'ಮೊಟೊರೊಲಾ'ದಿಂದ 75 ಇಂಚಿನ ಸ್ಮಾರ್ಟ್ ಟಿವಿ ಲಾಂಚ್!..ಬೆಲೆ ಲಕ್ಷದ ಮೇಲೆ!
ಮೊಟೊರೊಲಾ ಸಂಸ್ಥೆಯು ಈಗಾಗಲೇ ಮೊಬೈಲ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, ಇತ್ತೀಚಿಗಷ್ಟೆ ದೇಶಿಯ ಮಾರುಕಟ್ಟೆಗೆ 5 ಸ್ಮಾರ್ಟ್ ಟಿವಿಗಳನ್ನು ಬಿಡುಗಡೆ ಮಾಡಿದೆ. ಇದೀಗ ಮತ್ತೊಂದು ಹೊಸ ಆಂಡ್ರಾಯ್ಡ್ ಟಿವಿಯನ್ನು ಬಿಡುಗಡೆ ಮಾಡಿದ್ದು, ಆಂಡ್ರಾಯ್ಡ್ 9.0 ಟಿವಿ ಓಎಸ್ ಬೆಂಬಲವನ್ನು ಪಡೆದಿರುವ ಈ ಸ್ಮಾರ್ಟ್ ಟಿವಿಯು 75 ಇಂಚಿನ ಡಿಸ್‌ಪ್ಲೇ ಹೊಂದಿದೆ. ಆದರೆ ಈ ಬಿಗ್ ಸ್ಕ್ರೀನ್ ಸ್ಮಾರ್ಟ್ ಟಿವಿ ಬೆಲೆಯು ಸಹ ಬಿಗ್ ಪ್ರೈಸ್‌ಟ್ಯಾಗ್‌ನಲ್ಲಿದೆ.

ಹೌದು, ಲೆನೊವೊ ಸಂಸ್ಥೆಯ ಮೊಟೊರೊಲಾ ಬ್ರ್ಯಾಂಡ್ ಇದೀಗ 75 ಇಂಚಿನ 4K ಮಾದರಿಯ ಆಂಡ್ರಾಯ್ಡ್ ಟಿವಿಯನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಈ ಟಿವಿಯು ಡಾಲ್ಬಿಸೌಂಡ್ ಕ್ವಾಲಿಟಿ, ಅತ್ಯುತ್ತಮ ಪಿಚ್ಚರ್ ರೆಸಲ್ಯೂಶನ್ ಪಡೆದಿದ್ದು, ಜೊತೆಗೆ ವಿಡಿಯೊ ಸ್ಟ್ರಿಮಿಂಗ್ ಅಪ್ಲಿಕೇಶನ್‌ಗಳ ಸಪೋರ್ಟ್ ಸಹ ಒಳಗೊಂಡಿದೆ. ಹಾಗಾದರೇ ಮೊಟೊರೊಲಾದ 75 ಇಂಚಿನ ಈ ಸ್ಮಾರ್ಟ್‌ಟಿವಿಯ ಇತರೆ ಫೀಚರ್ ಹೇಗಿವೆ ಮತ್ತು ಬೆಲೆ ಎಷ್ಟು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಹೇಗಿದೆ
ಮೊಟೊರೊಲಾದ ಈ ಆಂಡ್ರಾಯ್ಡ್ ಟಿವಿಯು 75 ಇಂಚಿನ 4K ಮಾದರಿಯ ಡಿಸ್‌ಪ್ಲೇಯನ್ನು ಹೊಂದಿದ್ದು, ಟಿವಿ ಸ್ಕ್ರೀನ್ 3,840 x 2,160 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಹಾಗೆಯೇ ಡಿಸ್‌ಪ್ಲೇಯ ಅನುಪಾತವು 16:9 ಆಗಿದ್ದು, 178 ಡಿಗ್ರಿ ವೀಕ್ಷಣೆಯ ಆಂಗಲ್ ಹೊಂದಿದೆ. ಡಿಸ್‌ಪ್ಲೇಯು 450 nits ಬ್ರೈಟ್ನೆಸ್ ಸಾಮರ್ಥ್ಯದಲ್ಲಿದ್ದು, HDR 10 ಮತ್ತು AutoTuneX ಡಿಸ್‌ಪ್ಲೇ ತಂತ್ರಜ್ಞಾನವನ್ನು ಪಡೆದಿದೆ.

ಪ್ರೊಸೆಸರ್ ಯಾವುದು
ಮೊಟೊರೊಲಾ 75 ಇಂಚಿನ ಆಂಡ್ರಾಯ್ಡ್ ಟಿವಿಯು 1GHz ವೇಗದ ಸಾಮರ್ಥ್ಯದೊಂದಿಗೆ ಕ್ವಾಡ್ ಕೋರ್ CA53 ಪ್ರೊಸೆಸರ್ ಅನ್ನು ಹೊಂದಿದ್ದು, ಜೊತೆಗೆ Mali-450 GPU ಸಹ ಒಳಗೊಂಡಿದೆ. ಇದರೊಂದಿಗೆ 2.25GB RAM ನೀಡಲಾಗಿದ್ದು, ಆಂತರಿಕ ಸಂಗ್ರಹಕ್ಕಾಗಿ 16GB ಒದಗಿಸಲಾಗಿದೆ. ಹಾಗೆಯೇ ಈ ಸ್ಮಾರ್ಟ್ ಟಿವಿಯು ಆಂಡ್ರಾಯ್ಡ್ 9.0 ಟಿವಿ ಆಪರೇಟಿಂಗ್ ಸಿಸ್ಟಮ್ ಸಪೋರ್ಟ್ ಅನ್ನು ಪಡೆದುಕೊಂಡಿದೆ.

OTT ಆಪ್ಸ್-ಸ್ಮಾರ್ಟ್ ರಿಮೋಟ್
ಮೊಟೊದ ಈ ಆಂಡ್ರಾಯ್ಡ್ ಟಿವಿಯು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಹಾಟ್‌ಸ್ಟಾರ್, ಜೀ5 ಸೇರಿದಂತೆ ಕೆಲವು ಜನಪ್ರಿಯ ವಿಡಿಯೊ ಸ್ಟ್ರಿಮಿಂಗ್ ಆಪ್ಸ್‌ಗಳನ್ನು ಇನ್‌ಬಿಲ್ಟ್ ಆಗಿ ಪಡೆದಿರುವ ಜೊತೆಗೆ ಗೂಗಲ್ ಪ್ಲೇ ಸ್ಟೋರ್ ಅನ್ನು ಸಹ ಹೊಂದಿದೆ. ಹಾಗೆಯೇ ವಾಯಿಸ್ ಬೆಂಬಲಿತ ರಿಮೋಟ್ ಸೌಲಭ್ಯವನ್ನು ಒಳಗೊಂಡಿದ್ದು, ವಾಯರ್‌ಲೆಸ್ ಗೇಮ್ ಕಂಟ್ರೋಲರ್ ಆಯ್ಕೆಯನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ
ಭಾರತೀಯ ಮಾರುಕಟ್ಟೆಗೆ ಲಾಂಚ್ ಆಗಿರುವ 'ಮೊಟೊರೊಲಾ 75 ಇಂಚಿನ ಆಂಡ್ರಾಯ್ಡ್ ಟಿವಿ'ಯು 1,19,999ರೂ.ಗಳ ಬೆಲೆಯನ್ನು ಹೊಂದಿದೆ. ಮೊದಲ ಸೇಲ್ ಅನ್ನು ಜನಪ್ರಿಯ ಇ-ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಆರಂಭಿಸಿದೆ.


Click it and Unblock the Notifications








