Home
ಸುದ್ದಿಜಾಲ

Motorola: ಕಡಿಮೆ ಬೆಲೆಯ ಮೊಟೊ G04, ಮೊಟೊ G24 ಲಾಂಚ್‌! ಫೀಚರ್ಸ್‌ ಏನಿದೆ? ಬೆಲೆ ಎಷ್ಟು?

ಮೊಟೊರೊಲಾ (Motorola) ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಭಿನ್ನ ಫೀಚರ್ಸ್‌ ಆಯ್ಕೆಯ ಫೋನ್‌ಗಳನ್ನು ಅನಾವರಣ ಮಾಡುವ ಮೂಲಕ ಭಾರೀ ಜನಪ್ರಿಯತೆ ಪಡೆದುಕೊಂಡಿದೆ. ಅದರಂತೆ ಈಗ ಮತ್ತೆರಡು ಹೊಸ ಫೋನ್‌ಗಳನ್ನು ಘೋಷಣೆ ಮಾಡಿದ್ದು, ಇವು ಭಿನ್ನ ಫೀಚರ್ಸ್‌ ಮೂಲಕ ಸದ್ದು ಮಾಡುತ್ತಿವೆ.

ಹೌದು, ಮೊಟೊರೊಲಾ ಇದೀಗ ಮೊಟೊ G04, ಮೊಟೊ G24 (Moto G04, Moto G24) ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿದೆ. ಈ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್‌ 14 ನಿಂದ ರನ್‌ ಆಗಲಿವೆ. ಅಲ್ಲದೆ 90Hz ರಿಫ್ರೆಶ್ ರೇಟ್‌ ಆಯ್ಕೆಯನ್ನು ಈ ಫೋನ್‌ನಲ್ಲಿ ಕಾಣಬಹುದು. ಇದರೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಫೋನ್‌ಗಳು ಪಡೆದಿವೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರವನ್ನು ತಿಳಿಸಿಕೊಡಲಾಗಿದೆ ಓದಿರಿ.

ಕಡಿಮೆ ಬೆಲೆಯ ಮೊಟೊ G04, ಮೊಟೊ G24 ಲಾಂಚ್‌! ಫೀಚರ್ಸ್‌ ಏನಿದೆ? ಬೆಲೆ ಎಷ್ಟು?

ಮೋಟೋ G04 ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ (Moto G04) 6.6 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 90Hz ರಿಫ್ರೆಶ್ ರೇಟ್ ಮೂಲಕ ಉತ್ತಮವಾದ ವೀಕ್ಷಣೆ ಅನುಭವ ನೀಡಲಿದೆ. ಅದರಲ್ಲೂ ಈ ಫೋನ್‌ನಲ್ಲಿ ಅತ್ಯುತ್ತಮ ಬ್ರೈಟ್‌ನೆಸ್ ಮೋಡ್ ಮತ್ತು ನೈಟ್ ಲೈಟ್ ಮೋಡ್ ಆಯ್ಕೆಯನ್ನೂ ಸಹ ಕಾಣಬಹುದಾಗಿದೆ.

ಮೋಟೋ G04 ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ವಿವರ: ಈ ಫೋನ್ ಯೂನಿಸೋಕ್‌ T606 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, ಮೈ ಯುಎಕ್ಸ್‌ನೊಂದಿಗೆ ಆಂಡ್ರಾಯ್ಡ್‌ 14 ಅನ್ನು ಈ ಫೋನ್‌ ರನ್‌ ಮಾಡಲಿದೆ. ಜೊತೆಗೆ 4GB+64GB ಇಂಟರ್‌ ಸ್ಟೋರೇಜ್‌ ಆಯ್ಕೆ ಮತ್ತು 4GB/8GB ವರ್ಚುವಲ್ RAM ವರೆಗೆ ಸ್ಟೋರೇಜ್‌ ಆಯ್ಕೆ ಪಡೆದಿದೆ.

ಮೋಟೋ G04 ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಈ ಫೋನ್ 16 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ ಪಡೆದಿದ್ದು, ಎಲ್‌ಇಡಿ ಫ್ಲ್ಯಾಶ್‌ ಆಯ್ಕೆ ಮೂಲಕ ಉತ್ತಮ ಫೋಟೋಗಳನ್ನು ಸೆರೆಹಿಡಿಯಲು ಸಹಕಾರಿಯಾಗಿದೆ. ಜೊತೆಗೆ 5 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಹೊಂದಿದ್ದು, ವಿಡಿಯೋ ಕರೆ ಹಾಗೂ ಸೆಲ್ಫಿ ಫೋಟೋಗಳಿಗೆ ಉತ್ತಮವಾಗಿದೆ.

ಕಡಿಮೆ ಬೆಲೆಯ ಮೊಟೊ G04, ಮೊಟೊ G24 ಲಾಂಚ್‌! ಫೀಚರ್ಸ್‌ ಏನಿದೆ? ಬೆಲೆ ಎಷ್ಟು?

ಮೋಟೋ G04 ಸ್ಮಾರ್ಟ್‌ಫೋನ್‌ ಬ್ಯಾಟರಿ ಹಾಗೂ ಇತರೆ: ಇನ್ನು ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 10W ಚಾರ್ಜಿಂಗ್ ಬೆಂಬಲ ಪಡೆದಿದೆ. ಇದರೊಂದಿಗೆ 3.5 ಎಂಎಂ ಆಡಿಯೊ ಜಾಕ್, ಸ್ಟಿರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಧೂಳು ಮತ್ತು ಸ್ಪ್ಲಾಶ್ ನಿರೋಧಕ (IP52),
ವೈ ಫೈ 802.11 ac (2.4GHz + 5GHz), ಬ್ಲೂಟೂತ್ ಆವೃತ್ತಿ 5.1, ಜಿಪಿಎಸ್‌, ಯುಎಸ್‌ಬಿ ಟೈಪ್-ಸಿ ಸೇರಿದಂತೆ ಅನೇಕ ಅಗತ್ಯ ಸೌಲಭ್ಯಗಳನ್ನು ಪಡೆದಿದೆ.

ಮೋಟೋ G24 ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ ಅನ್ನು ಪ್ರೀಮಿಯಂ ಮೆಟೀರಿಯಲ್ಸ್ ಬಳಕೆ ಮಾಡಿಕೊಂಡು ನಿರ್ಮಾಣ ಮಾಡಲಾಗಿದ್ದು, ಹಗುರವಾಗಿದೆ. ಅದರಂತೆ ಈ ಫೋನ್ 90Hz ರಿಫ್ರೆಶ್ ರೇಟ್‌ ಆಯ್ಕೆಯೊಂದಿಗೆ 6.6 ಇಂಚಿನ ಹೆಚ್‌ಡಿ + ಡಿಸ್‌ಪ್ಲೇ, ಸ್ಟಿರಿಯೊ ಸ್ಪೀಕರ್‌ಗಳು ಮತ್ತು ಡಾಲ್ಬಿ ಅಟ್ಮಾಸ್ ಸೌಲಭ್ಯ ಪಡೆದಿದೆ. ಅಲ್ಲದೆ ಈ ಫೋನ್‌ 537 ನಿಟ್ಸ್‌ ಬ್ರೈಟ್‌ನೆಸ್‌ ಆಯ್ಕೆ ಪಡೆದುಕೊಂಡಿದೆ.

ಮೋಟೋ G24 ಪ್ರೊಸೆಸರ್‌ ವಿವರ: ಈ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೋ G85 12nm ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, ಇದೂ ಸಹ ಮೈ ಯುಎಕ್ಸ್‌ ಜೊತೆಗೆ ಆಂಡ್ರಾಯ್ಡ್‌ 14 ಅನ್ನು ರನ್‌ ಮಾಡಲಿದೆ. ಇದರೊಂದಿಗೆ 4GB LPDDR4X RAM, 128GB eMMC 5.1 ಇಂಟರ್‌ ಸ್ಟೋರೇಜ್‌ ಅನ್ನು ಪಡೆದಿದೆ. ಅಷ್ಟೇ ಅಲ್ಲದೆ ನೀವು ಮೈಕ್ರೊ ಎಸ್‌ಡಿ ಕಾರ್ಡ್‌ ಬಳಕೆ ಮಾಡಿಕೊಂಡು 1TB ವರೆಗೆ ಸ್ಟೋರೇಜ್‌ ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ.

ಮೋಟೋ G24 ಕ್ಯಾಮೆರಾ ರಚನೆ: ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ 50 ಮೆಗಾಪಿಕ್ಸೆಲ್‌ ಹಿಂಬದಿಯ ಕ್ಯಾಮರಾ ಹಾಗೂ 2ಮೆಗಾಪಿಕ್ಸೆಲ್‌ ಮ್ಯಾಕ್ರೋ ಕ್ಯಾಮರಾ ಆಯ್ಕೆ ಪಡೆದಿದ್ದು, ಇದೂ ಸಹ ಎಲ್‌ಇಡಿ ಫ್ಲ್ಯಾಶ್‌ ಬೆಂಬಲ ಪಡೆದಿದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್ 8 ಮೆಗಾಪಿಕ್ಸೆಲ್‌ ಕ್ಯಾಮೆರಾ ಹೊಂದಿದೆ.

ಕಡಿಮೆ ಬೆಲೆಯ ಮೊಟೊ G04, ಮೊಟೊ G24 ಲಾಂಚ್‌! ಫೀಚರ್ಸ್‌ ಏನಿದೆ? ಬೆಲೆ ಎಷ್ಟು?

ಮೋಟೋ G24 ಬ್ಯಾಟರಿ ಹಾಗೂ ಇತರೆ: ಇನ್ನು ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ 15W ಟರ್ಬೊ ಚಾರ್ಜಿಂಗ್ ಬೆಂಬಲ ಪಡೆದಿದ್ದು, ಡ್ಯುಯಲ್ 4G VoLTE, ವೈ-ಫೈ 802.11 ac (2.4GHz + 5GHz), ಬ್ಲೂಟೂತ್ ಆವೃತ್ತಿ 5.0, GPS,ಯುಎಸ್‌ಬಿ ಟೈಪ್-ಸಿ, 3.5 ಎಂಎಂ ಆಡಿಯೊ ಜಾಕ್, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್,
ಧೂಳು ಮತ್ತು ಸ್ಪ್ಲಾಶ್ ನಿರೋಧಕ (IP52) ದೊಂದಿಗೆ ಈ ಫೋನ್‌ ಸಜ್ಜುಗೊಂಡಿದೆ.

ಮೋಟೋ G04 ಹಾಗೂ ಮೋಟೋ G24 ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ಫೋನ್ ಯೂರೋಪ್‌ನಲ್ಲಿ ಮಾತ್ರ ಲಾಂಚ್‌ ಆಗಿದೆ. ಅದರಂತೆ ಮೊಟೊ G04 ಸ್ಮಾರ್ಟ್‌ಫೋನ್ 119 ಯೂರೋಗಳಿಂದ ಆರಂಭ ಆಗಲಿದೆ. ಅಂದರೆ ಭಾರತದಲ್ಲಿ ಇದರ ಬೆಲೆ ಸರಿಸುಮಾರು 10,775 ರೂ.ಗಳಾಗಿದೆ. ಈ ಫೋನ್ ಕಾಂಕಾರ್ಡ್ ಬ್ಲಾಕ್, ಸೀ ಗ್ರೀನ್, ಸ್ಯಾಟಿನ್ ಬ್ಲೂ ಮತ್ತು ಸನ್‌ರೈಸ್ ಆರೆಂಜ್‌ನಲ್ಲಿ ಲಭ್ಯವಿದೆ.

ಮೋಟೋ G24 ಸ್ಮಾರ್ಟ್‌ಫೋನ್ ಬೆಲೆ 129 ಯುರೋಗಳಿಂದ ಆರಂಭ ಆಗಲಿದ್ದು, ಭಾರತದಲ್ಲಿ ಇದರ ಬೆಲೆ ಸುಮಾರು 11,680 ರೂ.ಗಳಾಗಿರಬಹುದು. ಈ ಫೋನ್ ಮ್ಯಾಟ್ ಚಾರ್ಕೋಲ್, ಐಸ್ ಗ್ರೀನ್, ಬ್ಲೂಬೆರ್ರಿ ಮತ್ತು ಪಿಂಕ್ ಲ್ಯಾವೆಂಡರ್ ಬಣ್ಣದ ಆಯ್ಕೆಗಳಲ್ಲಿ ಲಭ್ಯ ಇದೆ. ಈ ಎರಡೂ ಫೋನ್‌ಗಳು ಈಗ ಯುರೋಪ್‌ನಲ್ಲಿ ಲಭ್ಯವಿದೆ ಮತ್ತು ಮುಂಬರುವ ವಾರಗಳಲ್ಲಿ ಲ್ಯಾಟಿನ್ ಅಮೇರಿಕಾ, ಮಧ್ಯಪ್ರಾಚ್ಯ ಮತ್ತು ಏಷ್ಯಾ-ಪೆಸಿಫಿಕ್‌ನಲ್ಲಿ ಆಯ್ದ ಮಾರುಕಟ್ಟೆಗಳಲ್ಲಿ ಸದ್ದು ಮಾಡಲಿದೆ.

Best Mobiles in India

English summary
Motorola has just launched Moto G04, Moto G24 budget smartphones in Europe. These phones will run Android 14.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+