ಬಾಗುವ ಅಥವಾ ಬೆಂಡಿಂಗ್‌ ಸ್ಮಾರ್ಟ್‌ಫೋನ್ ಫುಲ್‌ ಹೆಚ್‌ಡಿ+ ಪೋಲೆಡ್ ಡಿಸ್‌ಪ್ಲೇ ಹೊಂದಿರಲಿದೆ. ಇದರೊಂದಿಗೆ ಡಿಸ್‌ಪ್ಲೇಯನ್ನು ಚಪ್ಪಟೆಯಾಗಿ ವೀಕ್ಷಣೆ ಮಾಡಿದರೆ 6.9 ಇಂಚಿನ ಡಿಸ್‌ಪ್ಲೇ ಅನುಭವವನ್ನು ನೀಡುತ್ತದೆ. ಇದು ಬೆಂಡಿಂಗ್‌ ಸೌಲಭ್ಯ ಹೊಂದಿರುವುದರಿಂದ ಹೇಗೆ ಬೇಕಾದರೂ ಇದನ್ನು ಬಳಕೆ ಮಾಡಬಹುದಾಗಿದೆ. ಅದರಲ್ಲೂ ನಿಮ್ಮ ಮಣಿಕಟ್ಟಿನ ಸುತ್ತಲೂ ವಾಚ್‌ ನಂತೆ ಸುತ್ತಿಕೊಳ್ಳಬಹುದು ಎಂದರೆ ನೀವೇ ಊಹೆ ಮಾಡಿಕೊಳ್ಳಿ.

ಫೋಲ್ಡಬಲ್ ಫೋನ್‌ ಓಕೆ, ಇದೇನಿದು ಬೆಂಡಿಂಗ್ ಸ್ಮಾರ್ಟ್‌ಫೋನ್? ಇದರ ವಿಶೇಷತೆ ಏನು?

ಈ ಸ್ಮಾರ್ಟ್‌ಫೋನ್‌ ಸೇಲ್‌ ಯಾವಾಗ ಆರಂಭ: ಮೊಟೊರೊಲಾ ಪ್ರದರ್ಶಿಸಿದ ಈ ಕಾನ್ಸೆಪ್ಟ್ ಪೇಂಟಿಂಗ್ ಸ್ಮಾರ್ಟ್‌ಫೋನ್ ಒಂದು ಮೂಲಮಾದರಿಯಾಗಿದೆ. ಆದರೆ ಇದು ಇನ್ನೂ ಉತ್ಪಾದನೆಯಾಗಿಲ್ಲ ಎಂಬುದು ನಿಮ್ಮ ಗಮನಕ್ಕೆ ಇರಲಿ. ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳು ಸುಮಾರು 5 ವರ್ಷಗಳಿಂದ ಮಾರುಕಟ್ಟೆಯಲ್ಲಿದ್ದರೂ ಇನ್ನೂ ಸಹ ಎಲ್ಲರಿಗೂ ಲಭ್ಯವಾಗಿಲ್ಲ. ಅದರಲ್ಲೂ ಬಜೆಟ್‌ ಬೆಲೆಯಲ್ಲಿ ಲಭ್ಯವಾಗುತ್ತವೆ ಎಂಬ ಬಗ್ಗೆ ಮಾತನಾಡುವ ಹಾಗೆಯೇ ಇಲ್ಲ. ಈ ಕಾರಣಕ್ಕೆ ಈ ಹೊಸ ಬೆಂಡಿಂಗ್‌ ಫೋನ್‌ ಲಭ್ಯವಾಗಲು ಇನ್ನೂ ಕೆಲವು ವರ್ಷಗಳು ಆಗಬಹುದು ಎನ್ನಲಾಗಿದೆ.

ಈ ನಡುವೆ ಒನ್‌ಪ್ಲಸ್‌ ಓಪನ್‌ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಲಾಗಿದೆ. ಇದು ಒನ್‌ಪ್ಲಸ್‌ನ ಮೊದಲ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ ಆಗಿದೆ. ಇದು ಭಾರತದಲ್ಲಿ ಲಭ್ಯ ಇದ್ದು, ಇದಕ್ಕೆ 1,39,999 ರೂ. ಗಳ ಬೆಲೆ ನಿಗದಿ ಮಾಡಲಾಗಿದೆ. ಈ ಫೋನ್‌ನ ನಡುವೆ ಒಪ್ಪೋ ಫೈಂಡ್‌ ಫೋನ್‌ ಹಾಗೂ ಇತರೆ ಕಂಪೆನಿಯ ಫೋಲ್ಡಬಲ್‌ ಫೋನ್‌ಗಳು ಒಂದಕ್ಕೊಂದು ಪೈಪೋಟಿಯಲ್ಲಿ ಸೇಲ್‌ ಆಗುತ್ತಿವೆ.

ಫೋಲ್ಡಬಲ್ ಫೋನ್‌ ಓಕೆ, ಇದೇನಿದು ಬೆಂಡಿಂಗ್ ಸ್ಮಾರ್ಟ್‌ಫೋನ್? ಇದರ ವಿಶೇಷತೆ ಏನು?

ಮೊಟೊರೊಲಾ ಬಗ್ಗೆ ಒಂದಿಷ್ಟು ವಿವರ... : ಮೊಟೊರೊಲಾ ಸ್ಮಾರ್ಟ್‌ ಗ್ಯಾಜೆಟ್‌ ವಿಭಾಗದಲ್ಲಿ ಹೊಸ ಹೊಸ ಅನ್ವೇಷಣೆಗೆ ಹೆಸರುವಾಸಿ. ಇದು ಮೊದಲ ಸಕ್ರಿಯ ಫೋನ್ ಡೈನಾಟಾಕ್ 8000X ಅನ್ನು ಲಾಂಚ್‌ ಮಾಡಿದ ಶ್ರೇಯಸ್ಸನ್ನು ಪಡೆದುಕೊಂಡಿದೆ. ಇದು 1983 ರಲ್ಲಿ ಮೊದಲ ವಾಣಿಜ್ಯಿಕವಾಗಿ ಲಭ್ಯವಿರುವ ಮೊಬೈಲ್ ಫೋನ್ ಆಗಿತ್ತು. ಡೈನಾಟಾಕ್ ಅನ್ನು ಮೊಟೊರೊಲಾ ಎಂಜಿನಿಯರ್ ಮಾರ್ಟಿನ್ ಕೂಪರ್ ಅಭಿವೃದ್ಧಿಪಡಿಸಿದ್ದರು.

ಫೋಲ್ಡಬಲ್ ಫೋನ್‌ ಓಕೆ, ಇದೇನಿದು ಬೆಂಡಿಂಗ್ ಸ್ಮಾರ್ಟ್‌ಫೋನ್? ಇದರ ವಿಶೇಷತೆ ಏನು?

ಕೂಪರ್ ಅವರು 1973 ರಲ್ಲಿ ಮೊದಲ ಖಾಸಗಿ ಹ್ಯಾಂಡ್ಹೆಲ್ಡ್ ಮೊಬೈಲ್ ಫೋನ್ ಕರೆ ಮಾಡಿದ್ದು ಚರಿತ್ರೆಯಲ್ಲಿ ಉಳಿದಿದೆ. ಡೈನಾಟಾಕ್ ಅನ್ನು ಪ್ರೀತಿಯಿಂದ ದಿ ಬ್ರಿಕ್ ಎಂದೂ ಸಹ ಕರೆಯಲಾಗುತ್ತಿತ್ತು ಏಕೆಂದರೆ ಇದು ಒಂದು ಕಿಲೋಗ್ರಾಂಗಿಂತ ಹೆಚ್ಚು ತೂಕವಿತ್ತು. ಅದರಲ್ಲೂ ಇದನ್ನು ಶ್ರೀಮಂತರು ಮಾತ್ರ ಖರೀದಿ ಮಾಡುತ್ತಿದ್ದರು. ಯಾಕೆಂದರೆ ಅಂದಿನ ಕಾಲಕ್ಕೆ ಇದರ ಬೆಲೆ ಸುಮಾರು ಎರಡು ಲಕ್ಷ ರೂ.ಗಳು.

Best Mobiles in India

English summary
Motorola has showcased its latest concept smartphone at the Lenovo Tech Word 23. The phone looks like a giant smartwatch with a huge display. But, a new concept is the bending smartphone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+