Home
ಸುದ್ದಿಜಾಲ

Motorola: ಬಜೆಟ್ ಬೆಲೆಯ ಮೊಟೊ G34 5G ಸ್ಮಾರ್ಟ್‌ಫೋನ್‌ ಲಾಂಚ್‌! 50MP ಕ್ಯಾಮೆರಾ... ದೊಡ್ಡ ಬ್ಯಾಟರಿ

ಮೊಟೊರೊಲಾ (Motorola) ಭಾರತದಲ್ಲಿ ಭಿನ್ನ ಫೀಚರ್ಸ್‌ ಆಯ್ಕೆಯ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬಂದಿದೆ. ಅದರಂತೆ ಭಾರತದಲ್ಲಿ ಬಹಳ ಕುತೂಹಲ ಉಂಟು ಮಾಡಿದ್ದ ಮೊಟೊರೊಲಾದ ಹೊಸ ಫೋನ್‌ ಇಂದು ಅನಾವರಣ ಆಗಿದೆ. ಈ ಫೋನ್ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ ಆಯ್ಕೆ ಪಡೆದಿದೆ.

ಹೌದು, ಮೊಟೊರೊಲಾ ಮೊಟೊ G34 5G ಸ್ಮಾರ್ಟ್‌ಫೋನ್‌ (Motorola Moto G34 5G smartphone) ಅನ್ನು ಅನಾವರಣ ಮಾಡಿದೆ. ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್ ಬಲ ಪಡೆದಿದ್ದು, ಎರಡು ವೇರಿಯಂಟ್‌ ಆಯ್ಕೆಯಲ್ಲಿ ಲಭ್ಯ ಇದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಈ ಫೋನ್‌ಗೆ ಇರುವ ಬೆಲೆ ಎಷ್ಟೊ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಬಜೆಟ್ ಬೆಲೆಯ ಮೊಟೊ G34 5G ಸ್ಮಾರ್ಟ್‌ಫೋನ್‌ ಲಾಂಚ್‌! 50MP ಕ್ಯಾಮೆರಾ...

ಮೊಟೊ G34 5G ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್‌ ಅನ್ನು ಈ ಮೊದಲೇ ಚೀನಾದಲ್ಲಿ ಅನಾವರಣ ಮಾಡಲಾಗಿತ್ತು. ಇದಾದ ನಂತರದಲ್ಲಿ ಈ ಹ್ಯಾಂಡ್‌ಸೆಟ್ ಅನ್ನು ಪಡೆದ ಮೊದಲ ಅಂತರರಾಷ್ಟ್ರೀಯ ಮಾರುಕಟ್ಟೆ ಭಾರತವಾಗಿದೆ. ಇನ್ನು ಈ ಫೋನ್ 6.5 ಇಂಚಿನ ಪಂಚ್-ಹೋಲ್ ಹೆಚ್‌ಡಿ+ ರೆ ಡಿಸ್‌ಪ್ಲೇ ಪಡೆದಿದೆ. ಅಂದರೆ 1600 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯವನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ. ಇದರೊಂದಿಗೆ 120Hz ರಿಫ್ರೆಶ್ ರೇಟ್‌ ಅನ್ನು ಇದು ಪಡೆದಿದೆ.

ಮೊಟೊ G34 5G ಸ್ಮಾರ್ಟ್‌ಫೋನ್‌ ಪ್ರೊಸೆಸರ್ ವಿವರ: ಇನ್ನು ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 695 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಈ ಚಿಪ್‌ಸೆಟ್ ಅನ್ನು LPDDR4x RAM ಮತ್ತು UFS 2.2 ಸ್ಟೋರೇಜ್‌ನೊಂದಿಗೆ ಜೋಡಿಸಲಾಗಿದೆ. ಈ ಮೂಲಕ ಅತ್ಯುತ್ತಮವಾಗಿ ಈ ಫೋನ್‌ ಕಾರ್ಯನಿರ್ವಹಿಸಲಿದೆ. ಎಲ್ಲಕ್ಕಿಂತ ಮಿಗಿಲಾಗಿ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಅನ್ನು ರನ್‌ ಮಾಡುತ್ತದೆ.

ಬಜೆಟ್ ಬೆಲೆಯ ಮೊಟೊ G34 5G ಸ್ಮಾರ್ಟ್‌ಫೋನ್‌ ಲಾಂಚ್‌! 50MP ಕ್ಯಾಮೆರಾ...

ಮೊಟೊ G34 5G ಸ್ಮಾರ್ಟ್‌ಫೋನ್‌ ಕ್ಯಾಮೆರಾ ಮಾಹಿತಿ: ಈ ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಸ್ನ್ಯಾಪರ್ ಅನ್ನು ಒಳಗೊಂಡಿರುವ ಡ್ಯುಯಲ್ ರಿಯರ್‌ ಕ್ಯಾಮೆರಾ ರಚನೆ ಪಡೆದಿದ್ದು, ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 16 ಮೆಗಾಪಿಕ್ಸೆಲ್‌ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಈ ಮೂಲಕ ಕ್ಯಾಮೆರಾ ಪ್ರಿಯರಿಗೆ ಈ ಫೋನ್‌ ಹೆಚ್ಚು ಇಷ್ಟವಾಗಲಿದೆ.

ಮೊಟೊ G34 5G ಸ್ಮಾರ್ಟ್‌ಫೋನ್‌ ಬ್ಯಾಟರಿ ಹಾಗೂ ಇತರೆ: ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಪಡೆದಿದ್ದು, 18W ಚಾರ್ಜಿಂಗ್ ಬೆಂಬಲ ಪಡೆದಿದೆ. ಇದರೊಂದಿಗೆ ಡಾಲ್ಬಿ ಅಟ್ಮಾಸ್ ಬೆಂಬಲಿತ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌, ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್, 3.5mm ಹೆಡ್‌ಫೋನ್ ಜ್ಯಾಕ್ ಆಯ್ಕೆ ಪಡೆದಿದೆ. ಹಾಗೆಯೇ ಸ್ಪ್ಲಾಶ್ ಪ್ರತಿರೋಧಕ್ಕಾಗಿ IP52 ರೇಟಿಂಗ್ ಪಡೆದಿದೆ.

ಬಜೆಟ್ ಬೆಲೆಯ ಮೊಟೊ G34 5G ಸ್ಮಾರ್ಟ್‌ಫೋನ್‌ ಲಾಂಚ್‌! 50MP ಕ್ಯಾಮೆರಾ...

ಮೊಟೊ G34 5G ಸ್ಮಾರ್ಟ್‌ಫೋನ್‌ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ಫೋನ್ ಎರಡು ವೇರಿಯಂಟ್‌ ಆಯ್ಕೆಯಲ್ಲಿ ಲಭ್ಯ ಇದೆ ಅಂದರೆ 4GB + 128GB ವೇರಿಯಂಟ್‌ ಫೋನ್‌ಗೆ 10,999 ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು, 8GB + 128GB ವೇರಿಯಂಟ್ ಫೋನ್‌ಗೆ 11,999 ರೂ.ಗಳ ಬೆಲೆ ನಿಗದಿಪಡಿಸಲಾಗಿದೆ. ಈ ಫೋನ್ ಐಸ್ ಬ್ಲೂ, ಚಾರ್ಕೋಲ್ ಬ್ಲ್ಯಾಕ್ ಅಥವಾ ಓಷನ್ ಗ್ರೀನ್ ಬಣ್ಣದ ಆಯ್ಕೆಯಲ್ಲಿ ಲಭ್ಯ ಇದೆ. ಈ ಫೋನ್‌ ಅನ್ನು ನೀವು ಫ್ಲಿಪ್‌ಕಾರ್ಟ್ (Flipkart) ಮತ್ತು ಪ್ರಮುಖ ರಿಟೇಲರ್‌ ಸ್ಟೋರ್‌ ಮೂಲಕ ಜನವರಿ 17 ರಿಂದ ಖರೀದಿ ಮಾಡಬಹುದಾಗಿದೆ.

Best Mobiles in India

English summary
Motorola has unveiled the Moto G34 5G smartphone. This smartphone is powered by Snapdragon 695 SoC processor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+