Home
ಸುದ್ದಿಜಾಲ

Motorola: ಮೊಟೊರೊಲಾದ ಈ ಫೋನ್‌ ಭಾರೀ ಕಡಿಮೆ ಬೆಲೆಗೆ ಲಭ್ಯ! ಕ್ವಾಡ್ ರಿಯರ್‌ ಕ್ಯಾಮೆರಾ

ಮೊಟೊರೊಲಾದ ಫೋನ್‌ಗಳು (Motorola phone) ಅಗ್ಗದ ಬೆಲೆಯಲ್ಲಿ ಅತ್ಯುತ್ತಮ ಫೀಚರ್ಸ್‌ ನೀಡಲು ಹೆಸರುವಾಸಿ. ಈ ಫೋನ್‌ಗಳು ಭಾರತದಲ್ಲಿ ದೊಡ್ಡ ಮಾರುಕಟ್ಟೆ ಪಾಲನ್ನು ಪಡೆದಿದ್ದು, ಈ ಬೆಳವಣಿಗೆ ನಡುವೆ ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ ಬಜೆಟ್‌ ಬೆಲೆಯ ಫೋನ್‌ಗೆ ಭರ್ಜರಿ ಆಫರ್ ನೀಡಲಾಗಿದೆ.

ಹೌದು, ಬಜೆಟ್‌ ಬೆಲೆಯ ಫೋನ್‌ಗಳಿಗೆ ಭಾರತದಲ್ಲಿ ವಿಶೇಷವಾದ ಬೇಡಿಕೆ ಇದ್ದು, ಈ ವಿಭಾಗದಲ್ಲಿ ಹೆಚ್ಚು ಸೇಲ್‌ ಆಗುತ್ತಿರುವ ಮೊಟೊರೊಲಾ ಮೊಟೊ g22 ಸ್ಮಾರ್ಟ್‌ಫೋನ್‌ಗೆ (Motorola Moto G22 Smartphone) ಇದೀಗ ಆಫರ್ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು, 64 GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಆಫರ್ ಬೆಲೆ ವಿವರ ಇಲ್ಲಿದೆ ನೋಡಿ.

ಮೊಟೊರೊಲಾದ ಈ ಫೋನ್‌ ಭಾರೀ ಕಡಿಮೆ ಬೆಲೆಗೆ ಲಭ್ಯ! ಕ್ವಾಡ್ ರಿಯರ್‌ ಕ್ಯಾಮೆರಾ

ಮೊಟೊರೊಲಾ ಮೊಟೊ g22 ಸ್ಮಾರ್ಟ್‌ಫೋನ್‌ ಆಫರ್ ವಿವರ: ಈ ಫೋನ್ 13,999 ರೂ.ಗಳ ಸಾಮಾನ್ಯ ಬೆಲೆಯಲ್ಲಿ ಲಭ್ಯ ಇದ್ದು, ನೀವೀಗ ಇದನ್ನು 8,999 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಎಂದಿನಂತೆ ಪ್ರಮುಖ ಇ-ಕಾಮರ್ಸ್‌ ಸೈಟ್‌ ಅಮೆಜಾನ್‌ ಈ ಫೋನ್‌ಗೆ 36% ರಿಯಾಯಿತಿ ನೀಡಿದೆ. ಅದಾಗ್ಯೂ ನೀವು ಐಸಿಐಸಿಐ ಪೇ ಲೇಟರ್ ಮೂಲಕ ಇನ್ನೂ ಕಡಿಮೆ ಬೆಲೆಗೆ ಇದನ್ನು ಖರೀದಿ ಮಾಡಬಹುದು. ಜೊತೆಗೆ 436 ರೂ.ಗಳ ಇಎಮ್‌ಐ ಆಯ್ಕೆ ಮೂಲಕವೂ ಖರೀದಿ ಮಾಡಬಹುದಾಗಿದೆ.

ಮೊಟೊರೊಲಾ ಮೊಟೊ g22 ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 6.5 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, 90Hz ರಿಫ್ರೆಶ್‌ ರೆಟ್‌ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಹಾಗೂ 20:9 ಅನುಪಾತದೊಂದಿಗೆ ಉತ್ತಮ ವೀಕ್ಷಣೆ ಅನುಭವ ನೀಡಲಿದೆ.

ಮೊಟೊರೊಲಾದ ಈ ಫೋನ್‌ ಭಾರೀ ಕಡಿಮೆ ಬೆಲೆಗೆ ಲಭ್ಯ! ಕ್ವಾಡ್ ರಿಯರ್‌ ಕ್ಯಾಮೆರಾ

ಮೊಟೊರೊಲಾ ಮೊಟೊ g22 ಸ್ಮಾರ್ಟ್‌ಫೋನ್‌ ಪ್ರೊಸೆಸರ್ ವಿವರ: ಈ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಮೀಡಿಯಾಟೆಕ್ MT6765V/CB ಹಿಲಿಯೊ G37 (12 nm) ಪ್ರೊಸೆಸರ್‌ ಬಲ ಪಡೆದಿದ್ದು, ಪವರ್‌ ವಿಆರ್‌ GE8320 ಗ್ರಾಫಿಕ್ಸ್‌ ಕಾರ್ಡ್‌ ಬೆಂಬಲ ಪಡೆದಿದೆ. ಜೊತೆಗೆ ಆಂಡ್ರಾಯ್ಡ್‌ 12 ಓಎಸ್ ಅನ್ನು ರನ್‌ ಮಾಡಲಿದೆ. ಉಳಿದಂತೆ ಈ ಫೋನ್ 64GB ಇಂಟರ್‌ ಸ್ಟೋರೇಜ್‌ ಆಯ್ಕೆ ಹಾಗೂ 4GB RAM ಸ್ಟೋರೇಜ್‌ನಲ್ಲಿ ಲಭ್ಯ ಇದೆ. ಹಾಗೆಯೇ ಎಸ್‌ಡಿ ಕಾರ್ಡ್‌ ಬೆಂಬಲ ಸಹ ಈ ಫೋನ್‌ನಲ್ಲಿದೆ.

ಮೊಟೊರೊಲಾ ಮೊಟೊ g22 ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಈ ಫೋನ್ ಕ್ವಾಡ್ ರಿಯರ್‌ ಕ್ಯಾಮೆರಾ (Quad rear camera) ಆಯ್ಕೆ ಪಡೆದಿದೆ. ಅದರಲ್ಲಿ ಪ್ರಮುಖವಾಗಿ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಹಾಗೂ 2 ಮೆಗಾಪಿಕ್ಸೆಲ್‌ ಡೆಪ್ತ್‌ ಕ್ಯಾಮೆರಾ ಆಯ್ಕೆ ಪಡೆದಿದೆ. ಇದರೊಂದಿಗೆ 16 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಹೊಂದಿದೆ. ಈ ಕ್ಯಾಮೆರಾ ಮೂಲಕ 1080p@30fps ಸಾಮರ್ಥ್ಯದ ವಿಡಿಯೋ ರೆಕಾರ್ಡ್‌ ಮಾಡಬಹುದು.

ಮೊಟೊರೊಲಾದ ಈ ಫೋನ್‌ ಭಾರೀ ಕಡಿಮೆ ಬೆಲೆಗೆ ಲಭ್ಯ! ಕ್ವಾಡ್ ರಿಯರ್‌ ಕ್ಯಾಮೆರಾ

ಮೊಟೊರೊಲಾ ಮೊಟೊ g22 ಬ್ಯಾಟರಿ ಹಾಗೂ ಇತರೆ: ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 20W ವೈರ್ಡ್ ಚಾರ್ಜಿಂಗ್ ಬೆಂಬಲ ಹೊಂದಿದೆ, ವೈ-ಫೈ 802.11 a/b/g/n/ac, ಡ್ಯುಯಲ್-ಬ್ಯಾಂಡ್, ವೈ-ಫೈ ಡೈರೆಕ್ಟ್, ಬ್ಲೂಟೂತ್ ಆವೃತ್ತಿ 5.0, A2DP, LE, ಯುಎಸ್‌ಬಿ ಟೈಪ್-ಸಿ 2.0 ಕನೆಕ್ಟಿವಿಟಿ ಬೆಂಬಲ ಪಡೆದುಕೊಂಡಿದೆ.

Best Mobiles in India

English summary
Motorola Moto G22 Smartphone got best offer. This smartphone has got a quad rear camera option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+