ಅಗ್ಗದ ಬೆಲೆಯಲ್ಲಿ 'ಮೊಟೊ E6S' ಸ್ಮಾರ್ಟ್‌ಫೋನ್ ಬಿಡುಗಡೆ!.ಫೀಚರ್ಸ್‌ ಮತ್ತು ಬೆಲೆ?

|

ಮೊಟೊರೊಲಾ ಕಂಪನಿಯು ಇತ್ತೀಚಿಗೆ ಮೊಟೊರೊಲಾ ಒನ್‌ ಸರಣಿಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದ್ದು, ಈಗಾಗಲೇ ಈ ಸರಣಿಯ ಫೋನ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಹಾಗೆಯೇ ಮೊಟೊ ತನ್ನ ಬಜೆಟ್‌ ಸ್ಮಾರ್ಟ್‌ಫೋನ್‌ಗಳ E ಸರಣಿಯಲ್ಲಿ ಭಾರತೀಯ ಮಾರುಕಟ್ಟೆಗೆ ಇದೀಗ ಮತ್ತೊಂದು ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ್ದು, ಈ ಫೋನ್ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್‌ ವಲಯದಲ್ಲಿ ಸಂಚಲನ ಮೂಡಿಸಲಿದೆ.

ಮೊಟೊರೊಲಾ

ಹೌದು, ಮೊಟೊರೊಲಾ ಸಂಸ್ಥೆಯು ತನ್ನ E ಸರಣಿಯಲ್ಲಿ ಇಂದು (ಸೆಪ್ಟೆಂಬರ್ 16) ಹೊಸದಾಗಿ 'ಮೊಟೊ E6S' ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ 4GB RAM ಮತ್ತು 64GB ಸ್ಟೋರೇಜ್ ಸಾಮರ್ಥ್ಯದ ವೇರಿಯಂಟ್‌ನಲ್ಲಿದ್ದು, ಪಾಲಿಶ್ಡ್ ಗ್ರಾಫೈಟ್‌ ಮತ್ತು ರಿಚ್‌ ಕ್ರ್ಯಾನ್‌ಬರಿ ಬಣ್ಣಗಳ ಆಯ್ಕೆಗಳನ್ನು ಹೊಂದಿದೆ. ಈ ಫೋನ್‌ ಬೆಲೆಯು 7,999ರೂ. ಆಗಿದ್ದು, ಇದೇ ಸೆಪ್ಟಂಬರ್ 23ರಂದು ಫ್ಲಿಪ್‌ಕಾರ್ಟ್‌ ತಾಣದಲ್ಲಿ ಮೊದಲ ಸೇಲ್ ಆರಂಭಿಸಲಿದೆ. ಹಾಗಾದರೇ ಮೊಟೊರೊಲಾ E6S ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

'ಮೊಟೊ E6S' ಸ್ಮಾರ್ಟ್‌ಫೋನ್‌ 720×1560 ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.1 ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ವಾಟರ್‌ಡ್ರಾಪ್‌ ನಾಚ್ ಮಾದರಿಯಲ್ಲಿದೆ. ಡಿಸ್‌ಪ್ಲೇಯ ಅನುಪಾತವು 19.5:9 ಆಗಿದ್ದು, ಸ್ಕ್ರೀನ್‌ನಿಂದ ಬಾಹ್ಯಬಾಡಿಯ ರಚನೆಯ ನಡುವಿನ ಅಂತರವು ಶೇ.80% ಆಗಿದೆ. ಡಿಸ್‌ಪ್ಲೇಯ ಸುತ್ತಲೂ ಕರ್ವ್ ರಚನೆಯನ್ನು ಒಳಗೊಂಡಿದ್ದು, ಫೋನಿನ ಅಂದ ಹೆಚ್ಚಿಸಿದೆ.

ಪ್ರೊಸೆಸರ್‌ ಶಕ್ತಿ

ಪ್ರೊಸೆಸರ್‌ ಶಕ್ತಿ

'ಮೊಟೊ E6S' ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಮೀಡಿಯಾ ಟೆಕ್ P22 ಪ್ರೊಸೆಸರ್‌ ಶಕ್ತಿಯನ್ನು ಹೊಂದಿದ್ದು, ಆಂಡ್ರಾಯ್ಡ್‌ 9 ಪೈ ಆಪರೇಟಿಂಗ್ ಸಿಸ್ಟಮ್ ಸಪೋರ್ಟ್‌ ಅನ್ನು ಪಡೆದುಕೊಂಡಿದೆ. ಹಾಗೆಯೇ 4GB RAM ಸಾಮರ್ಥ್ಯದೊಂದಿಗೆ 64GB ಆಂತರಿಕ ಸ್ಟೋರೇಜ್ ಸ್ಥಳಾವಕಾಶವನ್ನು ಹೊಂದಿದೆ. ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿಯನ್ನು 512GB ವರೆಗೂ ವಿಸ್ತರಿಸಿಕೊಳ್ಳಬಹುದಾದ ಅವಕಾಶವಿದೆ.

ಕ್ಯಾಮೆರಾ ಹೇಗಿದೆ

ಕ್ಯಾಮೆರಾ ಹೇಗಿದೆ

'ಮೊಟೊ E6S' ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಮುಖ್ಯ ಕ್ಯಾಮೆರಾವು f/2.0 ಅಪರ್ಚರ್ನೊಂದಿಗೆ 13ಎಂಪಿ ಸೆನ್ಸಾರ್‌ ಪಡೆದಿದೆ. ಸೆಕೆಂಡರಿ ಕ್ಯಾಮೆರಾವು 2ಎಂಪಿಯ ಡೆಪ್ತ್ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಇನ್ನು ಸೆಪ್ಫಿ ಕ್ಯಾಮೆರಾವು f/2.0 ಅಪರ್ಚರ್ ಹೊಂದಿದ್ದು, 8ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ. ಆಟೋ ಫೋಕಸ್‌ ಸೌಲಭ್ಯ ಆಯ್ಕೆ ನೀಡಲಾಗಿದೆ.

ಬ್ಯಾಟರಿ ಲೈಫ್‌

ಬ್ಯಾಟರಿ ಲೈಫ್‌

'ಮೊಟೊ E6S' ಸ್ಮಾರ್ಟ್‌ಫೋನ್‌ 3,000mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದ್ದು, ಇದರೊಂದಿಗೆ 10W ಸಾಮರ್ಥ್ಯದ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ಹಾಗೆಯೇ ಈ ಫೋನ್ ರೇರ್‌ ಮೌಂಟೆಡ್‌ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಆಯ್ಕೆ, ಆಂಬಿಯಂಟ್ ಲೈಟ್‌ ಸೆನ್ಸಾರ್‌, ಪ್ರೊಕ್ಸಿಮಿಟಿ ಸೆನ್ಸಾರ್, ಸೌಲಭ್ಯಗಳ ಜೊತೆಗೆ ವೈಫೈ, ಬ್ಲೂಟೂತ್, GLONASS, ಜಿಪಿಎಸ್‌ ಆಯ್ಕೆಗಳನ್ನು ಪಡೆದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಮೊಟೊರೊಲಾ ಕಂಪನಿಯು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ 'ಮೊಟೊ E6S' ಸ್ಮಾರ್ಟ್‌ಫೋನ್‌ ಬೆಲೆಯು 7,999ರೂ.ಗಳು ಆಗಿದೆ. ಇದೇ ಸೆಪ್ಟೆಂಬರ್ 23ರ ಮಧ್ಯಾಹ್ನ12ಗಂಟೆಗೆ ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಫಸ್ಟ್‌ ಸೇಲ್ ಆರಂಭವಾಗಲಿದೆ. ಹಾಗೆಯೇ ಫ್ಲಿಪ್‌ಕಾರ್ಟ್‌ನಲ್ಲಿ ರಿಪ್ಲೇಸೆಬಲ್ ಬ್ಯಾಕ್ ಪ್ಯಾನೆಲ್ ಆಯ್ಕೆಯ ಆಫರ್ ಲಭ್ಯವಾಗಲಿದೆ.

Best Mobiles in India

English summary
Motorola has launched a new affordable Moto E-series smartphone in India – the Moto E6s. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X